ಬೆಂಗಳೂರು: ಕರ್ನಾಟಕದಲ್ಲಿ ಒಟ್ಟು 1189 ಮಂದಿಗೆ ಭಾನುವಾರ ಕೊರೊನಾ ಸೋಂಕು ದೃಢಪಟ್ಟಿದೆ. 22 ಮಂದಿ ಕೊವಿಡ್ನಿಂದ ಮೃತಪಟ್ಟಿದ್ದಾರೆ. 1456 ಮಂದಿ ಸೋಂಕಿನಿಂದ ಚೇತರಿಸಿಕೊಂಡು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದ ಪಾಸಿಟಿವಿಟಿ ಸರಾಸರಿ ಶೇ 0.94 ಇದೆ, ಸೋಂಕಿನ ಸಾವಿನ ಪ್ರಮಾಣ ಶೇ 1.85 ಇದೆ. ರಾಜ್ಯದಲ್ಲಿ ಈವರೆಗೆ 29,38,616 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 28,80,889 ಮಂದಿ ಚೇತರಿಸಿಕೊಂಡಿದ್ದಾರೆ. ಒಟ್ಟು 37,145 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, ಒಟ್ಟು 20,556 ಸಕ್ರಿಯ ಪ್ರಕರಣಗಳು ಇವೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (286) ಅತಿಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 267 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಇಂದು 300 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಒಟ್ಟು 7762 ಸಕ್ರಿಯ ಪ್ರಕರಣಗಳಿವೆ. ನಗರದಲ್ಲಿ ಈವರೆಗೆ 12,35,036 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,11,314 ಮಂದಿ ಚೇತರಿಸಿಕೊಂಡಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ದಕ್ಷಿಣ ಕನ್ನಡ 286, ಬೆಂಗಳೂರು ನಗರ 267, ಉಡುಪಿ 132, ಮೈಸೂರು 79, ಹಾಸನ 75, ಕೊಡಗು 55, ಚಿಕ್ಕಮಗಳೂರು 50, ಉತ್ತರ ಕನ್ನಡ 40, ತುಮಕೂರು 39, ಬೆಳಗಾವಿ 34, ಶಿವಮೊಗ್ಗ 24, ದಾವಣಗೆರೆ, ಮಂಡ್ಯ 19, ಬೆಂಗಳೂರು ಗ್ರಾಮಾಂತರ 12, ಚಿತ್ರದುರ್ಗ 10, ಚಾಮರಾಜನಗರ, ಕೋಲಾರ 8, ರಾಮನಗರ, ಬಳ್ಳಾರಿ 5, ಬಾಗಲಕೋಟೆ, ಧಾರವಾಡ 4, ಬೀದರ್, ಯಾದಗಿರಿ 3, ಗದಗ, ವಿಜಯಪುರ 2, ಹಾವೇರಿ, ಚಿಕ್ಕಬಳ್ಳಾಪುರ, ರಾಯಚೂರು, ಕೊಪ್ಪಳ 1.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಸಾವು?
ದಕ್ಷಿಣ ಕನ್ನಡ 4, ಧಾರವಾಡ, ಬೆಂಗಳೂರು ನಗರ, ತುಮಕೂರು, ಉಡುಪಿ 2, ಚಾಮರಾಜನಗರ, ಚಿಕ್ಕಮಗಳೂರು, ಬಾಗಲಕೋಟೆ, ಹಾಸನ, ಕೋಲಾರ ದಾವಣಗೆರೆ, ವಿಜಯಪುರ 1.
ಇಂದಿನ 22/08/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/v3lcOhvoPa @CMofKarnataka @BSBommai @mla_sudhakar @BBMPCOMM @mysurucitycorp @mangalurucorp @WFRising @DDChandanaNews @AIRBENGALURU1 @KarnatakaVarthe @PIBBengaluru pic.twitter.com/9TA14cM7yO
— K’taka Health Dept (@DHFWKA) August 22, 2021
(Karnataka Covid Numbers 1189 Infected of Coronavirus on August-22)
ಇದನ್ನೂ ಓದಿ: ಕರ್ನಾಟಕದ ಕೊರೊನಾ ಹಾಟ್ಸ್ಪಾಟ್ ಆಗುತ್ತಿದೆ ದಕ್ಷಿಣ ಕನ್ನಡ; ಕರಾವಳಿಯಲ್ಲಿ ಕೊವಿಡ್ ಹೆಚ್ಚಾಗಲು ಕಾರಣವೇನು?
ಇದನ್ನೂ ಓದಿ: Coronavirus cases in India: ದೇಶದಲ್ಲಿ 30,948 ಹೊಸ ಕೊವಿಡ್ ಪ್ರಕರಣ ಪತ್ತೆ, 403 ಮಂದಿ ಸಾವು