Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 26,811 ಕೊರೊನಾ ಸೋಂಕಿತರು ಪತ್ತೆ; 530 ಮಂದಿ ಸಾವು

| Updated By: ganapathi bhat

Updated on: Aug 21, 2021 | 9:46 AM

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,99,784ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 20,62,910 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

Karnataka Covid Update: ಕರ್ನಾಟಕದಲ್ಲಿ ಹೊಸದಾಗಿ 26,811 ಕೊರೊನಾ ಸೋಂಕಿತರು ಪತ್ತೆ; 530 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಮೇ 26) ಹೊಸದಾಗಿ 26,811 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,99,784ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 20,62,910 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 530 ಜನರ ಸಾವು ಸಂಭವಿಸಿದೆ. ತನ್ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 26,929 ಜನರು ಮೃತಪಟ್ಟಿದ್ದಾರೆ. 4,09,924 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದೆ.

ಬೆಂಗಳೂರಲ್ಲಿ ಇಂದು ಒಂದೇ ದಿನ 6,433 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ, ಇಂದು ಕೊರೊನಾ ಸೋಂಕಿಗೆ 285 ಜನರು ಬಲಿಯಾಗಿದ್ದಾರೆ. ರಾಜ್ಯದಲ್ಲಿ ಹೊಸ ಕೊರೊನಾ ಸೋಂಕಿತರ ಪ್ರಮಾಣ ಕಡಿಮೆಯಾಗಿದ್ದು, ಕಳೆದ ಕೆಲವು ದಿನಗಳಿಂದ 25 ಸಾವಿರದ ಆಸುಪಾಸಿನಲ್ಲಿ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಆದರೆ, ಸೋಂಕಿತರ ಮರಣ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಸಾವಿನ ಸಂಖ್ಯೆ ಕೂಡ ಇಳಿಕೆಯಾಗಬೇಕಿದೆ.

ಬೆಂಗಳೂರಲ್ಲಿ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 11,37,929ಕ್ಕೆ ಏರಿಕೆಯಾಗಿದೆ. 11,37,929 ಸೋಂಕಿತರ ಪೈಕಿ 9,18,423 ಜನರು ಗುಣಮುಖ ಹೊಂದಿದ್ದಾರೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 285 ಜನರ ಬಲಿಯಾಗಿದೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 12,148 ಜನರ ಸಾವು ಸಂಭವಿಸಿದೆ. 2,07,357 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜಿಲ್ಲಾವಾರು ಕೊರೊನಾ ಸೋಂಕಿತರ ವರದಿ ಇಲ್ಲಿದೆ
ಬೆಂಗಳೂರು ನಗರ ಜಿಲ್ಲೆ 6433, ಮೈಸೂರು 2792, ಹಾಸನ 1471, ತುಮಕೂರು 1399, ದಾವಣಗೆರೆ 1309, ಬೆಳಗಾವಿ 1205, ಉಡುಪಿ 973, ಕೋಲಾರ 907, ಧಾರವಾಡ 853, ಶಿವಮೊಗ್ಗ 839, ಮಂಡ್ಯ 805, ಬಳ್ಳಾರಿ ಜಿಲ್ಲೆ 796, ಉತ್ತರ ಕನ್ನಡ ಜಿಲ್ಲೆಯಲ್ಲಿ 786, ಬೆಂಗಳೂರು ಗ್ರಾಮಾಂತರ 740, ದಕ್ಷಿಣ ಕನ್ನಡ 729, ಚಿಕ್ಕಮಗಳೂರು 585, ಕೊಪ್ಪಳ 491, ಚಿತ್ರದುರ್ಗ 431, ಚಾಮರಾಜನಗರ 425, ಗದಗ 393, ವಿಜಯಪುರ 337, ಹಾವೇರಿ 330, ಚಿಕ್ಕಬಳ್ಳಾಪುರ 313, ಕೊಡಗು 296, ರಾಯಚೂರು 265, ಬಾಗಲಕೋಟೆ 245, ರಾಮನಗರ 240, ಯಾದಗಿರಿ 187, ಕಲಬುರಗಿ 175 ಮತ್ತು ಬೀದರ್ ಜಿಲ್ಲೆಯಲ್ಲಿ 61 ಮಂದಿಗೆ ಕೊರೊನಾ ಸೋಂಕು ದೃಢವಾಗಿದೆ.

ಜಿಲ್ಲಾವಾರು ಕೊರೊನಾದಿಂದ ಮೃತಪಟ್ಟವರ ಸಂಖ್ಯೆ
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 530 ಜನರ ಸಾವು ಸಂಭವಿಸಿದೆ. ಆ ಪೈಕಿ, ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ 285 ಜನರ ಬಲಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 35, ಬಳ್ಳಾರಿ ಜಿಲ್ಲೆಯಲ್ಲಿ 22, ಬೆಳಗಾವಿ ಜಿಲ್ಲೆಯಲ್ಲಿಂದು 14, ಮೈಸೂರು ಜಿಲ್ಲೆಯಲ್ಲಿಂದು 14, ಶಿವಮೊಗ್ಗ ಜಿಲ್ಲೆಯಲ್ಲಿಂದು 14, ತುಮಕೂರು ಜಿಲ್ಲೆಯಲ್ಲಿ 14, ಚಾಮರಾಜನಗರ ಜಿಲ್ಲೆಯಲ್ಲಿ 13, ಧಾರವಾಡ ಜಿಲ್ಲೆಯಲ್ಲಿ 12, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11, ಉತ್ತರ ಕನ್ನಡ ಜಿಲ್ಲೆಯಲ್ಲಿ 10, ಹಾಸನ ಜಿಲ್ಲೆಯಲ್ಲಿ 9, ಕಲಬುರಗಿ ಜಿಲ್ಲೆಯಲ್ಲಿ 9, ಹಾವೇರಿ ಜಿಲ್ಲೆಯಲ್ಲಿ 7, ವಿಜಯಪುರ ಜಿಲ್ಲೆಯಲ್ಲಿ 6, ಕೊಪ್ಪಳ, ಮಂಡ್ಯ, ಉಡುಪಿ ಜಿಲ್ಲೆಯಲ್ಲಿಂದು ತಲಾ 5, ರಾಮನಗರ, ಯಾದಗಿರಿ ಜಿಲ್ಲೆಯಲ್ಲಿ ಇಂದು ತಲಾ 5, ಚಿಕ್ಕಬಳ್ಳಾಪುರ, ಗದಗ ಜಿಲ್ಲೆಯಲ್ಲಿ ಇಂದು ತಲಾ 4, ಕೋಲಾರ, ರಾಯಚೂರು ಜಿಲ್ಲೆಯಲ್ಲಿಂದು ತಲಾ 4, ಬಾಗಲಕೋಟೆ, ಬೀದರ್ ಜಿಲ್ಲೆಯಲ್ಲಿಂದು ತಲಾ 3, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿಂದು ತಲಾ 3, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿಂದು ತಲಾ 1 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: Lockdown Guidelines: ಕೊರೊನಾ ಸೋಂಕು ಇಳಿಕೆಯತ್ತ ಮುಖ ಮಾಡಿರುವಾಗಲೇ ಲಾಕ್​ಡೌನ್ ನಿಯಮ ಸಡಿಲಿಸಿದ ಕರ್ನಾಟಕ ಸರ್ಕಾರ

ಕೊರೊನಾ ಲಸಿಕೆ, ಔಷಧಿ ಮೇಲಿನ ಜಿಎಸ್‌ಟಿಗೆ ಬೀಳುತ್ತಾ ಕಡಿವಾಣ; ಮೇ 28ಕ್ಕೆ ಜಿಎಸ್​ಟಿ ಮಂಡಳಿ ಮಹತ್ವದ ಸಭೆ

Published On - 8:41 pm, Wed, 26 May 21