ತೀವ್ರವಲ್ಲದ ಕೊವಿಡ್ ಪ್ರಕರಣಗಳಿಗೆ ಸಿಟಿ ಸ್ಕ್ಯಾನ್ ಅಗತ್ಯವಿಲ್ಲ, ಅತಿಯಾದ ಸಿಟಿ ಸ್ಕ್ಯಾನ್ ಕ್ಯಾನ್ಸರ್​ಗೆ ಆಹ್ವಾನವಿತ್ತಂತೆ : ಏಮ್ಸ್ ನಿರ್ದೇಶಕ

CT scan: ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300-400 ಎಕ್ಸ್ ರೇ (Chest X-rays)ಗಳಿಗೆ ಸಮ. ಮಾಹಿತಿಗಳ ಪ್ರಕಾರ ಯುವಜವರು ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಕ್ಯಾನ್ಸರ್​ಗೆ ಆಹ್ವಾನ ನೀಡಿದಂತೆ. ವಿಕಿರಣಗಳಿಗೆ ಪದೇ ಪದೇ ತೆರೆದುಕೊಳ್ಳುವುದರಿಂದ ಹಾನಿ ಸಂಭವಿಸುತ್ತದೆ.

ತೀವ್ರವಲ್ಲದ ಕೊವಿಡ್ ಪ್ರಕರಣಗಳಿಗೆ ಸಿಟಿ ಸ್ಕ್ಯಾನ್ ಅಗತ್ಯವಿಲ್ಲ, ಅತಿಯಾದ ಸಿಟಿ ಸ್ಕ್ಯಾನ್ ಕ್ಯಾನ್ಸರ್​ಗೆ ಆಹ್ವಾನವಿತ್ತಂತೆ : ಏಮ್ಸ್ ನಿರ್ದೇಶಕ
ಡಾ.ರಣದೀಪ್ ಗುಲೇರಿಯಾ
Follow us
ರಶ್ಮಿ ಕಲ್ಲಕಟ್ಟ
|

Updated on:May 04, 2021 | 6:46 PM

ದೆಹಲಿ: ತೀವ್ರವಲ್ಲದ ಕೊವಿಡ್-19 ಪ್ರಕರಗಳಿಗೆ ಪದೇ ಪದೇ ಸಿಟಿ ಸ್ಕ್ಯಾನ್ ಮಾಡುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯಕ್ಕೆ ಹೆಚ್ಚಿನ ಕೆಡುಕು ಉಂಟಾಗುತ್ತದೆ ಎಂದು ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಹೇಳಿದ್ದಾರೆ.ಕೊವಿಡ್ ಪಾಸಿಟಿವ್ ಎಂದು ತಿಳಿದ ಕೂಡಲೇ ಜನರು ಸಿಟಿ ಸ್ಕ್ಯಾನ್ ಮಾಡಿಸಲು ಮುಂದಾಗುತ್ತಾರೆ. ಇದು ಸಿಟಿ ಸ್ಕ್ಯಾನ್​ನ ದುರ್ಬಳಕೆ ಮತ್ತು ಇದರಿಂದ ಬಯೋಮಾರ್ಕರ್​ಗೆ ಹಾನಿಯಾಗುತ್ತದೆ ಎಂದು ಹೇಳಿದ್ದಾರೆ.

ಒಂದು ಸಿಟಿ ಸ್ಕ್ಯಾನ್ ಎದೆಗೆ ಮಾಡಿಸುವ 300-400 ಎಕ್ಸ್ ರೇ (Chest X-rays)ಗಳಿಗೆ ಸಮ. ಮಾಹಿತಿಗಳ ಪ್ರಕಾರ ಯುವಜವರು ಪದೇ ಪದೇ ಸಿಟಿ ಸ್ಕ್ಯಾನ್ ಮಾಡಿಸಿಕೊಂಡರೆ ಕ್ಯಾನ್ಸರ್​ಗೆ ಆಹ್ವಾನ ನೀಡಿದಂತೆ. ವಿಕಿರಣಗಳಿಗೆ ಪದೇ ಪದೇ ತೆರೆದುಕೊಳ್ಳುವುದರಿಂದ ಹಾನಿ ಸಂಭವಿಸುತ್ತದೆ. ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಆಗಿದ್ದು , ತೀವ್ರವಲ್ಲದ ಕೊವಿಡ್ ಆಗಿದ್ದರೆ ಸಿಟಿ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ ಗುಲೇರಿಯಾ.

ಅಧ್ಯಯನ ವರದಿಯೊಂದನ್ನು  ಉಲ್ಲೇಖಿಸಿದ ಗುಲೇರಿಯಾ, ತೀವ್ರವಲ್ಲದ ಕೊವಿಡ್ ಮತ್ತು ಲಕ್ಷಣಗಳಿಲ್ಲ ರೋಗ ಸಂದರ್ಭಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿದರೆ ಪ್ಯಾಚೆಸ್ (ಶ್ವಾಸಕೋಶದಲ್ಲಿನ ಸೋಂಕಿನ ಗುರುತು) ಕಂಡು ಬರಬಹುದು. ಚಿಕಿತ್ಸೆ ಇಲ್ಲದೆಯೂ ಅವು ತಾವಾಗಿಯೇ ಗುಣವಾಗುತ್ತದೆ. ಆಸ್ಪತ್ರೆಗೆ ದಾಖಲಾದಾಗ ಸಿಟಿ ಸ್ಕ್ಯಾನ್‌ಗಳನ್ನು ಮಾಡಬಹುದು ಎಂದು ಅವರು ಸಲಹೆ ನೀಡಿದರೆ, ಜನರಿಗೆ ಅನುಮಾನವಿದ್ದರೆ ಅವರು ಎದೆಯ ಎಕ್ಸ್ ರೇ ಮಾಡಿಸಬಹುದು.

ಒಂದು ರೋಗ ಅಥವಾ ಸ್ಥಿತಿಯ ಚಿಕಿತ್ಸೆಗೆ ದೇಹವು ಎಷ್ಟು ಚೆನ್ನಾಗಿ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡಲು ಬಳಸುವ ಬಯೋಮಾರ್ಕರ್‌ಗಳ ಬಗ್ಗೆ ಮಾತನಾಡಿದ ಗುಲೇರಿಯಾ, ಒಬ್ಬ ವ್ಯಕ್ತಿಗೆ ತೀವ್ರವಲ್ಲದ ಕೊವಿಡ್ ಇದ್ದರೆರಕ್ತ ಪರೀಕ್ಷೆಗಳಿಗೆ ಹೋಗಬೇಕಾದ ಅಗತ್ಯವಿಲ್ಲ. ಸಿಪಿಸಿ ಅಥವಾ ಎಲ್‌ಡಿಹೆಚ್ ಇವು ಆತಂಕ ಸೃಷ್ಟಿಸುತ್ತವೆ. ಈ ಬಯೋಮಾರ್ಕರ್‌ಗಳು ತೀವ್ರ ಹಂತದ ಪ್ರತಿಕ್ರಿಯಾಕಾರಿಗಳಾಗಿದ್ದು ಅದು ನಿಮ್ಮ ದೇಹದಲ್ಲಿ ಉರಿಯೂತ ಹೆಚ್ಚು ಮಾಡುತ್ತವೆ. ಅಧಿಕ ಸ್ಟಿರಾಯ್ಡ್‌ ಸೇವನೆಯಿಂದ ವೈರಲ್‌ ನ್ಯುಮೋನಿಯಾಗೆ ಕಾರಣವಾಗಬಹುದು ಎಂದು ಗುಲೇರಿಯಾ ಎಚ್ಚರಿಸಿದ್ದಾರೆ.

ಕೆಲವು ರೋಗಿಗಳು ರೋಗದ ಆರಂಭದಲ್ಲಿ ಸ್ಟಿರಾಯ್ಡ್​ಗಳನ್ನು ತೆಗೆದುಕೊಳ್ಳುತ್ತಾರೆ, ಇದು ವೈರಲ್ ದ್ವಿಗುಣವಾಗಿಸುತ್ತದೆ. ತೀವ್ರವಲ್ಲದ ಕೊವಿಡ್ ರೋಗವಾಗಿದ್ದರೆ ಹೆಚ್ಚಿನ ಪ್ರಮಾಣದ ಸ್ಟಿರಾಯ್ಡ್ ತೆಗೆದುಕೊಳ್ಳುವುದರಿಂದ ತೀವ್ರವಾದ ವೈರಲ್ ನ್ಯುಮೋನಿಯಾಕ್ಕೆ ಕಾರಣವಾಗಬಹುದು. ಸ್ಟಿರಾಯ್ಡ್ ಮಧ್ಯಮ ಹಂತದಲ್ಲಿ ಮತ್ತು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Karnataka Covid Curfew: ಮೇ 22ರವರೆಗೂ ಕರ್ನಾಟಕದಲ್ಲಿ ಕೊವಿಡ್ ಕರ್ಫ್ಯೂ; ಸಿಎಂ ಯಡಿಯೂರಪ್ಪ ಘೋಷಣೆ

ಸಿಟಿ ಸ್ಕ್ಯಾನ್, ರಕ್ತ ತಪಾಸಣೆ, ಸ್ಟೀರಾಯ್ಡ್ ಯಾವಾಗ ಅಗತ್ಯ?-ಅಪಾಯದ ಮುನ್ನೆಚ್ಚರಿಕೆ ಕೊಟ್ಟಿದ್ದಾರೆ ಏಮ್ಸ್​ ನಿರ್ದೇಶಕ

Published On - 6:44 pm, Tue, 4 May 21

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು