ಕರ್ನಾಟಕದಲ್ಲಿ ಹುಲಿ ಉಗುರಿನ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಹುಲಿ ಉಗುರು ಧರಿಸಿದ್ದ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿರುವ ರಾಜ್ಯದ ವಿಐಪಿ ಮಂದಿಗೆ ತಲೆನೋವು ಶುರುವಾಗಿದೆ. ಕನ್ನಡ ಚಿತ್ರರಂಗದ ಪ್ರಮುಖರ ವಿರುದ್ಧ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪ ಕೇಳಿಬಂದಿದೆ. ಸೆಲೆಬ್ರೆಟಿಗಳು ಬೆನ್ನಲ್ಲೇ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿಗಳಿಗೂ ಕೂಡ ಹುಲಿ ಉಗುರಿನ ನಂಜು ಅಂಟಿದೆ. ಮತ್ತೊಂದಡೆ ರಾಜ್ಯ ರಾಜಕಾರಣದಲ್ಲಿ ಆಣೆ-ಪ್ರಮಾಣ ಮತ್ತೆ ಶುರುವಾಗಿದೆ. ರಾಮನಗರ ಜಿಲ್ಲೆಗೆ ಮರುನಾಮಕರಣ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯೆ ವಾಗ್ಯುದ್ಧ ಶುರುವಾಗಿದೆ. ಇನ್ನು ವರ್ಗಾವಣೆಯಲ್ಲಿ ಹಣ ತಿಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಸರ್ಕಾರದ ಎಲ್ಲ ಸಚಿವರು ಧರ್ಮಸ್ಥಳದಲ್ಲಿ ಆಣೆ ಮಾಡಿ ಎಂದು ಹೆಚ್ಡಿ ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದಾರೆ. ಇದರೊಂದಿಗೆ ರಾಜ್ಯದ ಮತ್ತಷ್ಟು ಸುದ್ದಿಗಳ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ….
ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣಕ್ಕೆ ಕೌಂಟ್‌ಡೌನ್ ಶುರುವಾಗಿದ್ದು, ಭಾರತದ ಹಲವು ಸ್ಥಳಗಳಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಗೋಚರಿಸಲಿದೆ. ಬರಿಗಣ್ಣಿನಿಂದ ರಾಹುಗ್ರಸ್ತ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು. ಯಾವುದೇ ಹಾನಿಯಿಲ್ಲ. ಚಂದ್ರಗ್ರಹಣ ವೀಕ್ಷಣೆಗೆ ನೆಹರು ತಾರಾಲಯದ ಯುಟ್ಯೂಬ್ ಮೂಲಕ ಲೈವ್‌ನಲ್ಲಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ.
ಬಿಜೆಪಿ ಮಾಡುತ್ತಿರುವ ಆಪರೇಷನ್ ಬಗ್ಗೆ ನಮಗೆ ಯಾವುದೇ ಭೀತಿಯಿಲ್ಲ ಎಂದು ಬೀದರ್ನಲ್ಲಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಿಜೆಪಿಯವರ ಬಳಿ ಸಿಕ್ಕಾಪಟ್ಟೆ ಹಣವಿದೆ, ಐಟಿ & ಇಡಿ ಪ್ರಯೋಗಿಸ್ತಾರೆ. ಭಾರತೀಯ ಜನತಾ ಪಕ್ಷದವರಿಗೆ ಅಧಿಕಾರ ಇಲ್ಲದೆ ಇರಲು ಆಗುತ್ತಿಲ್ಲ. ಹೀಗಾಗಿ ಬಿಜೆಪಿಯವರು ಅಧರ್ಮದ ಹಾದಿಯನ್ನು ತುಳಿಯುತ್ತಿದ್ದಾರೆ ಎಂದಿದ್ದಾರೆ.
ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಸಂಬಂಧ ಇಡಿ ದಾಳಿ ಮಾಡಿದೆ. ಹುಬ್ಬಳ್ಳಿ, ಇಂದೋರ್, ಮುಂಬೈನಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಿದ್ದು, 46.5 ಲಕ್ಷ ನಗದು, ಡಿಜಿಟಲ್ ಡಿವೈಸ್, ಮಹತ್ವದ ದಾಖಲೆ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಇಡಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಬಿಜೆಪಿಯಿಂದ ನನ್ನ ಮಣ್ಣು ನನ್ನ ದೇಶ ಅಭಿಯಾನ ಹಿನ್ನೆಲೆ ಬಿಜೆಪಿ ಪ್ರತಿನಿಧಿಗಳು ಬೆಂಗಳೂರಿನಿಂದ ರೈಲಿನಲ್ಲಿ ದೆಹಲಿಗೆ ತೆರಳಿದೆ. ರಾಜ್ಯದ ವಿವಿಧ ಪುಣ್ಯ ಕ್ಷೇತ್ರ ಸೇರಿ ವಿವಿಧೆಡೆಯಿಂದ ಸಂಗ್ರಹಿಸಿದೆ. ಮಣ್ಣಿನ ಅಮೃತ ಕಲಶಗಳೊಂದಿಗೆ ಬೈಯಪ್ಪನಹಳ್ಳಿಯಿಂದ ಪ್ರಯಾಣ ಬೆಳೆಸಿದ್ದಾರೆ.
ಕಳೆದ ಬಾರಿ ಕೇಂದ್ರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ರಾಜ್ಯಕ್ಕೆ ನೀಡಲಿಲ್ಲ. ವಿದ್ಯುತ್ ಸಮಸ್ಯೆ ಇದ್ದರೂ ನೆರೆ ರಾಜ್ಯದವರು ನಮಗೆ ವಿದ್ಯುತ್ ನೀಡಲಿಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತೆ ಮಾಡುತ್ತಿರುವುದು ಎದ್ದು ಕಾಣುತ್ತಿದೆ. ನಾವು ಹಣ ನೀಡುತ್ತೇವೆ ಅಂದರೂ ಕೇಂದ್ರ ಸರ್ಕಾರ ನೆರವು ನೀಡುತ್ತಿಲ್ಲ. ವಿದ್ಯುತ್ ಗ್ರಿಡ್ಗಳ ಪಕ್ಕದಲ್ಲೇ ಸೋಲಾರ್ ಪ್ಲ್ಯಾಂಟ್ ಹಾಕುತ್ತಿದ್ದೇವೆ ಎಂದು ಶಾಸಕ ವಿನಯ ಕುಲಕರ್ಣಿ ಹೇಳಿದ್ದಾರೆ.
ಮಾಜಿ ಸಿಎಂ ಹೆಚ್ಡಿ ದೇವೇಗೌಡ ಇಲ್ಲದಿದ್ರೆ ಶಿವಲಿಂಗೇಗೌಡ ಶಾಸಕರಾಗುತ್ತಿರಲಿಲ್ಲವೆಂದು ಸಂಸದ ಪ್ರಜ್ವಲ್ ಹೇಳಿಕೆಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ತಿರುಗೇಟು ನೀಡಿದ್ದು, ಹೆಚ್‌ಡಿಡಿ ಋಣದಲ್ಲಿ ಇದ್ದೀನಿ, ಹಾಗಂತ ಮಾತ್ರಕ್ಕೆ ಋಣಿಯಾಗಿರಬೇಕಾ. ಅವರ ಮನೆ ಮಕ್ಕಳಿಗೆಲ್ಲಾ ಋಣಿಯಾಗಿರಬೇಕು ಅಂತಾ ಏನಿಲ್ವಲ್ಲಾ. ದೇವೇಗೌಡರ ಬಗ್ಗೆ ನಾನು ಯಾವುದೇ ಹಗುರವಾದ ಮಾತುಗಳನ್ನು ಆಡಲ್ಲ. ಹೆಚ್ಡಿ ದೇವೇಗೌಡ ಋಣ ನಮ್ಮ ಮೇಲಿದೆಯೋ, ನನ್ನ ಋಣ ಬೇರೆಯವರ ಮೇಲಿದೆಯೋ ಗತಕಾಲದ್ದನ್ನು ನೆನಪು ಮಾಡಿಕೊಳ್ಳಬೇಕು ಎಂದರು.
ನಾಲ್ಕು ಜನ ಅನುಯಾಯಿಗಳೊಂದಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಗೆ ನಾಗಾ ಸಾಧು ಇಂದು ಭೇಟಿ ನೀಡಿದ್ದಾರೆ. ಜಗನ್ನಾಥ ಭವನದ ಆವರಣದಲ್ಲಿ ಆಸನದ ವ್ಯವಸ್ಥೆ ಮಾಡಿ ಉಪಚರಿಸಲಾಗಿದೆ. ಬಳಿಕ ದಕ್ಷಿಣೆ ಕೊಟ್ಟು ಬಿಜೆಪಿ ಕಚೇರಿ ಸಿಬ್ಬಂದಿ ಕಳುಹಿಸಿದ್ದಾರೆ.
ಮಂಡ್ಯ: ರಾಹುಗ್ರಸ್ತ ಚಂದ್ರಗ್ರಹಣ ಹಿನ್ನೆಲೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಮಂಡ್ಯದ ಪುರಾಣ ಪ್ರಸಿದ್ಧ ಲಕ್ಷ್ಮೀ ಜನಾರ್ಧನ ದೇವಸ್ಥಾನ ಬಂದ್ ಆಗಲಿದೆ. ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ನಡೆಯುತ್ತಿದ್ದು
ಬಂದ್ ಆಗಲಿದೆ.
ಎಟಿಎಂ ಸರ್ಕಾರದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ. ಹಾಗಾಗಿ ತಮ್ಮವರಿಂದ ಹರಾಜು ಕೂಗಿಸಲು ಸಿದ್ದರಾಮಯ್ಯರವರ ಬಣ, ಡಿ.ಕೆ. ಶಿವಕುಮಾರ್ ಅವರನ್ನು ದೂರವಿಟ್ಟು ರಾತ್ರೋರಾತ್ರಿ ಸಭೆ ನಡೆಸಿದೆ. ಅಂದಹಾಗೆ, ಎರಡೂ ಕಡೆ ದೊಡ್ಡ ಸೂಟ್ ಕೇಸ್‌ನೊಂದಿಗೆ ಬರುವವರಿಗೆ ಮೊದಲ ಆದ್ಯತೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.
#ATMSarkara ದ ನಿಗಮ ಮಂಡಳಿಗಳ ಹರಾಜು ಪ್ರಕ್ರಿಯೆ ಈಗಾಲೇ ಆರಂಭವಾಗಿದೆ. ಹಾಗಾಗಿ ತಮ್ಮವರಿಂದ ಹರಾಜು ಕೂಗಿಸಲು ಸಿದ್ದರಾಮಯ್ಯರವರ ಬಣ, ಡಿ. ಕೆ. ಶಿವಕುಮಾರ್ ಅವರನ್ನು ದೂರವಿಟ್ಟು ರಾತ್ರೋರಾತ್ರಿ ಸಭೆ ನಡೆಸಿದೆ.
ಅಂದಹಾಗೆ, ಎರಡೂ ಕಡೆ ದೊಡ್ಡ ಸೂಟ್ ಕೇಸ್‌ನೊಂದಿಗೆ ಬರುವವರಿಗೆ ಮೊದಲ ಆದ್ಯತೆ!! pic.twitter.com/sw00HViBXQ
— BJP Karnataka (@BJP4Karnataka) October 28, 2023
ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿರುವುದು ನಿಜ. ಬಿಜೆಪಿಯವರ ಈ ಪ್ರಯತ್ನ ಸಫಲವಾಗಲ್ಲ. ಒಮ್ಮೆ ಆಪರೇಷನ್ ಕಮಲ ಮಾಡಿ ಬಿಜೆಪಿ ಸಕ್ಸಸ್ ಆಗಿರಬಹುದು. ಆದರೆ ಯಾವಾಗಲೂ ಹಾಗೆ ಆಗಲ್ಲ, ಬಿಜೆಪಿಗೆ ಅಧಿಕಾರದ ದಾಹ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಬಿಜೆಪಿಗೆ ಜನಮನ್ನಣೆ ಇಲ್ಲ, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದ್ದರು ಎಂದು ಬೀದರ್ ಜಿಲ್ಲೆ ಭಾಲ್ಕಿ ಪಟ್ಟಣದಲ್ಲಿ ಸಚಿವ ಈಶ್ವರ ಖಂಡ್ರೆ ವಾಗ್ದಾಳಿ ಮಾಡಿದ್ದಾರೆ. ಅಧಿಕಾರಕ್ಕಾಗಿ ಬಿಜೆಪಿಯವರು ಎಷ್ಟು ಕೆಳಮಟ್ಟಕ್ಕಾದ್ರೂ ಇಳೀತಾರೆ. ಬಿಜೆಪಿಯವರು ತಿಪ್ಪರಲಾಗ ಹಾಕಿದ್ರೂ ಸರ್ಕಾರ ಬೀಳಿಸಲು ಆಗಲ್ಲ ಎಂದು ಹೇಳಿದ್ದಾರೆ.
ಸೌಜನ್ಯದ ಭೇಟಿ ಊಟಕ್ಕೆ ಸೇರಿದ್ದೆವು. ಊಟ ಮಾಡುದರೂ ಅವರ ಮನೆಗೆ ಅವರು ಹೋದರು. ನಮ್ಮ ಮನೇಲಿ ನಾನು ಉಳಿದುಕೊಂಡೆ. ಯಾವ ವಿಚಾರವಾಗಿಯೂ ಚರ್ಚೆ ಆಗಲಿಲ್ಲ ಎಂದು ತುಮಕೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಕೆಇಎ ಪರೀಕ್ಷಾರ್ಥಿಗಳಿಗೆ ಆಪ್ನಿಂದ ಬೆಂಗಳೂರಿನಲ್ಲಿ ಉಚಿತ ಆಟೋ ಪ್ರಯಾಣದ ಸೌಲಭ್ಯ ಒದಗಿಸಲಾಗಿದೆ. ನಿಗಮ-ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಪರೀಕ್ಷೆ ನಡೆಸುತ್ತಿದೆ. ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳಿಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ಯುವ ಘಟಕದಿಂದ ಉಚಿತ ಆಟೋ ಪ್ರಯಾಣ ಸೌಲಭ್ಯ ನೀಡಲಾಗಿದೆ. ಇಂದು ಮತ್ತು ನಾಳೆ ಬೆಂಗಳೂರು ನಗರದಲ್ಲಿ 50ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಿಗೆ ಪ್ರಯಾಣಿಸಲು ಉಚಿತ ಸೌಲಭ್ಯ ನೀಡಲಾಗುತ್ತದೆ.
ಕಲಬುರಗಿ: ಎಐಸಿಸಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದೆನೆ. ನನಗೆ ಕೊಟ್ಟ ಕೆಲಸವನ್ನ ನಾನು ಸಮರ್ಥವಾಗಿ ನಿಭಾಯಿಸಿದ್ದೆನೆ. ಯಾರಿಗೂ ಸಹ ಕೆಟ್ಟ ಕೆಲಸ ಮಾಡಿಲ್ಲ. ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕೆಲಸ ಮಾಡಿದ್ದೇನೆ. ಎರಡನೇ ವರ್ಷದಲ್ಲಿ ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳ ಚುನಾವಣೆಗಳಿವೆ. ಎರಡನೇ ವರ್ಷದಲ್ಲಿ ಬಹಳಷ್ಟು ಸವಾಲುಗಳಿವೆ ಅದನ್ನು ಬಗೆಹರಿಸುತ್ತೆನೆ. ಆಗ ಮಾತ್ರ ಹೆಸರು ಬರುತ್ತದೆ. ಯಾವ ಸಮಸ್ಯೆ ಕೂಡ ನನಗೆ ಕಠಿಣ ಅನ್ನಿಸುತ್ತಿಲ್ಲ. ಪಂಚರಾಜ್ಯ ಚುನಾವಣೆಯಲ್ಲಿ ಎಲ್ಲಾ ಕಡೆ ಒಳ್ಳೆ ವಾತಾವರಣವಿದೆ. ಆದರೆ ಮೋದಿ ಸರ್ಕಾರ ಇಡಿ ದಾಳಿಮಾಡಿ ನಮ್ಮ ಸಿಎಂ, ಮಂತ್ರಿ ಹಾಗೂ ಕಾರ್ಯಕರ್ತರ ಶಕ್ತಿ ಕುಂದಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ನಾಮಪತ್ರ ಸಲ್ಲಿಸುವ ಕೆಲಸ ನಡೆಯುತ್ತಿರುವ ವೇಳೆ ತಮ್ಮ ಎಲ್ಲಾ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ. ಮೋದಿ ತಮ್ಮ ಬಳಿ ಇರುವ ಎಲ್ಲಾ ಅಸ್ತ್ರ ಗಳನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಆದರೆ ಅವರ ಹೆದರಿಕೆಗೆ ನಾವು ನಮ್ಮ ತತ್ವ ಬಿಡಲ್ಲ. ಈ ಚುನಾವಣೆ ಬಳಿಕ ಎಲ್ಲದಕ್ಕೂ ಸಹ ಜನ ಉತ್ತರ ಕೊಡುತ್ತಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಂಗಳೂರು: ಕಲೆಕ್ಷನ್ ಮಾಸ್ಟರ್ ಎಂದು ಬಗ್ಗೆ ಹರೀಶ್ ಪೂಂಜಾ ಪೋಸ್ಟ್ಗೆ ಸಂಬಂಧಿಸಿದಂತೆ ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ. ನಾನು 1983ರಲ್ಲಿ ಶಾಸಕನಾಗಿ, 1985ರಲ್ಲೇ ಸಚಿವನಾಗಿದ್ದವನು. ಅಂದಿನಿಂದ ಈವರೆಗೆ ಯಾರೂ ನನ್ನನ್ನು ಈ ರೀತಿ ಕರೆದಿರಲಿಲ್ಲ. ಶಾಸಕ ಹರೀಶ್ ಪೂಂಜಾ ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ. ಆ ಮಾತನ್ನು ಹಿಂದಿನ ಸರ್ಕಾರ ಹಾಗೂ ಬಿಜೆಪಿ ಮುಖ್ಯಮಂತ್ರಿಗಳಿಗೆ ಹೇಳಲಿ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆಂಗಳೂರು: ರಾಜ್ಯದ ಜನತೆಗೆ ಮೋಸ ಮಾಡಿದ್ದು ಪ್ರಧಾನಿ ಮೋದಿ ಅಲ್ಲ, ಸಿದ್ದರಾಮಯ್ಯ. ವಿಜಯಪುರ ಜಿಲ್ಲೆಗೆ ಬಸವೇಶ್ವರರ ಹೆಸರು ನಾಮಕರಣ ಮಾಡಿದರೇ ನಾವು ಸ್ವಾಗತ ಮಾಡುತ್ತೇವೆ. ನಾವು ಬಸವಣ್ಣನ ಹೆಸರಿನಲ್ಲಿ ರಾಜಕೀಯ ಮಾಡುವುದಿಲ್ಲ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದರು.
ಬೆಂಗಳೂರು: ವಿಧಾನಸೌಧದಲ್ಲಿ ರಾಜ್ಯಮಟ್ಟದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು. ಸಿಎಂ ಸಿದ್ದರಾಮಯ್ಯ, ಸಚಿವರಾದ ಬಿ.ನಾಗೇಂದ್ರ, ಸತೀಶ್ ಜಾರಕಿಹೊಳಿ, ಕೆ.ಎನ್.ರಾಜಣ್ಣ, ಹೆಚ್.ಸಿ.ಮಹದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸಿಎಂ ಸಿದ್ದರಾಮಯ್ಯ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವಾಲಯ ಉದ್ಘಾಟಿಸಿದರು.
ಎನ್.ವೈ. ಹನುಮಂತಪ್ಪ- ನಿವೃತ್ತ ನ್ಯಾಯಾಧೀಶರು
ಮಹಾದೇವಮ್ಮ – ಧಾರ್ಮಿಕ ಕ್ಷೇತ್ರ
ರಾಮಣ್ಣ ಗಸ್ತಿ – ಶಿಕ್ಷಣ
ಜಿ.ಓ. ಮಂಹಾಂತಪ್ಪ- ಸಮಾಜಸೇವೆ
ಸೋಮಣ್ಣ -ಸಾಮಾಜಿಕ ಸಂಘಟನೆ
ಶಾರದಾ ಪ್ರಭುಲಿಂಗ ಹುಲಿನಾಯಕ್ – ವೈದ್ಯಕೀಯ ಸೇವೆ
ಸುಕನ್ಯಾ ಮಾರುತಿ – ಸಾಹಿತ್ಯ
ಸುಜಾತಮ್ಮ – ರಂಗಭೂಮಿ
ಮಂಡ್ಯ: ನಿನ್ನೆ ಹೇಳಿದ್ದನ್ನು ಮತ್ತೆ ರಿಪೀಟ್ ಮಾಡಲು ನಂಗೆ ಇಷ್ಟ ಇಲ್ಲ. ಶಾಸಕರನ್ನು ಸೆಳೆಯಲು ಪ್ರಯತ್ನ ಪಡುತ್ತಿರುವುದಕ್ಕೆ ಸಾಕ್ಷಿ ಇದೆ. ನಮ್ಮ ಡಿಸಿಎಂ ಸಹ ಹೇಳಿದ್ದಾರೆ ಮೂರು ಅಲ್ಲ ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ ಅಂತ. ನನ್ನ ಬಳಿ ಇರುವ ಮಾಹಿತಿಯನ್ನು ಸಿಎಂ, ಡಿಸಿಎಂಗೆ ಹೇಳುತ್ತೇನೆ. ಅವರ ಬಳಿ ಇರುವ ಮಾಹಿತಿ ತೆಗೆದುಕೊಂಡು ಮಾಧ್ಯಮದ ಮುಂದೆ ಬರುತ್ತೇನೆ. ನನಗೆ ಆಫರ್ ನೀಡಲು ಬಂದಿದ್ದರೇ ಲೈವ್ ಮಾಡಿ ತೋರಿಸುತ್ತಿದ್ದೆ. ಪಕ್ಷಕ್ಕೆ ಕರೆದಿರುವುದು ನಿಜ ಎಂದು ಅವರೆ ಒಪ್ಪಿಕೊಂಡಿದ್ದಾರೆ. ನಮ್ಮ ಶಾಸಕರಿಗೆ 50 ಕೋಟಿ ಆಫರ್ ಕೊಟ್ಟಿದ್ದಾರೆ. ಬಿಜೆಪಿಗೆ ಬಂದರೇ ಮಂತ್ರಿಗಿರಿ ಕೊಡುತ್ತೇವೆ ಅಂತಾಲೂ ಹೇಳಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದರು.
ಬೆಂಗಳೂರು: ಬಿಜೆಪಿಯ ಕೆಲವರ ದುರಹಂಕಾರದಿಂದ ಬಹಳ ಜನ ಬೇಸತ್ತಿದ್ದಾರೆ. ಹಲವು ಮುಖಂಡರು ಪಕ್ಷದಲ್ಲಿ ಮಾತನಾಡಲು ಭಯಪಡುತ್ತಿದ್ದಾರೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಪಕ್ಷ ಬಿಡ್ತಾರೆಂದು ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಯಾರೂ ಟಾಸ್ಕ್ ಕೊಟ್ಟಿಲ್ಲ, ನನಗೂ ಪ್ರಬುದ್ಧತೆ, ಜ್ಞಾನ ಇದೆ. ನಾನು ಚಾಕೊಲೇಟ್, ಪೆಪ್ಪರ್ಮೆಂಟ್ ತಿಂದುಕೊಂಡು ಬಂದಿಲ್ಲ. ನಮ್ಮನ್ನು ಕರೆದು ಮಾತನಾಡಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸ್ವಪಕ್ಷದ ನಾಯಕರ ವಿರುದ್ಧ ಮತ್ತೆ ರೇಣುಕಾಚಾರ್ಯ ವಾಗ್ದಾಳಿ ಮಾಡಿದ್ದಾರೆ.
ಕೋಲಾರ: ಶೀಗಿ ಹುಣ್ಣಿಮೆ ದಿನ ವರ್ಷದ ಕೊನೆಯ ರಾಹುಗ್ರಸ್ಥ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಕೋಲಾರದ ಕೋಲಾರಮ್ಮ ದೇವಾಲಯಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ. ಚಂದ್ರಗ್ರಹಣ ಹಿನ್ನಲೆ ಕೋಲಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮಧ್ಯಾಹ್ನ 3 ಗಂಟೆವರೆಗೆ ಮಾತ್ರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇಂದು ಮಧ್ಯಾಹ್ನ 3 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿ ಬಂದ್ ಮಾಡಲಾಗುವುದು. ನಾಳೆ ಬೆಳಗ್ಗೆ 5 ಗಂಟೆಗೆ ದೇವಾಲಯ ಶುಚ್ಛಿಗೊಳಿಸಿ, ಹೋಮಹವನ ನಂತರ ಪೂಜೆ ಆರಂಭವಾಗುತ್ತದೆ.
ಬೆಂಗಳೂರು: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ದೊಡ್ಡಗಣಪತಿ ದೇಗುಲ ಇಂದು ಸಂಜೆ ಬಂದ್ ಆಗಲಿದೆ. ಇಂದು ಸಂಜೆಯಿಂದ ರವಿವಾರ ಬೆಳಗ್ಗೆವರೆಗೂ ದರ್ಶನಕ್ಕೆ ಅವಕಾಶವಿಲ್ಲ. ನಾಳೆ ಬೆಳಗ್ಗೆ ದೇಗುಲದ ಶುದ್ಧಿ ಕಾರ್ಯ ಮುಗಿಸಿ ವಿಶೇಷ ಪೂಜೆ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಮಂಡ್ಯ: ಜಿಲ್ಲೆಯ ಪ್ರಮುಖ ದೇಗುಲಗಳು ಸಂಜೆ ಬಳಿಕ ಬಂದ್ ಆಗಲಿವೆ. ಚಂದ್ರಗ್ರಹಣ ಹಿನ್ನೆಲೆ ದೇಗುಲಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಶ್ರೀ ರಂಗಪಟ್ಟಣದ ರಂಗನಾಥಸ್ವಾಮಿ, ನಿಮಿಷಾಂಬ ದೇವಸ್ಥಾನ, ಮದ್ದೂರಿನ ಹೊಳೆ ಆಂಜನೇಯ, ಚುಂಚನಗಿರಿಯ ದೇವಸ್ಥಾನ ಮತ್ತು ಮಂಡ್ಯದ ಲಕ್ಷ್ಮೀ ಜನಾರ್ದನ ಸೇರಿ ಹಲವು ದೇಗುಲಗಳು ಬಂದ್ ಆಗಲಿವೆ.
ಬೆಂಗಳೂರು: ವರ್ಷದ ಕೊನೆಯ ಗ್ರಹಣ ಇದು. ಈ ವರ್ಷದ ಚಂದ್ರಗ್ರಹಣ 30 ವರ್ಷಗಳ ನಂತರ ಸಂಭವಿಸಿದೆ. ಈ ಭಾರಿ ಮಧ್ಯರಾತ್ರಿ ಸಂಭವಿಸಿರುವುದೇ ವಿಶೇಷ. ಇಂದು ಸಂಜೆ 4 ಗಂಟೆಯ ಒಳಗೆ ಊಟ ಮುಗಿಸಿಕೊಳ್ಳಬೇಕು. 4 ಗಂಟೆಯ ನಂತರ ಪೂಜೆಯಲ್ಲಿ ತೊಡಗಿಕೊಕಳಬೇಕು. ಮೇಷರಾಶಿ, ಕುಂಬ, ತುಲಾ ರಾಶಿಗೆ ಸಮಸ್ಯೆ ಇದೆ. ಮೇಷ ರಾಶಿಯವರು ಸ್ನಾನ ಮಾಡಿ ಶಿವನ ದೇವಸ್ಥಾನಕ್ಜೆ ಅಕ್ಕಿ, ಮೊಸರು, ಹಾಲನನ್ನು ದಾನ ನೀಡಬೇಕು. ಯಾವ ರಾಶಿಯ ಮೇಲೆ ಗ್ರಹಣ ಸಂಭವಿಸೊತ್ತೋ, ಆ ವೇಳೆ ದಾನ ಮಾಡಿದರೆ ಒಳ್ಖೆಯದು. ಹೀಗಾಗಿ ಇಂದು ಗಂಗಾಧರನಿಗೆ ವಿಶೇಷ ಪೂಜೆ ಆಗಿದೆ. ನಂತರ ದರ್ಬೆಯಿಂದ ಬಂದನ ಮಾಡ್ತೀವಿ. ನಾಳೆ ಬೆಳ್ಳಗ್ಗೆಯವರೆಗೂ ದೇವಸ್ಥಾನ ತೆರೆಯವುದಿಲ್ಲ. ನಾಳೆ ಸೂರ್ಯ ಉದಯಕ್ಕು ಮೊದಲೇ ದೇವಸ್ಥಾನವನ್ನ ಶುದ್ದಿಗೊಳಿಸಿ. ನಾಳೆ ಬೆಳ್ಳಗ್ಗೆ ವಿಶೇಷ ಪೂಜೆಯನ್ನ ಮಾಡಲಾಗುತ್ತೆ ಎಂದು ಗವಿ ಗಂಗಾಧರ ದೇವಸ್ಥಾನದ ಮುಖ್ಯ ಅರ್ಚಕರಾದ ಸೋಮ ಸುಂದರ್ ದೀಕ್ಷಿತ್ ಹೇಳಿದರು.
ರಾಯಚೂರು: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಮದ್ಯಾಹ್ನ 12 ಗಂಟೆ ಬಳಿಕ ಪೂಜೆ ಪುರಸ್ಕಾರಗಳು ಬಂದ್ ಆಗಲಿವೆ. ಆದರೆ ರಾಯರ ದರ್ಶನಕ್ಕೆ ಭಕ್ತರಿಗೆ ಎಂದಿನಂತೆ ಅವಕಾಶ ಇರಲಿದೆ. ಇಂದು ಸಂಜೆ ವೇಳೆ ನಡೆಯಬೇಕಿದ್ದ ಮಹಾ ಮಂಗಳಾರತಿ ಹಾಗೂ ರಥೋತ್ಸವದ ಕಾರ್ಯಕ್ರಮಗಳು ಮದ್ಯಾಹ್ನದೊಳಗೆ ಪೂರ್ಣಗೊಳ್ಳಲಿವೆ. ಭಕ್ತರ ವಿಶೇಷ ಸೇವಾ ಕಾರ್ಯಗಳು ಬಂದ್ ಆಗಲಿವೆ. ಕೇವಲ ರಾಯರ ದರ್ಶನಕ್ಕೆ ಎಂದಿನಂತೆ ಅವಕಾಶ ನೀಡಲಾಗುತ್ತದೆ. ಚಂದ್ರಗ್ರಹಣ ಹಿನ್ನೆಲೆ ಅನ್ನಪ್ರಸಾದವೂ ಇಂದು ಸ್ಥಗಿತಗೊಳಿಸಲಾಗಿದೆ.
ಚಿಕ್ಕಬಳ್ಳಾಪುರ: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಗ್ರಾಮದಲ್ಲಿ ಇರುವ ಐತಿಹಾಸ ಪ್ರಸಿದ್ಧ ಶ್ರೀ ಬೋಗನಂದೀಶ್ವರ ದೇವಸ್ಥಾನವನ್ನು ಮಧ್ಯಾಹ್ನ 3 ಗಂಟೆಗೆ ಬಂದ್ ಮಾಡಲಾಗುತ್ತದೆ. ದೇವರಿಗೆ ದರ್ಬೆ ಬಂಧನ ವಿಧಿಸಿ ಬಂದ್ ಮಾಡಲಾಗುತ್ತದೆ.
ಬೆಂಗಳೂರು: ನಗರದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಹುಣ್ಣಿಮೆ ನಿಮಿತ್ತ ಬನಶಂಕರಿ ದೇವಿಗೆ ವಿಶೇಷ ಶಾಂತಿ ಪೂಜೆ ನೆರವೇರಲಿದೆ. ಶಾಂತಿ ಪೂಜೆಯ ನಂತರ ಮಧ್ಯಾಹ್ನ 3 ಗಂಟೆಗೆ ಅಮ್ಮನವರ ದೇವಸ್ಥಾನ ಬಂದ್ ಆಗಲಿದೆ. ಶನಿವಾರ ಸಂಜೆ ಬನಶಂಕರಿ ದೇವಿ ದರ್ಶನಕ್ಕೆ ಅವಕಾಶವಿಲ್ಲ. ಮಧ್ಯಾಹ್ನ 3 ಗಂಟೆಗೆ ಬಂದ್ ಆದರೆ ಭಾನುವಾರ ಬೆಳಗ್ಗೆ 4 ಗಂಟೆಗೆ ಪುನಃ ತೆರೆಯುತ್ತದೆ. ಕಾಡು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಜೆ 6 ಗಂಟೆಗೆ ನಂತರ ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿದೆ.
ಬೆಂಗಳೂರು: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ಎಲ್ಲ ದೇವಸ್ಥಾನಗಳಲ್ಲಿ ಬೆಳ್ಳಗ್ಗೆಯೇ ವಿಶೇಷ ಪೂಜೆ ಆರಂಭವಾಗಿದೆ. ನಗರದ ಗವಿಗಂಗಾಧರ ದೇವಸ್ಥಾನದಲ್ಲಿ ಬೆಳ್ಳಗ್ಗೆ 6 ಗಂಟೆಯಿಂದಲೇ ಹೋಮ ಆರಂಭವಾಗಿದ್ದು
ಪಂಚಾಭಿಷೇಕ ಮಾಡಲಾಗಿದೆ. 11 ಗಂಟೆಯವರೆಗೂ ಮಾತ್ರ ಗವಿಗಂಗಾಧರ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಇದ್ದು, 11 ಗಂಟೆ ನಂತರ ದೇವಸ್ಥಾನ ಬಂದ್ ಮಾಡಲಾಗುತ್ತೆ. ರವಿವಾರ ಬೆಳ್ಳಗ್ಗೆ 9 ಗಂಟೆಯವರೆಗೂ ದೇವಸ್ಥಾನ ಇರಲಿದ್ದು, ಇಂದು ಬೆಳಿಗ್ಗೆ 11 ಗಂಟೆಯವರೆಗೂ ಮಾತ್ರ ದೇವರ ದರ್ಶನಕ್ಕೆ ಅವಾಕಾಶ ಮಾಡಿಕೊಡಲಾಗಿದೆ.
ಇಂದು ಚಂದ್ರಗ್ರಹಣ ಹಿನ್ನೆಲೆ ಸಂಜೆ 6 ಗಂಟೆಯಿಂದ ಚಾಮುಂಡಿ ಬೆಟ್ಟ ಬಂದ್ ಆಗಲಿದೆ. ಭಕ್ತರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಪೂಜಾ ವಿಧಿ ವಿಧಾನಗಳು ಎಂದಿನಂತೆ ಮುಂದುವರಿಯಲಿವೆ. ಚಂದ್ರಗ್ರಹಣ ಸ್ಪರ್ಶ ಹಾಗೂ ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ಅಭಿಷೇಕ ನಡೆಯಲಿದೆ. ಇಂದು ತಾಯಿ ಚಾಮುಂಡೇಶ್ವರಿ ತೆಪ್ಪೋತ್ಸವ ರಾತ್ರಿ ಬದಲು, ಸಂಜೆ 5 ಗಂಟೆಗೆ ನಡೆಯಲಿದೆ.
Published On - 8:05 am, Sat, 28 October 23