AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಹಾಸಿಗೆ ಬ್ಲಾಕ್ ಮಾಡುವ ದಂದೆಯ ವಿರುದ್ಧ ಕಠಿಣ ಕ್ರಮ; ಸಿಎಂ ಯಡಿಯೂರಪ್ಪ

Bengaluru Covid Hospital Beds: ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಕೊವಿಡ್ ವಾರ್ ರೂಂನಲ್ಲಿ ಏಜೆನ್ಸಿಯವರು ಹೋಂ ಐಸೋಲೇಶನ್​ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಬೆಂಗಳೂರಲ್ಲಿ ಹಾಸಿಗೆ ಬ್ಲಾಕ್ ಮಾಡುವ ದಂದೆಯ ವಿರುದ್ಧ ಕಠಿಣ ಕ್ರಮ; ಸಿಎಂ ಯಡಿಯೂರಪ್ಪ
ಬಿ.ಎಸ್​.ಯಡಿಯೂರಪ್ಪ
guruganesh bhat
|

Updated on:May 04, 2021 | 7:38 PM

Share

ಬೆಂಗಳೂರು: ನಗರದಲ್ಲಿ ಕೊವಿಡ್ ಸೋಂಕಿತರಿಗಾಗಿ ಮೀಸಲಿಟ್ಟ ಬೆಡ್​ಗಳ ಅಕ್ರಮ​ ಬ್ಲಾಕಿಂಗ್​ ದಂದೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸಂಸದ ತೇಜಸ್ವಿ ಸೂರ್ಯ ಈ ದಂದೆಯನ್ನು ಬಯಲಿಗೆಳೆದಿದ್ದಾರೆ. ಇನ್ನು ಅರ್ಧ ಗಂಟೆಯಲ್ಲಿ ಈ ಅವ್ಯವಹಾರದ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.

ಇದಕ್ಕೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ್ದ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಕೊವಿಡ್ ವಾರ್ ರೂಂನಲ್ಲಿ ಏಜೆನ್ಸಿಯವರು ಹೋಂ ಐಸೋಲೇಶನ್​ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ. ಬೆಡ್​ನ ಕೃತಕ ಅಭಾವ ಸೃಷ್ಟಿಸಿ 4 ಸಾವಿರಕ್ಕೂ ಹೆಚ್ಚು ಬೆಡ್​ಗಳ ಅವ್ಯವಹಾರ ಬೆಂಗಳೂರಿ‌ನಾದ್ಯಂತ ನಡೆಯುತ್ತಿದೆ. ಓರ್ವ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ಕಿಂಗ್ ಆಗಿದೆ. ರಾತ್ರೋರಾತ್ರಿ ಈ ಅವ್ಯವಹಾರ ನಡೆಯುತ್ತಿದೆ. ಇದು ಭ್ರಷ್ಟಾಚಾರ ಅಲ್ಲ, ಕೊಲೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಕೃತಕ ಅಭಾವ ಸೃಷ್ಟಿ ಹೇಗೆ? ಬೆಂಗಳೂರಿನಲ್ಲಿ ಯಾವುದೇ ವ್ಯಕ್ತಿಗೆ ಕೊರೊನಾ ಸೋಂಕು ಇದೆ ಎಂಬುದು ಖಚಿತವಾದ ತಕ್ಷಣ ಬಿಯು ನಂಬರ್ ಬಿಬಿಎಂಪಿ ವಾರ್​ ರೂಂಗೆ ಬರುತ್ತದೆ. ಉದಾಹರಣೆಗೆ ಬಸವನಗುಡಿ ನಿವಾಸಿಗೆ ಸೋಂಕು ಖಚಿತವಾದ ತಕ್ಷಣ ಬೆಂಗಳೂರು ಸೌತ್ ವಾರ್​ ರೂಂಗೆ ವಿವರ ಹೋಗುತ್ತೆ. ತಕ್ಷಣ ವಾರ್ ರೂಂನಿಂದ ಸೋಂಕಿತರಿಗೆ ಕರೆ ಮಾಡಿ ಕೊರೊನಾ ಲಕ್ಷಣಗಳು ಇವೆಯೇ ಎಂದು ವಿಚಾರಿಸಲಾಗುತ್ತದೆ. ಹೋಂ ಐಸೋಲೆಶನ್​ನಲ್ಲಿ ಇರುವವರ ಹೆಸರಲ್ಲಿ ಬಿಬಿಎಂಪಿ ವಾರ್ ರೂಂನಲ್ಲಿ ಕುಳಿತ ಅಧಿಕಾರಿಗಳು ಆಸ್ಪತ್ರೆಗಳ ಬೆಡ್​ಗಳನ್ನು ಬ್ಲಾಕ್ ಮಾಡ್ತಾರೆ. ಅವರ್ಯಾರೂ ಸರ್ಕಾರಿ ಅಧಿಕಾರಿಗಳಲ್ಲ. ಯಾವುದೋ ಏಜೆನ್ಸಿಯವರು. ಹೋಂ ಐಸೋಲೇಶನ್​ನಲ್ಲಿ ಇರುವವರ ಹೆಸರಲ್ಲಿ ಬೆಡ್ ಬ್ಲಾಕ್ ಮಾಡಿದ ತಕ್ಷಣ ಸಾರ್ವಜನಿಕರಿಗೆ ಬೆಡ್ ಇಲ್ಲ ಎಂದು ವೆಬ್​ಸೈಟ್​ನಲ್ಲಿ ತೋರಿಸುತ್ತದೆ. ಆದರೆ ನಿಜಕ್ಕೂ ಆ ಬೆಡ್ ಖಾಲಿ ಇರುತ್ತೆ. ಹೀಗೆ ಬೆಡ್ ಅವ್ಯವಸ್ಥೆ ಇದೆ ಎಂದು ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ದೂರಿದರು.

ಎ ಸಿಂಪ್ಟಮ್ಯಾಟಿಕ್ ಬಂದಿರುವ ವ್ಯಕ್ತಿಯ ಹೆಸರಿನಲ್ಲಿ ಬೆಡ್ ಬುಕ್ ಮಾಡಲಾಗುತ್ತೆ. 12 ಗಂಟೆಗಳ ನಡುವೆ ಯಾರ ಹೆಸರಲ್ಲಿ ಬೆಡ್ ಬುಕ್ ಆಗಿದೆಯೋ ಅವರು ಆಸ್ಪತ್ರೆಗೆ ದಾಖಲಾಗದಿದ್ದರೆ ಆ ಬೆಡ್ ಅವರ ಹೆಸರಿಂದ ಅನ್ ಬ್ಲಾಕ್ ಆಗುತ್ತೆ. ಆದರೆ 12 ಗಂಟೆಯ ಒಳಗೆ ವಾರ್ ರೂಂನಲ್ಲಿ ಕುಳಿತವರು ಹೊರಗಿನ ವ್ಯಕ್ತಿಗಳ ಜತೆ ವ್ಯವಹಾರ ಕುದುರಿಸಿ ಅಂಥವರಿಗೆ ಬೆಡ್ ಕೊಡ್ತಾರೆ. ಎ ಸಿಂಪ್ಟಮ್ಯಾಟಿಕ್ ಇರುವ ವ್ಯಕ್ತಿಯ ಹೆಸರಲ್ಲಿ ಬೆಡ್ ಬುಕ್ ಆಗಿರುವ ಕುರಿತು ಅಂತಹ ವ್ಯಕ್ತಿಗೇ ತಿಳಿದಿರುವುದಿಲ್ಲ. ಅಂತಹ ಹಲವು ದಾಖಲೆಗಳು ನಮ್ಮಲ್ಲಿವೆ. ಓರ್ವ ವ್ಯಕ್ತಿಗೆ ಕೊರೊನಾ ಬಂದು 20 ದಿನಗಳ ನಂತರ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ ಮಾಡಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೆರಿಟ್ ಆಧಾರದ ಮೇಲೆ ಎಸ್ಓಪಿ ಕಡಿಮೆ ಆದ ರೋಗಿಗೆ ಆದ್ಯತೆ ಕೊಡಬೇಕು. ಒಬ್ಬ ಸಂಸದನಾಗಿ ನಾನು ಒಂದು ಬೆಡ್ ಕೊಡಿಸುವೆ ಎಂದು ನಾನು ಹೇಳಲು ಆಗುತ್ತಿಲ್ಲ. ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ದೂರವಾಣಿ ಮೂಲಕ ವಿವರಿಸಿದ್ದೇನೆ. ಈ ಅವ್ಯವಹಾರದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕಿದೆ. ಸಿಎಂ ಯಡಿಯೂರಪ್ಪ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ ಎಂದು ಅವರು ವಿವರಿಸಿದರು.

ಬಿಬಿಎಂಪಿಯ ಅಧಿಕಾರಿಗಳ ಈ ಅವ್ಯವಹಾರದ ಬಗ್ಗೆ ರಾತ್ರಿ 2 ಗಂಟೆ 3 ಗಂಟೆ ವರೆಗೆ ಬೆನ್ನು ಬಿದ್ದು ಈ ಡೇಟಾ ಸಂಗ್ರಹಿಸಿದ್ದೇವೆ. ಯಾವ ಅಧಿಕಾರಿಗಳು ಸರಿಯಾದ ವಿವರ ಕೊಡುತ್ತಿಲ್ಲ. 5,000 ಬೆಡ್​ಗಳ ಮಾಹಿತಿ ಸಿಗುತ್ತಿಲ್ಲ. ಮಧ್ಯರಾತ್ರಿ 12 ಗಂಟೆಗೆ ಬೆಡ್ ಬುಕ್ ಆಗಿ 12 ಗಂಟೆ ಒಂದು ನಿಮಿಷಕ್ಕೆ ರೋಗಿ ದಾಖಲಾಗುತ್ತಾನೆ. ಇದು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.

ಅಮಿತ್ ಎಂಬಾತ್ ಮೇಲ್ಮಟ್ಟದ ಅಪೀಸ್ ಜತೆ ಮಾತಾಡಿ ಹೇಳ್ತಿನಿ ಅಂತಾನೆ. 25 ಸಾವಿರ ಹಣ ಗೂಗಲ್ ಪೇ ಮಾಡಿಸಿಕೊಳ್ತಾನೆ. ಅಮಿತ್ ಎಂಬಾತನನ್ನು ಈಗಾಗಲೇ ಪೋಲಿಸರು ಬಂಧಿಸಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕೇಂದ್ರ ಸರ್ಕಾರದಿಂದ ಈಗಾಗಲೇ 780 ವೆಂಟಿಲೇಟರ್​ಗಳು ಬಂದಿವೆ. ಆದರೂ ಅವುಗಳು ಉಪಯೋಗವಾಗುತ್ತಿಲ್ಲ ಎಂದು ಶಾಸಕರಾದ ಉದಯ ಗರುಡಾಚಾರ್ ಮತ್ತು ಸತೀಶ್ ರೆಡ್ಡಿ ವಿವರಿಸಿದರು.

ಇದನ್ನೂ ಓದಿ: 12 ಆಸ್ಪತ್ರೆಗಳಲ್ಲಿ ರಾತ್ರೋರಾತ್ರಿ ಬಿಬಿಎಂಪಿಯಿಂದ ಬೆಡ್ ಬುಕ್ಕಿಂಗ್ ದಂದೆ: ಇದು ಭ್ರಷ್ಟಾಚಾರ ಅಲ್ಲ, ಸೋಂಕಿತರ ಹತ್ಯೆ; ಸಂಸದ ತೇಜಸ್ವಿ ಸೂರ್ಯ

Tejasvi Surya: ಬೆಂಗಳೂರಲ್ಲಿ ಮಧ್ಯರಾತ್ರಿಯಲ್ಲಿ ಕೋವಿಡ್‌ ಬೆಡ್‌ ಬ್ಲಾಕ್‌ ಮಾಡ್ತಿರೋ ಕರಾಳ ದಂಧೆ ಬಯಲು ಮಾಡಿದ ತೇಜಸ್ವಿ ಸೂರ್ಯ

ಹೈದರಾಬಾದ್​ ಮೃಗಾಲಯದಲ್ಲಿರುವ 8 ಸಿಂಹಗಳಿಗೆ ಕೊರೊನಾ ಸೋಂಕು; ದೇಶದಲ್ಲೇ ಮೊದಲ ಪ್ರಕರಣ ಇದು

(action will took half an hour against artificial covid bed booking in Bangalore says Karnataka CM Yediyurappa)

Published On - 7:33 pm, Tue, 4 May 21

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?