AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಖಾಲಿಯಾದ ವಿಷಯ ತಿಳಿದು ಗಂಟೆಯೊಳಗೆ 10 ಸಿಲಿಂಡರ್ ವ್ಯವಸ್ಥೆ ಮಾಡಿದ ಸಂಸದ ಪ್ರತಾಪ್ ಸಿಂಹ

Pratap Simha: ನಿನ್ನೆಯಷ್ಟೇ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟ ದುರ್ಘಟನೆ ಭಾರಿ ಸಂಚಲನ ಮೂಡಿಸಿತ್ತು.

ಆಕ್ಸಿಜನ್ ಖಾಲಿಯಾದ ವಿಷಯ ತಿಳಿದು ಗಂಟೆಯೊಳಗೆ 10 ಸಿಲಿಂಡರ್ ವ್ಯವಸ್ಥೆ ಮಾಡಿದ ಸಂಸದ ಪ್ರತಾಪ್ ಸಿಂಹ
ಸಾಂಕೇತಿಕ ಚಿತ್ರ
guruganesh bhat
|

Updated on: May 04, 2021 | 9:59 PM

Share

ಮೈಸೂರು: ನಗರದ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಮಸ್ಯೆಯೊಂದನ್ನು ಪರಿಹರಿಸದ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ವಿಷಯ ಬಹಿರಂಗಪಡಿಸಿದ್ದಾರೆ. ಮೈಸೂರಿನ ವಾತ್ಸಲ್ಯ ಆಸ್ಪತ್ರೆಯಲ್ಲಿ ಉಂಟಾಗಿದ್ದ ಆಕ್ಸಿಜನ್ ಅಭಾವವನ್ನು ಪರಿಹರಿಸಿದ ಕುರಿತು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ. ಮೈಸೂರಿನ ವಾತ್ಸಲ್ಯ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕ ಇಲ್ಲದೇ ಸಮಸ್ಯೆ ಆಗಿತ್ತು. 15 ಜನರ ಬದುಕು ಆತಂಕ ಬಗ್ಗೆ ನನಗೆ ಮಾಹಿತಿ ದೊರೆಯಿತು. ಒಂದೇ ಗಂಟೆಯ ಒಳಗೆ ನಾನು 10 ಸಿಲಿಂಡರ್ ವ್ಯವಸ್ಥೆ ಮಾಡಿದೆ. ಇಲ್ಲದಿದ್ದರೆ ಚಾಮರಾಜನಗರದ ಪರಿಸ್ಥಿತಿ ಬರುತಿತ್ತು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ನಿನ್ನೆಯಷ್ಟೇ ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತಪಟ್ಟ ದುರ್ಘಟನೆ ಭಾರಿ ಸಂಚಲನ ಮೂಡಿಸಿತ್ತು. ಜತೆಗೆ ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆ ಮತ್ತು ಆಸ್ಪತ್ರೆಗಳಲ್ಲಿ ಮೆಡಿಕಲ್ ಆಕ್ಸಿಜನ್ ಅಭಾವ ತಲೆದೋರಿತ್ತು. ಈ ಕುರಿತು ಕರ್ನಾಟಕ ಉಚ್ಛ ನ್ಯಾಯಾಲಯ ಸಹ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ ಹೈಕೋರ್ಟ್ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟ ಘಟನೆ ಕುರಿತು ಕರ್ನಾಟಕ ಹೈಕೋರ್ಟ್​ ತೀವ್ರ ಕಳವಳ ವ್ಯಕ್ತಪಡಿಸಿದೆ. ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಘಟನೆ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ಸಲಹೆ ನೀಡಿದೆ. ಕರ್ನಾಟಕದ ಆಕ್ಸಿಜನ್ ಕೋಟಾ ಹೆಚ್ಚಿಸ್ತೀರೋ, ಇಲ್ಲವೋ? ಇನ್ನೂ ಎಷ್ಟು ಜನ ಮೃತಪಡಬೇಕು? ನಿಮಗೆ ಜನ ಮೃತಪಡುವುದು ಬೇಕೇ? ಎಂದು ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಜತೆಗೆ ನಾಳೆ ಬೆಳಗ್ಗೆ 10.30ರೊಳಗೆ ನಿರ್ಧಾರ ತಿಳಿಸುವಂತೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾ.ಅರವಿಂದ್ ಕುಮಾರ್‌ರವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಇಂದೇ ಹೆಚ್ಚು ಆಕ್ಸಿಜನ್ ಹೆಚ್ಚಿಸುತ್ತೀರೋ ಇಲ್ಲವೋ. ಚಾಮರಾಜನಗರ, ಕಲ್ಬುರ್ಗಿ ಘಟನೆ ನಂತರವಾದರೂ ನಿರ್ಧಾರ ಬದಲಿಸಿ. ತಕ್ಷಣ ಆಕ್ಸಿಜನ್ ಪ್ರಮಾಣ ಹೆಚ್ಚಿಸುತ್ತೀರೋ ಇಲ್ಲವೋ ಎಂದು ಕೇಂದ್ರ ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ.

ಆರೋಗ್ಯದ ಹಕ್ಕು ಬದುಕಿನ ಹಕ್ಕಿನ ಭಾಗವಾಗಿದೆ. ಪಿಐಎಲ್ ವಿಚಾರಣೆ ನಾಳೆಗೆ ನಿಗದಿಯಾಗಿತ್ತು. ತುರ್ತುಸ್ಥಿತಿ ಎದುರಾದ್ದರಿಂದ ಇಂದೇ ವಿಚಾರಣೆ ನಡೆಸಿದ್ದೇವೆ.  ಮೇ 5ಕ್ಕೆ 1792 ಮೆಟ್ರಿಕ್ ಟನ್ ಅಗತ್ಯವೆಂದು ರಾಜ್ಯ ಪತ್ರ ಬರೆದಿತ್ತು. ಕನಿಷ್ಟ 1162 ಮೆಟ್ರಿಕ್ ಟನ್ ಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. 802 ಮೆಟ್ರಿಕ್ ಟನ್‌ನಿಂದ 865 ಮೆಟ್ರಿಕ್ ಟನ್‌ಗೆ ಮಾತ್ರ ಏರಿಸಿದ್ದಾರೆ ಎಂದು ಕೋರ್ಟ್ ಸರ್ಕಾರಕ್ಕೆ ನೆನಪಿಸಿತು.

ರಾಜ್ಯದಲ್ಲಿ ರೆಮ್‌ಡಿಸಿವಿರ್ ಇಂಜೆಕ್ಷನ್ ಕೊರತೆಯಿದೆ. ಇನ್ನೂ 32 ಸಾವಿರಕ್ಕೂ ಹೆಚ್ಚು ರೆಮ್‌ಡಿಸಿವಿರ್ ಅಗತ್ಯವಿದೆ. ದಿನಕ್ಕೆ 15,800 ರೆಮ್‌ಡಿಸಿವಿರ್ ಹಂಚಿಕೆ ಮಾಡಲಾಗಿದೆ ಎಂ ಕೋರ್ಟ್ ರಾಜ್ಯಕ್ಕೆ ರೆಮ್‌ಡಿಸಿವಿರ್ ಹಂಚಿಕೆ ಬಗ್ಗೆಯೂ ವರದಿ ನೀಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಅಮೈಕಸ್ ಕ್ಯೂರಿಯಾಗಿ ವಕೀಲ ವಿಕ್ರಮ್ ಹುಯಿಲಗೋಳ್ ಅವರನ್ನು ನೇಮಕ ಮಾಡಿದೆ.

ಇದನ್ನೂ ಓದಿ: Karnataka Covid 19 update: ರಾಜ್ಯದಲ್ಲಿ ಇಂದು 44,631 ಕೊರೊನಾ ಕೇಸ್​ಗಳು ದಾಖಲು; ಇದರಲ್ಲಿ ಅರ್ಧದಷ್ಟು ಬೆಂಗಳೂರಿನಲ್ಲೇ !

ತೀವ್ರವಲ್ಲದ ಕೊವಿಡ್ ಪ್ರಕರಣಗಳಿಗೆ ಸಿಟಿ ಸ್ಕ್ಯಾನ್ ಅಗತ್ಯವಿಲ್ಲ, ಅತಿಯಾದ ಸಿಟಿ ಸ್ಕ್ಯಾನ್ ಕ್ಯಾನ್ಸರ್​ಗೆ ಆಹ್ವಾನವಿತ್ತಂತೆ : ಏಮ್ಸ್ ನಿರ್ದೇಶಕ

(Mysuru MP Pratap Simha tweets he arranges 10 medical oxygen cylinders within one hour to Vatsalya Hospital)

ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್
‘ಅದೃಷ್ಟ ದೇವತೆ ಬಟ್ಟೆ ಬಿಚ್ಚಿಸುವವರು ದೇವರಿಗೆ ವಂದಿಸುತ್ತಾರೆ’; ಪ್ರಥಮ್