ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸದೆ, ಪಕ್ಕದ ಜಿಲ್ಲಾಧಿಕಾರಿಯನ್ನ ದೂಷಿಸುವುದು ಸರ್ವತಾ ಸಾಧುವಲ್ಲ: ರೋಹಿಣಿ

ಮೈಸೂರು ಜಿಲ್ಲಾಧಿಕಾರಿಯಾಗಿ ನಾನು ಚಾಮರಾಜನಗರ ಅಥವಾ ಇನ್ನಾವುದೇ ಜಿಲ್ಲೆಗೆ ಆಮ್ಲಜನಕದ ಸರಬರಾಜನ್ನು ತಡೆಹಿಡಿಯಲಿಲ್ಲ ಅಥವಾ ನಿಯಂತ್ರಿಸಲಿಲ್ಲ. ಆಮ್ಲಜನಕದ ಪೂರೈಕೆ ಸಂಪೂರ್ಣವಾಗಿ ಸರಬರಾಜುದಾರ ಅಥವಾ ಮರುಪೂರಣೆ ಮಾಡುವವರು ಮತ್ತು ಜಿಲ್ಲೆಯ ನಡುವೆ ಇರುತ್ತದೆ. ಇನ್ನೊಬ್ಬ ಜಿಲ್ಲಾಧಿಕಾರಿಗೆ ಇದರಲ್ಲಿ ಯಾವುದೇ ಪಾತ್ರ ಅಥವಾ ಅಧಿಕಾರವಿಲ್ಲ.

ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸದೆ, ಪಕ್ಕದ ಜಿಲ್ಲಾಧಿಕಾರಿಯನ್ನ ದೂಷಿಸುವುದು ಸರ್ವತಾ ಸಾಧುವಲ್ಲ: ರೋಹಿಣಿ
ರೋಹಿಣಿ ಸಿಂಧೂರಿ
Follow us
Skanda
|

Updated on: May 05, 2021 | 12:12 PM

ಚಾಮರಾಜನಗರ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿ 24 ತಾಸಿನಲ್ಲಿ 22 ಜನ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳ ನಡುವಿನ ಸಮನ್ವಯತೆ ಕೊರತೆಯೇ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಚಾಮರಾಜನಗರ ಜಿಲ್ಲಾಧಿಕಾರಿ ಎಂ.ಆರ್. ರವಿ ಆರೋಪ ಮಾಡಿದ್ದರು. ಇದೀಗ ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ರೋಹಿಣಿ ಸಿಂಧೂರಿ ಸುದ್ದಿಗೋಷ್ಠಿ ಮುಖೇನ ಮಾಹಿತಿ ಹಂಚಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಆದೇಶದಂತೆ ಈ ವಿಷಯ ವಿಚಾರಣೆಯಲ್ಲಿದೆ. ಆದರೂ ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರು ವಿಚಾರಣೆ ಪೂರ್ಣಗೊಳ್ಳುವವರೆಗೆ ಕಾಯದೇ ಮಾಧ್ಯಮಗಳಲ್ಲಿ ಮೈಸೂರು ಜಿಲ್ಲಾಧಿಕಾರಿ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಲೇ ಇದ್ದಾರೆ. ಆದ್ದರಿಂದ ಈಗಲೇ ಸ್ಪಷ್ಟನೆ ನೀಡಬೇಕಾಗಿದೆ ಎಂದು ಹೇಳಿದ್ದಾರೆ.

ಮೈಸೂರು ಜಿಲ್ಲಾಧಿಕಾರಿಯಾಗಿ ನಾನು ಚಾಮರಾಜನಗರ ಅಥವಾ ಇನ್ನಾವುದೇ ಜಿಲ್ಲೆಗೆ ಆಮ್ಲಜನಕದ ಸರಬರಾಜನ್ನು ತಡೆಹಿಡಿಯಲಿಲ್ಲ ಅಥವಾ ನಿಯಂತ್ರಿಸಲಿಲ್ಲ. ಆಮ್ಲಜನಕದ ಪೂರೈಕೆ ಸಂಪೂರ್ಣವಾಗಿ ಸರಬರಾಜುದಾರ ಅಥವಾ ಮರುಪೂರಣೆ ಮಾಡುವವರು ಮತ್ತು ಜಿಲ್ಲೆಯ ನಡುವೆ ಇರುತ್ತದೆ. ಇನ್ನೊಬ್ಬ ಜಿಲ್ಲಾಧಿಕಾರಿಗೆ ಇದರಲ್ಲಿ ಯಾವುದೇ ಪಾತ್ರ ಅಥವಾ ಅಧಿಕಾರವಿಲ್ಲ. ಉದಾಹರಣೆಗೆ ಮೈಸೂರು ಆಮ್ಲಜನಕ ಸರಬರಾಜು ಬಳ್ಳಾರಿಯಿಂದ ಬಂದಿದೆ. ಬಳ್ಳಾರಿಯಿಂದ ಸರಬರಾಜುದಾರರು ಕಡಿಮೆ ಸರಬರಾಜು ಮಾಡಿದರೆ ನಾನು ಬಳ್ಳಾರಿ ಜಿಲ್ಲಾಧಿಕಾರಿಯನ್ನು ದೂಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸದೆ, ಪಕ್ಕದ ಜಿಲ್ಲಾಧಿಕಾರಿಯನ್ನ ದೂಷಿಸುವುದು ಸರ್ವತಾ ಸಾಧುವಲ್ಲ: ರೋಹಿಣಿ

ತಮ್ಮದೇ ಆದ ಆಮ್ಲಜನಕ ಸರಬರಾಜನ್ನು ನಿರ್ವಹಿಸುವುದು ಆಯಾ ಜಿಲ್ಲೆಯ ಜವಾಬ್ದಾರಿಯಾಗಿದೆ. ಯಾವುದೇ ಸರಬರಾಜುದಾರರು ಸರಬರಾಜು ಮಾಡದಿದ್ದರೆ ಅಥವಾ ಜಿಲ್ಲೆಯ ಅಗತ್ಯಗಳನ್ನು ಪೂರೈಸದಿದ್ದರೆ ರಾಜ್ಯ ಮಟ್ಟದ ಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಚಾಮರಾಜನಗರ ಡಿಸಿ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಅವರ ಸಾಮಗ್ರಿಗಳನ್ನು ಪಡೆದಿರಬೇಕು. ಆದರೆ, ಅವರು ಅದನ್ನು ಮಾಡಲು ವಿಫಲರಾಗಿದ್ದು, ಈಗ ಮೈಸೂರು ಜಿಲ್ಲಾಧಿಕಾರಿ ಮೇಲೆ ದೂಷಿಸುತ್ತಿದ್ದಾರೆ. ಈ ಎಲ್ಲಾ ವಿಚಾರವೂ ರಾಜ್ಯ ಸರ್ಕಾರ ಆದೇಶಿಸಿರುವ ವಿಚಾರಣೆಯಲ್ಲಿ ಸಾಬೀತಾಗುತ್ತವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಘಟನೆಗೆ ಮೈಸೂರು ಡಿಸಿಯೇ ನೇರ ಕಾರಣ; ಚಾಮರಾಜನಗರ ಡಿಸಿಯಿಂದ ಆರೋಪ 

FMR CM Siddaramaiah: ಮೈಸೂರು ಡಿಸಿ ರೋಹಿಣಿ ಸಿಂಧೂರಿ ಆಕ್ಸಿಜನ್ ಕೊಡ್ಬೇಡಿ ಅಂದಿದ್ರಂತೆ, ಇದ್ಯಾವ ಕಥೆ