Karnataka Assembly Polls: ಸಿಂಧನೂರು ಜನಕ್ಕೆ ಹಿಂದಿ ಅರ್ಥವಾಗುತ್ತೆ ಬಾಷಾಂತರ ಬೇಕಿಲ್ಲ ಅಂತ ತಿಳಿದು ಪ್ರಧಾನಿ ನರೇಂದ್ರ ಮೋದಿ ಖುಷ್!
ಅವರು ಭಾಷಣವನ್ನು ಕನ್ನಡದಲ್ಲೇ ಅರಂಭಿಸಿ ಹಿಂದಿಗೆ ತಿರುಗುವಾಗ ಜಗಜ್ಯೋತಿ ಬಸವೇಶ್ವರ ಮತ್ತು ಕಲಿಯುಗ ಕಲ್ಪತರು ರಾಘವೇಂದ್ರ ಸ್ವಾಮಿಗಳಿಗೆ ವಂದಿಸುತ್ತಾರೆ.
ರಾಯಚೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಯಚೂರಿನ ಸಿಂಧನೂರಲ್ಲಿ (Sindhanur) ಬೃಹತ್ ಚುನಾವಣಾ ಸಭೆಯನ್ನು (election rally) ಉದ್ದೇಶಿಸಿ ಮಾತಾಡಿದರು. ವೇದಿಕೆಯ ಮೇಲೆ ಸ್ಥಳೀಯ ಕಾರ್ಯಕರ್ತರು ಪ್ರಧಾನಿಯವರಿಗೆ ಕಂಬಳಿ ಹೊದಿಸಿ ಗೌರವಿಸಿದ ಬಳಿಕ ಮಾತು ಅರಂಭಿಸಿದ ಅವರು ದಹಿಸುವ ಬಿಸಿಲು ಮತ್ತು ಧಗೆ ಹೊರತಾಗಿಯೂ ಕಂಬಳಿಯನ್ನು ತಮ್ಮ ಹೆಗಲ ಮೇಲಿಂದ ತೆಗೆಯಲಿಲ್ಲ. ಸಿಂಧನೂರಿನ ಜನಕ್ಕೆ ಹಿಂದಿ ಭಾಷೆಯ ಜ್ಞಾನವಿದೆ ಅವರ ಭಾಷಣವನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಅವಶ್ಯಕತೆಯಿಲ್ಲ ಎಂದು ಹೇಳಿದಾಗ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸುತ್ತಾರೆ. ಆದಾಗ್ಯೂ ಅವರು ಭಾಷಣವನ್ನು ಕನ್ನಡದಲ್ಲೇ ಅರಂಭಿಸಿ ಹಿಂದಿಗೆ ತಿರುಗುವಾಗ ಜಗಜ್ಯೋತಿ ಬಸವೇಶ್ವರ ಮತ್ತು ಕಲಿಯುಗ ಕಲ್ಪತರು ರಾಘವೇಂದ್ರ ಸ್ವಾಮಿಗಳಿಗೆ ವಂದಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos