2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ: ಇಲ್ಲಿದೆ ಸಾಧರಕ ಪಟ್ಟಿ

ರಾಜ್ಯ ಸರ್ಕಾರ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾ ರತ್ನ ಪ್ರಶಸ್ತಿ ಮತ್ತು 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಪ್ರಕಟಿಸಿದೆ

2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ ಪ್ರಕಟಿಸಿದ ರಾಜ್ಯ ಸರ್ಕಾರ:  ಇಲ್ಲಿದೆ ಸಾಧರಕ ಪಟ್ಟಿ
ವಿಧಾನಸೌಧ
Updated By: ವಿವೇಕ ಬಿರಾದಾರ

Updated on: Dec 05, 2022 | 9:18 PM

ಬೆಂಗಳೂರು: ರಾಜ್ಯ ಸರ್ಕಾರ 2021ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾ ರತ್ನ ಪ್ರಶಸ್ತಿ ಮತ್ತು 2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿಯನ್ನು ಪ್ರಕಟಿಸಿದೆ. ನಾಳೆ (ಡಿ. 6) ರಾಜಭವನದ ಗಾಜಿನ ಮನೆಯಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ-2022

1. ಎಂ.ಎಂ.ಕವನ-ಬಾಲ್ ಬ್ಯಾಡ್ಮಿಂಟನ್, 2. ಬಿ.ಗಜೇಂದ್ರ-ಗುಂಡು ಎತ್ತುವುದು, 3. ಶ್ರೀಧರ್-ಕಂಬಳ, 4. ರಮೇಶ್ ಮಳವಾಡ-ಖೋಖೋ, 5. ಹೆಚ್.ಖುಷಿ-ಯೋಗ, 6. ವೀರಭದ್ರ ಮುಧೋಳ-ಮಲ್ಲಕಂಬ, 7. ದರ್ಶನ್-ಕಬಡ್ಡಿ, 8. ಲೀನಾ ಅಂಥೋಣಿ ಸಿದ್ದಿ-ಮಟ್ಟಿ ಕುಸ್ತಿ

2021ನೇ ಸಾಲಿನ ಏಕಲವ್ಯ ಪ್ರಶಸ್ತಿ

1. ಬಿ.ಚೇತನ್-ಅಥ್ಲೆಟಿಕ್ಸ್, 2. ಶಿಖಾ ಗೌತಮ್-ಬ್ಯಾಡ್ಮಿಂಟನ್, 3.ಕೀರ್ತಿ ರಂಗಸ್ವಾಮಿ-ಸೈಕ್ಲಿಂಗ್, 4. ಅದಿತಿ ವಿಕ್ರಾಂತ್ ಪಾಟೀಲ್-ಫೆನ್ಸಿಂಗ್, 5. ಅಮೃತ್ ಮುದ್ರಾಬೆಟ್-ಜಿಮ್ನಾಸ್ಟಿಕ್, 6. ಶೇಷೇಗೌಡ-ಹಾಕಿ, 7. ರೇಷ್ಮಾ ಮರೂರಿ-ಲಾನ್ ಟೆನಿಸ್, 8. ಟಿ.ಜೆ.ಶ್ರೀಜಯ್-ಶೂಟಿಂಗ್​, 9. ತನೀಷ್ ಜಾರ್ಜ್ ಮ್ಯಾಥ್ಯೂ-ಈಜು, 10.ಹರಿಪ್ರಸಾದ್-ವಾಲಿಬಾಲ್, 11. ಯಶಸ್ವಿನಿ ಘೋರ್ಪಡೆ-ಟೇಬಲ್ ಟೆನಿಸ್, 12. ಸೂರಜ್ ಸಂಜು ಅಣ್ಣಿಕೇರಿ-ಕುಸ್ತಿ, 13. ಹೆಚ್.ಎಸ್.ಸಾಕ್ಷತ್-ನೆಟ್ ಬಾಲ್, 14. ಬಿ.ಎಂ.ಮನೋಜ್-ಬಾಸ್ಕೆಟ್ ಬಾಲ್, 15. ಎಂ.ರಾಘವೇಂದ್ರ-ಪ್ಯಾರಾ ಅಥ್ಲೆಟಿಕ್ಸ್

2021ನೇ ಸಾಲಿನ ಜೀವಮಾನ ಸಾಧನೆ ಪ್ರಶಸ್ತಿ

1. ಅಲ್ಕಾ ಎನ್.ಪಡುತಾರೆ-ಸೈಕ್ಲಿಂಗ್, 2. ಬಿ.ಆನಂದ ಕುಮಾರ್-ಪ್ಯಾರಾ ಬ್ಯಾಡ್ಮಿಂಟನ್, 3. ಶೇಖರಪ್ಪ-ಯೋಗ, 4. ಕೆ.ಸಿ.ಅಶೋಕ್-ವಾಲಿಬಾಲ್, 5. ರವೀಂದ್ರ ಶೆಟ್ಟಿ-ಕಬಡ್ಡಿ, 6. ಬಿ.ಜೆ.ಅಮರನಾಥ್-ಯೋಗ

2022ನೇ ಸಾಲಿನ ಕ್ರೀಡಾ ಪೋಷಕ ಪ್ರಶಸ್ತಿ

1. ಬಿಎಂಎಸ್​ ಮಹಿಳಾ ಕಾಲೇಜು-ಬೆಂಗಳೂರು ನಗರ ಜಿಲ್ಲೆ 2. ಮಂಗಳಾ ಫ್ರೆಂಡ್ಸ್ ಸರ್ಕಲ್-ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ 3. ನಿಟ್ಟೆ ಎಜುಕೇಷನ್ ಟ್ರಸ್ಟ್-ಉಡುಪಿ ಜಿಲ್ಲೆ

Published On - 9:12 pm, Mon, 5 December 22