ಬೆಂಗಳೂರು, (ಆಗಸ್ಟ್ 02): ವಿರೋಧ ಪಕ್ಷಗಳ ಹಲವು ಆರೋಪಗ ನಡುವೆಯೂ ಕಾಂಗ್ರೆಸ್ ಸರ್ಕಾರದಲ್ಲಿ(Congress Government) ಸರ್ಕಾರಿ ಅಧಿಕಾರಿಗಳ ವರ್ಗಾವಣೆ (Officers Transfer) ಜೋರಾಗಿದೆ. ನಿನ್ನೆ (ಆಗಸ್ಟ್ 01) ವರ್ಗಾವಣೆ ಮಾಡಿದ್ದ ಕೆಲ ಪೊಲೀಸ್ ಇನ್ಸ್ಪೆಕ್ಟರ್ಗಳ (Police Inspector) ವರ್ಗಾವಣೆಗೆ ಸರ್ಕಾರ ತಡೆ ಹಿಡಿದೆ. ನಿನ್ನೆ ಬರೋಬ್ಬರಿ 211 ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿತ್ತು. ಈ ಪೈಕಿ 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಯನ್ನು ಸರ್ಕಾರ ಏಕಾಏಕಿ ಇಂದು (ಆಗಸ್ಟ್ 02) ಬೆಳಗ್ಗೆ ಏಕಾಏಕಿ ತಡೆ ಹಿಡಿದಿದ್ದು, ಇದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ; ಪರದಾಡುತ್ತಿರುವ ರೋಗಿಗಳು
ಹೀಗೆ ಮೇಲ್ಕಾಣಿಸಿದ ಒಟ್ಟ 11 ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ತಡೆ ನೀಡಿ DGIGP ಕಚೇರಿಯಿಂದ ಆದೇಶ ಹೊರಬಿದ್ದಿದೆ.
ಅಧಿಕಾರಿಗಳ ವರ್ಗಾವಣೆಯ ದಂಧೆ ನಡೆದಿದೆ ಎಂದು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಗಂಭೀರ ಮಾಡಿವೆ. ಇದರ ಮಧ್ಯೆ ರಾಜ್ಯದಲ್ಲಿ ನೂರಕ್ಕೂ ಹೆಚ್ಚು ತಹಸೀಲ್ದಾರ್, ಬಳಿಕ ಡಿವೈಎಸ್‌ಪಿಗಳ ವರ್ಗಾವಣೆ ಮಾಡಿತ್ತು. ಇದಾದ ಬಳಿಕ ನಿನ್ನೆ ಅಷ್ಟೇ 211 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಲಾಗಿತ್ತು. ಇದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು ರಾಜ್ಯದಲ್ಲಿ “ಕಾಸಿಗಾಗಿ ಪೋಸ್ಟಿಂಗ್” ಎಂಬ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರ ವರ್ಗಾವಣೆಯನ್ನು ದಂಧೆಯನ್ನಾಗಿ ಬಳಸಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ಗೌಪ್ಯ ಸಭೆ ನಡೆಸಿದ ಮರು ದಿನವೇ ಡಿವೈಎಸ್ಪಿ/ಎಸಿಪಿಗಳ ವರ್ಗಾವಣೆಯಾಗಿದೆ.. ಭ್ರಷ್ಟರು, ಕಳ್ಳರು, ಸುಲಿಗೆಕೋರರನ್ನು ಸದೆಬಡಿಯಬೇಕಾದ ಪೊಲೀಸರಿಂದಲೇ ಲಂಚ ಪಡೆಯುತ್ತಿದೆ ಈ ಭಂಡ ಸರ್ಕಾರ ಎಂದು ಬಿಜೆಪಿ ಟ್ವೀಟ್ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ತಿವಿದಿದೆ.
ನಿನ್ನೆ ಒಂದೇ ದಿನ 211 ಪೊಲೀಸ್ ಇನ್ಸ್ಪೆಕ್ಟರ್ಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಬಹುತೇಕ ಜಿಲ್ಲೆ, ಸಿಸಿಬಿ , ಗುಪ್ತ ವಾರ್ತೆಯ ಪೊಲೀಸ್ ಇನ್ ಸ್ಪೆಕ್ಟರ್‌ಗಳ ವರ್ಗಾವಣೆ ಆಗಿತ್ತು. ಇದರಲ್ಲಿ ಇದೀಗ ಕೆಲವರ ವರ್ಗಾವಣೆಯನ್ನು ದಿಢೀರ್ ತಡೆಹಿಡಿದಿರುವುದು ಚರ್ಚೆ ಹುಟ್ಟುಹಾಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:40 am, Wed, 2 August 23