Coronavirus cases in India: ದೇಶದಲ್ಲಿ 30,948 ಹೊಸ ಕೊವಿಡ್ ಪ್ರಕರಣ ಪತ್ತೆ, 403 ಮಂದಿ ಸಾವು

Covid 19: ಶನಿವಾರದಂದು 15,85,681 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು 50,62,56,239 ಪರೀಕ್ಷೆಗಳನ್ನು ನಡೆಸಲಾಗಿದೆ. ದೈನಂದಿನ ಧನಾತ್ಮಕ ದರವು 1.95 ಶೇಕಡಾ ದಾಖಲಾಗಿದೆ.

Coronavirus cases in India: ದೇಶದಲ್ಲಿ 30,948 ಹೊಸ ಕೊವಿಡ್ ಪ್ರಕರಣ ಪತ್ತೆ, 403 ಮಂದಿ ಸಾವು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 22, 2021 | 10:47 AM

ದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 30,948 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿವೆ. ಸಕ್ರಿಯ ಪ್ರಕರಣಗಳು 3.53 ಲಕ್ಷಕ್ಕೆ ಇಳಿದಿದೆ. ಇದರೊಂದಿಗೆ, ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ 3.24 ಕೋಟಿಗೆ ತಲುಪಿದೆ. ಕೇರಳದಲ್ಲಿ 17,106 ಪ್ರಕರಣಗಳು ಮತ್ತು ಮಹಾರಾಷ್ಟ್ರದಲ್ಲಿ 4,575 ಪ್ರಕರಣಗಳು ವರದಿಯಾಗಿದೆ. ಈವರೆಗೆ 3.24 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿರುವುದು ಕಂಡುಬಂದಿದೆ. 403 ಮಂದಿ ಸಾವಿಗೀಡಾಗಿದ್ದು ಸಾವಿನ ಸಂಖ್ಯೆ 4.34 ಲಕ್ಷಕ್ಕೆ ಏರಿದೆ.

ಜೈಡಸ್ ಗ್ರೂಪ್ ಶನಿವಾರ ತನ್ನ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಬಳಸಬಹುದೆಂದು ಆಶಿಸಿದೆ. ತುರ್ತು ಬಳಕೆಯ ಅನುಮೋದನೆಯನ್ನು ಶಾಲೆಗಳು ಮತ್ತು ಕಾಲೇಜುಗಳಂತಹ ಸಂಸ್ಥೆಗಳಿಗೆ ಲಭ್ಯವಾಗುವಂತೆ ಮಾಡಬಹುದೆಂದು ಹೇಳಿದೆ. ಆದರೆ ಈ ನಿರ್ಧಾರವು ಅಂತಿಮವಾಗಿ ಸರ್ಕಾರದೊಂದಿಗೆ ಮಾತುಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಎಲ್ಲವೂ ಯೋಜಿಸಿದಂತೆ ನಡೆದರೆ, ಸೆಪ್ಟೆಂಬರ್ ಮಧ್ಯ ಅಥವಾ ಅಂತ್ಯದ ವೇಳೆಗೆ ಇದು ZyCoV-D ಯ ಆರಂಭಿಕ ಡೋಸ್‌ಗಳನ್ನು ತಲುಪಿಸಬಹುದು ಎಂದು ಅದು ಹೇಳಿದೆ.

ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವುಗಳು ವರದಿಯಾಗಿಲ್ಲ ಎಂದು ಹರ್ಯಾಣ ಸರ್ಕಾರ ವಿಧಾನಸಭೆಗೆ ತಿಳಿಸಿದ ಒಂದು ದಿನದ ನಂತರ, ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಶನಿವಾರ ಆಡಳಿತಾರೂಢ ಬಿಜೆಪಿ-ಜೆಜೆಪಿ ಮೈತ್ರಿ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಕೊರೊನಾದ ಎರಡನೇ ಅಲೆಯ ಸಮಯದಲ್ಲಿ ಸಾವುಗಳಿಗೆ ಸಂಬಂಧಿಸಿದ ಪತ್ರಿಕೆ ವರದಿಗಳ ಪ್ರತಿಗಳನ್ನು ತೋರಿಸಿದ ಹೂಡಾ “ಸರ್ಕಾರವು ಅಸೆಂಬ್ಲಿಯಲ್ಲಿ ತಪ್ಪು ಮಾಹಿತಿಯನ್ನು ನೀಡಿದೆ” ಎಂದು ಹೇಳಿದರು.

ಸಕ್ರಿಯ ಪ್ರಕರಣಗಳು 3,53,398 ಕ್ಕೆ ಇಳಿದಿದ್ದು ಇದು 152 ದಿನಗಳಲ್ಲಿ ಕಡಿಮೆ ಆಗದೆ. ರಾಷ್ಟ್ರೀಯ ಕೊವಿಡ್ -19 ಚೇತರಿಕೆಯ ಪ್ರಮಾಣವು 97.57 ಪ್ರತಿಶತಕ್ಕೆ ಏರಿಕೆಯಾಗಿದೆ. ಇದು ಮಾರ್ಚ್ 2020 ರಿಂದ ಗರಿಷ್ಠವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಶನಿವಾರದಂದು 15,85,681 ಪರೀಕ್ಷೆಗಳನ್ನು ನಡೆಸಲಾಗಿದ್ದು, ಇದುವರೆಗೆ ದೇಶದಲ್ಲಿ ಕೊವಿಡ್ -19 ಪತ್ತೆಗಾಗಿ ನಡೆಸಿದ ಒಟ್ಟು 50,62,56,239 ಪರೀಕ್ಷೆಗಳನ್ನು ನಡೆಸಲಾಗಿದೆ. ದೈನಂದಿನ ಧನಾತ್ಮಕ ದರವು 1.95 ಶೇಕಡಾ ದಾಖಲಾಗಿದೆ. ಕಳೆದ 27 ದಿನಗಳಿಂದ ಇದು ಶೇಕಡಾ ಮೂರುಕ್ಕಿಂತ ಕಡಿಮೆ ಆಗಿದೆ. ಸಾಪ್ತಾಹಿಕ ಧನಾತ್ಮಕ ದರವು ಎರಡು ಶೇಕಡಾ ದಾಖಲಾಗಿದೆ. ಕಳೆದ 58 ದಿನಗಳಿಂದ ಇದು ಶೇಕಡಾ ಮೂರುಕ್ಕಿಂತ ಕಡಿಮೆ ಇದೆ ಎಂದು ಸಚಿವಾಲಯ ತಿಳಿಸಿದೆ. ಕಾಯಿಲೆಯಿಂದ ಚೇತರಿಸಿಕೊಂಡವರ ಸಂಖ್ಯೆ 3,16,36,469 ಕ್ಕೆ ಏರಿದೆ. ಪ್ರಕರಣದ ಸಾವಿನ ಪ್ರಮಾಣವು 1.34 ಶೇಕಡಾ ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: Corona Vaccine For Children: ಬೆಂಗಳೂರಿನಲ್ಲಿ ಮಕ್ಕಳಿಗೂ ಸಿಗಲಿದೆ ಲಸಿಕೆ; ಎಲ್ಲಿ, ಯಾವಾಗ?

ಇದನ್ನೂ ಓದಿ: Cash Withdrawal: ಎಸ್​ಬಿಐ, ಪಿಎನ್​ಬಿ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್​ ನಗದು ವಿಥ್​ಡ್ರಾ ಮಿತಿ ಇಂತಿವೆ

(India records 30,948 new coronavirus and 403 deaths as per health ministry )

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ