ಬಿಬಿಎಂಪಿಯ ಬೆಡ್​ ಬುಕ್ಕಿಂಗ್ ಹಗರಣದ ತನಿಖೆ ಸಿಸಿಬಿಗೆ ವರ್ಗಾವಣೆ; ಪೊಲೀಸ್ ಆಯುಕ್ತ ಕಮಲ್​ ಪಂತ್​ ಟ್ವೀಟ್​

ಬಿಬಿಎಂಪಿ ಬೆಡ್​ ಬ್ಲಾಕಿಂಗ್​ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಸೇರಿ ಬಯಲಿಗೆಳೆದಿದ್ದು, ಇಂದಿನ ಸಭೆಯಲ್ಲಿ ಯಡಿಯೂರಪ್ಪನವರಿಗೂ ವರದಿ ನೀಡಿದ್ದಾರೆ.

ಬಿಬಿಎಂಪಿಯ ಬೆಡ್​ ಬುಕ್ಕಿಂಗ್ ಹಗರಣದ ತನಿಖೆ ಸಿಸಿಬಿಗೆ ವರ್ಗಾವಣೆ; ಪೊಲೀಸ್ ಆಯುಕ್ತ ಕಮಲ್​ ಪಂತ್​ ಟ್ವೀಟ್​
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್​
Follow us
Lakshmi Hegde
|

Updated on: May 04, 2021 | 10:41 PM

ಬೆಂಗಳೂರು: ಬಿಬಿಎಂಪಿ ಬೆಡ್​ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿ ಬೆಂಗಳೂರು ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ತಿಳಿಸಿರುವ ಕಮಲ್​ ಪಂತ್​, ಬಿಬಿಎಂಪಿ ಪೋರ್ಟಲ್​ ಮೂಲಕ ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಬೆಡ್ ಕಾಯ್ದಿರಿಸುವ ವಿಧಾನದಲ್ಲಿ ಅಕ್ರಮ ಎಸಗಿದವರ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ಹಾಗೇ, ಅಕ್ರಮದಲ್ಲಿ ಭಾಗಿಯಾದವರ ಬಗೆಗಿನ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಬಿಬಿಎಂಪಿ ಬೆಡ್​ ಬ್ಲಾಕಿಂಗ್​ ಹಗರಣವನ್ನು ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಸೇರಿ ಬಯಲಿಗೆಳೆದಿದ್ದು, ಇಂದಿನ ಸಭೆಯಲ್ಲಿ ಯಡಿಯೂರಪ್ಪನವರಿಗೂ ವರದಿ ನೀಡಿದ್ದಾರೆ. ಹಣಕೊಟ್ಟವರಿಗೆ ಹಾಸಿಗೆ ಮೀಸಲಿಡುವ ಈ ದಂಧೆಯ ಬಗ್ಗೆ ಹೆಚ್ಚಿನ ತನಿಖೆ ನಡೆಸುವುದಾಗಿಯೂ ಯಡಿಯೂರಪ್ಪ ಹೇಳಿದ್ದಾರೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರಾದ ಇಬ್ಬರನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೊರೊನಾ ತೀವ್ರವಾಗಿರುವ ಹೊತ್ತಲ್ಲಿ ರೋಗಿಗಳು ಬೆಡ್​ ಇಲ್ಲದೆ ಪರದಾಡುತ್ತಿರುವಾಗ ಬಿಬಿಎಂಪಿ ಅಧಿಕಾರಿಗಳು ಹಣ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ:ಆಕ್ಸಿಜನ್ ಖಾಲಿಯಾದ ವಿಷಯ ತಿಳಿದು ಗಂಟೆಯೊಳಗೆ 10 ಸಿಲಿಂಡರ್ ವ್ಯವಸ್ಥೆ ಮಾಡಿದ ಸಂಸದ ಪ್ರತಾಪ್ ಸಿಂಹ