ಆಸ್ಪತ್ರೆ ಸಿಬ್ಬಂದಿ, ಅಗ್ನಿಶಾಮದ ದಳದ ಸಮಯಪ್ರಜ್ಞೆಯಿಂದ ಮೈಸೂರಿನಲ್ಲಿ 300ಕ್ಕೂ ಹೆಚ್ಚು ರೋಗಿಗಳು ಬಚಾವ್
Mysuru Medical Oxygen: ಆಸ್ಪತ್ರೆಯಲ್ಲಿ ದಾಖಲಾಗಿದ್ದ 300 ಕ್ಕೂ ಹೆಚ್ಚು ರೋಗಿಗಳಿಗೆ ಇದೇ ಆಕ್ಸಿಜನ್ ಶೇಖರಣಾ ಘಟಕದಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮಂಜುಗಡ್ಡೆಯಿಂದ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ಗಳು ಬ್ಲಾಕ್ ಆಗಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ರೋಗಿಗಳ ಜೀವ ಉಳಿಸಿದರು.
ಮೈಸೂರು: ಎಲ್ಲೆಲ್ಲೂ ಆಕ್ಸಿಜನ್ ಕೊರತೆಯೇ ಸದ್ದು ಮಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದಲ್ಲಿ ರೋಗಿಗಳು ಪ್ರಾಣ ಬಿಟ್ಟ ದುರ್ಘಟನೆ ಕರ್ನಾಟಕವನ್ನು ಬೆಚ್ಚಿಬೀಳಿಸಿದೆ. ಈ ಬೆನ್ನಲ್ಲೇ ಮೈಸೂರಿನ ಆಸ್ಪತ್ರೆಯೊಂದರ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಾಹಸದಿಂದ ಮುನ್ನೂರಕ್ಕೂ ಹೆಚ್ಚು ರೋಗಿಗಳ ಪ್ರಾಣ ಉಳಿದಿದೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯ ಕೊವಿಡ್ ಸೋಂಕಿತರಿಗೆ ಸರಬರಾಜು ಮಾಡುವ ಆಕ್ಸಿಜನ್ ಶೇಖರಣಾ ಘಟಕದಲ್ಲಿ ಮಂಜುಗಡ್ಡೆಯಿಂದ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ಗಳು ಸ್ಥಗಿತಗೊಂಡಿದ್ದವು. ಆಸ್ಪತ್ರೆಯಲ್ಲಿ ದಾಖಲಾಗಿದ್ದ 300 ಕ್ಕೂ ಹೆಚ್ಚು ರೋಗಿಗಳಿಗೆ ಇದೇ ಆಕ್ಸಿಜನ್ ಶೇಖರಣಾ ಘಟಕದಿಂದ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ಮಂಜುಗಡ್ಡೆಯಿಂದ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ಗಳು ಬ್ಲಾಕ್ ಆಗಿರುವುದನ್ನು ಗಮನಿಸಿದ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿ ರೋಗಿಗಳ ಜೀವ ಉಳಿಸಿದರು.
ಮಂಜುಗಡ್ಡೆಯಿಂದ ಆಕ್ಸಿಜನ್ ಸರಬರಾಜು ಯಂತ್ರದ ಪೈಪ್ಗಳು ಬ್ಲಾಕ್ ಆಗಿರುವುದು ಆಸ್ಪತ್ರೆಯ ಸಿಬ್ಬಂದಿಯ ಗಮನಕ್ಕೆ ಬಂದಿತ್ತು. ತಕ್ಷಣವೇ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ಅಗ್ನಿಶಾಮಕ ದಳಕ್ಕೆ ವಿಷಯ ತಲುಪಿಸಿದರು. ಕೊಂಚವೂ ತಡ ಮಾಡದೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೂರು ಅಗ್ನಿಶಾಮಕ ವಾಹನಗಳ ಸಹಾಯದಿಂದ ಕಟ್ಟಿಕೊಂಡಿರುವ ಮಂಜುಗೆಡ್ಡೆಯನ್ನು ತೆರವುಗೊಳಿಸಲು ಹರಸಾಹಸಪಟ್ಟರು. ಅಗ್ನಿಶಾಮಕದ ದಳದ ಡಿಎಫ್‌ಓ ರಾಜು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಂತೂ ಘನೀಕರಿಸಿದ ಮಂಜುಗಡ್ಡೆಗೆ ನೀರು ಸಿಂಪಡಿಸುವ ಮೂಲಕ ಆಕ್ಸಿಜನ್ ಪೂರೈಕೆಗೆ ಉಂಟಾಗಿದ್ದ ತಡೆಯನ್ನು ನಿವಾರಿಸಿದರು. ಬಳಿಕ ಎಂದಿನಂತೆ ಕೊವಿಡ್ ರೋಗಿಗಳಿಗೆ ಸಹಜವಾಗಿ ಆಕ್ಸಿಜನ್ ಪೂರೈಕೆ ಸುಗಮವಾಗಿ ನಡೆಯಿತು.
ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ ಇಲ್ಲವೋ? ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಖಡಕ್ ಎಚ್ಚರಿಕೆ
(300 patients life saved after fire brigade solve blocked Medical Oxygen storage pipes in Mysore )