
ಬೆಂಗಳೂರು, ಜ.1: ಹೊಸ ವರ್ಷದ ಮೊದಲು ದಿನವೇ ರಾಜ್ಯದಲ್ಲಿ ಗಾಳಿ ಗುಣಮಟ್ಟ (Karnataka air quality) ತುಂಬಾ ಹದಗೆಟ್ಟಿದೆ. ರಾಜ್ಯದಲ್ಲಿ ವಾಯು ಗುಣಮಟ್ಟ ಮಧ್ಯಮದಿಂದ ಕಳಪೆಯವರೆಗೆ ಇರಲಿದೆ ಎಂದು ಹೇಳಲಾಗಿದೆ. , ಹಲವಾರು ಪ್ರಮುಖ ನಗರಗಳು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಅನುಭವಿಸುತ್ತಿವೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, AQI ಸರಿಸುಮಾರು 150–168 ರಷ್ಟಿದೆ . ಹಿರಿಯರು ಹಾಗೂ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. ಅವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಗಂಟಲಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬಹುದು. ಯಾದಗಿರಿಯಲ್ಲಿ ಇಂದಿನ ಗಾಳಿಯ ಗುಣಮಟ್ಟ 168 ಇರಲಿದೆ. ತುಮಕೂರಿನಲ್ಲಿ ಗಾಳಿಯ ಗುಣಮಟ್ಟ 167 ಇರಲಿದೆ. ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ 165 ಇದೆ. ಬೀದರ್ನಲ್ಲಿ 189 ಗಾಳಿಯ ಗುಣಮಟ್ಟ ಇದೆ ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿರುವ ಕಳಪೆ ಗಾಳಿಯ ಗುಣಮಟ್ಟ ಎಂದು ಹೇಳಲಾಗಿದೆ.
ಇನ್ನು ವಿಜಯಪುರದಲ್ಲಿ ಗಾಳಿಯ ಗುಣಮಟ್ಟ 68 ಇದೆ. ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ 73 ಇದೆ. ಶಿವಮೊಗ್ಗದಲ್ಲೂ ಕೂಡ ಗಾಳಿಯ ಮಟ್ಟ ಮಧ್ಯಮವಾಗಿದು, ಸೂಚಂಕ್ಯ 74 ಇದೆ. ಚಾಮರಾಜನಗರದಲ್ಲಿ 76 ಗಾಳಿ ಗುಣಮಟ್ಟ ಇದೆ. ಇದು ಅತ್ಯಂತ ಮಧ್ಯಮ ಗಾಳಿಮಟ್ಟದ ಸೂಚಂಕ್ಯವಾಗಿದೆ. ಇಂದು PM2.5: 73 µg/m³ ಇರಲಿದೆ. ಹಾಗೂ PM10: 99 µg/m³ ಇರಲಿದೆ. ಎಲ್ಲ ಜಿಲ್ಲೆಗಳು WHO ಶಿಫಾರಸು ಮಾಡಿದ ಮಾನದಂಡಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ
ಬೆಂಗಳೂರು: 168
ಮಂಗಳೂರು: 165
ಮೈಸೂರು: 146
ಬೆಳಗಾವಿ:157
ಕಲಬುರ್ಗಿ: 155
ಶಿವಮೊಗ್ಗ: 182
ಬಳ್ಳಾರಿ: 199
ಹುಬ್ಬಳ್ಳಿ: 106
ಉಡುಪಿ: 160
ವಿಜಯಪುರ: 90
ಉತ್ತಮ- 0-50
ಮಧ್ಯಮ – 50-100
ಕಳಪೆ – 100-150
ಅನಾರೋಗ್ಯಕರ – 150-200
ಗಂಭೀರ – 200 – 300
ಅಪಾಯಕಾರಿ – 300 -500+
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ