Karwar: ಮೋದಿ ಗೆಲುವಿಗಾಗಿ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದ ಅರುಣ್ ಈಗ ಏನಂತಾರೆ?
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂದು ಆಶಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸೋನಾರ್‌ವಾಡ ನಿವಾಸಿ ಅರುಣ್ ಎಸ್. ವರ್ಣೇಕರ್ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು.
ಕಾರವಾರ: ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ (Narendra Modi) ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂದು ಆಶಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸೋನಾರ್‌ವಾಡ ನಿವಾಸಿ ಅರುಣ್ ಎಸ್. ವರ್ಣೇಕರ್ (Arun S varnekar) ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. ವರ್ಣೇಕರ್ ಅವರು ಮೋದಿಯ ಹುಚ್ಚು ಅಭಿಮಾನಿಯಾಗಿದ್ದು, 2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕತ್ತಿಯಿಂದ ಬೆರಳು ಕತ್ತರಿಸಿಕೊಂಡಿದ್ದರು. ಬಳಿಕ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. ಜತೆಗೆ ಸಾಯಿ ಬಾಬಾ, ಪ್ರಧಾನಿ ಮೋದಿಯ ಫೋಟೊಗೂ ರಕ್ತದ ತಿಲಕವಿಟ್ಟಿದ್ದರು. ಇದೀಗ ಮೋದಿ ಅವರನ್ನು ಭೇಟಿಯಾಗುವ ಬಯಕೆಯನ್ನು ಅರುಣ್ ಎಸ್. ವರ್ಣೇಕರ್ ವ್ಯಕ್ತಪಡಿಸಿದ್ದಾರೆ.
ಮೈಮೇಲೂ ರಕ್ತ ಹಂಚಿಕೊಂಡಿದ್ದ ವರ್ಣೇಕರ್
ಅರುಣ್ ಎಸ್. ವರ್ಣೇಕರ್ ಅವರು ಕಾಳಿಗೆ ರಕ್ತದ ತಿಲಕವಿಟ್ಟದ್ದು ಮಾತ್ರವಲ್ಲದೆ, ತನ್ನ ಮೈ ಮೇಲೂ ರಕ್ತವನ್ನು ಹಚ್ಚಿಕೊಂಡಿದ್ದರು. ಇವರು ಮನೆಯ ದೇವರ ಕೋಣೆಯಲ್ಲಿ ದೇವರ ಪೋಟೋಗಳ ಜತೆ ಪ್ರಧಾನಿ ಮೋದಿಯವರ ಫೋಟೊ, ಕಟೌಟ್ ಕೂಡಾ ಇರಿಸಿಕೊಂಡಿದ್ದಾರೆ.
2014ರಿಂದ 2029ರವರೆಗೆ ಮೋದಿ ಪ್ರಧಾನಿ ಆಗಿರುತ್ತಾರೆಂದು ರಕ್ತದಲ್ಲಿ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ. ಎದೆಯ ಮೇಲೆ ಮೋದಿ ಟ್ಯಾಟೂ ಹಾಕಿಸಿಕೊಂಡು ಪ್ರಧಾನಿಯನ್ನು ದೇವರಂತೆ ಆರಾಧಿಸುತ್ತಿದ್ದಾರೆ. ಮೋದಿ ಬಾಬಾ ಎಂದು ಟ್ಯಾಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ.
ಒಂದಲ್ಲಾ ಒಂದಿನ ಮೋದಿ ಭೇಟಿಯಾಗುತ್ತೇನೆ
ಒಂದಲ್ಲಾ ಒಂದು ದಿನ ಮೋದಿಯವರನ್ನು ಭೇಟಿಯಾಗುತ್ತೇನೆ, ಭೇಟಿಯಾಗಿ ಧನ್ಯನಾಗುತ್ತೇನೆ ಎಂದು ಅರುಣ್ ಭರವಸೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ಇವರು ಬಿಜೆಪಿಯ ಕಾರ್ಯಕರ್ತನಲ್ಲ, ಬಿಜೆಪಿ ಪರ ಮತಯಾಚನೆ ಕೂಡಾ ಮಾಡುವುದಿಲ್ಲ. ಆದರೆ ಮೋದಿ ಬಗ್ಗೆ ಅಪಾರ ಪ್ರೀತಿ ಹೊಂದಿದ್ದಾರೆ. 2024ರಲ್ಲಿ ಮತ್ತೆ ನರೇಂದ್ರ ಮೋದಿಯೇ ದೇಶದ ಪ್ರಧಾನಿ ಆಗಬೇಕು. ಆಗ ಕಾಳಿ ಮಾತೆ ಏನು ಸೂಚನೆ ನೀಡುತ್ತಾಳೆ ಅದನ್ನು ಹರಕೆ ರೂಪದಲ್ಲಿ ನೀಡುತ್ತೇನೆ. ಬೇಕಾದಲ್ಲಿ ಮೋದಿಗಾಗಿ ತನ್ನ ಜೀವ ಅರ್ಪಿಸಲು ಕೂಡಾ ತಯಾರಿದ್ದೇನೆ ಎಂದಿದ್ದಾರೆ ಅರುಣ್.
ಇದನ್ನೂ ಓದಿ: ಮೇ.03 ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ: ಮಂಗಳೂರು-ಉಡುಪಿ ಹೆದ್ದಾರಿಯಲ್ಲಿ ಬದಲಿ ಸಂಚಾರ ವ್ಯವಸ್ಥೆ
ಅಂಕೋಲಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅರುಣ್, ಈ ಹಿಂದೆ ಬಾಂಬೆಯಲ್ಲಿ ಸಿನಿಮಾ ಕ್ಷೇತ್ರದಲ್ಲಿ ದುಡಿದು ಬಳಿಕ ಹಿಂತಿರುಗಿದ್ದರು. ಇದೀಗ ವೃದ್ಧೆ ತಾಯಿಯನ್ನು ನೋಡಿಕೊಳ್ಳುತ್ತಿದ್ದಾರೆ.
ತನ್ನ ಹುಚ್ಚು ಅಭಿಮಾನವನ್ನು ಯಾರಲ್ಲೂ ತಿಳಿಸದೇ ಇಲ್ಲಿಯವರೆಗೆ ಮುಚ್ಚಿಟ್ಟಿದ್ದರು. ಈಗ ಮೋದಿ ಆಗಮನದ ಹಿನ್ನೆಲೆಯಲ್ಲಿ ತನ್ನ ಅಭಿಮಾನ ಹಾಗೂ ಕೃತ್ಯವನ್ನು ಬಹಿರಂಗ ಪಡಿಸಿದ್ದು ಮೋದಿ ಭೇಟಿಗೆ ಅವಕಾಶ ನೀಡಬೇಕೆಂದು ಕೋರಿಕೆ ಸಲ್ಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ