Karnataka Breaking News Kannada highlights: ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2023 | 10:33 PM

Karnataka Breaking News highlights: ಕಾಂಗ್ರೆಸ್ ಆಡಳಿತದಲ್ಲೂ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ವೀರಶೈವ ಲಿಂಗಾಯತ ಸಮುದಾಯ ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಇನ್ನೊಂದೆಡೆ ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ನಡೆಸುತ್ತಿದ್ದು, ವಿಶ್ವವಿಖ್ಯಾತ ಮೈಸೂರು ದಸರಾಗೆ ಅರಮನೆ ಸಜ್ಜಾಗುತ್ತಿದೆ. ಇದರ ಜೊತೆಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.

Karnataka Breaking News Kannada highlights: ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್
ಸಿಎಂ ಸಿದ್ದರಾಮಯ್ಯ. ಅಶ್ವಿನಿ ಪುನೀತ್​ ರಾಜ್​ಕುಮಾರ್​

Karnataka News highlights: ಲೋಕಸಭೆ ಚುನಾವಣೆ (Lok Sabha Elections) ಹತ್ತಿರವಾಗುತ್ತಿದ್ದಂತೆ ಬಿಜೆಪಿ (BJP) ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಈಗಿಂದೀಗಲೇ ತಯಾರಿಗಳನ್ನು ನಡೆಸಲು ಆರಂಭಿಸಿದ್ದು, ತಮ್ಮ ಸಾಧನೆಗಳನ್ನು ತೋರಿಸುವುದರ ಜೊತೆಗೆ ಪರಸ್ಪರ ಟೀಕಾಪ್ರಹಾರಗಳನ್ನು ನಡೆಸಲು ಆರಂಭವಿಸಿವೆ. ಇದರ ಜೊತೆಗೆ ಬಿಜೆಪಿ ರಾವಣನಂತೆ ರಾಹುಲ್ ಗಾಂಧಿ ಪೋಸ್ಟರ್ ಹಂಚಿಕೊಂಡಿರುವುದು ಕೈ ಪಡೆ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ (Congress), ಜುಮ್ಲಾಬಾಯ್ ಮೋದಿ ಅಂತಾ ಪೋಸ್ಟರ್ ಶೇರ್ ಮಾಡಿದೆ. ಕಾಂಗ್ರೆಸ್ ಆಡಳಿತದಲ್ಲೂ ಲಿಂಗಾಯತರಿಗೆ ಅನ್ಯಾಯವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ವೀರಶೈವ ಲಿಂಗಾಯತ (Lingayat) ಸಮುದಾಯ ರಾಜ್ಯದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾಗೆ (Mysore Dasara) ಅರಮನೆ ಸಜ್ಜಾಗುತ್ತಿದ್ದು, ಮಹಿಷ ದಸರಾ ಆಚರಣೆ ವಿವಾದವೂ ಮುಂದುವರಿದಿದೆ. ಇಂತಹ ಪ್ರಮುಖ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 08 Oct 2023 10:16 PM (IST)

    Karnataka Breaking News Live: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

    ವಿಜಯಪುರ: ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬಸವನಬಾಗೇವಾಡಿ ತಾಲೂಕಿನ ಹಂಗರಗಿ ವಿದ್ಯುತ್ ಸ್ಟೇಷನ್ ಎದುರು ರೈತರ ಪ್ರತಿಭಟನೆ ನಡೆಸಿದ್ದಾರೆ. ಸರಿಯಾಗಿ ವಿದ್ಯುತ್ ಪೂರೈಸದ ಕಾರಣ ಬೆಳೆಗಳಿಗೆ ನೀರುಣಿಸಲು ಆಗುತ್ತಿಲ್ಲ. ಹೀಗಾಗಿ ಅನ್ನದಾತರು ಆಕ್ರೋಶಗೊಂಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಹೆಸ್ಕಾಂ ಅಧಿಕಾರಿಗಳು ಇನ್ನು ಮುಂದೆ ಸಮಸ್ಯೆ ಆಗದಂತೆ ವಿದ್ಯುತ್ ಪೂರೈಸುವ ಭರವಸೆ ನೀಡಿದರು.

  • 08 Oct 2023 09:58 PM (IST)

    Karnataka Breaking News Live: ಬಜಾಜ್​ ಫೈನಾನ್ಸ್​ನಲ್ಲಿ 4% ಬಡ್ಡಿ ದರದಲ್ಲಿ ಹಣ ಕೊಡಿಸುವುದಾಗಿ ವಂಚನೆ

    ಬೆಂಗಳೂರು ಗ್ರಾಮಾಂತರ: ಬಜಾಜ್​ ಫೈನಾನ್ಸ್​ನಲ್ಲಿ 4% ಬಡ್ಡಿ ದರದಲ್ಲಿ ಹಣ ಕೊಡಿಸುವುದಾಗಿ ರಂಗನಾಥ ಎಂಬುವರಿಗೆ  70 ಸಾವಿರ ರೂ. ವಂಚನೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬರಗೇನಹಳ್ಳಿಯಲ್ಲಿ ನಡೆದಿದೆ. ಪರಿಷ್ಕರಣಾ ಶುಲ್ಕ ಎಂದು ಹೇಳಿ ಹಂತ ಹಂತವಾಗಿ ಹಣ ಪಡೆದು ವಂಚಿಸಿದ್ದು, ದಾಬಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.


  • 08 Oct 2023 09:24 PM (IST)

    Karnataka Breaking News Live: ಕೆಐಎಬಿಯಲ್ಲಿ ಹೆಚ್.ಡಿ.ದೇವೇಗೌಡ, ಸಿಎಂ ಸಿದ್ದರಾಮಯ್ಯ ಮುಖಾಮುಖಿ

    ಬೆಂಗಳೂರು ಗ್ರಾಮಾಂತ: ಕೆಂಪೇಗೌಡ ಅಂತರಾಷ್ಟೀಯ ವಿಮಾನ ನಿಲ್ದಾಣದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಸಿಎಂ ಸಿದ್ದರಾಮಯ್ಯ ಮುಖಾಮುಖಿ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದು, ಈ ವೇಳೆ  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಂಗಳೂರಿಗೆ ಹೊರಟಿದ್ದರು. ಇನ್ನು ಭೇಟಿಯಾಗುತ್ತಿದ್ದಂತೆ ಸಿದ್ದರಾಮಯ್ಯರನ್ನ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಕೈಕುಲುಕಿ ಸ್ವಾಗತಿಸಿದರು. ಜೊತೆಗೆ ಪಕ್ಕದಲ್ಲಿ ಕೂರಿಸಿಕೊಂಡು ಕೆಲಕಾಲ ಮಾತುಕತೆ ನಡೆಸಿದರು.

  • 08 Oct 2023 09:20 PM (IST)

    Karnataka Breaking News Live: ಸಿಎಂ ಭೇಟಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್

    ಬೆಂಗಳೂರು: ಇಂದು ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರು ಸಿಎಂ ಸಿದ್ದರಾಮಯ್ಯರನ್ನು ಕಾವೇರಿ ನಿವಾಸದಲ್ಲಿ ಭೇಟಿಯಾಗಿದ್ದಾರೆ. ಈ  ವೇಳೆ ಸಿಎಂ ಸಿದ್ದರಾಮಯ್ಯರನ್ನು ಖಾಸಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

  • 08 Oct 2023 08:45 PM (IST)

    Karnataka Breaking News Live: ಕಾಂಗ್ರೆಸ್ ಸೇರ್ಪಡೆಯಾಗಲಿರುವ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್

    ಬೆಂಗಳೂರು: ಅ.20ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಹೌದು,  ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾಗಿ ಚರ್ಚೆ ನಡೆಸಿದ ಪೂರ್ಣಿಮಾ ಅವರು,
    ಕೆಪಿಸಿಸಿ ಅಧ್ಯಕ್ಷ & ಡಿಸಿಎಂ ಡಿಕೆ ನೇತೃತ್ವದಲ್ಲಿ ಪಕ್ಷ ಸೇರಲಿದ್ದಾರೆ.

  • 08 Oct 2023 08:13 PM (IST)

    Karnataka Breaking News Live: ಕೋಲಾರ ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದ ಹಿನ್ನೆಲೆ ಜನರ ಪರದಾಟ

    ಕೋಲಾರ: ಜಿಲ್ಲೆಯಲ್ಲಿ ವಿದ್ಯುತ್ ಇಲ್ಲದ ಹಿನ್ನೆಲೆ ಜನರು ಪರದಾಟ ನಡೆಸುವಂತಾಗಿದೆ. ಹೌದು, ಕೋಲಾರ ನಗರ, ಗ್ರಾಮಾಂತರ, ಶ್ರೀನಿವಾಸಪುರ, ಬಂಗಾರಪೇಟೆ ಕೆಜಿಎಫ್ ಸೇರಿದಂತೆ ಬಹುತೇಕ ಎಲ್ಲಾ ತಾಲೂಕಿನಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯಾದರೂ ಕರೆಂಟ್ ಇಲ್ಲ. ಅನಿಯಮಿತ ಲೋಡ್ ಶೆಡ್ಡಿಂಗ್​ಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 08 Oct 2023 07:37 PM (IST)

    Karnataka Breaking News Live: ನನ್ನ ಸೋಲು ಈಗಲೇ ಪೋಸ್ಟ್​ಮಾರ್ಟ್​ಂ ಮಾಡುವುದು ಬೇಡ-ವಿ ಸೋಮಣ್ಣ

    ಮೈಸೂರು: ಸೋಲಿನ ಚರ್ಚೆ ಮಾಡಿ ಅದನ್ನೆ ಪೋಸ್ಟ್ ಮಾರ್ಟಮ್ ಮಾಡುವುದು ಬೇಡ. ನಮ್ಮ ಮುಂದೆ ಲೋಕಸಭಾ ಚುನಾವಣೆ ಇದ ಎಂದು ವಿ ಸೋಮಣ್ಣ ಹೇಳಿದರು. ರಾಜ್ಯಧ್ಯಕ್ಷರು ವಿರೋಧ ಪಕ್ಷದ ನಾಯಕರನ್ನು ಮಾಡಬೇಕಿದೆ. ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತೆ ಅದರ ಮೇಲೆ ಕೆಲಸ ಮಾಡಬೇಕಿದೆ ಎಂದರು.

  • 08 Oct 2023 06:55 PM (IST)

    ಶಿವಮೊಗ್ಗದಲ್ಲಿ ಈದ್​ ಗಲಾಟೆ: ಮೂವರು ಪೋಲಿಸ್ ಕಾನ್ಸ್​ಟೇಬಲ್​ ಅಮಾನತು

    ಶಿವಮೊಗ್ಗ: ಈದ್​ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾನ್ಸ್​ಟೇಬಲ್​ಗಳನ್ನು ಅಮಾನತ್ತು ಮಾಡಿ ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕ ಅಭಯ ಪ್ರಕಾಶ್ ಆದೇಶಿಸಿದ್ದಾರೆ. ಶಿವಮೊಗ್ಗ ಎಸ್​ಪಿ ಜಿ.ಕೆ.ಮಿಥುನ್ ಕುಮಾರ್​​ ವರದಿ ಆಧರಿಸಿ ಕಾಶಿನಾಥ್, ರಂಗನಾಥ, ಶಿವರಾಜ್ ಅಮಾನತುಗೊಳಿಸಲಾಗಿದೆ.

  • 08 Oct 2023 06:29 PM (IST)

    Karnataka Breaking News Live: ವೈದಿಕ ಜಾತಿಯಲ್ಲಿ ಹುಟ್ಟಿದ್ರೆ ಪೂರ್ವ ಜನ್ಮದ ಪುಣ್ಯ ಅಂತಾರೆ; ಸಂಸದ ಶ್ರೀನಿವಾಸ್ ಪ್ರಸಾದ್

    ಮೈಸೂರು: ‘ವೈದಿಕ ಜಾತಿಯಲ್ಲಿ ಹುಟ್ಟಿದ್ರೆ ಪೂರ್ವ ಜನ್ಮದ ಪುಣ್ಯ ಎನ್ನುತ್ತಾರೆ ಎಂದು ಇಂದು ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿದರು. ‘ಹಿಂದಿನ ಜನ್ಮದಲ್ಲಿ ಪುಣ್ಯ ಮಾಡಿದ್ರೆ, ವೈದಿಕೆ ಧರ್ಮದಲ್ಲಿ ಹುಟ್ಟುತ್ತಾರೆ ಅಂತಿದ್ದರು. ಬಸವಣ್ಣ ಅಂತಹ ಶ್ರೇಷ್ಠ ಧರ್ಮದಲ್ಲಿ ಹುಟ್ಟಿ ಹೆಮ್ಮೆ ಪಡಬಹುದಿತ್ತು. ಆದ್ರೆ, ತಾರತಮ್ಯ ಬೇಡ ಎಂದು ಸಿಡಿದು ಹೊಸ ಸಮಾಜ ಕಟ್ಟಿದರು. ಅಂತರ್ಜಾತಿ ವಿವಾಹ ಸೇರಿದಂತೆ ಸಮಾಜದ ಪಿಡುಗುಗಳ ವಿರುದ್ಧ ಹೋರಾಟ ಮಾಡಿದರು ಎಂದರು.

  • 08 Oct 2023 06:10 PM (IST)

    Karnataka Breaking News Live: ಬಿಜೆಪಿಗೆ ಬರೋವರೆಗೂ ನಾನು ಸೋತೆ ಇರಲಿಲ್ಲ

    ಮೈಸೂರು: ಬಿಜೆಪಿಗೆ ಬರೋವರೆಗೂ ನಾನು ಸೋತೆ ಇರಲಿಲ್ಲ, ಬಿಜೆಪಿಗೆ ಬಂದಾಗಿನಿಂದ ನಾನು ನಾಲ್ಕರಿಂದ ಐದು ಬಾರಿ ಸೋತೆ ಎಂದು ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ವಿ.ಸೋಮಣ್ಣ ಹೇಳಿದರು.
    ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ, ಕಾಂಗ್ರೆಸ್ನಲ್ಲಿ ನಿಂತು ಗೆದ್ದಿದ್ದೇನೆ. ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ . ಬಿಜೆಪಿ ಬಂದು ಸೋತೆ. ನಾನು ಏನಾಗಿಬಿಡ್ತಿನಿ ಅನ್ನೋ ಭಯದಲ್ಲಿ ಸೋಲಿಸಿದ್ರು. ಪರೋಕ್ಷವಾಗಿ ಬಿಜೆಪಿ ನಾಯಕರ ವಿರುದ್ಧ ವಿ.ಸೋಮಣ್ಣ ಕಿಡಿಕಾರಿದರು.

  • 08 Oct 2023 05:49 PM (IST)

    Karnataka Breaking News Live: ಮಹಿಷ ದಸರಾ ವಿರೋಧಿಸಿ ಬಿಜೆಪಿಯಿಂದ ಚಾಮುಂಡಿ ಬೆಟ್ಟ ಚಲೋ

    ಮೈಸೂರು: ಮಹಿಷ ದಸರಾ ವಿರೋಧಿಸಿ ಅಕ್ಟೋಬರ್​ 13ರಂದು ಬಿಜೆಪಿಯಿಂದ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದೆ. ಈ ಕುರಿತು ಶಾಸಕ ಶ್ರೀವತ್ಸ, ಮೇಯರ್ ಶಿವಕುಮಾರ್, ಬಿಜೆಪಿ ಮುಖಂಡರು ಸೇರಿ ಮೈಸೂರು ಪೊಲೀಸ್ ಕಮಿಷನರ್​ ರಮೇಶ್​​ ಬಾನೋತ್​ಗೆ ಮನವಿ ಪತ್ರ ಸಲ್ಲಿಸಿದ್ದಾರೆ.

  • 08 Oct 2023 05:14 PM (IST)

    Karnataka Breaking News Live: ಶಾಮನೂರು ಹೇಳಿಕೆ ಸಮರ್ಥಿಸಿದ ಹೆಚ್​ಡಿ ಕುಮಾರಸ್ವಾಮಿ

    ಬೆಳಗಾವಿ: ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗ್ತಿದೆ ಎಂಬ ಹೇಳಿಕೆ ವಿಚಾರ ‘ ಶಾಮನೂರು ಶಿವಶಂಕರಪ್ಪ ಅವರು ಧೈರ್ಯವಾಗಿ ತಮ್ಮ ಅಭಿಪ್ರಾಯ ಹೇಳಿದ್ದಾರೆ. ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಮಾತನಾಡಿದ ಅವರು ‘ಯಾವ್ಯಾವ ಅಧಿಕಾರಿಗಳಿಗೆ ಗೌರವ ಕೊಟ್ಟಿದ್ದಾರೆ ಎನ್ನುವುದು ಮುಖ್ಯ, ಸಂಖ್ಯೆಗಿಂತ ಇಲಾಖೆಯಲ್ಲಿ ಗೌರವ ಕೊಟ್ಟಿರುವುದು ಬಹಳ ಮುಖ್ಯವಾಗುತ್ತೆ. ಕೆಲಸಕ್ಕೆ ಬಾರದ ಜಾಗ ಕೊಟ್ಟು ಇಷ್ಟು ಸಂಖ್ಯೆ ಕೊಟ್ಟಿದ್ದೇನೆ ಅಂದರೆ, ಅದರಿಂದ ಏನು ಉಪಯೋಗ ಎಂದು ಹೆಚ್​ಡಿಕೆ ಕಾಂಗ್ರೆಸ್​ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

  • 08 Oct 2023 04:58 PM (IST)

    Karnataka Breaking News Live: ನಾಳೆ ಎಐಸಿಸಿ ಕಾರ್ಯಕಾರಿ ಸಭೆ; ಇಂದು ಸಂಜೆ ದೆಹಲಿಗೆ ತೆರಳಲಿರುವ ಸಿಎಂ

    ಬೆಂಗಳೂರು: ದೆಹಲಿಯಲ್ಲಿ ನಾಳೆ ಎಐಸಿಸಿ ಕಾರ್ಯಕಾರಿ ಸಭೆ ಹಿನ್ನೆಲೆ ಇಂದು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸಭೆ ಮುಗಿಸಿಕೊಂಡು ನಾಳೆ(ಅ.09) ರಾತ್ರಿ ಬೆಂಗಳೂರಿಗೆ ಹಿಂದಿರುಗಲಿದ್ದಾರೆ. ಇನ್ನು ಸಿಎಂ ದೆಹಲಿಗೆ ತೆರಳುತ್ತಿರುವ ಹಿನ್ನೆಲೆ ಜನತಾ ದರ್ಶನ ಮುಂದೂಡಿಕೆ ಮಾಡಲಾಗಿದೆ.

  • 08 Oct 2023 04:36 PM (IST)

    Karnataka Breaking News Live: ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡ್ಬೇಕು; HD ಕುಮಾರಸ್ವಾಮಿ

    ಬೆಂಗಳೂರು: ಜಾತಿಗಣತಿ ವರದಿ ವಿಚಾರ ‘ ಜಾತಿಗಣತಿ ಮುಖ್ಯವಲ್ಲ, ಎಲ್ಲ ಜಾತಿಯಲ್ಲಿರುವ ಬಡವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜಾತ್ಯಾತೀತ ಪದ ತೆಗೆದುಹಾಕಿ ಎಂದು ಹೇಳ್ತಾರೆ. ಅದರ ಅರ್ಥವೇನು.? ಜಾತ್ಯಾತೀತ ಅಂದರೆ ಜಾತಿಯ ವ್ಯವಸ್ಥೆ ತೆಗೆದುಹಾಕಬೇಕೆಂದು ಅಲ್ವಾ, ಇವರು ಜಾತಿಗಣತಿ ಮಾಡಿ ಏನು ಪುರುಷಾರ್ಥ ಸಾಧನೆ ಮಾಡುತ್ತಾರೆ. ಇದರ ಉಪಯೋಗ ಏನು ಎಂದು ಪ್ರಶ್ನಿಸಿದ್ದಾರೆ.

  • 08 Oct 2023 04:19 PM (IST)

    Karnataka Breaking News Live: ಕನ್ನಡಿಗರ ರಕ್ಷಣೆಗೆ ಹೆಲ್ಪ್​ಲೈನ್ ನಂಬರ್ ಬಿಡುಗಡೆ

    ಬೆಂಗಳೂರು: ಇಸ್ರೇಲ್ ನಲ್ಲಿ‌ ಸಿಲುಕಿರಬಹುದಾದ ಕನ್ನಡಿಗರ ರಕ್ಷಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಸರ್ಕಾರ ಕನ್ನಡಿಗರ ರಕ್ಷಣೆಗೆ ಹೆಲ್ಪ್​ಲೈನ್ ನಂಬರ್ ಬಿಡುಗಡೆ ಮಾಡಿದೆ. ಟ್ವಿಟರ್ ನಲ್ಲಿ ಸರ್ಕಾರದ ಹೆಲ್‌ಲೈನ್ ನಂಬರ್ ಸಿಎಂ ಸಿದ್ದರಾಮಯ್ಯ ಹಂಚಿಕೊಂಡಿದ್ದಾರೆ. ಇಸ್ರೇಲ್ ನಲ್ಲಿ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಕೂಡಲೇ ಹೆಲ್ಪ್‌ಲೈನ್ ಗೆ ಸಂಪರ್ಕಿಸಲು ಸಿಎಂ ಮನವಿ ಮಾಡಿದ್ದು ಹೀಗಿದೆ. ಹೆಲ್ಪ್‌ ಲೈನ್ ನಂಬರ್ಸ್ 08022340676, 08022253707, 97235226748

  • 08 Oct 2023 03:51 PM (IST)

    Karnataka Breaking News Live: ಕೇಂದ್ರ ಬರ ಅಧ್ಯಯನ ತಂಡದಿಂದ ನೆಲಮಂಗಲದಲ್ಲಿ ಪರಿಶೀಲನೆ

    ಬೆಂಗಳೂರು ಗ್ರಾಮಾಂತರ: ಕೇಂದ್ರ ಬರ ಅಧ್ಯಯನ ತಂಡವು ಇಂದು ನೆಲಮಂಗಲಕ್ಕೆ ಭೇಟಿ ನೀಡಿದೆ. ಮಳೆಯ ಕೊರತೆಯಿಂದ ಎದುರಾಗಿರುವ ತೀವ್ರ ಬರ ಪರಿಸ್ಥಿತಿಯನ್ನು ಅರಿಯಲು ಕೇಂದ್ರ ಜಲ ಆಯೋಗದ ನಿರ್ದೇಶಕರ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿದೆ.

  • 08 Oct 2023 03:31 PM (IST)

    Karnataka Breaking News Live:ಅತ್ತಿಬೆಲೆ ​ಅಗ್ನಿ ದುರಂತ; ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನ ಸರ್ಕಾರವೇ ಭರಿಸಲಿದೆ; ಸಿಎಂ

    ಬೆಂಗಳೂರು: ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ‘ ಮೂವರು ಗಾಯಾಳುಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದೇವೆ ಎಂದು ಸೇಂಟ್​ಜಾನ್ಸ್​ ಆಸ್ಪತ್ರೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ವೆಂಕಟೇಶ್ ಎಂಬುವವರ​ ಸ್ಥಿತಿ ಗಂಭೀರವಾಗಿದ್ದು, ಶೇ.50ರಷ್ಟು ಗಾಯಗೊಂಡಿದ್ದಾರೆ. ರಾಜೇಶ್​ಗೆ ಶೇ.28ರಷ್ಟು ಸುಟ್ಟ ಗಾಯ, ನವೀನ್​ಗೆ ಶೇ.15ರಷ್ಟು ಗಾಯಗಳಾಗಿವೆ. ಇನ್ನು
    ಅವರ ಚಿಕಿತ್ಸೆಯ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಜೊತೆಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಲಾಗಿದೆ ಎಂದರು.

  • 08 Oct 2023 03:11 PM (IST)

    Karnataka Breaking News Live: ಎಸ್​.ಟಿ.ಸೋಮಶೇಖರ್ ಪಕ್ಷ ಬಿಡಲು ನಿರ್ಧರಿಸಿದರೆ ನಮ್ಮ ವಿರೋಧ ಇಲ್ಲ;ಮಾಜಿ ಸಚಿವ CP ಯೋಗೇಶ್ವರ್

    ರಾಮನಗರ: ಬಿಜೆಪಿ-ಜೆಡಿಎಸ್​​ ಮೈತ್ರಿಗೆ ಎಸ್​.ಟಿ.ಸೋಮಶೇಖರ್ ಅಸಮಾಧಾನ ವಿಚಾರ ‘ ಎಸ್​.ಟಿ.ಸೋಮಶೇಖರ್ ಪಕ್ಷ ಬಿಡಲು ನಿರ್ಧರಿಸಿದರೆ ನಮ್ಮ ವಿರೋಧ ಇಲ್ಲ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಜಿ ಸಚಿವ C.P.ಯೋಗೇಶ್ವರ್ ಹೇಳಿದರು. ‘ಸೋಮಶೇಖರ್ ಪಕ್ಷ ಬಿಡುವ ನಿರ್ಧಾರ ಕೈಗೊಂಡರೆ ಸ್ವಾಗತಿಸುತ್ತೇವೆ. ಅವರು ಪದೇ ಪದೆ ಪಕ್ಷವನ್ನು ಟೀಕಿಸುವುದರಿಂದ ನಮಗೂ ನೋವಾಗುತ್ತೆ.
    ಅಧಿಕಾರ ಇದ್ದಾಗ ಅನುಭವಿಸಿ, ಈಗ ಪಕ್ಷವನ್ನು ಟೀಕಿಸುವುದು ಶೋಭೆಯಲ್ಲ ಎಂದರು.

  • 08 Oct 2023 02:58 PM (IST)

    Karnataka Breaking News Live: ಈಗ ಎಲ್ಲ ಸಚಿವರು ಕೂಡ ನನ್ನ​ ಕಾಲ್ ಸ್ವೀಕರಿಸುತ್ತಿದ್ದಾರೆ; ಶಾಸಕ ಶಿವಗಂಗಾ ಬಸವರಾಜ

    ದಾವಣಗೆರೆ: ‘ಈ ಹಿಂದೆ ಕೆಲ ಸಚಿವರು‌ ಹಾಕುತ್ತಿದ್ದರು, ಈಗ ಎಲ್ಲ ಸಚಿವರು ಕೂಡ ನನ್ನ​ ಕಾಲ್ ಸ್ವೀಕರಿಸುತ್ತಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು ‘ಶಾಮನೂರು ಶಿವಶಂಕರಪ್ಪ ಹೇಳಿಕೆ ನಾವು ವಿರೋಧಿಸಲು ಆಗಲ್ಲ, ಯಾವ ಜಾತಿಯವರು ಯಾರಿಗೆ ಮತ ನೀಡಿದ್ದಾರೆಂದು ಹೇಳುವುದು ಕಷ್ಟ. ಆದರೆ, ಅಲ್ಪಸಂಖ್ಯಾತ ಸಮಾಜ ಕಾಂಗ್ರೆಸ್ ಪಕ್ಷದ ಜೊತೆ ಇದೆ‌. ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದ್ದು ನಿಜ ಎಂದಿದ್ದಾರೆ.

  • 08 Oct 2023 01:16 PM (IST)

    Karnataka Breaking News Live: ಅಗ್ನಿ ದುರಂತ ಪ್ರಕರಣ ಸಂಬಂಧ ಸ್ದಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಸ್ದಳಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇವರೊಂದಿಗೆ ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಶಾಸಕ ಎಸ್​.ಟಿ.ಸೋಮಶೇಖರ್​ ಸೇರಿದಂತೆ ಹಲವರು ಇದ್ದಾರೆ.

  • 08 Oct 2023 12:45 PM (IST)

    Karnataka Breaking News Live: ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರ ಜೊತೆ ಹೆಚ್​​ಡಿಕೆ ಸಭೆ

    ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರ ಜೊತೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರು ಸಭೆ ನಡೆಸುತ್ತಿದ್ದಾರೆ. ಬಿಡದಿ ತೋಟದ ನಿವಾಸದಲ್ಲಿ ಸಭೆ ನಡೆಸಲಾಗುತ್ತಿದ್ದು, ನಿಖಿಲ್​ ಕುಮಾರಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದಾರೆ.

  • 08 Oct 2023 12:42 PM (IST)

    Karnataka Breaking News Live: ಬೊಮ್ಮಯಿ ವಿರುದ್ದ ಬಸವರಾಜ್ ಶಿವಣ್ಣನವರ ಕಿಡಿ

    ಹಾವೇರಿ: ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಶಾಸಕ ಬಸವರಾಜ್ ಶಿವಣ್ಣನವರ, ಬರಿ ಮಾತಿನಿಂದ ಹೇಳಿದರೆ ಸಾಲದು ಅವರು ಎಷ್ಟು ಕೆಲಸ ಮಾಡಿದ್ದಾರೆ ನೋಡಿದ್ದೇವೆ. ಈಗ ಮಾತನಾಡಿದರೆ ಹೇಗೆ ಅಂತಾ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಿಡಿಕಾರಿದರು. ಕೇಂದ್ರ ಅಧ್ಯನತಂಡ ಹಾವೇರಿ ಜಿಲ್ಲೆಗೆ ಆಗಮಿಸದಿರುವ ವಿಚಾರವಾಗಿ ಮಾತನಾಡಿದ ಅವರು, ನಮಗೂ ಈ ಕುರಿತು ಬೇಸರ ಇದೆ. ಜಿಲ್ಲೆಯ ಅಕ್ಕ ಪಕ್ಕಕ್ಕೆ ಆಗಮಿಸಿ ಸಮೀಕ್ಷೆ ನಡೆಸುತ್ತಿದ್ದಾರೆ. ನಮ್ಮ ಕೃಷಿ ಪ್ರಧಾನ ಜಿಲ್ಲೆಗೆ ಹಾವೇರಿಗೆ ಬಂದಿಲ್ಲ. ಸಮೀಕ್ಷೆ ನಂತರ ಎಲ್ಲ ಜಿಲ್ಲೆಯ ವರದ ಕೇಂದ್ರ ಅಧ್ಯನ ತಂಡ ನೀಡುತ್ತದೆ. ಇನ್ನುಳಿದ ಜಿಲ್ಲೆಯ ಮೂರು ತಾಲೂಕುಗಳು ಬರಗಾಲ ಅಂತಾ ಘೋಷಣೆ ಯಾಗುವ ಸಾಧ್ಯತೆ ಇದೆ ಎಂದರು.

  • 08 Oct 2023 12:39 PM (IST)

    Karnataka Breaking News Live: ಆಕ್ಸ್​ಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯ

    ಪಟಾಕಿ ಗೋಡೌನ್​ ಅಗ್ನಿ ದುರಂತದಲ್ಲಿ 14 ಜನ ಸಜೀವದಹನ ಪ್ರಕರಣ ಸಂಬಂಧ ಆಕ್ಸ್​ಫರ್ಡ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದೆ. ಆಸ್ಪತ್ರೆ ಸಿಬ್ಬಂದಿ, ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ. ಈ ವೇಳೆ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

  • 08 Oct 2023 12:38 PM (IST)

    Karnataka Breaking News Live: ಪಟಾಕಿ ದುರಂತದಲ್ಲಿ ಗಾಯಗೊಂಡ ಇನ್ನಿಬ್ಬರ ಸ್ಥಿತಿ ಗಂಭೀರ

    ಆನೇಕಲ್: ಪಟಾಕಿ ದುರಂತದಲ್ಲಿ ಗಾಯಗೊಂಡ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಕಾರ್ಮಿಕರಾದ ರಾಜೇಶ್ ಹಾಗೂ ಪಟಾಕಿ ಮಳಿಗೆಗೆ ಬಂದಿದ್ದ ಗ್ರಾಹಕ ವೆಂಕಟೇಶ್ ಸ್ಥಿತಿ ಗಂಭೀರವಾಗಿದೆ. ಸದ್ಯ ಇವರಿಗೆ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಇಬ್ಬರ ದೇಹವು ಶೇ.40 ರಷ್ಟು ಸುಟ್ಟು ಹೋಗಿವೆ.

  • 08 Oct 2023 11:43 AM (IST)

    Karnataka Breaking News Live: ಬಿಜೆಪಿ, ಜೆಡಿಎಸ್​ ಮೈತ್ರಿಗೆ ಡಿವಿಎಸ್​ ಅಸಮಾಧಾನ; ಬೊಮ್ಮಾಯಿ ಪ್ರತಿಕ್ರಿಯೆ

    ಬಿಜೆಪಿ, ಜೆಡಿಎಸ್​ ಮೈತ್ರಿ ಬಗ್ಗೆ ಸಂಸದ ಡಿವಿ ಸದಾನಂದಗೌಡ ಅಸಮಾಧಾನ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಒಟ್ಟಿಗೆ ಕೆಲಸ ಮಾಡುವಾಗ ಸ್ಥಳೀಯ ವಿಚಾರ ಮುನ್ನೆಲೆಗೆ ಬರುತ್ತದೆ ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸೀಟು ಹಂಚಿಕೆ ಹಾಗೂ ಹೊಂದಾಣಿಕೆ ಬಗ್ಗೆ ಇನ್ನೂ ಅಂತಿಮ ಆಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಎಂದು ಹೇಳಿದ್ದಾರೆ. ಈ ಕುರಿತು ನಮ್ಮ ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಮುಖಂಡರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಣಯ ಮಾಡುತ್ತೇವೆ ಎಂದರು.

  • 08 Oct 2023 11:41 AM (IST)

    Karnataka Breaking News Live: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ

    ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿದೆ. ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ, ಆವತಿಯಲ್ಲಿ ಕೇಂದ್ರ ಜಲನಯನ ಆಯುಕ್ತ ಅಶೋಕ್ ನೇತೃತ್ವದ ತಂಡ ಪರಿಶೀಲನೆ ನಡಸುತ್ತಿದೆ. ಬರ ಅಧ್ಯಯನ ತಂಡದ ಜೊತೆ ಡಿಸಿ ಶಿವಶಂಕರ್ ಕೂಡ ಇದ್ದಾರೆ. ಅಲ್ಲದೆ, ಬೆಳೆ ಪರಿಶೀಲಿಸಿ ರೈತರಿಂದ ಮಾಹಿತಿ ಪಡೆಯಲಾಗುತ್ತಿದೆ.

  • 08 Oct 2023 11:31 AM (IST)

    Karnataka Breaking News Live: ಮದ್ಯದ ಅಂಗಡಿ ಹೆಚ್ಚಳದ ಬಗ್ಗೆ ಚರ್ಚೆ ಆಗಿಲ್ಲ: ಶರಣು ಪ್ರಕಾಶ್

    ಹೊಸ ಮದ್ಯದಂಗಡಿ ಪ್ರಾರಂಭ ಮಾಡುವ ವಿಚಾರವಾಗಿ ಮಾತನಾಡಿದ ಸಚಿವ ಶರಣು ಪ್ರಕಾಶ್ ಪಾಟೀಲ್, ಮದ್ಯದ ಅಂಗಡಿ ಹೆಚ್ಚಳದ ಬಗ್ಗೆ ಚರ್ಚೆ ಆಗಿಲ್ಲ. ಮದ್ಯದ ಅಂಗಡಿ ಹೆಚ್ಚು ಮಾಡುವ ಅವಶ್ಯಕತೆ ಇಲ್ಲ. ನಾವು ರಾಜ್ಯದ ಜನರ ಆರೋಗ್ಯ ಅವಲೋಕನ ಮಾಡಬೇಕು. ಸಾಕಷ್ಟು ಮದ್ಯದ ಅಂಗಡಿ ಇದೆ. ಅ ಇಲಾಖೆ ಮಂತ್ರಿಗಳು ಅದನ್ನ ತೀರ್ಮಾನ ಮಾಡುತ್ತಾರೆ. ಅದರ ಬಗ್ಗೆ ನಾನು ಹೇಳೋಕೆ ಆಗಲ್ಲ. ಅದು ರಾಜ್ಯದ ಬೇಡಿಕೆಯಾ ಅಂತ ಇಲಾಖೆ ಸಚಿವರು ತೀರ್ಮಾನ ಮಾಡುತ್ತಾರೆ ಎಂದರು.

  • 08 Oct 2023 11:30 AM (IST)

    Karnataka Breaking News Live: ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಆರೋಗ್ಯ ವಿಚಾರಿಸಿದ ಸಿಎಂ

    ಮೈಸೂರಿನ ಮಣಿಪಾಲ್​ ಆಸ್ಪತ್ರೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ ಅವರು ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಆರೋಗ್ಯ ವಿಚಾರಿಸಿದರು.

  • 08 Oct 2023 10:34 AM (IST)

    Karnataka Breaking News Live: ಅಗ್ನಿ ದುರಂತ ನಡೆದ ಸ್ಥಳಕ್ಕೆ ಹೋಗ್ತಿದ್ದೇನೆ-ಸಿಎಂ ಸಿದ್ದರಾಮಯ್ಯ

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಅಗ್ನಿ ದುರಂತದಲ್ಲಿ 14 ಕಾರ್ಮಿಕರು ಮೃತಪಟ್ಟಿದ್ದಾರೆ. ಪಟಾಕಿ ಗೋಡೌನ್​ ಮಾಲೀಕನ ವಿರುದ್ಧ ಕ್ರಮ ಸೂಚಿಸಿದ್ದೇನೆ ಎಂದರು. ಮೈಸೂರು ನಗರದಲ್ಲಿ ಈ ಹೇಳಿಕೆ ನೀಡಿದರು.

  • 08 Oct 2023 10:33 AM (IST)

    Karnataka Breaking News Live: ಅಗ್ನಿ ದುರಂತ ತುಂಬಾ ಕೆಟ್ಟ ಘಟನೆ ಎಂದ ಅಲೋಕ್ ಮೋಹನ್

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, 14 ಜನ ಮೃತ ಆಗಿದ್ದಾರೆ. ಇದು ತುಂಬಾ ಕೆಟ್ಟ ಘಟನೆ. ಒಟ್ಟು 35 ಜನ ಕೆಲಸ ಮಾಡುತ್ತಿದ್ದರು. ಪ್ರಕರಣ ಸಂಬಂಧ ಇಬ್ಬರು ಅರೆಸ್ಟ್ ಆಗಿದ್ದಾರೆ. ಒಟ್ಟು 5 ಜನ ಆರೋಪಿಗಳಿದ್ದಾರೆ. ಒಂದು ವೇಳೆ ಬೆಂಕಿ ಸ್ಪ್ರೆಡ್ ಆಗಿದ್ರೆ ಸಮಸ್ಯೆ ಆಗುತ್ತಿತ್ತು. ಫಾರೆನ್ಸಿಕ್ ಸೈನ್ಸ್ ಮೂಲಕ ಪರಿಶೀಲನೆ ನಡೆಯುತ್ತಿದೆ ಎಂದರು.

  • 08 Oct 2023 10:26 AM (IST)

    Karnataka Breaking News Live: ಅಗ್ನಿ ದುರಂತಾ ಸ್ಥಳಕ್ಕೆ ತಮಿಳುನಾಡು ಸಚಿವರು, ಶಾಸಕರು ಭೇಟಿ

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ತಮಿಳುನಾಡು ಸಚಿವರು, ಶಾಸಕರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಮಿಳುನಾಡು ಆರೋಗ್ಯ ಸಚಿವ ಮಾ.ಸುಬ್ರಮಣಿಯನ್, ಆಹಾರ ಸಚಿವ ಸಕ್ರಪಾಣಿ ಭೇಟಿ ನೀಡಿದ್ದು, ಆಸ್ಪತ್ರೆಗೆ ತಮಿಳುನಾಡಿನ ಅರೂರು ಶಾಸಕ ಸಂಪತ್ ಕುಮಾರ್,  ಶಾಸಕ ರಾಮಚಂದ್ರ ಭೇಟಿ ನೀಡಿದ್ದಾರೆ. ಹೊಸೂರು ಶಾಸಕ ವೈ ಪ್ರಕಾಶ್ ಕೂಡ ಭೇಟಿ ನೀಡಿದ್ದಾರೆ.

  • 08 Oct 2023 10:21 AM (IST)

    Karnataka Breaking News Live: ಅಗ್ನಿ ದುರಂತ ಪ್ರಕರಣ, ಸ್ಥಳಕ್ಕೆ ಡಿಜಿ ಐಜಿಪಿ ಭೇಟಿ

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಘಟನಾ ಸ್ಥಳಕ್ಕೆ ಡಿಜಿ ಐಜಿಪಿ ಅಲೋಕ್​ ಮೋಹನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

     

  • 08 Oct 2023 09:36 AM (IST)

    Karnataka Breaking News Live: ಅಗ್ನಿ ದುರಂತ ಪ್ರಕರಣ, ಕುಮಾರಸ್ವಾಮಿ ಟ್ವೀಟ್

    ಅತ್ತಿಬೆಲೆಯಲ್ಲಿರುವ ಪಟಾಕಿ ಗೋಡೌನ್​ ಅಗ್ನಿ ದುರಂತ ಪ್ರಕರಣ ಸಂಬಂಧ ಟ್ವೀಟ್ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಘಟನೆಯ ಬಗ್ಗೆ ತಿಳಿದು ನನಗೆ ತೀವ್ರ ದಿಗ್ಭ್ರಮೆ ಉಂಟಾಗಿದೆ. ದೀಪಾವಳಿಗೆ ಬದುಕು ಕಟ್ಟಿಕೊಳ್ಳಲು ಹೊರಟಿದ್ದ ಈ ಮುಗ್ಧ ಜೀವಗಳು ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿ ಬಲಿಯಾಗಿರುವ ಘಟನೆ ನನ್ನ ಮನ ಕಲಕಿದೆ. ಜೀವ ಕಳೆದುಕೊಂಡ ನತದೃಷ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಈ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ಕುಟುಂಬಗಳಿಗೆ ಕರುಣಿಸಲಿ. ಸುರಕ್ಷತೆ ಬಗ್ಗೆ ಮುನ್ನೆಚ್ಚರಿಕೆ ವಹಿಸದೆ ಇದ್ದಿದ್ದೇ ದುರಂತಕ್ಕೆ ಕಾರಣ. ಈ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕು. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಬೇಕು. ಬದುಕು ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರ ಆಸರೆಯಾಗಿ ನಿಲ್ಲಬೇಕು ಎಂದರು.

  • 08 Oct 2023 08:42 AM (IST)

    Karnataka Breaking News Live: ಶಾಸಕರ ಅಸಮಾಧಾನ ತಣಿಸಲು ವಿಫಲವಾಗುತ್ತಿರುವ ಸರ್ಕಾರ

    ಸ್ವಪಕ್ಷದ ಶಾಸಕರ ಅಸಮಾಧಾನ ತಣಿಸಲು ಕಾಂಗ್ರೆಸ್ ಸರ್ಕಾರ ವಿಫಲವಾಗುತ್ತಿದೆ. ಶಾಸಕರೊಂದಿಗೆ ಸಭೆ ನಡೆಸಿದರೂ ಶಾಸಕರ ಬೇಸರ ಶಮನವಾಗುತ್ತಿಲ್ಲ. ಸರ್ಕಾರ, ಸಚಿವರು ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಸ್ವಪಕ್ಷೀರಿಂದಲೇ ಮುಂದುವರಿದಿದೆ. ಸಚಿವರನ್ನು ವಿಶ್ವಾಸಕ್ಕೆ ಪಡೆದರೂ ಶಾಸಕರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿಫಲರಾಗುತ್ತಿದ್ದಾರೆ.

  • 08 Oct 2023 08:38 AM (IST)

    Karnataka Breaking News Live: ಆನೇಕಲ್ ಅಗ್ನಿ ಅವಘಡ, ಲೈಸನ್ಸ್ ಪಡೆಯದೆ ಪಟಾಕಿ ಸಂಗ್ರಹ, ಮಾಲೀಕನ ವಿರುದ್ಧ ಪ್ರಕರಣ ದಾಖಲು

    ಆನೇಕಲ್​: ಪಟಾಕಿ ಗೋಡೌನ್​ ಅಗ್ನಿ ದುರಂತದಲ್ಲಿ 14 ಜನ ಸಜೀವದಹನ ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪಟಾಕಿ ಸಂಗ್ರಹಕ್ಕೆ ಯಾವುದೇ ಲೈಸೆನ್ಸ್ ಪಡೆದಿರಲಿಲ್ಲ. ಪಟಾಕಿ ರವಾನಿಸುವ ಪ್ರೊಸೆಸಿಂಗ್ ಯುನಿಟ್​​ಗೆ ಮಾತ್ರ ಪರವಾನಿಗೆ ಇತ್ತು. ಆದರೆ ಅಪಾರ ಪ್ರಮಾಣದ ಪಟಾಕಿ ಸಂಗ್ರಹಿಸಲಾಗಿತ್ತು. 2028ವರೆಗೆ ಪ್ರೊಸೆಸಿಂಗ್ ಯೂನಿಟ್‌ಗೆ ಪರವಾನಿಗೆ ಪಡೆಯಲಾಗಿತ್ತು. ಆದರೆ ಮಾಲೀಕ ಪಟಾಕಿ ಗೋಡೌನ್​ಗೆ ಅನುಮತಿ ಪಡೆದಿರಲಿಲ್ಲ. ಸದ್ಯ ಅಕ್ರಮವಾಗಿ ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹಿಸಿದ್ದ ಮಾಲೀಕನ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ.

Published On - 8:36 am, Sun, 8 October 23

Follow us on