ಜನ ಕಷ್ಟ ಹೇಳಿಕೊಳ್ಳಲು ಬಂದಾಗ ಸಿಎಂ ಸಿದ್ದರಾಮಯ್ಯ ಒಂದೆರಡು ನಿಮಿಷ ಸ್ಪೇರ್ ಮಾಡಿದರೆ ಆಕಾಶವೇನೂ ಕಳಚಿಬೀಳದು!

ತಳ್ಳಾಟ ನೂಕಾಟದಲ್ಲಿ ಮಹಿಳೆಯ ಕಾಲು ಉಳುಕಿ ಅವರು ತೀವ್ರ ಸ್ವರೂಪದ ನೋವಿಗೀಡಾಗಬೇಕಾಯಿತು. ತಮ್ಮ ಸಂಕಟವನ್ನು ಅವರು ಮಾಧ್ಯಮದವರ ಮುಂದೆ ನೋವಿನಿಂದ ನರಳುತ್ತಾ, ಕಣ್ಣೀರು ಸುರಿಸುತ್ತಾ ಹೇಳಿಕೊಂಡರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಹತ್ತಿ ಹೊರಡುವ ಮೊದಲು ತಮ್ಮ ಎಡಬಲ ಒಮ್ಮೆ ಕಣ್ಣು ಹಾಯಿಸುವ ಅವಶ್ಯಕತೆಯಿದೆ.

ಜನ ಕಷ್ಟ ಹೇಳಿಕೊಳ್ಳಲು ಬಂದಾಗ ಸಿಎಂ ಸಿದ್ದರಾಮಯ್ಯ ಒಂದೆರಡು ನಿಮಿಷ ಸ್ಪೇರ್ ಮಾಡಿದರೆ ಆಕಾಶವೇನೂ ಕಳಚಿಬೀಳದು!
|

Updated on: Aug 12, 2023 | 1:35 PM

ಮೈಸೂರು: ಜನಪ್ರತಿನಿಧಿಗಳು ಜನರ ಕಷ್ಟಗಳನ್ನು ಪರಿಹರಿಸಬೇಕೇ ಹೊರತು ಹೆಚ್ಚಿಸಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಶಾಸಕ, ಮಂತ್ರಿ, ಮುಖ್ಯಮಂತ್ರಿಗಳ ಬಳಿ ತಮ್ಮ ಕಷ್ಟ ಹೇಳಿಕೊಳ್ಳಲು ಬರುತ್ತಾರೆ. ಆದರೆ ಕೆಲವರಿಗೆ ಮಾತ್ರ ಅವರ ಕಾರುಗಳನ್ನು ತಲುಪುವುದು ಸಾಧ್ಯವಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ಮೈಸೂರಿಗೆ ಆಗಮಿಸಿದಾಗ ಇಂಥದೊಂದು ಪ್ರಸಂಗ ನಡೆಯಿತು. ತಮ್ಮ ಕಷ್ಟ ಹೇಳಿಕೊಳ್ಳಲು ಬಂದಿದ್ದ ಒಬ್ಬ ವಯಸ್ಸಾಗಿರುವ ಮಹಿಳೆಗೆ (elderly woman) ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಭದ್ರತಾ ಸಿಬ್ಬಂದಿ (security staff) ಅವಕಾಶ ಕಲ್ಪಿಸಲಿಲ್ಲ. ಅಸಲಿಗೆ ಕೊಂಚ ಸ್ಥೂಲದೇಹಿಯಾಗಿರುವ ಅವರನ್ನು ತಳ್ಳಲಾಯಿತು. ತಳ್ಳಾಟ ನೂಕಾಟದಲ್ಲಿ ಮಹಿಳೆಯ ಕಾಲು ಉಳುಕಿ ಅವರು ತೀವ್ರ ಸ್ವರೂಪದ ನೋವಿಗೀಡಾಗಬೇಕಾಯಿತು. ತಮ್ಮ ಸಂಕಟವನ್ನು ಅವರು ಮಾಧ್ಯಮದವರ ಮುಂದೆ ನೋವಿನಿಂದ ನರಳುತ್ತಾ, ಕಣ್ಣೀರು ಸುರಿಸುತ್ತಾ ಹೇಳಿಕೊಳ್ಳುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ಹತ್ತಿ ಹೊರಡುವ ಮೊದಲು ತಮ್ಮ ಎಡಬಲ ಒಮ್ಮೆ ಕಣ್ಣು ಹಾಯಿಸುವ ಅವಶ್ಯಕತೆಯಿದೆ. ಈ ಮಹಿಳೆಯಂಥ ಹಲವಾರು ಜನ ತಮ್ಮ ಕಷ್ಟ ಹೇಳಿಕೊಳ್ಳಲು ಅವರಲ್ಲಿಗೆ ಬಂದಿರುತ್ತಾರೆ. ಸಿದ್ದರಾಮಯ್ಯ ಅವರಿಗಾಗಿ ಒಂದೆರಡು ನಿಮಿಷಗಳನ್ನು ಮೀಸಲಿಟ್ಟರೆ ಅವಗಢವೇನೂ ಸಂಭವಿಸದು. ಅಸಲಿಗೆ ಅವರು ತಮ್ಮ ಅಧಿಕಾರಿಗಳಿಗೆ ಎಚ್ಚರಿಸಬೇಕಿದೆ. ಯಾಕೆಂದರೆ ಜನರನ್ನು ತಡೆಯುವ ಕೆಲಸ ಅವರೇ ಮಾಡೋದು. ಮುಖ್ಯಮಂತ್ರಿಗೆ ತಾವು ಕಾಣಬೇಕು, ಅವರ ದೃಷ್ಟಿಗೆ ಬಿದ್ದು ಕೃತಾರ್ಥರಾಗಬೇಕೆಂಬ ತಹತಹಿಕೆ ಅವರಲ್ಲಿರುತ್ತದೆ. ಸಿದ್ದರಾಮಯ್ಯನವರೇ, ನಿಮ್ಮ ಸೇವೆ ಬೇಕಿರೋದು ವೋಟು ನೀಡಿ ಗೆಲ್ಲಿಸಿರುವ ಜನಕ್ಕೆ, ದಯವಿಟ್ಟು ಈ ಅಂಶವನ್ನು ನಿಮ್ಮ ಅಧಿಕಾರಿಗಳಿಗೆ ಮನವರಿಕೆ ಮಾಡಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ