ವಾಜಪೇಯಿ ಕುಡೀತಿದ್ರಂತೆ, ಅದೇನು ತಪ್ಪಾ? ಸಿಗರೇಟ್ ಸೇದುವುದು ಅಪರಾಧವಾ?: ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

| Updated By: Skanda

Updated on: Aug 14, 2021 | 1:35 PM

ಸಿಗರೇಟ್ ಸೇದುವುದು ಅಪರಾಧವಾ? ವಾಜಪೇಯಿ ಕುಡಿಯುತ್ತಿದ್ದರಂತೆ, ಹಾಗಂತ ಅದೇನು ತಪ್ಪಾ? ಎಂದು ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಯಾರೋ ಮಾತನಾಡುವುದರಿಂದ ಘನತೆ ಕಡಿಮೆಯಾಗಲ್ಲ: ಪ್ರಿಯಾಂಕ್ ಖರ್ಗೆ

ವಾಜಪೇಯಿ ಕುಡೀತಿದ್ರಂತೆ, ಅದೇನು ತಪ್ಪಾ? ಸಿಗರೇಟ್ ಸೇದುವುದು ಅಪರಾಧವಾ?: ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ
ಪ್ರಿಯಾಂಕ್ ಖರ್ಗೆ
Follow us on

ಕಲಬುರಗಿ: ಕಾಂಗ್ರೆಸ್​ನವರು ಇಂದಿರಾ ಬಾರ್, ಹುಕ್ಕಾ ಬಾರ್‌ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಕೈ ನಾಯಕರನ್ನು (Congress) ಕೆರಳಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿರುದ್ಧ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ (Priyank Kharge) ಕಲಬುರಗಿಯಲ್ಲಿ ಹರಿಹಾಯ್ದಿದ್ದಾರೆ. ಸಚಿವರಾಗಿಲ್ಲವೆಂದು ಹತಾಶೆಯಿಂದ ಸಿ.ಟಿ.ರವಿ (CT Ravi) ಏನೇನೋ ಹೇಳ್ತಿದ್ದಾರೆ. ಸಿಗರೇಟ್ ಸೇದುವುದು ಅಪರಾಧವಾ? ವಾಜಪೇಯಿ (Vajpayee) ಕುಡಿಯುತ್ತಿದ್ದರಂತೆ, ಹಾಗಂತ ಅದೇನು ತಪ್ಪಾ? ಎಂದು ಬಿಜೆಪಿ (BJP) ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ. ಯಾರೋ ಮಾತನಾಡುವುದರಿಂದ ಘನತೆ ಕಡಿಮೆಯಾಗಲ್ಲ. ಅವರು ಅಧಿಕಾರಕ್ಕೆ ಬಂದು 7 ವರ್ಷವಾಯಿತು. ಆದರೆ ಅಭಿವೃದ್ಧಿಯಾಗಿಲ್ಲ. ಬಿಜೆಪಿ ಅವಧಿಯಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಏನೇನೋ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನೆಹರೂ ಬಗ್ಗೆ ನಾನು ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ನೆಹರೂ ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ನಾನು ಹೇಳಿದ್ದು ತಪ್ಪೋ? ಒಂದುವೇಳೆ, ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ನೆಹರೂ ಸೇದಿದ್ದು ತಪ್ಪಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದು, ಸಿಟಿ ರವಿ ನಾಲಿಗೆ ಬಾತ್‌ರೂಮ್ ಚಪ್ಪಲಿ ಇದ್ದ ಹಾಗೆ ಎಂದು ಗುಡುಗಿದ್ದಾರೆ.

ಇದೇ ವೇಳೆ ಸಾವರ್ಕರ್ ಬಗ್ಗೆಯೂ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಸಾವರ್ಕರ್​ ವೀರ್ ಸಾವರ್ಕರ್​ ಹೇಗಾದ್ರು ಅಂತ ಬಿಜೆಪಿಯ ಯಾವುದೇ ಶಾಸಕ, ಸಂಸದರಿಗೂ ಗೊತ್ತಿಲ್ಲ. ಅವರು ಏನೇನೋ ಮಾತನಾಡುತ್ತಾರೆ. ಸಿ.ಟಿ.ರವಿ ಮಂತ್ರಿಯಾಗಿಲ್ಲ ಅಂತ ಹತಾಶರಾಗಿದ್ದಾರೆ. ಇಷ್ಟಕ್ಕೂ ಯಾರೋ ಮಾತನಾಡುವುದರಿಂದ ಘನತೆ ಕಡಿಮೆಯಾಗಲ್ಲ ಎಂದು ತಿಳಿಸಿದ್ದಾರೆ.

ಸಿ.ಟಿ.ರವಿ ಏನೇನು ಹೇಳಿದ್ದರು?
ನೆಹರೂ ಹುಕ್ಕಾ ಸೇದುವ ನೂರಾರು ಫೋಟೋಗಳಿವೆ. ನನ್ನ ಮೇಲೆಯೇ ಕಾಂಗ್ರೆಸ್ಸಿಗರಿಗೆ ಇಷ್ಟು ದ್ವೇಷ ಇದೆ, ನೆಹರೂ ಬಗ್ಗೆ ಇನ್ನು ಎಷ್ಟು ದ್ವೇಷ ಇರಬಹುದು. ಈಗ ನೆಹರೂ, ಇಂದಿರಾ ಬಗ್ಗೆ ನಾನು ಮಾತನಾಡಿದ್ದು ತಪ್ಪು ಅನ್ನುತ್ತಿದ್ದಾರೆ. ಆದರೆ, ಸಿದ್ದರಾಮಯ್ಯ, ಸಿ.ಎಂ. ಇಬ್ರಾಹಿಂ ಅವರು ಇಂದಿರಾ ಗಾಂಧಿ ಬಗ್ಗೆ ಮಾತನಾಡಿರುವುದನ್ನು ಹಾಕಿಸಬೇಕಾ? ಈಗ ಕಾಂಗ್ರೆಸ್‌ನಲ್ಲಿರುವ ನಾಯಕರು ಈ ಹಿಂದೆ ಇದೇ ನಾಯಕರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಇಂದಿರಾ ಗಾಂಧಿ ಅವರನ್ನು ಇಬ್ರಾಹಿಂ ಏನೆಂದು ಕರೆದಿದ್ದರು? ನಾನು ಆ ಮಟ್ಟಕ್ಕೆ ಇಳಿದಿಲ್ಲ ಎಂದು ತಿರುಗೇಟು ಕೊಟ್ಟಿದ್ದರು.

ನನಗೆ ಕುಡಿಯುವ ಅಭ್ಯಾಸವಿಲ್ಲ. ಆದರೂ ಕುಡುಕನ ಪಟ್ಟ ಕಟ್ಟಿದ್ದಾರೆ. ದಿನಾ ಕುಡಿಯುವವರು ಅವರೇ ಎಂದು ವ್ಯಂಗ್ಯ ಮಾಡಿದ ಅವರು, ನಾನು ದಿನವೂ ಬೆಳಿಗ್ಗೆ 5 ಗಂಟೆಗೆ ಎದ್ದು ಯೋಗ ಮಾಡ್ತೀನಿ, ಇಡೀ ದಿನ ಸಕ್ರಿಯವಾರುತ್ತೀನಿ. ಅವರ ಹಳೆಯ ಕಥೆಗಳನ್ನು ಹೇಳಬೇಕಾ? ನಾನು ಆರ್​ಎಸ್​ಎಸ್​ ಸ್ವಯಂ ಸೇವಕ, ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ ಎಂದು ಕಾಂಗ್ರೆಸ್ ನಾಯಕರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದ್ದರು.

(Priyank Kharge slams CT Ravi says Vajpayee also used to drink)

ಇದನ್ನೂ ಓದಿ:
ಸಿಟಿ ರವಿ ಕೊಲೆಗಡುಕ; ಕುಡಿದು ಕಾರು ಚಲಾಯಿಸಿ ಇಬ್ಬರನ್ನು ಕೊಂದು ತಲೆಮರೆಸಿಕೊಂಡಿದ್ದ: ಎಂ ಲಕ್ಷ್ಮಣ್ ವಾಗ್ದಾಳಿ 

ಅಂಬೇಡ್ಕರರನ್ನು ಎರಡು ಬಾರಿ ಸೋಲಿಸಿದ್ದು ಕಾಂಗ್ರೆಸ್; ಸಿದ್ದರಾಮಯ್ಯ ತಮ್ಮ ಸಾಫ್ಟ್​​​ವೇರ್ ಅಪ್​ಡೇಟ್ ಮಾಡ್ಕೊಳ್ಳಲಿ- ಸಿಟಿ ರವಿ

Published On - 1:33 pm, Sat, 14 August 21