ಕಲಬುರಗಿ: ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ 2 ಡೀಸೆಲ್ ಟ್ಯಾಂಕರ್; ಇಬ್ಬರು ಸಜೀವ ದಹನವಾಗಿರುವ ಶಂಕೆ

TV9 Digital Desk

| Edited By: ganapathi bhat

Updated on:Nov 21, 2021 | 8:12 PM

ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಬಳಿ ದುರ್ಘಟನೆ ಸಂಭವಿಸಿದೆ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಕಲಬುರಗಿ: ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ 2 ಡೀಸೆಲ್ ಟ್ಯಾಂಕರ್; ಇಬ್ಬರು ಸಜೀವ ದಹನವಾಗಿರುವ ಶಂಕೆ
ಪರಸ್ಪರ ಡಿಕ್ಕಿಯಾಗಿ ಹೊತ್ತಿ ಉರಿದ 2 ಡೀಸೆಲ್ ಟ್ಯಾಂಕರ್
Follow us

ಕಲಬುರಗಿ: ಪರಸ್ಪರ ಡಿಕ್ಕಿಯಾಗಿ 2 ಡೀಸೆಲ್ ಟ್ಯಾಂಕರ್ ಹೊತ್ತಿ ಉರಿದಿದೆ. ಟ್ಯಾಂಕರ್​ನಲ್ಲಿದ್ದ ಇಬ್ಬರು ಸಜೀವ ದಹನವಾಗಿರುವ ಶಂಕೆ ವ್ಯಕ್ತವಾಗಿದೆ. ತೊನಸನಹಳ್ಳಿ ಗ್ರಾಮದ ಬಳಿ ದುರ್ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಬಳಿ ದುರ್ಘಟನೆ ಸಂಭವಿಸಿದೆ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.ಸಂಭವಿಸಿದೆ. ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ತೊನಸನಹಳ್ಳಿ ಬಳಿ ದುರ್ಘಟನೆ ಸಂಭವಿಸಿದೆ. ಶಹಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದಾವಣಗೆರೆ: ಮಳೆಗೆ ರೈತ ಸಾವು ದಾವಣಗೆರೆ ಜಿಲ್ಲೆಯಲ್ಲಿ ಮಳೆ ಮೂರನೇ ಬಲಿ ಪಡೆದುಕೊಂಡಿದೆ. ಜಾನುವಾರು ಮೈತೊಳೆಯಲು ಹೋದಾಗ ರೈತ ಸಾವನ್ನಪ್ಪಿದ ಘಟನೆ ನಡೆದಿದೆ. ದಾವಣಗೆರೆ ತಾಲೂಕಿನ ಹುಚ್ಚವನಹಳ್ಳಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಮುಳುಗಿ ರೈತ ತಿಪ್ಪೇಸ್ವಾಮಿ (48) ಸಾವನ್ನಪ್ಪಿದ್ದಾರೆ. ಮಳೆಯಿಂದಾಗಿ ಕೆರೆಗೆ ನೀರು ಹರಿದು ಬಂದ ಹಿನ್ನೆಲೆ ಕೆರೆಯಲ್ಲಿ ಮುಳುಗಿ ರೈತ ತಿಪ್ಪೇಸ್ವಾಮಿ ಮೃತಪಟ್ಟಿದ್ದಾರೆ. ರೈತರ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಹುಡುಕಾಟ ನಡೆಸಿದೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ‌ ಕೇಸ್ ದಾಖಲು ಮಾಡಲಾಗಿದೆ.

ವಿಜಯಪುರ: ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವು ಹತ್ತು ವರ್ಷದ ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಬಳಿ ನಡೆದಿದೆ. ಮೃತಪಟ್ಟ ಸ್ಥಿತಿಯಲ್ಲಿ ಬಾಲಕ ಸಾಹಿಲ್​ ಶವ ಪತ್ತೆ ಆಗಿದೆ. ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ರಾಯಚೂರು: ರಸ್ತೆ ಕುಸಿದು ಭತ್ತ ತುಂಬಿದ್ದ ಲಾರಿ ಪಲ್ಟಿ  ರಾಯಚೂರು ಜಿಲ್ಲೆಯಲ್ಲಿ ಸತತ ಮಳೆಯಿಂದ ಅವಾಂತರ ಉಂಟಾಗಿದೆ. ಹಳ್ಳದ ಸೇತುವೆ ರಸ್ತೆ ಕುಸಿದು ಭತ್ತ ತುಂಬಿದ್ದ ಲಾರಿ ಪಲ್ಟಿ ಆಗಿದೆ. ಮಾನ್ವಿ ತಾಲೂಕಿನ ಮಲ್ಲದಗುಡ್ಡ ಬಳಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಹಿನ್ನೆಲೆ 350 ಚೀಲ ಭತ್ತ ನೀರುಪಾಲು ಆಗಿದೆ. ಲಾರಿ ಚಾಲಕ, ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಪಲ್ಟಿಯಾದ ಹಿನ್ನೆಲೆಯಲ್ಲಿ ರಸ್ತೆ ಮಾರ್ಗ ಬಂದ್ ಮಾಡಲಾಗಿದೆ.

ಗದಗ: ಕಾರು ಡಿಕ್ಕಿ; ಮೂವರ ದುರ್ಮರಣ ಟ್ರ್ಯಾಕ್ಟರ್ ಟ್ರೇಲರ್ ಹಿಂಬದಿಯಿಂದ ಕಾರು ಡಿಕ್ಕಿ ಆದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಬಳಿ ನಡೆದಿದೆ. ಕಾರಿನಲ್ಲಿ ಇದ್ದ ಮೂವರು ದುರ್ಮರಣವನ್ನಪ್ಪಿದ್ದಾರೆ. ತಾಯಿ ಮಗ ಮತ್ತು ಮೊಮ್ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೋರ್ವ ಮಹಿಳೆಯ ಸ್ಥಿತಿ ಚಿಂತಾಜನಿಕ ಆಗಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೆಕ್ಕೆಜೋಳ ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಟ್ರೇಲರ್ ಹಿಂಬದಿಯಿಂದ ಕಾರ್ ಡಿಕ್ಕಿ ಆಗಿದೆ.

ಹಾವೇರಿ: ವಿದ್ಯುತ್​ ತಂತಿ ತುಳಿದು ಬಾಲಕ ಸಾವು ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಬಾಲಕ ಸಾವನ್ನಪ್ಪಿದ ದುರ್ಘಟನೆ ಹಾವೇರಿ ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ನಡೆದಿದೆ. ವಿದ್ಯುತ್​ ತಂತಿ ತುಳಿದು ಚೇತನ ಕಂಬಳಿ (14) ದುರ್ಮರಣವನ್ನಪ್ಪಿದ್ದಾರೆ. ಸರ್ಕಾರಿ ಶಾಲೆ ಕಟ್ಟಡದ ಮೇಲೆ ಆಟವಾಡುವಾಗ ಅವಘಡ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಅಪಘಾತದ ರಭಸಕ್ಕೆ ಸ್ಥಳದಲ್ಲೇ ದಂಪತಿ ದುರ್ಮರಣ, ಮನೆ ಕೆಲಸ ಮಾಡಲು ಬಂದು ಆಭರಣ ದೋಚಿದ್ದ ಕಿಲಾಡಿ ಲೇಡಿ ಅಂದರ್

ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ಸುಶಾಂತ್​ ಕುಟುಂಬದ 6 ಮಂದಿ ನಿಧನ; ಇನ್ನೂ 4 ಜನರ ಸ್ಥಿತಿ ಗಂಭೀರ 

ತಾಜಾ ಸುದ್ದಿ

Related Stories

Click on your DTH Provider to Add TV9 Kannada