ಶತಮಾನದ ಪ್ರವಾಹಕ್ಕೆ ಬಾಗಲಕೋಟೆಯಲ್ಲಿ ಕಬ್ಬು ಸರ್ವನಾಶ

|

Updated on: Nov 24, 2019 | 7:10 AM

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ.. ಬಾಗಲಕೋಟೆ ಜಿಲ್ಲೆಯ ಜೀವನಾಡಿಗಳು. ಈ ನದಿಗಳನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಪ್ರತಿವರ್ಷ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೀತಾರೆ. ಜೊತೆಗೆ 11 ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿ ನಿಂತಿವೆ. ಆದ್ರೆ ಇಷ್ಟುದಿನ ಜೀವನಾಡಿಗಳಂತಿದ್ದ ನದಿಗಳು ಈ ವರ್ಷ ರೌದ್ರಾವತಾರ ತಾಳಿದ್ವು. ಶತಮಾನದ ಪ್ರವಾಹಕ್ಕೆ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ರೈತರ ಬೆಳೆಗಳನ್ನ ಸರ್ವನಾಶ ಮಾಡಿವೆ. ಅದ್ರಲ್ಲೂ ನದಿತೀರದಲ್ಲಿ ಬೆಳೆಯುತ್ತಿದ್ದ ಕಬ್ಬು ಬೆಳೆ ಪ್ರವಾಹಕ್ಕೆ ಸಿಕ್ಕು ಒಣಗಿ ಹೋಗಿದೆ. ಸುಮಾರು 60 […]

ಶತಮಾನದ ಪ್ರವಾಹಕ್ಕೆ ಬಾಗಲಕೋಟೆಯಲ್ಲಿ ಕಬ್ಬು ಸರ್ವನಾಶ
Follow us on

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ.. ಬಾಗಲಕೋಟೆ ಜಿಲ್ಲೆಯ ಜೀವನಾಡಿಗಳು. ಈ ನದಿಗಳನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಪ್ರತಿವರ್ಷ ಒಂದು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೀತಾರೆ. ಜೊತೆಗೆ 11 ಸಕ್ಕರೆ ಕಾರ್ಖಾನೆಗಳು ತಲೆ ಎತ್ತಿ ನಿಂತಿವೆ.

ಆದ್ರೆ ಇಷ್ಟುದಿನ ಜೀವನಾಡಿಗಳಂತಿದ್ದ ನದಿಗಳು ಈ ವರ್ಷ ರೌದ್ರಾವತಾರ ತಾಳಿದ್ವು. ಶತಮಾನದ ಪ್ರವಾಹಕ್ಕೆ ಕೃಷ್ಣೆ, ಮಲಪ್ರಭೆ ಹಾಗೂ ಘಟಪ್ರಭೆ ರೈತರ ಬೆಳೆಗಳನ್ನ ಸರ್ವನಾಶ ಮಾಡಿವೆ. ಅದ್ರಲ್ಲೂ ನದಿತೀರದಲ್ಲಿ ಬೆಳೆಯುತ್ತಿದ್ದ ಕಬ್ಬು ಬೆಳೆ ಪ್ರವಾಹಕ್ಕೆ ಸಿಕ್ಕು ಒಣಗಿ ಹೋಗಿದೆ. ಸುಮಾರು 60 ಸಾವಿರ ಹೆಕ್ಟೇರ್ ಕಬ್ಬು ನಾಶವಾಗಿದೆ. ಇದು ಸಕ್ಕರೆ ಕಾರ್ಖಾನೆಗಳ ಮೇಲೂ ಸಾಕಷ್ಟು ಪರಿಣಾಮ ಬೀರಿದ್ದು, ಸಾವಿರ ಕೋಟಿಯ ವಹಿವಾಟು ನೂರಿನ್ನೂರು ಕೋಟಿಗೆ ಇಳಿದಿದೆ.

ಬೆಳೆಗಾರರಿಗೆ ಬರೆ, ಕಾರ್ಖಾನೆ ಮಾಲೀಕರಿಗೂ ಪೆಟ್ಟು:
ಜಿಲ್ಲೆಯಲ್ಲಿನ 11 ಸಕ್ಕರೆ ಕಾರ್ಖಾನೆಗಳು ಈ ಬಾರಿ ಕಬ್ಬಿನ ಕೊರತೆ ಎದುರಿಸುತ್ತಿರೋ ಹಿನ್ನೆಲೆ ಸಕ್ಕರೆ ಉದ್ಯಮದ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ. ಪ್ರತಿ ವರ್ಷ 100ರಿಂದ 120 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದ ಸಕ್ಕರೆ, ಈ ಬಾರಿ 80 ಲಕ್ಷ ಟನ್ ಇಳಿಯುವ ಸಾಧ್ಯತೆ ಇದೆ.

ಇದರಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕಬ್ಬಿನ ಬಾಕಿ ಉಳಿಸಿಕೊಳ್ಳುವುದು, ಕಾರ್ಖಾನೆ ಮಾಲೀಕರ ಜೊತೆ ಕಬ್ಬು ಬೆಳೆಗಾರರು ಹೋರಾಡುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಹೀಗಾಗಿ ತಮ್ಮ ನೆರವಿಗೆ ಸರ್ಕಾರ ಬರಬೇಕು ಅಂತ ಕಬ್ಬು ಬೆಳೆಗಾರರು ಆಗ್ರಹಿಸಿದ್ದಾರೆ.

Published On - 7:09 am, Sun, 24 November 19