ಜನರ ಸಂಕಷ್ಟಕ್ಕೆ ಸ್ಪಂದಿಸದ್ದರೇ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು: ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ
ಅಧಿಕಾರಿಗಳು ಜನಪ್ರತಿನಿಗಳಿಗೆ ವಿಳಂಬ ಮಾಡದೇ ಸ್ಪಂದಿಬೇಕು. ಒಂದು ವೇಳೆ ವಿಳಂಬವಾದ್ರೆ ಅದು ಒಂದು ರೀತಿಯಲ್ಲಿ ಭ್ರಷ್ಟಾಚಾರವೇ ಸರಿ ಎಂದು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ದಾವಣಗೆರೆ: ಅಧಿಕಾರಿಗಳು ಜನಪ್ರತಿನಿಧಿಗಳಿಗೆ ವಿಳಂಬ ಮಾಡದೇ ಸ್ಪಂದಿಸಬೇಕು. ಒಂದು ವೇಳೆ ವಿಳಂಬವಾದ್ರೆ ಅದು ಒಂದು ರೀತಿಯಲ್ಲಿ ಭ್ರಷ್ಟಾಚಾರವೇ ಸರಿ ಎಂದು ಸಿಎಂ ಸಿದ್ಧರಾಮಯ್ಯ (Cm Siddaramaiah) ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಜನರ ಸಂಕಷ್ಟಕ್ಕೆ ಸ್ಪಂದಿಸುವ ಮತ್ತು ಜನರ ಜೊತೆ ಸೌಜನ್ಯತೆಯಿಂದ ನಡೆದುಕೊಳ್ಳಬೇಕು. ಜನರ ಸಮಸ್ಯೆಗೆ ಬಗ್ಗೆ ಅಸಡ್ಡೆ ಉಡಾಫೆ ಮಾಡಿದ್ರೆ, ಅಂತಹ ಅಧಿಕಾರಿಗಳಿಗೆ ಜಾಗಾ ಇಲ್ಲಾ. ಜನರು ಬದಲಾವಣೆ ಬಯಸಿ ನಮ್ಮನ್ನ ಆಯ್ಕೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸದಿದ್ದರೇ ಯಾರ ಮೇಲೆ ಸಹ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ತಹಶೀಲ್ದಾರ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ: ಸಿದ್ಧರಾಮಯ್ಯ ಆಕ್ರೋಶ
ಕಂದಾಯ, ಕೃಷಿ, ಪೊಲೀಸ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಬರುವ ಜನರ ಸಮಸ್ಯೆಗಳಿಗೆ ಸ್ಪಂದಿಸಿ. ತಹಶೀಲ್ದಾರ ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಹೆಚ್ಚಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲೂಕು ಹಾಗೂ ಹೊಬಳಿ ಮಟ್ಟಕ್ಕೆ ಭೇಟಿ ನೀಡಬೇಕು. ಯಾವುದೇ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಬಂದರೇ ಸೂಕ್ತ ಕ್ರಮ ಕೈಗೊಳ್ಳಬೇಕು.
ಇದನ್ನೂ ಓದಿ: ಹಿಂದೆಯೂ ಜನರ ಮೇಲೆ ಹೊರೆ ಹಾಕಿದ್ದ ಕಾಂಗ್ರೆಸ್: ವಿದ್ಯುತ್ ದರ ಹೆಚ್ಚಳಕ್ಕೆ ಮಾಜಿ ಸಿಎಂ ಬೊಮ್ಮಾಯಿ ಗರಂ
ರೈತರಿಗೆ ಬೀಜ, ಗೊಬ್ಬರ ಪೂರೈಕೆ ಸೂಚನೆ
ಎಸಿ ಕಚೇರಿಗಳಲ್ಲಿಕುಳಿತು ಕಾರ್ಯಬಾರ ಮಾಡಿ. ನಿಮಗೆ ಸರ್ಕಾರವೇ ಬೇಕಾದಷ್ಟು ಸೌಲಭ್ಯ ನೀಡಿದೆ. ಈ ಸೌಲಭ್ಯಗಳು ಜನರ ಕಲ್ಯಾಣಕ್ಕಾಗಿ ನೀಡಲಾಗಿದೆ. 20 ಸಾವಿರ ಹೆಕ್ಟೇರ ಪ್ರದೇಶದಲ್ಲಿ ಅಲಿಕಲ್ಲು ಮಳೆಗೆ ದಾವಣಗೆರೆ ಜಿಲ್ಲೆಯಲ್ಲಿ ಆಗಿದೆ. ತಕ್ಷಣ ವರದಿ ಕೊಡಿ. ಜೂನ್ 9 ಮಳೆಗಾಲ ಶುರುವಾಗುತ್ತದೆ. ಆಗ ಕೃಷಿ ಚಟುವಟಿಕೆ ಆರಂಭವಾಗುತ್ತದೆ. ರೈತರಿಗೆ ಬೀಜ, ಗೊಬ್ಬರ, ಕೀಟನಾಶಕ ಅಗತ್ಯ ಪೂರೈಕೆ ಮಾಡಬೇಕು. ವಿಳಂಬಕ್ಕೆ ಅವಕಾಶವಿಲ್ಲ ಎಂದರು.
ಇದನ್ನೂ ಓದಿ: ಭಾರತ್ ಮಾತೆ ಪರ ಘೋಷಣೆ ಕೂಗಿದ್ದಕ್ಕೆ ಹಲ್ಲೆ: ಸಮಗ್ರ ವರದಿಗೆ ಐವರ ತಂಡ ರಚಿಸಿದ ಬಿಜೆಪಿ
ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ತನಿಖೆಗೆ ಆಗ್ರಹಿಸಿದ ಶಾಸಕ ಡಿ.ಜಿ.ಶಾಂತನಗೌಡರ
ಯಾವುದೇ ಅಧಿಕಾರಿಗಳ ಬಗ್ಗೆ ಭ್ರಷ್ಟಚಾರ ದೂರುಗಳು ಬಂದ್ರೆ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಲಾಗುತ್ತದೆ. ಸಿಎಂ ಸಿದ್ಧರಾಮಯ್ಯ ಸಮ್ಮುಖದಲ್ಲಿ ಮಾಜಿ ಶಾಸಕ ರೇಣುಕಾಚಾರ್ಯ ಭ್ರಷ್ಟಚಾರವನ್ನು ಶಾಸಕ ಶಾಂತನಗೌಡ ಬಯಲು ಮಾಡಿದರು. ರೇಣುಕಾಚಾರ್ಯ ಅವರು ಕಾನೂನು ಬಾಹಿರವಾಗಿ ಮನೆಗಳನ್ನ ನೀಡಿ ಭ್ರಷ್ಟಚಾರ ಮಾಡಿದ್ದಾರೆ. ಅದರ ಬಗ್ಗೆ ತನಿಖೆ ಮಾಡುವಂತೆ ಸಿಎಂ ಸಮ್ಮುಖದಲ್ಲಿ ಆಗ್ರಹಿಸಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Mon, 5 June 23