ಅಪಘಾತದ ರಭಸಕ್ಕೆ ಸ್ಥಳದಲ್ಲೇ ದಂಪತಿ ದುರ್ಮರಣ, ಮನೆ ಕೆಲಸ ಮಾಡಲು ಬಂದು ಆಭರಣ ದೋಚಿದ್ದ ಕಿಲಾಡಿ ಲೇಡಿ ಅಂದರ್
Crime News: ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆಗೆ ತೆರಳುವಾಗ ಅಪಘಾತ ನಡೆದಿದೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮನೆ ಕೆಲಸ ಮಾಡಲು ಬಂದು ಆಭರಣ ದೋಚಿದ್ದ ಕಿಲಾಡಿ ಲೇಡಿ ಅಂದರ್
ದೊಡ್ಡಬಳ್ಳಾಪುರ: ಲಾರಿ ಮತ್ತು ಬೈಕ್‌ನ ನಡುವೆ ಅಪಘಾತ ಸಂಭವಿಸಿದ್ದು(lorry bike accident), ಅಪಘಾತದ ರಭಸಕ್ಕೆ ಸ್ಥಳದಲ್ಲಿಯೇ (died on spot) ದಂಪತಿ ದುರ್ಮರಣಕ್ಕೀಡಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ (Doddaballapur) ಕತ್ತಿಹೊಸಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. ದೊಡ್ಡಬೆಳವಂಗಲ ಗ್ರಾಮದ ಶ್ಯಾಮನಾಯಕ್ (55) ಮತ್ತು ಶಾರದಮ್ಮ(45) ಮೃತ ದಂಪತಿ. ದೊಡ್ಡಬಳ್ಳಾಪುರದಿಂದ ದಾಬಸ್ ಪೇಟೆಗೆ ತೆರಳುವಾಗ ಅಪಘಾತ ನಡೆದಿದೆ. ಅಪಘಾತದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆರ್.ಆರ್.ನಗರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು ಮೊಬೈಲ್ ಕಳ್ಳತನ ಮಾಡ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಿರಣ್,ಚೇತನ್,ದರ್ಶನ್ ಬಂಧಿತ ಆರೋಪಿಗಳು. ಬಂಧಿತರಿಂದ 3 ಲಕ್ಷ 50 ಸಾವಿರ ರೂಪಾಯಿ ಬೆಲೆಬಾಳುವ 21 ವಿವಿಧ ಕಂಪನಿಯ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಯಲಹಂಕ ಉಪನಗರ ಪೊಲೀಸರು ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 9 ಆರೋಪಿಗಳನ್ನು ಬಂಧಿಸಿದ್ದಾರೆ. ಭರತ್, ಚರಣ್, ಶಶಿಕುಮಾರ್, ಸುಬ್ರಹ್ಮಣ್ಯ, ದರ್ಶನ್, ಸಚಿನ್, ಚೇತನ್ ಕುಮಾರ್, ಜೀನು, ಅಕ್ಷಯ್ ಬಂಧಿತರು. ಬಂಧಿತರಿಂದ 20 ಸಾವಿರ ಮೌಲ್ಯದ 45 ಗ್ರಾಂ ಬೆಳ್ಳಿ ಚೈನ್, ಒಂದು ರಿಯಲ್ ಮಿ ಫೋನ್ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್ ಮಾಡಲಾಗಿದೆ. ಸೈಮನ್, ಜೀವನ್, ಮೋಹನ್, ಸಲ್ಮಾನ್ ಟಿಪ್ಪು ಮತ್ತು ಪುನೀತ್ ಕುಮಾರ್ ಎಂಬುವವರನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. 25 ಲಕ್ಷ ಮೌಲ್ಯದ ಚಿನ್ನಾಭರಣ, 1.30 ಲಕ್ಷ ನಗದು, ಐಷಾರಾಮಿ ಬೈಕ್, ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆ ಕೆಲಸ ಮಾಡಲು ಬಂದು ಆಭರಣ ದೋಚಿದ್ದ ಕಿಲಾಡಿ ಲೇಡಿ ಅಂದರ್ ಮನೆ ಕೆಲಸ ಮಾಡಲು ಬಂದಿದ್ದ ಕಿಲಾಡಿ ಲೇಡಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿದ್ದಳು ಎನ್ನಲಾಗಿದೆ. ಯಲಹಂಕ ಪೊಲೀಸರು ಈ ಖತರ್ನಾಕ್ ಲೇಡಿಯನ್ನು ಕೊನೆಗೂ ಬಂಧಿಸಿದ್ದಾರೆ. ಯಲಹಂಕ ಮಾರುತಿನಗರ ನಿವಾಸಿ ಸಬಿನಾ ಬಂಧಿತ ಆರೋಪಿ ಮಹಿಳೆ. ಬಂಧಿತಳಿಂದ 14 ಲಕ್ಷ ಮೌಲ್ಯದ 310 ಗ್ರಾಂ ತೂಕದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಈಕೆ ಪಿ.ಎಸ್ ಶೇಷಾದ್ರಿ ಎಂಬುವರ ಮನೆಯಲ್ಲಿ ಐದು ತಿಂಗಳಿಂದ ಕೆಲಸಕ್ಕಿದ್ದಳು. ಚಿನ್ನಾಭರಣ ಇಟ್ಟಿದ್ದ ಜಾಗ ನೋಡಿ ಕದ್ದು ಪರಾರಿಯಾಗಿದ್ದಳು.
Heavy Rain: ಬೈಕ್ ಹಿಡಿಯಲು ಪ್ರಾಣದ ಹಂಗು ತೊರೆದು ಸಾಹಸ |Tv9 Kannada
Published On - 11:00 am, Sat, 20 November 21