ಶಾಸಕರು ರಾಜೀನಾಮೆ ನೀಡಿದ್ದ 15 ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್

|

Updated on: Sep 21, 2019 | 1:08 PM

ಕಾಂಗ್ರೆಸ್​-ಜೆಡಿಎಸ್ ಪಕ್ಷದ​ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯದ 15 ಕ್ಷೇತ್ರಗಳಿಗೆ ಅ. 21ರಂದು ಉಪಚುನಾವಣೆ ನಡೆಯಲಿದೆ. ಉಳಿದ 2 ಕ್ಷೇತ್ರಗಳಾದ  ಮಸ್ಕಿ, ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪ ಚುನಾವಣೆ ನಡೆಯುವುದಿಲ್ಲ. ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ವಿವರ: ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶದಿಂದ ಕಾಂಗ್ರೆಸ್, ಜೆಡಿಎಸ್​ನ 17 ಶಾಸಕರು ರಾಜೀನಾಮೆ ನೀಡಿದ್ದರು. ಹೀಗಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್​ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದರು. ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. […]

ಶಾಸಕರು ರಾಜೀನಾಮೆ ನೀಡಿದ್ದ 15 ಕ್ಷೇತ್ರಗಳಿಗೆ ಉಪಚುನಾವಣೆ ಫಿಕ್ಸ್
Follow us on

ಕಾಂಗ್ರೆಸ್​-ಜೆಡಿಎಸ್ ಪಕ್ಷದ​ ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ರಾಜ್ಯದ 15 ಕ್ಷೇತ್ರಗಳಿಗೆ ಅ. 21ರಂದು ಉಪಚುನಾವಣೆ ನಡೆಯಲಿದೆ. ಉಳಿದ 2 ಕ್ಷೇತ್ರಗಳಾದ  ಮಸ್ಕಿ, ರಾಜರಾಜೇಶ್ವರಿನಗರ ಕ್ಷೇತ್ರಗಳ ಉಪ ಚುನಾವಣೆ ನಡೆಯುವುದಿಲ್ಲ.

ಉಪಚುನಾವಣೆ ನಡೆಯಲಿರುವ ವಿಧಾನಸಭಾ ಕ್ಷೇತ್ರಗಳ ವಿವರ:
ಸಮ್ಮಿಶ್ರ ಸರ್ಕಾರದ ವಿರುದ್ಧ ಆಕ್ರೋಶದಿಂದ ಕಾಂಗ್ರೆಸ್, ಜೆಡಿಎಸ್​ನ 17 ಶಾಸಕರು ರಾಜೀನಾಮೆ ನೀಡಿದ್ದರು. ಹೀಗಾಗಿ ಅಂದಿನ ಸ್ಪೀಕರ್ ರಮೇಶ್ ಕುಮಾರ್​ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿದ್ದರು. ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ.

ಯಲ್ಲಾಪುರ ಕ್ಷೇತ್ರ-ಅರೆಬೈಲ್ ಶಿವರಾಮ್ ಹೆಬ್ಬಾರ್, ಯಶವಂತಪುರ ಕ್ಷೇತ್ರ-ಎಸ್.ಟಿ.ಸೋಮಶೇಖರ್, ವಿಜಯನಗರ ಕ್ಷೇತ್ರ-ಆನಂದ್ ಸಿಂಗ್, ಶಿವಾಜಿನಗರ ಕ್ಷೇತ್ರ-ಆರ್.ರೋಷನ್ ಬೇಗ್, ಹೊಸಕೋಟೆ ಕ್ಷೇತ್ರ-ಎಂಟಿಬಿ ನಾಗರಾಜ್, ಹುಣಸೂರು ಕ್ಷೇತ್ರ-ಅಡಗೂರು ಹೆಚ್.ವಿಶ್ವನಾಥ್, ಕೆ.ಆರ್.ಪೇಟೆ ಕ್ಷೇತ್ರ-ಕೆ.ಸಿ.ನಾರಾಯಣಗೌಡ, ಕೆ.ಆರ್.ಪುರಂ ಕ್ಷೇತ್ರ-ಭೈರತಿ ಬಸವರಾಜ್, ಮಹಾಲಕ್ಷ್ಮೀ ಲೇಔಟ್ ಕ್ಷೇತ್ರ-ಕೆ.ಗೋಪಾಲಯ್ಯ, ಚಿಕ್ಕಬಳ್ಳಾಪುರ ಕ್ಷೇತ್ರ-ಡಾ.ಕೆ.ಸುಧಾಕರ್, ಗೋಕಾಕ್ ಕ್ಷೇತ್ರ-ರಮೇಶ್ ಎಲ್.ಜಾರಕಿಹೊಳಿ, ಅಥಣಿ ಕ್ಷೇತ್ರ-ಮಹೇಶ್ ಕುಮಟಳ್ಳಿ, ರಾಣೆಬೆನ್ನೂರು ಕ್ಷೇತ್ರ-ಕೆಪಿಜೆಪಿಯಿಂದ ಗೆದ್ದಿದ್ದ ಆರ್.ಶಂಕರ್, ಕಾಗವಾಡ ಕ್ಷೇತ್ರ-ಶ್ರೀಮಂತ ಪಾಟೀಲ, ಹಿರೇಕೆರೂರು ಕ್ಷೇತ್ರ-ಬಿ.ಸಿ.ಪಾಟೀಲ್ ರಾಜೀನಾಮೆ ನೀಡಿ ಅನರ್ಹಗೊಂಡಿದ್ದರು. ಈಗ ಈ 15 ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆ ನಡೆಯದ ಕ್ಷೇತ್ರಗಳು:
ಉಳಿದ ಎರಡು ಕ್ಷೇತ್ರಗಳಾದ ರಾಯಚೂರಿನ ಮಸ್ಕಿ-ಪ್ರತಾಪ್ ಗೌಡ ಪಾಟೀಲ್ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ-ಮುನಿರತ್ನ ಸಹ ಅನರ್ಹಗೊಂಡಿದ್ದಾರೆ. ಆದ್ರೆ ನ್ಯಾಯಾಲಯದಲ್ಲಿ ತಡೆಯಾಜ್ಞೆಯಿರುವ ಕಾರಣ ಈ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುವುದಿಲ್ಲ.

ಯಾವುದೇ ಅನರ್ಹ ಶಾಸಕರೂ ಉಪ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದು ಕಾನೂನುರೀತ್ಯವೇ ಇದೆ. ಸರಿಯಾಗಿ ಒಂದು ತಿಂಗಳಿಗೆ ಅಂದ್ರೆ ಅಕ್ಟೋಬರ್​ 21ರಂದು ಸೋಮವಾರ ಕರ್ನಾಟಕದಲ್ಲಿ 15 ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸುನೀಲ್ ಅರೋರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

Published On - 12:47 pm, Sat, 21 September 19