ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಫಲಿತಾಂಶದ ವಿವರಗಳು ಇಲ್ಲಿ ನೀಡಲಾಗಿದೆ. ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಶಿವಾನಂದ ಶೆಲ್ಲಿಕೇರಿ ಆಯ್ಕೆ ಆಗಿದ್ದಾರೆ. 2,452 ಮತಗಳು ಪಡೆದು ಶಿವಾನಂದ ಶೆಲ್ಲಿಕೇರಿ ಆಯ್ಕೆ ಆಗಿದ್ದಾರೆ. ಜಿ.ಕೆ. ತಳವಾರ ವಿರುದ್ಧ 811 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹಾಸನ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಮಲ್ಲೇಶ್ ಗೌಡ ಆಯ್ಕೆ ಆಗಿದ್ದಾರೆ. 2,081 ಮತಗಳ ಅಂತರದಿಂದ ಡಾ. ಹೆಚ್.ಎಲ್. ಮಲ್ಲೇಶ್ ಗೌಡ ಆಯ್ಕೆ ಆಗಿದ್ದಾರೆ.
ಕೋಲಾರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಗೋಪಾಲಗೌಡ ಆಯ್ಕೆ ಆಗಿದ್ದಾರೆ. ನಾಗಾನಂದ ಕೆಂಪರಾಜ್ ವಿರುದ್ಧ ಎನ್.ಬಿ. ಗೋಪಾಲಗೌಡ ಜಯಸಾಧಿಸಿದ್ದಾರೆ. ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ಸಿದ್ದಪ್ಪ ಹೊಟ್ಟಿ ಆಯ್ಕೆ ಆಗಿದ್ದಾರೆ. ಸತತ 3ನೇ ಬಾರಿಗೆ ಸಿದ್ದಪ್ಪ ಹೊಟ್ಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.
ರಾಯಚೂರು ಜಿಲ್ಲಾ ಕಸಾಪ ಅಧ್ಯಕ್ಷರಾಗಿ ರಂಗಣ್ಣ ಪಾಟೀಲ್ ಆಯ್ಕೆ ಆಗಿದ್ದಾರೆ. ಭೀಮನಗೌಡ ಇಟಗಿ ವಿರುದ್ಧ 329 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ದಾವಣಗೆರೆ ಜಿಲ್ಲಾ ಕಸಾಪ ಅಧ್ಯಕ್ಷರಾಗಿ ವಾಮದೇವಪ್ಪ ಆಯ್ಕೆ ಆಗಿದ್ದಾರೆ. ಶಿವಕುಮಾರ್ ಕುರ್ಕಿ ವಿರುದ್ಧ ವಾಮದೇವಪ್ಪ ಗೆಲುವು ಸಾಧಿಸಿದ್ದಾರೆ.
ಬಿಡಿಎ ನೌಕರರ ಸಂಘದ ಚುನಾವಣೆಯಲ್ಲಿ ಯುವ ಪಡೆ ಜಯಭೇರಿ
ಬಿಡಿಎ ನೌಕರರ ಸಂಘದ ಚುನಾವಣೆಯಲ್ಲಿ ಯುವ ಪಡೆ ಜಯಭೇರಿ ಭಾರಿಸಿದೆ. ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸೇರಿದಂತೆ 17 ಸ್ಥಾನಗಳಿಗೆ ಚುನಾವಣೆ ನಡೆಸಲಾಗಿತ್ತು. ಬಿಡಿಎ ನೌಕರರ ಸಂಘದ ಅಧ್ಯಕ್ಷರಾಗಿ ಆರ್. ಮಂಜುನಾಥ್ ಆಯ್ಕೆ ಆಗಿದ್ದಾರೆ. ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಜಿ.ಎಂ. ಶಿವಶಂಕರ್, ಸಂಘದ ಉಪಾಧ್ಯಕ್ಷರಾಗಿ ಕೆ. ಪ್ರಮೋದ್, ವಿ. ರಂಗನಾಥ್ ಆಯ್ಕೆ ಆಗಿದ್ದಾರೆ. 4 ವರ್ಷಕ್ಕೊಮ್ಮೆ ನಡೆಯುವ ಬಿಡಿಎ ನೌಕರರ ಸಂಘದ ಚುನಾವಣೆಯಲ್ಲಿ ನೌಕರರು ಯುವ ಪಡೆ ಬೆಂಬಲಿಸಿದ್ದಾರೆ. 17 ಸ್ಥಾನಗಳಲ್ಲೂ ಉದಯಿಸುತ್ತಿರುವ ಪಕ್ಷದ ಚಿಹ್ನೆಯವರಿಗೆ ಜಯ ಲಭಿಸಿದೆ.
ಇದನ್ನೂ ಓದಿ: ಟೀಕಿಸುವ ಭರದಲ್ಲಿ ಹಿರಿಯ ಸಾಹಿತಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಆಡಿಯೋ ವೈರಲ್
ಇದನ್ನೂ ಓದಿ: Bengaluru News: ಬೆಂಗಳೂರು ನಗರದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ ಸಾಧ್ಯತೆ