ವಾರಾಂತ್ಯ ಹುಲ್ಲು ಮೇಯಿಸಲು ಗೋಶಾಲೆಯ ಹಸು ದನ ಕರು ಕರೆದೊಯ್ದ ಸೇಡಂ ಅಸಿಸ್ಟೆಂಟ್​ ಕಮಿಷನರ್ ​

ವಾರಾಂತ್ಯ ಹುಲ್ಲು ಮೇಯಿಸಲು ಗೋಶಾಲೆಯ ಹಸು ದನ ಕರು ಕರೆದೊಯ್ದ ಸೇಡಂ ಅಸಿಸ್ಟೆಂಟ್​ ಕಮಿಷನರ್ ​

ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಸಾಧು ಶ್ರೀನಾಥ್​

Updated on: Aug 12, 2023 | 12:37 PM

Sedam Assistant Commissioner: ಸೇಡಂ ಉಪವಿಭಾಗದ ಸಹಾಯಕ ಆಯುಕ್ತರಾದ ಆಶಪ್ಪ ಎಚ್ ಅವರು ಹುಲ್ಲು ಮೇಯಿಸಲು (Cattle Rearing)‌ ಜಾನುವಾರುಗಳನ್ನ ಕರೆದುಕೊಂಡು ಹೋಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ಶ್ರೀ ರೇವಣಿಸಿದ್ದೇಶ್ವರ ಗೋಶಾಲೆಯ ಜಾನುವಾರುಗಳನ್ನ ಹುಲ್ಲು ಮೇಯಿಸಲು ವಾರಾಂತ್ಯವಾದ ಇಂದು ಶನಿವಾರ ಕರೆದುಕೊಂಡು ಹೋದರು. 

ಕಲಬುರಗಿ, ಆಗಸ್ಟ್​ 12: ಸೇಡಂ ಉಪವಿಭಾಗದ ಸಹಾಯಕ ಆಯುಕ್ತರಾದ (Sedam Assistant Commissioner) ಆಶಪ್ಪ ಎಚ್ ಅವರು ಹುಲ್ಲು ಮೇಯಿಸಲು (Cattle Rearing)‌ ಜಾನುವಾರುಗಳನ್ನ ಕರೆದುಕೊಂಡು ಹೋಗಿದ್ದಾರೆ. ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಟಕಲ್ ಗ್ರಾಮದಲ್ಲಿರುವ ಶ್ರೀ ರೇವಣಿಸಿದ್ದೇಶ್ವರ ಗೋಶಾಲೆಯ ಜಾನುವಾರುಗಳನ್ನ ಹುಲ್ಲು ಮೇಯಿಸಲು ವಾರಾಂತ್ಯವಾದ (Weekend) ಇಂದು ಶನಿವಾರ ಕರೆದುಕೊಂಡು ಹೋದರು. ಗೋಶಾಲೆಯಲ್ಲಿ ಮೇವಿನ ಕೊರತೆಯಿಂದ ಜಾನುವಾರುಗಳು ಸಾವನ್ನಪ್ಪುತ್ತಿರೋ ಆರೋಪ ಕೇಳಿ ಬಂದಿತ್ತು. ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಗೋಶಾಲೆಗೆ ಭೇಟಿ ನೀಡಿ ವಾಸ್ತವ್ಯ ಹೂಡಿದ್ದ ಎಸಿ ಆಶಪ್ಪ ಅವರು ಇಂದು ಬೆಳಗ್ಗೆ ಎದ್ದು ಗ್ರಾಮದ ಹೊರವಲಯಕ್ಕೆ ಹುಲ್ಲು ಮೇಯಿಸಲು ಜಾನುವಾರುಗಳನ್ನ ಖುದ್ದಾಗಿ ಕರೆದುಕೊಂಡು ಹೋದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ