ಕಲಬುರಗಿ: ವಿಶ್ವದ ಮೂರನೇ ಉತ್ತಮ ಕಣ್ಣಿನ ವೈದ್ಯ ಡಾ.ಚಂದ್ರಪ್ಪ ರೇಷ್ಮೆ ನಿಧನ

| Updated By: Rakesh Nayak Manchi

Updated on: Aug 12, 2023 | 9:08 PM

ವಿಶ್ವದ ಉತ್ತಮ ಕಣ್ಣಿನ ವೈದ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ ಚಂದ್ರಪ್ಪ ರೇಷ್ಮೆ ಅವರು ಇಂದು ನಿಧನ ಹೊಂದಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಲಬುರಗಿಯ ಜಯನಗರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಲಬುರಗಿ: ವಿಶ್ವದ ಮೂರನೇ ಉತ್ತಮ ಕಣ್ಣಿನ ವೈದ್ಯ ಡಾ.ಚಂದ್ರಪ್ಪ ರೇಷ್ಮೆ ನಿಧನ
ಖ್ಯಾತ ಕಣ್ಣಿನ ವೈದ್ಯ ಡಾ.ಚಂದ್ರಪ್ಪ ರೇಷ್ಮೆ ನಿಧನ
Follow us on

ಕಲಬುರಗಿ, ಆಗಸ್ಟ್ 12: ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿಶ್ವದ ಮೂರನೇ ಉತ್ತಮ ಕಣ್ಣಿನ ವೈದ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಪ್ಪ ರೇಷ್ಮೆ (90) (Dr. Chandrappa Reshme) ಅವರು ಇಂದು ಕಲಬುರಗಿಯ (Kalaburagi) ಜಯನಗರದಲ್ಲಿರುವ ತಮ್ಮ ಸ್ವ ಗೃಹದಲ್ಲಿ ನಿಧನ ಹೊಂದಿದ್ದಾರೆ. ನಾಳೆ ಜಿಲ್ಲೆಯ ಚಿತ್ತಾಪುರದಲ್ಲಿ ಅಂತ್ಯಕ್ರಿಯೆ ನೇರವೆರಲಿದೆ.

ಚಂದ್ರಪ್ಪ ರೇಷ್ಮೆ ಅವರು ಮಾಜಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್, ಟಾಟಾ ಸಮೂಹ ಸಂಸ್ಥೆಯ ಸಂಸ್ಥಾಪಕ ಜೆಆರ್​ಡಿ ಟಾಟಾ ಸೇರಿದಂತೆ ಹಲವು ಗಣ್ಯರಿಗೆ ನೇತ್ರ ಚಿಕಿತ್ಸೆ ಮಾಡಿದ್ದರು. ಅಷ್ಟೇ ಅಲ್ಲದೆ, ವಿಶ್ವದ ಮೂರನೇ ಉತ್ತಮ ಕಣ್ಣಿನ ಡಾಕ್ಟರ್ ಎಂದು ಪ್ರಖ್ಯಾತಿ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:03 pm, Sat, 12 August 23