ಭಾರತದಲ್ಲಿನ್ನು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ, ಗುಂಪುಗೂಡಿ ಹತ್ಯೆ ಮಾಡಿದ್ರೆ 7 ವರ್ಷ ಜೈಲು
ಅಪ್ರಾಪ್ತೆ ಮೇಲೆ (minor) ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಗ್ಯಾಂಗ್ರೇಪ್ ಎಸಗಿದ್ರೆ ಜೀವಾವಧಿ ಶಿಕ್ಷೆ ಅಥವಾ 20 ವರ್ಷ ಶಿಕ್ಷೆ ವಿಧಿಸಲಾಗುತ್ತೆ. ಗುಂಪುಗೂಡಿ ಹತ್ಯೆ ಮಾಡಿದ್ರೆ ಕನಿಷ್ಠ 7 ವರ್ಷ ಜೈಲು ವಿಧಿಸಲಾಗುತ್ತೆ. ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಶಿಕ್ಷೆ ವಿಧಿಸಲಾಗುತ್ತೆ.
ಇತ್ತೀಚೆಗೆ ದೇಶದಲ್ಲಿ (India) ಸಾಮೂಹಿಕ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗಿದ್ವು. ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇಂಡಿಯಾ ಮೈತ್ರಿಕೂಟದ ನಾಯಕರು ಮಣಿಪುರ ಹಿಂಸಾಚಾರ ಘಟನೆಯನ್ನಿಟ್ಟುಕೊಂಡು ಸಾಲು ಸಾಲು ಆರೋಪ ಮಾಡಿದ್ರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶದಲ್ಲಿ ಜಾರಿ ಇರುವ ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳಲ್ಲಿ ಕೆಲ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇವತ್ತು ಲೋಕಸಭೆಯಲ್ಲಿ (Lok sabha) ಮಹತ್ವದ ಬಿಲ್ ಮಂಡಿಸಿದ್ದಾರೆ. ದೇಶದ್ರೋಹ, ಅತ್ಯಾಚಾರ (rape), ಗಲಭೆ ಪ್ರಕರಣಗಳಲ್ಲಿ (gang murder ) ಗರಿಷ್ಠ ಶಿಕ್ಷೆ ವಿಧಿಸುವ ಬಿಲ್ ಅನ್ನ ಗೃಹ ಸಚಿವರು ಮಂಡಿಸಿದ್ದಾರೆ. ಹಾಗಾದ್ರೆ ಏನೇನು ಬದಲಾವಣೆ ಆಗಿದೆ ಅನ್ನೋದನ್ನ ತೋರಿಸ್ತೀವಿ ನೋಡಿ..
ಅಪ್ರಾಪ್ತೆ ಮೇಲೆ (minor) ಅತ್ಯಾಚಾರ ಎಸಗಿದ್ರೆ ಗಲ್ಲು ಶಿಕ್ಷೆ ವಿಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಗ್ಯಾಂಗ್ರೇಪ್ ಎಸಗಿದ್ರೆ ಜೀವಾವಧಿ ಶಿಕ್ಷೆ ಅಥವಾ 20 ವರ್ಷ ಶಿಕ್ಷೆ ವಿಧಿಸಲಾಗುತ್ತೆ. ಗುಂಪುಗೂಡಿ ಹತ್ಯೆ ಮಾಡಿದ್ರೆ ಕನಿಷ್ಠ 7 ವರ್ಷ ಜೈಲು ವಿಧಿಸಲಾಗುತ್ತೆ. ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡಿದರೆ ಶಿಕ್ಷೆ ವಿಧಿಸಲಾಗುತ್ತೆ. ಇದರ ಜೊತೆಗೆ ಬ್ರಿಟಿಷರ ಕಾಲದಿಂದ ಜಾರಿಯಲ್ಲಿದ್ದ ಮೂರು ಕಾಯ್ದೆಗಳ ಹೆಸರು ಬದಲಾಗಿವೆ ಎನ್ನಲಾಗಿದೆ. ಲೋಕಸಭೆಯಲ್ಲಿ ಮಸೂದೆಗೆ ಅಂಗಿಕಾರ ದೊರೆತಿದೆ. ರಾಜ್ಯಸಭೆಯಲ್ಲಿ ಈ ಮಸೂದೆಗೆ ಅಂಕೀತ ಬಿದ್ರೆ ಮೂರು ಕಾನೂನುಗಳ ಹೆಸರು ಬದಲಾಗಲಿವೆ.
ಈಗಾಗಲೇ ಇರುವ ಐಪಿಸಿ ಅಂದ್ರೆ ಇಂಡಿಯನ್ ಪೀನಲ್ ಕೋರ್ಡ್, ಮುಂದೆ ಭಾರತೀಯ ನ್ಯಾಯ ಸಂಹಿತ, ಸಿಆರ್ಪಿಸಿ ಅಂದ್ರೆ ಕೋಡ್ ಆಫ್ ಕ್ರಿಮಿನಲ್ ಪ್ರೊಸಿಜರ್, ಮುಂದೆ ಭಾರತೀಯ ನಾಗರಿಕ ಸುರಕ್ಷಾ, ಮತ್ತು ಈಗ ಇರುವ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್, ಭಾರತೀಯ ಸಾಕ್ಷ್ಯ ಹೆಸರಿನಲ್ಲಿ ಬದಲಾಗಲಿವೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ