Lunar Eclipse 2023: ವರ್ಷದ ಕೊನೆಯ ಚಂದ್ರ ಗ್ರಹಣ ಇಂದು, ಎಲ್ಲೆಲ್ಲಿ ಗೋಚರಿಸುತ್ತದೆ? ಯಾವ ರಾಶಿಗೆ ಎಫೆಕ್ಟ್?

ಇಂದು ರಾತ್ರಿ 11.30ರಿಂದ ಚಂದ್ರಗ್ರಹಣ ಆರಂಭವಾಗಲಿದೆ. ಇಂದು ಮಧ್ಯರಾತ್ರಿ ವೇಳೆಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ರಾತ್ರಿ 11.30ಕ್ಕೆ ಆರಂಭವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಚಂದ್ರಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸಿಬಹುದಾಗಿದೆ.

Lunar Eclipse 2023: ವರ್ಷದ ಕೊನೆಯ ಚಂದ್ರ ಗ್ರಹಣ ಇಂದು, ಎಲ್ಲೆಲ್ಲಿ ಗೋಚರಿಸುತ್ತದೆ? ಯಾವ ರಾಶಿಗೆ ಎಫೆಕ್ಟ್?
ಚಂದ್ರ ಗ್ರಹಣ
Follow us
TV9 Web
| Updated By: ಆಯೇಷಾ ಬಾನು

Updated on: Oct 28, 2023 | 7:44 AM

ಬೆಂಗಳೂರು, ಅ.28: 14 ದಿನಗಳ ಹಿಂದಷ್ಟೇ ಸೂರ್ಯಗ್ರಹಣ ಸಂಭವಿಸಿತ್ತು (Solar Eclipse). ಆದ್ರೆ ಸೂರ್ಯಗ್ರಹಣ ಭಾರತದಲ್ಲಿ ಗೋಚರವಾಗಿರಲಿಲ್ಲ. ಇದೀಗ ಸೂರ್ಯಗ್ರಹಣ ಸಂಭವಿಸಿದ ಎರಡು ವಾರಗಳ ಬೆನ್ನಲ್ಲೇ ಚಂದ್ರಗ್ರಹಣ ಸಂಭವಿಸುತ್ತಿದೆ (Lunar Eclipse 2023). ಈ ವರ್ಷದ ಎರಡನೇ ಮತ್ತು ಕೊನೆಯ ಚಂಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. 30 ವರ್ಷದ ಬಳಿಕ ಶರದ್ ಹುಣ್ಣಿಮೆಯಂದೇ ಚಂದ್ರಗ್ರಹಣಕ್ಕೆ ಬಾನು ಸಾಕ್ಷಿಯಾಗಲಿದೆ. ಇಂದು ಅಂದ್ರೆ ಅ.28 ಮತ್ತು 29 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ.

ಚಂದ್ರ ಗ್ರಹಣ ಸಮಯ

ಅಕ್ಟೋಬರ್ 28ರ ರಾತ್ರಿ 11.31ಕ್ಕೆ ಚಂದ್ರಗ್ರಹಣ ಆರಂಭ ಅಕ್ಟೋಬರ್‌ 29ರ ಮಧ್ಯರಾತ್ರಿ 3.36ಕ್ಕೆ ಚಂದ್ರಗ್ರಹಣ ಅಂತ್ಯ

ಈ ಭಾರಿ ಭಾರತದಲ್ಲಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ

ಇಂದು ರಾತ್ರಿ 11.30ರಿಂದ ಚಂದ್ರಗ್ರಹಣ ಆರಂಭವಾಗಲಿದೆ. ಇಂದು ಮಧ್ಯರಾತ್ರಿ ವೇಳೆಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ರಾತ್ರಿ 11.30ಕ್ಕೆ ಆರಂಭವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಚಂದ್ರಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸಿಬಹುದಾಗಿದೆ. ಇನ್ನೂ ಇಂದು ಸಂಭವಿಸುತ್ತಿರುವ ರಾಹುಗ್ರಸ್ತ ಚಂದ್ರಗ್ರಹಣದ ಸಮಯವಾದ್ರೂ ಏನು ಅಂದ್ರೆ.

ಗ್ರಹಣ ಗೋಚರ ಸಮಯ

ಗ್ರಹಣ ಸ್ಪರ್ಶಕಾಲ – ರಾತ್ರಿ 11.30 ಗ್ರಹಣ ಮಧ್ಯಕಾಲ – ಮಧ್ಯರಾತ್ರಿ 1.42 ಗ್ರಹಣ ಮೋಕ್ಷಕಾಲ – ಬೆಳಗಿನ ಜಾವ 3.30

ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ

ಭಾರತ, ಬೆಲ್ಜಿಯಂ, ಗ್ರೀಸ್‌, ಫಿನ್‌ಲ್ಯಾಂಡ್‌, ಪೋರ್ಚುಗಲ್‌, ಥೈಲ್ಯಾಂಡ್‌, ಹಂಗೇರಿ, ಈಜಿಪ್ಟ್‌, ಟರ್ಕಿ, ಇಂಡೋನೇಷ್ಯಾ, ಇಟಲಿ, ಮಯನ್ಮಾರ್‌, ಸ್ಪೇನ್‌ ಸೇರಿ ಹಲವು ದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.

ಸೂರ್ಯ ಚಂದ್ರನ ನಡುವೆ ಬರಲಿದೆ ಭೂಮಿ

ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗುತ್ತಾನೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಗೋಲ್ಡನ್ ರಿಂಗ್‌ನಂತೆ ಚಂದ್ರ ಕಾಣಿಸುತ್ತದೆ.

ಇದನ್ನೂ ಓದಿ: Lunar Eclipse 2023: ಚಂದ್ರ ಗ್ರಹಣದ ಸಮಯದಲ್ಲಿ ಈ ರಾಶಿಯವರು ಲಾಭ ಪಡೆಯುತ್ತಾರೆ

ತಿರುಪತಿ ಸೇರಿ ಹಲವು ದೇವಾಲಯಗಳಲ್ಲಿ ದರ್ಶನ ಬಂದ್

ಚಂದ್ರಗ್ರಹಣ ಇರುವುದರಿಂದ ತಿರುಪತಿ ತಿಮ್ಮಪ್ಪನ ದರ್ಶನವನ್ನು 8 ಗಂಟೆಗಳ ಕಾಲ ಬಂದ್ ಮಾಡಲಾಗಿದೆ. ಇಂದು ಸಂಜೆ 7ರಿಂದ ನಾಳೆ ಬೆಳಗಿನ ಜಾವ 3.15ರವರೆಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ಕರ್ನಾಟಕದಲ್ಲೂ ಪ್ರಮುಖ ದೇವಾಲಯಗಳು ಬಂದ್ ಆಗಿರಲಿವೆ. ಸಂಜೆ 6 ಗಂಟೆ ಬಳಿಕ ಚಾಮುಂಡಿ ಬೆಟ್ಟದಲ್ಲಿ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಉಡುಪಿಯಲ್ಲಿ ಸಂಜೆ 4 ಗಂಟೆ ಬಳಿಕ ದೇವರ ದರ್ಶನ ಬಂದ್ ಆಗಿರಲಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಂಜೆ 6.30ರ ಬಳಿಕ ದರ್ಶನಕ್ಕೆ ಅವಕಾಶವಿಲ್ಲ. ಸಂಜೆ 6.30ರ ಬಳಿಕ ಮಡಿಕೇರಿಯ ಓಂಕಾರೇಶ್ವರ ದೇಗುಲ ಬಂದ್ ಆಗಿರಲಿದೆ. ಗ್ರಹಣದ ಸಮಯದಲ್ಲೇ ಗೋಕರ್ಣದಲ್ಲಿ ಆತ್ಮಲಿಂಗ ಸ್ಪರ್ಶಕ್ಕೆ ಅವಕಾಶ ನೀಡಲಾಗಿದೆ. ಭಕ್ತರಿಗೆ ಎಂದಿನಂತೆ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇನ್ನು ಗ್ರಹಣದ ಬಳಿಕ ದೇವಸ್ಥಾನವನ್ನು ಸ್ವಚ್ಚಗೊಳಿಸಲಾಗುತ್ತದೆ. ನಂತರ ಭಕ್ತರು ದೇವರ ದರ್ಶನ ಮಾಡಬಹುದಾಗಿದೆ.

ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಸಂಭವಿಸ್ತಿರುವ ಚಂದ್ರಗ್ರಹಣ

ಜ್ಯೋತಿಷ್ಯ ವಲಯದ ಪ್ರಕಾರ ಈ ಗ್ರಹಣವು ಮೇಷ ರಾಶಿ ಅಶ್ವಿನಿ ನಕ್ಷತ್ರದಲ್ಲಿ ಇಂದು ಸಂಭವಿಸುತ್ತಿದೆ. 1947, 1984 ರಲ್ಲಿ ಇಂತಹ ಗ್ರಹಣ ಸಂಭವಿಸಿತ್ತು. 39 ವರ್ಷಗಳ ನಂತರ ಇದೀಗ ಅಂತಹುದ್ದೇ ಸಂಯೋಗದಲ್ಲಿ ಚಂದ್ರಗ್ರಹಣವು ಸಂಭವಿಸುತ್ತಿದೆ. ಈ ಚಂದ್ರ ಗ್ರಹಣವು ಪಾರ್ಶ್ವ ಅಥವಾ ಪಾಕ್ಷಿಕ ಚಂದ್ರ ಗ್ರಹಣವಾಗಿದ್ದು, ಇದನ್ನು ರಾಹು ಗ್ರಸ್ತ ಚಂದ್ರಗ್ರಹಣ ಎಂದೂ ಕರೆಯಲಾಗುತ್ತದೆ. ಗ್ರಹಣಗಳು ನೈಸರ್ಗಿಕ ವಿಕೋಪಗಳನ್ನು, ಸಮಸ್ಯೆಗಳನ್ನು ಸೃಷ್ಟಿ ಮಾಡಬಹುದೇ ಹೊರತು ಮನುಷ್ಯನ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಆದರೆ, ಮಾನಸಿಕ ಸಮಸ್ಯೆಗಳನ್ನು ಅಥವಾ ಮಾನಸಿಕ ಖಿನ್ನತೆಯನ್ನು ಅನುಭವಿಸುತ್ತಿರುವವರ ಮೇಲೆ ಇದರ ಪ್ರಭಾವ ಉಂಟಾಗುತ್ತದೆ ಎನ್ನಲಾಗಿದೆ. ದೇಶದ ರಾಜಕೀಯ ರಂಗದಲ್ಲಿ ಕೋಲಾಹಲ ಉಂಟಾಗಲಿದೆ. ಕಲಹವು ಸೃಷ್ಠಿಯಾಗಲಿದೆ, ಗಲಭೆಗಳು ಭುಗಿಲೇಳುತ್ತವೆಂಬ ಲೆಕ್ಕಾಚಾರವು ಜ್ಯೋತಿಷ್ಯವಲಯದ್ದಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ