ಕೃಷಿ ಕಾಯ್ದೆ ಹಿಂಪಡೆಯುವ ಹಿಂದೆ ರಾಜಕೀಯ ನಡೆ ಇದೆ, ಬಿಜೆಪಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಮೊದಲೇ ತೋರಿಸಬೇಕಿತ್ತು. ಸುಗ್ರಿವಾಜ್ಞೆ ಮೂಲಕ ಕಾಯ್ದೆಯನ್ನ ಮೊದಲೇ ಹಿಂಪಡೆಯಬೇಕಿತ್ತು. ಇದೀಗ ಐದು ರಾಜ್ಯಗಳ ಚುನಾವಣೆ ಬಂದಿದೆ. ಅದರ ಪರಿಣಾಮ ತಮ್ಮ ಪಕ್ಷದ ಮೇಲೆ ಆಗಬಹುದು. -ಮಲ್ಲಿಕಾರ್ಜುನ ಖರ್ಗೆ

ಕೃಷಿ ಕಾಯ್ದೆ ಹಿಂಪಡೆಯುವ ಹಿಂದೆ ರಾಜಕೀಯ ನಡೆ ಇದೆ, ಬಿಜೆಪಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ನವೆಂಬರ್ 19ರಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದರು. ಸದ್ಯ ಕೃಷಿ ಕಾಯ್ದೆ ಹಿಂಪಡೆಯುವ ಹಿಂದೆ ರಾಜಕೀಯ ನಡೆ ಇದೆ ಎಂದು ಕಲಬುರಗಿಯಲ್ಲಿ ಬಿಜೆಪಿ ವಿರುದ್ದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಮೊದಲೇ ತೋರಿಸಬೇಕಿತ್ತು. ಸುಗ್ರಿವಾಜ್ಞೆ ಮೂಲಕ ಕಾಯ್ದೆಯನ್ನ ಮೊದಲೇ ಹಿಂಪಡೆಯಬೇಕಿತ್ತು. ಇದೀಗ ಐದು ರಾಜ್ಯಗಳ ಚುನಾವಣೆ ಬಂದಿದೆ. ಅದರ ಪರಿಣಾಮ ತಮ್ಮ ಪಕ್ಷದ ಮೇಲೆ ಆಗಬಹುದು. ಉಪ ಚುನಾವಣೆಯಲ್ಲಿ ಹಿನ್ನಡೆಯಿಂದ ಹಿಂಪಡೆದಿದ್ದಾರೆ. ಈ ನಿರ್ಧಾರವನ್ನು ಕ್ಯಾಬಿನೇಟ್ ಕರೆದು ನಿರ್ಧಾರ ಕೈಗೊಂಡಿಲ್ಲಾ. ಕಾಯ್ದೆ ವಾಪಸ್ ವಿಚಾರವನ್ನ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಕಲಬುರಗಿಯಲ್ಲಿ ಬಿಜೆಪಿ ವಿರುದ್ದ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಇದು ಬಿಜೆಪಿ ಮತ್ತು ಮೋದಿ ನಡೆಯನ್ನು ತೋರಿಸುತ್ತದೆ. ಪ್ರಧಾನಿ ಮೋದಿ ರೈತರಿಗೆ ಉಪಕಾರ ಮಾಡಿಲ್ಲಾ. ಮೋದಿ ಅವರು ಈ ನಿರ್ಧಾರವನ್ನು ಕ್ಯಾಬಿನೇಟ್ ಕರೆದು ನಿರ್ಧಾರ ಕೈಗೊಂಡಿಲ್ಲಾ. ಅವರ ಮನಸಿಗೆ ತಿಳಿದಂತೆ ನಿರ್ಧಾರ ಕೈಗೊಳ್ಳುತ್ತಾರೆ ಎಂದಿದ್ದಾರೆ.

“ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ನಾನು ನಿಮಗೆ ಹೇಳಲು ಬಂದಿದ್ದೇನೆ. ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗುವ ಮುಂಬರುವ ಸಂಸತ್ತಿನ ಅಧಿವೇಶನದಲ್ಲಿ, ನಾವು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸಾಂವಿಧಾನಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ” ಎಂದು ಪ್ರಧಾನಿ ಮೋದಿ ಹೇಳಿದರು.

ಮೂರು ವಿವಾದಾತ್ಮಕ ಕೃಷಿ ಕಾನೂನುಗಳು- ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನೆ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ 2020. ಈ ಕಾಯ್ದೆಗಳನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರವು ಅಂಗೀಕರಿಸಿತು. ಸದ್ಯ ಈಗ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದ್ದಾರೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್ ಹೆಸರಲ್ಲಿ ಮಹಾರಾಷ್ಟ್ರ ಅನಾಥಾಶ್ರಮದಲ್ಲಿ ಅನ್ನದಾನ

Click on your DTH Provider to Add TV9 Kannada