ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದು-ಡಿಕೆಶಿ ಜಂಟಿ ಯಾತ್ರೆ; ಡಿ.ಕೆ.ಶಿವಕುಮಾರ್ ಹೇಳಿದ್ದೇನು?

| Updated By: Rakesh Nayak Manchi

Updated on: Oct 22, 2022 | 11:47 AM

ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದರಾಮಯ್ಯ ಮತ್ತು ನನ್ನ ನಡುವಿನ ಜಂಟಿ ಯಾತ್ರೆ ಬಗ್ಗೆ ತಿಳಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಭಾರತ್ ಜೋಡೋ ಯಾತ್ರೆ ಬಳಿಕ ಸಿದ್ದು-ಡಿಕೆಶಿ ಜಂಟಿ ಯಾತ್ರೆ; ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಡಿ.ಕೆ.ಶಿವಕುಮಾರ್
Follow us on

ರಾಯಚೂರು: ಭಾರತ್ ಜೋಡೋ ಯಾತ್ರೆ (Bharat Jodo Yatra) ಬಳಿಕ ನಮ್ಮ (ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್) ಜಂಟಿ ಯಾತ್ರೆ ಬಗ್ಗೆ ತಿಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಹೇಳಿದ್ದಾರೆ. ರಾಹುಲ್ ಗಾಂಧಿ (Rahul Gandhi) ಅವರು ರಾಯಚೂರಿನಲ್ಲಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಮಾತನಾಡಿದ ಅವರು, ಜೋಡೋ ಯಾತ್ರೆ ಮೂಲಕ ಮುಂಬರುವ ವರ್ಷದಲ್ಲಿ ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 150 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತದೆ ಎಂದರು.

ಇನ್ನು, ಬಿಜೆಪಿ ಹೇಳಿಕೆಯನ್ನು ಟೀಕಿಸಿದ ಕೆಪಿಸಿಸಿ ಅಧ್ಯಕ್ಷರು, ರೈತ ಗೆದ್ದರೆ ದೇಶ ಗೆದ್ದಂತೆ, ಆದರೆ ಅವರು (ಬಿಜೆಪಿ) ರೈತರ ಆದಾಯ ದ್ವಿಗುಣಗೊಳಿಸಲಿಲ್ಲ. ಬಿಜೆಪಿ ನಾಯಕರು ಏನು ಬೇಕಾದರೂ ಮಾತನಾಡುತ್ತಾರೆ ಎಂದರು. ಅಲ್ಲದೆ 3,570 ಕಿ.ಮೀ. ನಡೆಯುವ ಧೈರ್ಯ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಯಾತ್ರೆ ಬೇರೆ, ಸ್ವಾತಂತ್ರ್ಯ ಹೋರಾಟವೇ ಬೇರೆ. ಇಂದು ನಡೆಯುತ್ತಿರುವ ಜೋಡೋ ಯಾತ್ರೆ ದೇಶದಲ್ಲಿ ಬದಲಾವಣೆಗೆ ಕಾರಣವಾಗುತ್ತದೆ ಎಂದರು.

ರಾಜ್ಯದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಐಕ್ಯತಾ ಯಾತ್ರೆ ಅಂತ್ಯಗೊಳ್ಳಲಿದೆ. ಈ ಯಾತ್ರೆಯಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ರೈತರು, ಮಕ್ಕಳು, ಮಹಿಳೆಯರು ಸೇರಿದಂತೆ ಅನೇಕರು ಹೆಜ್ಜೆ ಹಾಕಿದ್ದಾರೆ. ಯುವಕರು ಪಕ್ಷ ನೋಡದೆ ಭಾಗವಹಿಸುತ್ತಿದ್ದಾರೆ. ಈ ನಡಿಗೆ ದೇಶಕ್ಕೊಂದು ಕೊಡುಗೆ ಎಂದು ಹೆಜ್ಜೆ ಹಾಕಿದ್ದಾರೆ. ಇಂದಿರಾಗಾಂಧಿಯವರನ್ನ ನೋಡಲು ಜನ ಹೇಗೆ ಬರುತ್ತಿದ್ದರೋ ಅದೇ ರೀತಿ ಬರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನನ್ನ ವೈಯಕ್ತಿಕ ವಿಚಾರ ಅಲ್ಲ. ಇದು ಸಾರ್ವಜನಿಕ ವಿಚಾರವಾಗಿರುವುದರಿಂದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಜಿಟಿಡಿ ಕ್ಷೆಮೆ ಬಗ್ಗೆ ಪ್ರತಿಕ್ರಿಯೆ ನೀಡದ ಡಿಕೆಶಿ

ಕ್ಷಮೆ ಕೇಳಿ ಕಾಂಗ್ರೆಸ್ ಸೇರ್ಪಡೆಯಿಂದ ಹಿಂದೆ ಸರಿದ ಶಾಸಕ ಜಿ.ಟಿ.ದೇವೇಗೌಡ ಅವರ ಬಗ್ಗೆ ಪ್ರತಿಕ್ರಿಯೆ ನೀಡಲು ಡಿ.ಕೆ.ಶಿವಕುಮಾರ್ ಅವರು ನಿರಾಕರಿಸಿದರು. ಏನಾಗಿದೆ ಎಂದು ಗೊತ್ತಿಲ್ಲ, ನಾನು ಪಾದಯಾತ್ರೆಯಲ್ಲಿದ್ದೇನೆ. ಆ ಬಗ್ಗೆ ತಿಳಿದು ಮೂರ್ನಾಲ್ಕು ದಿನಗಳ ನಂತರ ಮಾತನಾಡುತ್ತೇನೆ ಎಂದರು. ಕ್ಷಮೆ‌ ಕೇಳಿದ್ದೇಕೆ? ಪಕ್ಷ ಸೇರುವ ಬಗ್ಗೆ ಈ ಹಿಂದೆ ಮಾರು ಕೊಟ್ಟಿದ್ದರಾ? ಎಂಬ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಅವರು ಆ ಬಗ್ಗೆ ಮಾತನಾಡುವುದಿಲ್ಲ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:47 am, Sat, 22 October 22