ಫ್ರೀ ಬಸ್ ಬಳಿಕ ತುಮಕೂರು ಅಮಾನಿಕೆರೆಯಲ್ಲಿ  ಮಹಿಳೆಯರಿಗೆ ವಾರಾಂತ್ಯ ಫ್ರೀ ಬೋಟಿಂಗ್

ಫ್ರೀ ಬಸ್ ಬಳಿಕ ತುಮಕೂರು ಅಮಾನಿಕೆರೆಯಲ್ಲಿ ಮಹಿಳೆಯರಿಗೆ ವಾರಾಂತ್ಯ ಫ್ರೀ ಬೋಟಿಂಗ್

ಮಹೇಶ್ ಇ, ಭೂಮನಹಳ್ಳಿ
| Updated By: ಸಾಧು ಶ್ರೀನಾಥ್​

Updated on: Aug 12, 2023 | 1:22 PM

ತುಮಕೂರು: ಕಾಂಗ್ರೆಸ್​​​ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇ ತಡ ಬಹುತೇಕ ಎಲ್ಲೆಲ್ಲೂ ಮಹಿಳೆಯರಿಗೆ ಉಚಿತ ಉಚಿತ ಎನ್ನುವಂತಾಗಿದೆ! ಇದೇ ವಾರಾಂತ್ಯ ಅಂದರೆ ಇದೇ ಶನಿವಾರ-ಭಾನುವಾರ ತುಮಕೂರು ಅಮಾನಿಕೆರೆಯಲ್ಲಿ ಮಹಿಳೆಯರಿಗಾಗಿ ಫ್ರೀ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ.

ತುಮಕೂರು, ಆಗಸ್ಟ್​ 12 : ಕಾಂಗ್ರೆಸ್​​​ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇ ತಡ ಬಹುತೇಕ ಎಲ್ಲೆಲ್ಲೂ ಮಹಿಳೆಯರಿಗೆ (Women) ಉಚಿತ ಉಚಿತ ಎನ್ನುವಂತಾಗಿದೆ! ಇದೇ ವಾರಾಂತ್ಯ ಅಂದರೆ ಇದೇ ಶನಿವಾರ-ಭಾನುವಾರ ತುಮಕೂರು ಅಮಾನಿಕೆರೆಯಲ್ಲಿ (Amanikere lake in Tumkur) ಮಹಿಳೆಯರಿಗಾಗಿ ಫ್ರೀ ಬೋಟಿಂಗ್ ವ್ಯವಸ್ಥೆ (Weekend free boating) ಮಾಡಲಾಗಿದೆ. ಇದು ಬೋಟಿಂಗ್ ಪ್ರಿಯರಿಗೆ ನಿಜಕ್ಕೂ ಗುಡ್ ನ್ಯೂಸ್ ಆಗಿದೆ. ಅಂದಹಾಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ ಬೋಟಿಂಗ್ ರೈಡ್ ಮಾಡುವ ಮೂಲಕ ತುಮಕೂರಿನ ಅಮಾನಿಕೆರೆಯಲ್ಲಿ ಬೋಟಿಂಗ್ ಉದ್ಘಾಟನೆ ಮಾಡಿದರು.

ಕೊರೊನಾ ಸೇರಿದಂತೆ ನಾನಾ ಕಾರಣದಿಂದ ಅಮಾನಿಕೆರೆಯಲ್ಲಿ ಬೋಟಿಂಗ್ ಬಂದ್ ಆಗಿತ್ತು. ಆದರೆ ಇದೇ ಜಿಲ್ಲೆಯವರಾದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಇಂದು ಸ್ವತಃ ತಾವೂ ಬೋಟ್​ ರೈಡ್ ಮಾಡುವ ಮೂಲಕ ಚಾಲನೆ ನೀಡಿದರು. ಇದೆ ವೇಳೆ ಜಿಲ್ಲಾಧಿಕಾರಿ ಶ್ರೀನಿವಾಸ್ ಮೂರ್ತಿ ಅವರು ಮಾತನಾಡಿ ಇಂದು ಮತ್ತು ನಾಳೆ ಮಹಿಳೆಯರಿಗೆ ಉಚಿತ ಬೋಟಿಂಗ್ ವ್ಯವಸ್ಥೆ ಇರುತ್ತದೆ. ನಿಗದಿತ ಶುಲ್ಕ ಪಾವತಿಸಿ ಬೋಟಿಂಗ್ ಮಾಡಬಹುದು ಎಂದರು. ಈ ಮಧ್ಯೆ, ಅಮಾನಿಕೆರೆಯಲ್ಲಿ ವಿವಿಧ ಮಾದರಿ ಬೋಟಿಂಗ್ ರೇಟ್ ಬಿಡುಗಡೆ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ