Karnataka By Election Results 2021 LIVE: ಕರ್ನಾಟಕ ಉಪಚುನಾವಣಾ ಕದನ: ರೋಚಕ ಗೆಲುವು ಕಂಡ ಬಿಜೆಪಿಯ ಮಂಗಳಾ ಅಂಗಡಿ

| Updated By: guruganesh bhat

Updated on: May 02, 2021 | 9:07 PM

Karnataka ByPoll Results 2021 LIVE Counting and Updates: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ನಡುವೆಯೇ ಉಪಚುನಾವಣೆ ನಡೆದಿದೆ. ಇಂದು ಯಾರೇ ಗೆದ್ದರೂ ಸಂಭ್ರಮಿಸುವ ವಾತಾವರಣ ಇಲ್ಲವಾದರೂ ರಾಜಕೀಯದ ಚದುರಂಗದಾಟದಲ್ಲಿ ಯಾರು ಉಳಿಯಲಿದ್ದಾರೆ, ಯಾರು ಉರುಳಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಗರಿಗೆದರಿದೆ.

Karnataka By Election Results 2021 LIVE: ಕರ್ನಾಟಕ ಉಪಚುನಾವಣಾ ಕದನ: ರೋಚಕ ಗೆಲುವು ಕಂಡ ಬಿಜೆಪಿಯ ಮಂಗಳಾ ಅಂಗಡಿ
ಮಮತಾ ಅಂಗಡಿ ಮತ್ತು ಸತೀಶ್ ಜಾರಕಿಹೊಳಿ

LIVE NEWS & UPDATES

  • 02 May 2021 09:07 PM (IST)

    ಫಲಿತಾಂಶ ವಿಶ್ಲೇಷಣೆ: ಬಿಜೆಪಿಗೆ ಅಷ್ಟೇನೂ ಖುಷಿಕೊಟ್ಟ ಫಲಿತಾಂಶ ಇದಲ್ಲ

    ಪ್ರಬಲ ಲಿಂಗಾಯತ ಸಮುದಾಯ ಇರುವ ಉತ್ತರ ಕರ್ನಾಟಕದಲ್ಲಿ ನಿರಾಯಾಸವಾಗಿ ಗೆಲ್ಲುತ್ತೇವೆ ಎಂದು ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಬಿಜೆಪಿ ಒಳಗೊಳಗೆ ಬೆವರುವಂತೆ ಆಗಿತ್ತು. ಎರಡು ವರ್ಷದ ಹಿಂದೆ ನಡೆದಿದ್ದ ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಸುರೇಶ ಅಂಗಡಿ 3.50 ಲಕ್ಷ ಅಂತರದಿಂದ ಗೆದ್ದಿದ್ದರು. ಈ ಬಾರಿ ಆ ಅಂತರ ಬರೀ ಎರಡುವರೆ ಸಾವರಕ್ಕೆ ಇಳಿದಿದ್ದು ಬಹಳ ವಿಶೇಷ. ಹಾಗೆ ನೋಡಿದರೆ ಆಡಳಿತಾರೂಢ ಬಿಜೆಪಿಗೆ ಭಾರಿ ನಿರಾಸೆ ತರುವ ಫಲಿತಾಂಶ.

  • 02 May 2021 08:59 PM (IST)

    ಸುರೇಶ್ ಅಂಗಡಿಯವರು ಹಾಕಿಕೊಂಡ ಯೋಜನೆಗಳನ್ನು ಮುಂದುವರೆಸುತ್ತೇನೆ; ಮಂಗಳಾ ಅಂಗಡಿ

    ಸುರೇಶ್ ಅಂಗಡಿಯವರ ಯೋಜನೆಗಳನ್ನು ಮುಂದುವರೆಸುತ್ತೇನೆ. ಕ್ಷೇತ್ರದಲ್ಲಿ ಸುರೇಶ್ ಅಂಗಡಿ ಅವರಂತೆಯೇ ಕೆಲಸ ಮಾಡುತ್ತೇನೆ.  ಪ್ರಧಾನಿ ನರೇಂದ್ರ ಮೋದಿ ಸೇರಿ ಎಲ್ಲಾ ಬಿಜೆಪಿ ನಾಯಕರು, ಮತದಾರರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ವಿಜೇತ ಅಭ್ಯರ್ಥಿ ಮಂಗಳಾ ಅಂಗಡಿ ತಿಳಿಸಿದರು. 89ನೇ ಸುತ್ತಿನ ಮತ ಎಣಿಕೆಯ ನಂತರ ಬಿಜೆಪಿ ಗೆಲುವು 3986 ಮತಗಳಿಂದ ಗೆಲುವು ಪಡೆದಿದ್ದಾರೆ.


  • 02 May 2021 07:22 PM (IST)

    3,986 ಮತಗಳ ರೋಚಕ ಗೆಲುವು ಕಂಡ ಮಂಗಳಾ ಅಂಗಡಿ

    ಬೆಳಗಾವಿ ಬೈಎಲೆಕ್ಷನ್​ನಲ್ಲಿ ಬಿಜೆಪಿ​ ಅಭ್ಯರ್ಥಿ ಮಂಗಳಾ ಅಂಗಡಿ 3,986 ಮತಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದ್ದಾರೆ. 4,36,868 ಮತಗಳನ್ನು ಪಡೆದಿರುವ ಮಂಗಳಾ ಅಂಗಡಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ್ದು, ಸತೀಶ್ ಜಾರಕಿಹೊಳಿ 4,32,882 ಮತಗಳನ್ನು ಪಡೆದಿದ್ದಾರೆ. ಎಂಇಎಸ್​ಗೆ 1,16,923 ಮತಗಳು ಚಲಾವಣೆಯಾಗಿದ್ದು, ಭರ್ಜರಿ ಪೈಪೋಟಿ ನೀಡಿದೆ.

  • 02 May 2021 05:48 PM (IST)

    ಕಾರ್ತಿಕ್ ತ್ಯಾಗಿ ಉತ್ತಮ ಬೌಲಿಂಗ್

    ಹೈದರಾಬಾದ್ 221 ರನ್ಗಳ ದೊಡ್ಡ ರನ್ ಅನ್ನು ಬೆನ್ನಟ್ಟಬೇಕಾಗಿದೆ. ಆದರೆ ಅದರ ಆರಂಭವು ಒಂದೇ ಆಗಿಲ್ಲ. ಮೊದಲ 3 ಓವರ್‌ಗಳಲ್ಲಿ ತಂಡದ ರನ್ ದರ ಕೂಡ 6 ರನ್ ಆಗಿಲ್ಲ ಕೇವಲ 14 ರನ್ ಗಳಿಸಿದ್ದಾರೆ. ರಾಜಸ್ಥಾನದ ಬೌಲರ್, ವಿಶೇಷವಾಗಿ ಕಾರ್ತಿಕ್ ತ್ಯಾಗಿ, ಹೊಸ ಆರಂಭಿಕ ಜೋಡಿ ಹೈದರಾಬಾದ್ ಪರ ಆಡಲು ಕಷ್ಟಪಡುತ್ತಿದ್ದಾರೆ.

  • 02 May 2021 05:45 PM (IST)

    ಸುದ್ದಿಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ

    ಬಿಜೆಪಿಯವರು ಹೇಳಿಕೊಂಡಂತೆ ಜನರ ವಿಶ್ವಾಸ ಗೆದ್ದಿಲ್ಲ.ಜನರ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ಪರ ಇರಲಿ ವಿರೋಧ ಇರಲಿ ಜನರ ತೀರ್ಪನ್ನು ಒಪ್ಪಬೇಕಾಗುತ್ತದೆ.
    ಬಂಗಾಳದಲ್ಲಿ ಒಂಟಿ ಹೆಣ್ಣು ಮಗಳ ವಿರುದ್ದ ಮೋದಿ, ಶಾ, ನಡ್ಡಾ, ಎಲ್ಲಾ ಸಮರ‌ ಸಾರಿದ್ದರು. ಹಣ ತೋಳ್ಬಲದ ಮೂಲಕ ಟಿಎಂಸಿ ನಾಯಕರನ್ನು ಎಳೆದುಕೊಂಡಿದ್ದರು.ಆದರೂ ಪಶ್ಚಿಮ ಬಂಗಾಳದ ಜನರು ಬಿಜೆಪಿ ಕುತಂತ್ರ ಧಿಕ್ಕರಿಸಿ ಟಿಎಂಸಿಗೆ ಮೂರನೇ ಬಾರಿಗೆ ಆಶೀರ್ವಾದ ಮಾಡಿದ್ದಾರೆ. ಇದು ಅದು ಐತಿಹಾಸಿಕ ಗೆಲುವು ಎಂದು ಕರ್ನಾಟಕದ ವಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹೇಳಿದರು.


  • 02 May 2021 05:30 PM (IST)

    ಸತೀಶ್ ಜಾರಕಿಹೊಳಿ ಹಿಂದಿಕ್ಕಿ 2692 ಮತಗಳ ಮುನ್ನಡೆ ಸಾಧಿಸಿದ ಮಂಗಳಾ ಅಂಗಡಿ

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ತೀವ್ರ ರೋಚಕತೆ ಹುಟ್ಟಿಸುತ್ತಿದೆ. ಈವರೆಗೆ ಮುನ್ನಡೆ ಗಳಿಸದ್ದ ಕಾಂಗ್ರೆಸ್​ನ ಸತೀಶ್ ಜಾರಕಿಹೊಳಿ ಅವರನ್ನು ಹಿಂದಿಕ್ಕಿ​ ಬಿಜೆಪಿ
    ಅಭ್ಯರ್ಥಿ ಮಂಗಳಾ ಅಂಗಡಿ 2692 ಮತಗಳ ಮುನ್ನಡೆ ಸಾಧಿಸಿದ್ದಾರೆ. 83 ನೇ ಸುತ್ತಿನ ಮತ ಎಣಿಕೆ ನಡೆದಿದ್ದು ಅದರಲ್ಲಿ ಬಿಜೆಪಿ 4,21,076 ಮತಗಳಿಸಿದ್ದರೆ, ಕಾಂಗ್ರೆಸ್ 4,18,384 ಮತಗಳನ್ನು ಗಳಿಸಿದೆ.

  • 02 May 2021 05:09 PM (IST)

    ಸತೀಶ್ ಜಾರಕಿಹೊಳಿಗೆ 1705 ಮತಗಳ ಮುನ್ನಡೆ!

    ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಎಂಥವರನ್ನೂ ರೋಚಕತೆಯ ತುತ್ತತುದಿಗೆ ಕೊಂಡೊಯ್ಯುತ್ತಿದೆ. ಬಿಜೆಪಿಯ ಮಂಗಳಾ ಅಂಗಡಿ ಮತ್ತು ಕಾಂಗ್ರೆಸ್​ನ ಸತೀಶ್ ಜಾರಕಿಹೊಳಿ ನಡುವೆ ತೀವ್ರ ಹಣಾಹಣಿ ನಡೆಯುತ್ತಿದೆ, 78 ಸುತ್ತಿನ ಅಂತ್ಯಕ್ಕೆ 1705 ಮತಗಳೊಂದಿಗೆ ಕಾಂಗ್ರೆಸ್ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಬಿಜೆಪಿ 4,11,657 ಮತಗಳು,
    ಕಾಂಗ್ರೆಸ್ 4,13,362 ಮತಗಳನ್ನು ಪಡೆದುಕೊಂಡಿದ್ದಾರೆ. ಫಲಿತಾಂಶ ಅಂತಿಮಗೊಳ್ಳಲು ಇನ್ನೇನು ಕೆಲವೇ ಕ್ಷಣಗಳಿವೆ.

  • 02 May 2021 04:19 PM (IST)

    ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಮುನ್ನಡೆ

    ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್‌ಗೆ ಮುನ್ನಡೆ ದೊರೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ರಾಮದುರ್ಗ ಕ್ಷೇತ್ರದಲ್ಲಿ ಮುನ್ನಡೆ ದೊರೆತಿದೆ. ರಾಮದುರ್ಗದಲ್ಲಿ ಬಿಜೆಪಿ 56,909 ಮತ ಪಡೆದಿದೆ.ಕಾಂಗ್ರೆಸ್ 58,428 ಮತಗಳನ್ನು ಪಡೆದಿದೆ. ಈಮೂಲಕ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ರಾಮದುರ್ಗದಲ್ಲಿ 1,519 ಮತ ಮುನ್ನಡೆ ಪಡೆದಂತಾಗಿದೆ. ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಪ್ರತಿನಿಧಿಸುವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾದಂತಾಗಿದೆ.

  • 02 May 2021 04:14 PM (IST)

    ಬಸವಕಲ್ಯಾಣ ಮತದಾರರಿಗೆ ಧನ್ಯವಾದ ತಿಳಿಸಿದ ಎಚ್.ಡಿ.ಕುಮಾರಸ್ವಾಮಿ

    ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಸವಕಲ್ಯಾಣದ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಗಳ ಗೆಲುವಿನ ಕುರಿತೂ ಅವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

  • 02 May 2021 03:54 PM (IST)

    ಬೆಳಗಾವಿ: ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್​ಗೆ ಮುನ್ನಡೆ

    ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿಗೆ ಮುನ್ನಡೆ ದೊರೆಯುತ್ತಿದೆ. ಸವದತ್ತಿ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು ಸತೀಶ್ ಜಾರಕಿಹೊಳಿಗೆ ಮುನ್ನಡೆ ಲಭಿಸಿದೆ. ಬಿಜೆಪಿ ಶಾಸಕ ಡೆಪ್ಯೂಟಿ ಸ್ಪೀಕರ್ ಆನಂದ ಮಾಮನಿ ಕ್ಷೇತ್ರದಲ್ಲಿ ಬಿಜೆಪಿಗೆ ಮುಖಭಂಗವಾದಂತಾಗಿದೆ. ಈವರೆಗೆ ಬಿಜೆಪಿ 46,826 ಮತ, ಕಾಂಗ್ರೆಸ್ 63,427 ಮತಗಳನ್ನು ಪಡೆದಿದೆ. 16,601 ಮತಗಳ ಮುನ್ನಡೆಯೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆಯಲ್ಲಿದ್ದಾರೆ.

  • 02 May 2021 03:31 PM (IST)

    ಬೆಳಗಾವಿ 64ನೇ ಸುತ್ತಿನಲ್ಲಿ ಕಾಂಗ್ರೆಸ್​ಗೆ ಮುನ್ನಡೆ

    ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸಿ, ಗೆಲುವಿನತ್ತ ಹೆಜ್ಜೆ ಹಾಕಿದ್ದಾರೆ.

  • 02 May 2021 03:08 PM (IST)

    ಕಾಂಗ್ರೆಸ್ ಕಾರ್ಯಕರ್ತರು ಸಂಯಮದಿಂದಿರಿ; ಸಿದ್ದರಾಮಯ್ಯ ಮನವಿ

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ 30,641 ಮತಗಳ ಅಂತರದಿಂದ ಗೆದ್ದ ಬಸನಗೌಡ ತುರವಿಹಾಳ ಅವರಿಗೆ ಕಾಂಗ್ರೆಸ್ ಮುಖಂಡ, ವಿಪಕ್ಷನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್​ಗಳ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ವಿಜಯೋತ್ಸವ ನಡೆಸದೇ ಸಂಯಮದಿಂದ ವರ್ತಿಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

  • 02 May 2021 03:02 PM (IST)

    ಬೆಳಗಾವಿಯಲ್ಲಿ 55ನೇ ಸುತ್ತಿನಲ್ಲೂ ಕಾಂಗ್ರೆಸ್​ಗೆ 9,975 ಮತಗಳ ಮುನ್ನಡೆ

    ಬೆಳಗಾವಿ ಲೋಕಸಭಾ ಉಪ ಚುನಾವಣೆಯ 55ನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಈ ಸುತ್ತಿನಲ್ಲೂ ಕಾಂಗ್ರೆಸ್ ಮುನ್ನಡೆ ಗಳಿಸಿದ್ದು 9,975 ಮತಗಳಿಂದ ಬಿಜೆಪಿಯ ಮಂಗಳಾ ಅಂಗಡಿ ಅವರನ್ನು ಹಿಂದಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಈವರೆಗೆ 28,2077 ಮತಗಳನ್ನು ಪಡೆದಿದ್ದಾರೆ.

  • 02 May 2021 02:39 PM (IST)

    ಗೆಲುವು ಸಾಧಿಸಿದ ಬಸನಗೌಡ ತುರವಿಹಾಳಗೆ ಅಭಿನಂದಿಸಿದ ಸಿದ್ದರಾಮಯ್ಯ

    ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್​ನ ಬಸನಗೌಡ ತುರವಿಹಾಳ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಶುಭಾಶಯ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಮತದಾರರಿಗೂ ಧನ್ಯವಾದ ತಿಳಿಸಿದ್ದಾರೆ.

  • 02 May 2021 02:31 PM (IST)

    ಕಾಂಗ್ರೆಸ್​ಗೆ ಬೆಳಗಾವಿಯಲ್ಲಿ 9,542 ಮತಗಳ ಮುನ್ನಡೆ

    ಬೆಳಗಾವಿಯಲ್ಲಿ 51ನೇ ಸುತ್ತಿನ ಮತ ಎಣಿಕೆ ಆರಂಭವಾಗಿದೆ. ಕಾಂಗ್ರೆಸ್ 9,542 ಮತಗಳ ಮುನ್ನಡೆ ಸಾಧಿಸಿದೆ. ಬಿಜೆಪಿ 24,8951, ಕಾಂಗ್ರೆಸ್ 25,8493 ಮತಗಳನ್ನು ಪಡೆದಿದೆ. ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಹುಟ್ಟಿಸುತ್ತಿದೆ.

  • 02 May 2021 02:20 PM (IST)

    ಮಸ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಭರ್ಜರಿ ಗೆಲುವು

    ರಾಯಚೂರಿನ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ 86,222 ಮತಗಳಿಸುವ ಮೂಲಕ​ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಪ್ರತಾಪ್​ ಗೌಡ ಪಾಟೀಲ್ 55,581 ಮತ ಗಳಿಸಿದ್ದಾರೆ.  ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ 30,641 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • 02 May 2021 02:04 PM (IST)

    ಬೆಳಗಾವಿ 50ನೇ ಸುತ್ತಿ​ನಲ್ಲಿ ಕಾಂಗ್ರೆಸ್​ ಮುನ್ನಡೆ

    ಬೆಳಗಾವಿ ಲೋಕಸಭಾ ಕ್ಷೇತ್ರ ಉಪಚುನಾವಣೆಯ ಮತ ಎಣಿಕೆಯ 50ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 10025 ಮತಗಳಿಂದ ಕಾಂಗ್ರೆಸ್ ಮುನ್ನಡೆ ಕಾದಿರಿಸಕೊಂಡಿದ್ದು, 2,52,104 ಮತ ಗಳಿಸಿದೆ. ಬಿಜೆಪಿ 2,42,079 ಮತಗಳೊಂದಿಗೆ ಹಿಂದುಳಿದಿದೆ. ಬಿಜೆಪಿ ಶಾಸಕ‌ ಬಾಲಚಂದ್ರ ಜಾರಕಿಹೊಳಿ‌ ಅರಭಾವಿ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ 5589 ಮತಗಳಿಂದ ಮುನ್ನಡೆ ಸಾಧಿಸಿದೆ. ಇಲ್ಲಿ ಬಿಜೆಪಿ 31,106 ಮತ ಗಳಿಸಿದ್ದರೆ, ಕಾಂಗ್ರೆಸ್ 36,695 ಮತ ಪಡೆದಿದೆ.

  • 02 May 2021 01:55 PM (IST)

    ಬೆಳಗಾವಿಯಲ್ಲಿ ಬಿಜೆಪಿಗೆ ಎಂಇಎಸ್​ ಕಂಟಕ

    ಬೆಳಗಾವಿಯಲ್ಲಿ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಬಿಜೆಪಿಗೆ ಎಂಇಎಸ್​ ಕಂಟಕವಾಯ್ತಾ ಎಂಬ ಅನುಮಾನ ಕಾಡಲಾರಂಭಿಸಿದೆ. ಎಂಇಎಸ್ ಅಭ್ಯರ್ಥಿ ಶುಭಂ ಶಳಕೆಗೆ 81924 ಮತ ಲಭಿಸಿದ್ದು ಇದು ಬಿಜೆಪಿಯ ಹಿನ್ನೆಡೆಗೆ ಕಾರಣವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

  • 02 May 2021 01:42 PM (IST)

    ಕೋಮುವಾದಿಗಳ ಕುತಂತ್ರದಿಂದ ಬಸವಕಲ್ಯಾಣದಲ್ಲಿ ಹಿನ್ನಡೆ: ಯತೀಂದ್ರ ಸಿದ್ದರಾಮಯ್ಯ

    ಬಸವಕಲ್ಯಾಣ ಕ್ಷೇತ್ರದ ಸೋಲಿನ ಬಗ್ಗೆ ಅಸಮಾಧಾನ ಹೊರಹಾಕಿರುವ ಯತೀಂದ್ರ ಸಿದ್ದರಾಮಯ್ಯ, ಕೋಮುವಾದಿಗಳ ಕುತಂತ್ರದಿಂದ ಕಾಂಗ್ರೆಸ್​ ಬಸವಕಲ್ಯಾಣದಲ್ಲಿ ಸೋತಿದೆ ಎಂದಿದ್ದಾರೆ.

  • 02 May 2021 01:40 PM (IST)

    ಮಸ್ಕಿ ಕ್ಷೇತ್ರದ ಜನರಿಗೆ ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ ಯತೀಂದ್ರ ಸಿದ್ದರಾಮಯ್ಯ

    ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಈ ಗೆಲುವಿನಿಂದ ಸಂತಸಗೊಂಡಿರುವ ಕಾಂಗ್ರೆಸ್ ನಾಯಕರು ಕ್ಷೇತ್ರದ ಜನರಿಗೆ ಧನ್ಯವಾದ ಸಮರ್ಪಿಸುತ್ತಿದ್ದಾರೆ. ಯತೀಂದ್ರ ಸಿದ್ದರಾಮಯ್ಯ ಕೂಡಾ ಟ್ವೀಟ್ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

  • 02 May 2021 01:35 PM (IST)

    ಶಿಕ್ಷಕರಾಗಿದ್ದ ಶರಣು ಸಲಗರ ಈಗ ಶಾಸಕ

    ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿದ್ದ ಶರಣು ಸಲಗರ ಇದೀಗ ಬಸವಕಲ್ಯಾಣ ಕ್ಷೇತ್ರದ ಶಾಸಕರಾಗಲಿದ್ದಾರೆ. ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಮೂಲತ ಸರ್ಕಾರಿ ಶಿಕ್ಷಕರಾಗಿದ್ದು, ಕಲಬುರಗಿ ತಾಲೂಕಿನ ಅವರಾದ್ ಪ್ರೌಢಶಾಲೆಯಲ್ಲಿ ವಿಜ್ಞಾನ ವಿಷಯ ಬೋಧಿಸುತ್ತಿದ್ದರು. ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿದ್ದ ಅವರು ಮೊದಲು ಕಾಂಗ್ರೆಸ್ ಸೇರಿದ್ದರು. ಆದರೆ, 2016 ರಲ್ಲಿ ಚಿಂಚನಸೂರು ಮತಕ್ಷೇತ್ರದ ಜಿಲ್ಲಾ ಪಂಚಾಯತ್​ಗೆ ಟಿಕೆಟ್ ಕೇಳಿದ್ದಾಗ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಆದಕಾರಣ 2016 ರಲ್ಲಿಯೇ ಬಿಜೆಪಿಗೆ ಬಂದ ಶರಣು ಸಲಗರ ಕಲಬುರಗಿ ಜಿಲ್ಲಾ ಬಿಜೆಪಿ ಘಟಕದಲ್ಲಿ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇದೀಗ ಶಿಕ್ಷಕರಾಗಿದ್ದ ಇವರನ್ನು ಕ್ಷೇತ್ರದ ಮತದಾರರು ಶಾಸಕ ಸ್ಥಾನಕ್ಕೆ ಆರಿಸಿದ್ದಾರೆ.

  • 02 May 2021 01:29 PM (IST)

    ಬಸವಕಲ್ಯಾಣದಲ್ಲಿ ಗೆಲುವು; ಟ್ವೀಟ್ ಮೂಲಕ ಧನ್ಯವಾದ ಸಲ್ಲಿಸಿದ ಯಡಿಯೂರಪ್ಪ

    ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಗೆಲುವು ದಕ್ಕಿದ ಹಿನ್ನೆಲೆಯಲ್ಲಿ ಕ್ಷೇತ್ರದ ಎಲ್ಲ ಮತದಾರರಿಗೆ ಹೃತ್ಪೂರ್ವಕ ಧನ್ಯವಾದ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ. ಜತೆಗೆ ಕ್ಷೇತ್ರದ ಬಿಜೆಿಪಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

  • 02 May 2021 01:00 PM (IST)

    ಬಸವಕಲ್ಯಾಣದಲ್ಲಿ ಬಿಜೆಪಿ ಗೆಲುವು

    ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ 20,904 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅನುಕಂಪದ ಆಧಾರದ ಮೇಲೆ ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಅಭ್ಯರ್ಥಿ ಮಾಲಾ ನಾರಾಯಣರಾವ್ ಹಿನ್ನೆಡೆ ಅನುಭವಿಸಿದ್ದಾರೆ.

  • 02 May 2021 12:58 PM (IST)

    ಬೆಳಗಾವಿಯಲ್ಲಿ ಕಾಂಗ್ರೆಸ್​ಗೆ ಮುನ್ನಡೆ

    ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದೆ. ಸತೀಶ್ ಜಾರಕಿಹೊಳಿ ಮುನ್ನಡೆ ಸಾಧಿಸುತ್ತಿದ್ದಾರೆ.

  • 02 May 2021 12:33 PM (IST)

    ಮತ ಎಣಿಕೆ ಕೇಂದ್ರದಲ್ಲಿ ಸರ್ವರ್ ಪ್ರಾಬ್ಲಂ

    ಬೆಳಗಾವಿಯ ಆರ್‌ಪಿಡಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಕಳೆದ ಇಪ್ಪತ್ತು ನಿಮಿಷಗಳಿಂದ ಸರ್ವರ್ ಡೌನ್ ಆದ ಕಾರಣ ಎಣಿಕೆಯಾದ ಮತಗಳನ್ನ ಅಪ್ಲೋಡ್ ಮಾಡಲು ಆಗದೇ ಸಿಬ್ಬಂ ಸುಮ್ಮನೆ ಕುಳಿತುಕೊಳ್ಳುವಂತಾಗಿದೆ.

  • 02 May 2021 12:31 PM (IST)

    ಬಸವಕಲ್ಯಾಣದಲ್ಲಿ 22ನೇ ಸುತ್ತಿನ ಮತ ಎಣಿಕೆ ಮುಕ್ತಾಯ; ಬಿಜೆಪಿ ಮುನ್ನಡೆ

    ಬಸವಕಲ್ಯಾಣ ಕ್ಷೇತ್ರದಲ್ಲಿ 22 ನೇ ಸುತ್ತಿನ‌ ಮತ ಎಣಿಕೆ ಮುಕ್ತಾಯ ಆಗಿದೆ. ಬಿಜೆಪಿ-55788, ಕಾಂಗ್ರೆಸ್-40704, ಜೆಡಿಎಸ್-10385 ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ-8175 ಮತ ಗಳಿಸಿದ್ದು, ಬಿಜೆಪಿ 15084 ಮತಗಳ ಅಂತರದಿಂದ ಮುನ್ನಡೆ ಸಾಧಿಸಿದೆ.

  • 02 May 2021 12:11 PM (IST)

    ಮೋದಿಯ ಪ್ರಗತಿ ಪರ ಚಿಂತನೆ, ಬಿಎಸ್​ವೈ ಅಭಿವೃದ್ಧಿ ಕೆಲಸ ನಮಗೆ ಸಹಕಾರವಾಗಿದೆ: ವಿ.ಸೋಮಣ್ಣ

    ಬಸವಕಲ್ಯಾಣ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು ಚುನಾವಣಾ ಉಸ್ತುವಾರಿ ಆಗಿದ್ದ ಸಚಿವ ವಿ.ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಬಸವಕಲ್ಯಾಣದಲ್ಲಿ ಅನುಕಂಪದ ಅಲೆ ಇದೆ ಎಂಬ ಮಾತಿತ್ತು. ಆದರೆ, ಮೋದಿಯ ಪ್ರಗತಿ ಪರ ಚಿಂತನೆ, ಸಿಎಂ ಅವರ ಅಭಿವೃದ್ಧಿ ಕೆಲಸ ನಮಗೆ ಸಹಕಾರವಾಗಿದೆ. ಟೀಮ್ ವರ್ಕ್ ಮಾಡಿದ್ರೆ ಯಾವ ರೀತಿ ಫಲಿತಾಂಶ ಬರುತ್ತದೆ ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಸೋಮಣ್ಣ ಹೇಳಿದ್ದಾರೆ. ನಾವೆಲ್ಲರೂ ಟೀಮ್ ವರ್ಕ್ ಮಾಡಿದೆವು, ನಮ್ಮ ಅಭ್ಯರ್ಥಿ ಕೂಡ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಮಸ್ಕಿಯಲ್ಲಿ ಆಡಳಿತ ವಿರೋಧಿ ಆಗಿರಬಹುದು, ಕೆಲವು ಬಾರಿ ಈ‌ ರೀತಿ ಆಗುತ್ತದೆ. ಮಸ್ಕಿಯಲ್ಲಿ ಸೋತಿರಬಹುದು ಆದ್ರೆ ಒಳ್ಳೆಯ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಇದೇ ವೇಳೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಒಳ್ಳೆಯ ಸ್ಥಾನ ಪಡೆದಿದೆ ಎನ್ನುವುದನ್ನೂ ತಿಳಿಸಿದ್ದಾರೆ.

  • 02 May 2021 11:40 AM (IST)

    ಮಸ್ಕಿ ಕ್ಷೇತ್ರದ ಸೋಲಿನಿಂದ ಕಾರ್ಯಕರ್ತರು ಎದೆಗುಂದುವುದು ಬೇಡ: ಬಿ.ವೈ.ವಿಜಯೇಂದ್ರ

    ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಸೋಲು ಖಚಿತವಾಗುತ್ತಿದ್ದಂತೆಯೇ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಾರ್ಯಕರ್ತರು ಎದೆಗುಂದುವುದು ಬೇಡ. ನಿಮ್ಮ ಪರಿಶ್ರಮ, ಹೋರಾಟ ವ್ಯರ್ಥವಾಗುವುದಿಲ್ಲ. ವ್ಯರ್ಥವಾಗದಂತೆ ನೋಡಿಕೊಳ್ತೇವೆ. ಕಾರ್ಯಕರ್ತನಾಗಿ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಧೈರ್ಯ ತುಂಬಿದ್ದಾರೆ. ಅಲ್ಲದೇ, ಬಿಜೆಪಿಯನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

  • 02 May 2021 11:26 AM (IST)

    ಮತ ಎಣಿಕೆ ಕೇಂದ್ರದ ಮುಂಭಾಗ ನಿಂಬೆಹಣ್ಣು ಪ್ರತ್ಯಕ್ಷ

    ರಾಯಚೂರು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವುದು ಸನ್ನಿಹಿತವಾಗಿದೆ. ಆದರೆ ಈಗ ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ನಿಂಬೆ ಹಣ್ಣು ಪ್ರತ್ಯಕ್ಷ ಆಗಿರುವುದು ಅಚ್ಚರಿಗೆ ಕಾರಣವಾಗಿದೆ. ಮತ ಎಣಿಕೆ ಕೇಂದ್ರದ ಮುಂಭಾಗದಲ್ಲಿ ಎರಡು ನಿಂಬೆ ಹಣ್ಣುಗಳು ಕಂಡುಬಂದಿವೆ.

  • 02 May 2021 11:11 AM (IST)

    ಕ್ಷೇತ್ರದ ಜನರಿಗೆ ದೇವರು ಒಳ್ಳೆಯದನ್ನು ಮಾಡಲಿ, ಇವತ್ತು ವಿಶ್ವಾಸದ್ರೋಹ ಆಗಿದೆ: ಪ್ರತಾಪಗೌಡ

    ಮಸ್ಕಿಯಲ್ಲಿ ನಾನು ಸೋಲುವುದಿಲ್ಲ ಎಂದು ಭಾವಿಸಿದ್ದೆ, ಆದರೆ, ಜನ ಬದಲಾವಣೆ ಬಯಸಿ, ಬದಲಾವಣೆ ಮಾಡಿದ್ದಾರೆ. ಇವತ್ತು ವಿಶ್ವಾಸದ್ರೋಹ ಆಗಿದೆ, ಕ್ಷೇತ್ರದ ಜನರಿಗೆ ದೇವರು ಒಳ್ಳೆಯದನ್ನು ಮಾಡಲಿ. ಮಸ್ಕಿ ಕ್ಷೇತ್ರದ ಜನರ ಮನಸ್ಥಿತಿ ಬದಲಾವಣೆ ಆಗಿದೆ, ಅಭಿವೃದ್ಧಿ, ಒಳ್ಳೆಯತನ ಮುಖ್ಯವಲ್ಲ ಎಂದು ಸಾಬೀತಾಯಿತು. ಯಾರೇ ಬಂದು ಪ್ರಚಾರ ಮಾಡಿದರೂ ಏನೂ ಆಗಲ್ಲ ಎಂದು ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲು ಖಾತರಿಯಾಗುತ್ತಿದ್ದಂತೆಯೇ ಬೇಸರ ವ್ಯಕ್ತಪಡಿಸಿದ್ದಾರೆ.

  • 02 May 2021 10:57 AM (IST)

    ಮಸ್ಕಿ: ಕಾಂಗ್ರೆಸ್ ಅಭ್ಯರ್ಥಿ ಜಯ ಬಹುತೇಕ ಖಚಿತ

    ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸುವುದು ಬಹುತೇಕ ಖಚಿತವಾಗಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದಿದ್ದ ಕಾಂಗ್ರೆಸ್ ಪಕ್ಷ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.

  • 02 May 2021 10:33 AM (IST)

    ಬಸವಕಲ್ಯಾಣ ಕ್ಷೇತ್ರದಲ್ಲಿ ಏಳನೇ ಸುತ್ತಿನ ಮತ ಎಣಿಕೆ ಮುಕ್ತಾಯ

    ಬಸವಕಲ್ಯಾಣ ಕ್ಷೇತ್ರದಲ್ಲಿ ಏಳನೇ ಸುತ್ತಿನ‌ ಮತ ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ 12136, ಬಿಜೆಪಿ 20617, ಜೆಡಿಎಸ್ 1418 ಮತ ಪಡೆದಿದ್ದು, ಬಿಜೆಪಿ 8481 ಮತಗಳ ಮುನ್ನಡೆ ಕಾಯ್ದುಕೊಂಡಿದೆ.

  • 02 May 2021 10:19 AM (IST)

    ನಮ್ಮವರೇ ನಮಗೆ ಕೈ ಕೊಟ್ರು: ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ

    ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಮುನ್ಮಡೆ ಸಾಧಿಸುತ್ತಿದ್ದು, ಕಂಗಾಲಾದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಮತ ಎಣಿಕೆ ಕೇಂದ್ರದ ಬಳಿ ನಿಂತು ಯಾವ ಗ್ರಾಮದಲ್ಲಿ ಹಿನ್ನೆಡೆ ಆಗಿದೆ ಎಂದು ಲೆಕ್ಕ ಹಾಕುತ್ತಿದ್ದಾರೆ. ಈ ವೇಳೆ ನಮ್ಮವರೇ ನಮಗೆ ಕೈ ಕೊಟ್ರು ಎಂದು ಬೇಸರ ಹೊರಹಾಕಿದ್ದಾರೆ.

  • 02 May 2021 10:07 AM (IST)

    ಎಲ್ಲೆಲ್ಲಿ ಯಾರಿಗೆ ಮುನ್ನಡೆ?

    ಬೆಳಗಾವಿ – 22ನೇ ಸುತ್ತಿನಲ್ಲಿ ಬಿಜೆಪಿಗೆ 3,026 ಮತಗಳ ಮುನ್ನಡೆ
    ಮಸ್ಕಿ – 9ನೇ ಸುತ್ತಿನಲ್ಲಿ ಕಾಂಗ್ರೆಸ್‌ಗೆ 9,000 ಮತಗಳ ಮುನ್ನಡೆ
    ಬಸವಕಲ್ಯಾಣ – 3ನೇ ಸುತ್ತಿನಲ್ಲಿ ಬಿಜೆಪಿಗೆ 5,034 ಮತ ಮುನ್ನಡೆ

  • 02 May 2021 09:48 AM (IST)

    ಮಸ್ಕಿಯಲ್ಲಿ 2750 ಮತಗಳ ಅಂತರದಿಂದ ಕಾಂಗ್ರೆಸ್ ಮುನ್ನಡೆ

    ಮಸ್ಕಿ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಮೂರನೇ ಸುತ್ತಿನ ಮತ ಎಣಿಕೆ ನಡೆಯುತ್ತಿದ್ದು ಈ ಸುತ್ತಿನಲ್ಲೂ ಕಾಂಗ್ರೆಸ್​ ಮುನ್ನಡೆ ಕಾಯ್ದುಕೊಂಡಿದೆ. 2750  ಮತಗಳ ಅಂತರದಿಂದ ಕಾಂಗ್ರೆಸ್ ಮುಂದಿದೆ..

  • 02 May 2021 08:58 AM (IST)

    ಮಸ್ಕಿಯಲ್ಲಿ 3ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

    ಮಸ್ಕಿಯಲ್ಲಿ 3ನೇ ಸುತ್ತಿನ ಮತ ಎಣಿಕೆಯಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. 3ನೇ ಸುತ್ತಿನಲ್ಲಿ ಕಾಂಗ್ರೆಸ್‌ಗೆ 287 ಮತಗಳ ಮುನ್ನಡೆ ಲಭಿಸಿದ್ದು, ಕಾಂಗ್ರೆಸ್​ಗೆ 3,940 ಮತ, ಬಿಜೆಪಿಗೆ 3,643 ಮತ ಸಿಕ್ಕಿದೆ.

  • 02 May 2021 08:56 AM (IST)

    ಬೆಳಗಾವಿಯಲ್ಲಿ ಬಿಜೆಪಿಗೆ ಮುನ್ನಡೆ

    ಬೆಳಗಾವಿಯ ಗೋಕಾಕ್ ಕ್ಷೇತ್ರದ ಮತ ಎಣಿಕೆಯಲ್ಲಿ ಬಿಜೆಪಿ ಪಕ್ಷ ಮುನ್ನಡೆ ಸಾಧಿಸಿದೆ. ಕಳೆದ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಮುಂದಿದ್ದು ಇದೀಗ ಮಂಗಳಾ ಅಂಗಡಿ ಮುನ್ನಡೆ ಸಾಧಿಸಿದ್ದಾರೆ.

  • 02 May 2021 08:48 AM (IST)

    ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ

    ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಭೇಟಿ ನೀಡಿದ್ದಾರೆ. ಬೀದರ್‌ನ ಬಿವಿಬಿ ಕಾಲೇಜಿನ ಮತ ಎಣಿಕೆ ಕೇಂದ್ರಕ್ಕೆ ಕಾಂಗ್ರೆಸ್ ಅಭ್ಯರ್ಥ ಮಲ್ಲಮ್ಮ ನಾರಾಯಣರಾವ್ ಭೇಟಿ ನೀಡಿದ್ದು ಮತ ಎಣಿಕೆ ಪ್ರಕ್ರಿಯೆ ವೀಕ್ಷಿಸುತ್ತಿದ್ದಾರೆ.

  • 02 May 2021 08:38 AM (IST)

    ಬೆಳಗಾವಿಯಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

    ಬೆಳಗಾವಿಯಲ್ಲಿ ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್-2927 ಮತ, ಬಿಜೆಪಿ-2263 ಮತಗಳು ಲಭಿಸಿದ್ದು, ಸತೀಶ್ ಜಾರಕಿಹೊಳಿ 664 ಮತಗಳ ಮುನ್ನಡೆ ಸಾಧಿಸಿದ್ದಾರೆ.

  • 02 May 2021 08:35 AM (IST)

    ಮಸ್ಕಿ: 1 ಮತ್ತು 2ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

    ಮಸ್ಕಿಯಲ್ಲಿ ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಕಾಂಗ್ರೆಸ್​ ಮುನ್ನಡೆ ಸಾಧಿಸಿದೆ. ಮೊದಲ ಸುತ್ತಿನಲ್ಲಿ ಕಾಂಗ್ರೆಸ್​ಗೆ 3,182 ಮತ ಹಾಗೂ ಬಿಜೆಪಿಗೆ 2,603 ಮತ ಲಭಿಸಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರವಿಹಾಳ್‌ 579 ಮತಗಳ ಮುನ್ನಡೆ ಸಾಧಿಸಿದ್ದಾರೆ.

  • 02 May 2021 08:21 AM (IST)

    ಬೆಳಗಾವಿಯಲ್ಲಿ ಇವಿಎಂ ಮತ ಎಣಿಕೆ ಆರಂಭ

    ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಮತ ಎಣಿಕೆ ಆರಂಭವಾಗಿದೆ. ಅಂಚೆ ಮತಗಳ ಜತೆಯೇ ಇವಿಎಂ ಮತ ಎಣಿಕೆ ಶುರುವಾಗಿದೆ.

  • 02 May 2021 08:04 AM (IST)

    ಮತ ಎಣಿಕೆಗೆ ಸಕಲ ಸಿದ್ಧತೆ

    ಮತ ಎಣಿಕೆ ಕೇಂದ್ರಗಳಿಗೆ ಸಿಬ್ಬಂದಿ ಆಗಮಿಸಿದ್ದು, ಮತ ಎಣಿಕೆ ಆರಂಭಕ್ಕೆ ಸನ್ನದ್ಧರಾಗಿದ್ದಾರೆ. ಕೊರೊನಾ ನಿಯಮಾವಳಿಗಳನ್ನು ಪಾಲಿಸಿಕೊಂಡು ಮತ ಎಣಿಕೆ ಮಾಡಲಾಗುತ್ತಿದ್ದು, ಫಲಿತಾಂಶದ ಬಳಿಕ ಕೇಂದ್ರಗಳ ಬಳಿ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ.

ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯ ನಡುವೆಯೇ ಉಪಚುನಾವಣೆ ನಡೆದಿದೆ. ಇಂದು ಯಾರೇ ಗೆದ್ದರೂ ಸಂಭ್ರಮಿಸುವ ವಾತಾವರಣ ಇಲ್ಲವಾದರೂ ರಾಜಕೀಯದ ಚದುರಂಗದಾಟದಲ್ಲಿ ಯಾರು ಉಳಿಯಲಿದ್ದಾರೆ, ಯಾರು ಉರುಳಲಿದ್ದಾರೆ ಎಂಬ ಕುತೂಹಲ ಸಹಜವಾಗಿಯೇ ಗರಿಗೆದರಿದೆ. ಬೆಳಗಾವಿ ಲೋಕಸಭಾ ಉಪಚುನಾವಣೆ ಹಾಗೂ ಬಸವಕಲ್ಯಾಣದಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಗೆದ್ದಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳ ಜಯಭೇರಿ ಭಾರಿಸಿದ್ದಾರೆ. ಬೆಳಗಾವಿ ಲೋಕಸಭೆಯ ಫಲಿತಾಂಶ ಕೆಲ ಹೊತ್ತಲ್ಲೇ ಹೊರಬೀಳಲಿದೆ.

Follow us on