ಏಳು ಐಪಿಎಸ್​ ಅಧಿಕಾರಿಗಳ ವರ್ಗಾವಣೆ

ಐಪಿಎಸ್​ ಶ್ರೇಣಿಯ ಏಳ ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಐಪಿಎಸ್​ ಶಾಂತನು ಸಿನ್ಹಾ, ಲಕ್ಷ್ಮಣ್ ನಿಂಬರಗಿ ಮತ್ತು ಚನ್ನಬಸವಣ್ಣ ಲಂಗೋಟಿ ಸೇರಿಂದಂತೆ ಏಳು ಮಂದಿ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ.

ಏಳು ಐಪಿಎಸ್​ ಅಧಿಕಾರಿಗಳ ವರ್ಗಾವಣೆ
ಐಪಿಎಸ್​

Updated on: Nov 15, 2024 | 1:27 PM

ಬೆಂಗಳೂರು, ನವೆಂಬರ್​ 15: ಕರ್ನಾಟಕ ಸರ್ಕಾರ (Karnataka Government) ಆಡಳಿತ ವಿಭಾಗಕ್ಕೆ ಮೇಜರ್​ ಸರ್ಜರಿ ಮಾಡಿದೆ. ಐಪಿಎಸ್​ (IPS) ಏಳು ಮಂದಿ ಅಧಿಕಾರಿಗಳನ್ನು ದಿಢೀರ್​ ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ಹುದ್ದೆ ನಿರೀಕ್ಷೆಯಲ್ಲಿದ್ದ ಸಂತನು ಸಿನ್ಹಾ ಅವರನ್ನು ಸಿಐದಿಯ ಡಿಐಜಿ ಹುದ್ದೆಗೆ ಹಾಗೂ ಸಿಐಡಿಯ ಎಸ್​​ಪಿ ಹುದ್ದೆಗೆ ಜಿ.ಸಂಗೀತ ಅವರನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆಯಾದ ಅಧಿಕಾರಿಗಳು

  1. ಶಾಂತನು ಸಿನ್ಹಾ- ಡಿಐಜಿಪಿ, ಸಿಐಡಿ
  2. ಜಿ.ಸಂಗೀತಾ, ಎಸ್ ಪಿ, ಸಿಐಡಿ
  3. ಅಬ್ದುಲ್ ಅಹದ್, ನಿರ್ದೇಶಕರು, ಬಿಎಂಟಿಸಿ(ಸೆಕ್ಯೂರಿಟಿ & ವಿಜಿನಲ್ಸ್)
  4. ಲಕ್ಷ್ಮಣ್ ನಿಂಬರಗಿ, ಎಸ್ ಪಿ, ವಿಜಯಪುರ
  5. ಚನ್ನಬಸವಣ್ಣ ಲಂಗೋಟಿ, ನಿರ್ದೇಶಕ ಕರ್ನಾಟಕ ಪೊಲೀಸ್ ಅಕಾಡೆಮಿ (ಹೆಚ್ಚುವರಿ ಹೊಣೆ)
  6. ಪೃಥ್ವಿಕ್ ಶಂಕರ್, ಎಸ್ ಪಿ, ಯಾದಗಿರಿ
  7. ಶಿವಾಂಶು ರಾಜಪೂತ್, ಎಸ್ ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ