Karnataka Covid 19 update: ರಾಜ್ಯದಲ್ಲಿ ಇಂದು 44,631 ಕೊರೊನಾ ಕೇಸ್​ಗಳು ದಾಖಲು; ಇದರಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲೇ !

|

Updated on: May 04, 2021 | 8:32 PM

ಎಂಥಾ ಕಠಿಣ ನಿಯಮಗಳನ್ನೂ ಕೈಗೊಂಡರೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಸರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಇದೀಗ ರಾಜ್ಯದಲ್ಲಿ ಕೊರೊನಾ ನಿರ್ವಹಣೆಗಾಗಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.

Karnataka Covid 19 update: ರಾಜ್ಯದಲ್ಲಿ ಇಂದು 44,631 ಕೊರೊನಾ ಕೇಸ್​ಗಳು ದಾಖಲು; ಇದರಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲೇ !
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದು ಬರೋಬ್ಬರಿ 44,631ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 16,90,934ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಸರಣದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದೆ. ಈಗಂತೂ ಒಂದು ವಾರದಿಂದ ಈಚೆಗೆ ಒಂದು ದಿನದಲ್ಲಿ ದಾಖಲಾಗುವ ಪ್ರಕರಣಗಳು 40 ಸಾವಿರದ ಆಸುಪಾಸಿನಲ್ಲೇ ಇರುತ್ತವೆ. ಕರ್ಫ್ಯೂ, ನೈಟ್​ಕರ್ಫ್ಯೂದಂತಹ ಕಠಿಣ ಕ್ರಮ ಕೈಗೊಂಡಿದ್ದರೂ ಪ್ರಯೋಜನ ಆಗುತ್ತಿಲ್ಲ.

ಹಾಗೇ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾದಿಂದ 292ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ಕೊವಿಡ್​ನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 16,538ಕ್ಕೆ ತಲುಪಿದೆ. ಇದುವರೆಗೆ ರಾಜ್ಯದಲ್ಲಿ ಒಟ್ಟು 12,10,013ಮಂದಿ ಕೊರೊನಾದಿಂದ ಚೇತರಿಸಿಕೊಂಡು ಡಿಸ್ಚಾರ್ಜ್ ಆಗಿದ್ದಾರೆ. ಉಳಿದ 4,64,363 ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಅರ್ಧದಷ್ಟು ಪ್ರಕರಣ ಬೆಂಗಳೂರಿನಲ್ಲೇ
ರಾಜ್ಯರಾಜಧಾನಿಯಂತೂ ಕೊರೊನಾ ಹಾಟ್​ಸ್ಫಾಟ್​ ಆಗಿದೆ. ಒಂದೇ ದಿನದಲ್ಲಿ 20,870 ಕೊರೊನಾ ಪ್ರಕರಣಗಳು ದಾಖಲಾಗಿವೆ. ಅಂದರೆ ರಾಜ್ಯದ ಒಟ್ಟಾರೆ ಪ್ರಕರಣದ ಅರ್ಧದಷ್ಟು ಬೆಂಗಳೂರಿನಲ್ಲೇ ದಾಖಲಾದಂತಾಗಿದೆ. ಹಾಗೇ 24 ಗಂಟೆಯಲ್ಲಿ 132 ಮಂದಿ ಸಾವನ್ನಪ್ಪಿದ್ದಾರೆ.

ಬೆಂಗಳೂರಿನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8,40,274ಕ್ಕೆ ಏರಿಕೆಯಾಗಿದೆ. ಇವರಲ್ಲಿ 5,31,716 ಜನರು ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಉಳಿದ 3,01,712 ರೋಗಿಗಳಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಗರದಲ್ಲಿ ಕೊರೊನಾದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 6,845ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಮನ್ವಯ ಸಮಿತಿ ರಚನೆ
ಎಂಥಾ ಕಠಿಣ ನಿಯಮಗಳನ್ನೂ ಕೈಗೊಂಡರೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಸರಣ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ಕೊರೊನಾ ನಿರ್ವಹಣೆಗಾಗಿ ಸಿಎಂ ಕಾರ್ಯದರ್ಶಿ ಸೆಲ್ವಕುಮಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ವೈದ್ಯಕೀಯ ಉಪಕರಣಗಳ ನೆರವು, ಸಾರ್ವಜನಿಕ ವಂತಿಗೆ, ಮತ್ತಿತರ ಅಂತಾರಾಷ್ಟ್ರೀಯ ನೆರವುಗಳನ್ನೆಲ್ಲ ನಿಭಾಯಿಸಲು ಈ ಸಮನ್ವಯ ಸಮಿತಿ ರಚನೆಯಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಹಾಸಿಗೆ ಬ್ಲಾಕ್ ಮಾಡುವ ದಂದೆಯ ವಿರುದ್ಧ ಕಠಿಣ ಕ್ರಮ; ಸಿಎಂ ಯಡಿಯೂರಪ್ಪ

12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ – ಸಂಸದ ತೇಜಸ್ವಿ ಸೂರ್ಯ

Published On - 8:28 pm, Tue, 4 May 21