AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಯಿಂದ ಸಂಸ್ಕೃತ ಶ್ಲೋಕ! ಅವರದೆ ಭಾವ ಭಂಗಿಯಲ್ಲಿ ಈ ವಿಡಿಯೋ ನೋಡಿ!

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಾಯಿಂದ ಸಂಸ್ಕೃತ ಶ್ಲೋಕ! ಅವರದೆ ಭಾವ ಭಂಗಿಯಲ್ಲಿ ಈ ವಿಡಿಯೋ ನೋಡಿ!

ಸಾಧು ಶ್ರೀನಾಥ್​
|

Updated on: Aug 12, 2023 | 12:03 PM

Share

DK Shivakumar Sanskrit: ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಿನ್ನೆ ಶುಕ್ರವಾರ ಮಹತ್ವದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ, ಪ್ರಜ್ಞಾಪೂರ್ವಕವಾಗಿ ಸಂಸ್ಕೃತ ಭಾಷೆ ಕಲಿತು, ಅದರ ಮೇಲೆ ಪ್ರಭುತ್ವ ಸಾಧಿಸಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಸಮಾರಂಭದಲ್ಲಿ ನಿರರ್ಗಳವಾಗಿ ಸಂಸ್ಕೃತ ಶ್ಲೋಕ ಪಠಿಸಿದ್ದಾರೆ! ಸಂದರ್ಭ - ಜನರ ಋಣ ಹೇಗೆ ತೀರಿಸಬೇಕು ಅನ್ನೋದನ್ನ ಡಿ.ಕೆ. ಶಿವಕುಮಾರ್ ಸಂಸ್ಕೃತ ಶ್ಲೋಕದ ಮೂಲಕ ಹೇಳಿದ್ದಾರೆ. ಅದನ್ನು ಈ ವಿಡಿಯೋದಲ್ಲಿ ನೋಡಿ!

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ನಿನ್ನೆ ಶುಕ್ರವಾರ ಮಹತ್ವದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ಮಧ್ಯೆ, ಪ್ರಜ್ಞಾಪೂರ್ವಕವಾಗಿ ಸಂಸ್ಕೃತ ಭಾಷೆ ಕಲಿತು, ಅದರ ಮೇಲೆ ಪ್ರಭುತ್ವ ಸಾಧಿಸಿರುವ ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಸಮಾರಂಭದಲ್ಲಿ ನಿರರ್ಗಳವಾಗಿ ಸಂಸ್ಕೃತ ಶ್ಲೋಕ ಪಠಿಸಿದ್ದಾರೆ! ಏನೇ ಆಗಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಬಾಯಿಂದ ಸಂಸ್ಕೃತ ಶ್ಲೋಕ (Sanskrit verse) ಕೇಳುವುದೇ ಚೆಂದ! ಅದೂ ಅವರ ವಿಭಿನ್ನ ಭಾವ ಭಂಗಿಯಲ್ಲಿ ನೋಡುವುದೇ ಚೆಂದ. ಸಂದರ್ಭ – ಜನರ ಋಣ ಹೇಗೆ ತೀರಿಸಬೇಕು ಅನ್ನೋದನ್ನಡಿ.ಕೆ. ಶಿವಕುಮಾರ್ ಸಂಸ್ಕೃತ (DCM DK Shivakumar) ಶ್ಲೋಕದ ಮೂಲಕ ಹೇಳಿದ್ದಾರೆ. ಅದನ್ನು ಈ ವಿಡಿಯೋದಲ್ಲಿ ನೋಡಿ (Video)!

ಕೊಕಟನೂರಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಕಟ್ಟಡ ಲೋಕಾರ್ಪಣೆ ನೆರವೇರಿತು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಅಡಿಗಲ್ಲು ಸಮಾರಂಭ ನಡೆಯಿತು. ಸಚಿವರಾದ ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಬೋಸರಾಜು, ಕೆ. ವೆಂಕಟೇಶ್​​, ಲಕ್ಷ್ಮೀ ಹೆಬ್ಬಾಳ್ಕರ್​, ಶಾಸಕರಾದ ಸವದಿ, ರಾಜು ಕಾಗೆ, ಅಶೋಕ್ ಪಟ್ಟಣ್, ಮಹೇಂದ್ರ ತಮ್ಮಣ್ಣವರ್ ಸೇರಿ ಹಲವರು ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ