Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಖಂಡಿಸಿ ಸೋಮವಾರ ನಂಜನಗೂಡು ರೈತರ ಪ್ರತಿಭಟನೆ

ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಖಂಡಿಸಿ ಸೋಮವಾರ ನಂಜನಗೂಡು ರೈತರ ಪ್ರತಿಭಟನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 12, 2023 | 12:45 PM

ಕಬಿನಿ ಎಡದಂಡೆ ಮತ್ತು ಬಲದಂಡೆ ನೀರು ಕಡಿಮೆ ಪ್ರಮಾಣಲ್ಲಿ ನೀರು ಹರಿಸಿ ಈ ಭಾಗದ ರೈತರು ಭತ್ತ ಬೆಳೆಯಬಾರದು ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ, ಭತ್ತ ಬಿಟ್ಟು ರೈತರು ಏನು ಬೆಳೆಯಬೇಕು ಎಂದು ಪ್ರಶ್ನಿಸುತ್ತಿರುವ ರೈತರು ತಮಿಳುನಾಡಿಗೆ ಮಾತ್ರ ಯಥೇಚ್ಛವಾಗಿ ನೀರು ಹರಿ ಬಿಡಲಾಗುತ್ತಿದೆ ಎಂದು ಹೇಳುತ್ತಾರೆ.

ಮೈಸೂರು: ಸರ್ಕಾರದ ಯಾವುದೇ ಆಗಿರಲಿ ಅದು ರೈತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸುವುದಿಲ್ಲ. ಜಿಲ್ಲೆಯ ನಂಜನಗೂಡು ತಾಲ್ಲೂಕಿನ ರೈತರು (Nanjangud taluk farmers) ಸರ್ಕಾರದ ನಿಷ್ಕಾಳಜಿ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೊಚ್ಚಿಗೆದ್ದು ಸೋಮವಾರ ಅಂದರೆ ಆಗಸ್ಟ್ 14 ರಂದು ಪಟ್ಟಣದ ಕಾವೇರಿ ನೀರಾವರಿ ನಿಗಮ ಕಾರ್ಯಪಾಲಕ ಅಭಿಯಂತರ ಕಚೇರಿ (executive engineer office) ಮುಂದೆ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ. ನಂಜನಗೂಡಿನಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ನಂಜನಗೂಡು ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ (Raitha Sangha) ಮತ್ತು ಹಸಿರು ಸೇನೆ (Hasiru Sene) ರೈತರ ಸಾಮೂಹಿಕ ನಾಯಕತ್ವದ ಅಧ್ಯಕ್ಷರು, ಕಬಿನಿ ಎಡದಂಡೆ ಮತ್ತು ಬಲದಂಡೆ ನೀರು ಕಡಿಮೆ ಪ್ರಮಾಣಲ್ಲಿ ನೀರು ಹರಿಸಿ ಈ ಭಾಗದ ರೈತರು ಭತ್ತ ಬೆಳೆಯಬಾರದು ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ, ಭತ್ತ ಬಿಟ್ಟು ರೈತರು ಏನು ಬೆಳೆಯಬೇಕು ಎಂದು ಹೇಳುವ ಅವರು ತಮಿಳುನಾಡಿಗೆ ಮಾತ್ರ ಯಥೇಚ್ಛವಾಗಿ ನೀರು ಬಿಡಲಾಗುತ್ತಿದೆ ಎನ್ನುತ್ತಾರೆ. ಕಾಲುವೆಗಳಲ್ಲಿ ಹೂಳು ತೆಗೆಸಿಲ್ಲ, ಕಳೆ ಕೀಳಿಸಿಲ್ಲ ಎಂದು ಅರೋಪಿಸುವ ಅವರು ಅಧಿಕಾರಿಗಳ ಮತ್ತು ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ