ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ ನೀವು ಇಲ್ಲದಂತಾಗುತ್ತೀರಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ

Mehbooba Mufti: ಬಿಜೆಪಿ ನೇತೃತ್ವದ ಕೇಂದ್ರವು ಎನ್ಐಎ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳನ್ನು ಭಿನ್ನಾಭಿಪ್ರಾಯ ಮತ್ತು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ದುರ್ಬಳಕೆ ಮಾಡುತ್ತಿದೆ ಎಂದು ಪಿಡಿಪಿ ಮುಖ್ಯಸ್ಥರು ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ ನೀವು ಇಲ್ಲದಂತಾಗುತ್ತೀರಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ ಎಚ್ಚರಿಕೆ
ಮೆಹಬೂಬಾ ಮುಫ್ತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 22, 2021 | 11:33 AM

ಕಾಶ್ಮೀರ: ಅಫ್ಘಾನಿಸ್ತಾನದಿಂದ ಅಮೆರಿಕ ಪಡೆಗಳನ್ನು ಹಿಂತೆಗೆದುಕೊಳ್ಳುವಿಕೆಯಿಂದ ಪಾಠ ಕಲಿಯುವಂತೆ ಕೇಂದ್ರಕ್ಕೆ ಹೇಳಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (PDP) ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti)  ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಜನರು ತಾಳ್ಮೆ ಕಳೆದುಕೊಂಡರೆ, ನೀವು ಉಳಿಯುವುದಿಲ್ಲ – ನೀವು (ಸಹ) ಇಲ್ಲದಂತಾಗುತ್ತೀರಿ ಎಂದು ಮುಫ್ತಿ ಗುಡುಗಿದ್ದಾರೆ.

ಅಗಸ್ಟ್ 2019 ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಇಳಿಸಿದ ನಂತರ ಕಣಿವೆಯಲ್ಲಿನ ಮುಖ್ಯವಾಹಿನಿಯ ರಾಜಕೀಯ ನಾಯಕರ ಅಪರೂಪದ ಸಾರ್ವಜನಿಕ ಪ್ರಚಾರದ ಸಮಯದಲ್ಲಿ ಶನಿವಾರ ಮುಫ್ತಿ ದಕ್ಷಿಣ ಕಾಶ್ಮೀರದ ಕುಲ್ಗಾಂನಲ್ಲಿ ಸಾರ್ವಜನಿಕ ಮೆರವಣಿಗೆ ಉದ್ದೇಶಿಸಿ ಮಾತನಾಡುತ್ತಿದ್ದರು.

“ತಾಳ್ಮೆಗೆ ಧೈರ್ಯ ಬೇಕು. ಜಮ್ಮು ಮತ್ತು ಕಾಶ್ಮೀರದ ಜನರು ಅವರು ತಾಳ್ಮೆ ಕಳೆದುಕೊಂಡ ದಿನ, ನೀವು ಸಹ ಉಳಿಯುವುದಿಲ್ಲ – ನೀವು ಕಣ್ಮರೆಯಾಗುತ್ತೀರಿ ಎಂದು ಮುಫ್ತಿ ಹೇಳಿದರು. “ನಾನು ನಿಮಗೆ ಮತ್ತೆ ಮತ್ತೆ ಹೇಳುತ್ತಿದ್ದೇನೆ . ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ಅರ್ಥಮಾಡಿಕೊಳ್ಳಿ ಮತ್ತು ನಿಮ್ಮನ್ನು ನೀವೇ ತಿದ್ದಿಕೊಳ್ಳಿ ಎಂದು ಮುಫ್ತಿ ಹೇಳಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದು ಮತ್ತು ಕಾಶ್ಮೀರ ಸಮಸ್ಯೆಯನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳಬೇಕು ಎಂದು ಮುಫ್ತಿ ಕೇಂದ್ರವನ್ನು ಒತ್ತಾಯಿಸಿದರು. “ನೆರೆಹೊರೆಯಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ. ಅಂತಹ ದೊಡ್ಡ ಶಕ್ತಿ ಅಮೆರಿಕ ತಮ್ಮ ಹಾಸಿಗೆಗಳನ್ನು ಮಡಚಿ ಹಿಂದಿರುಗಬೇಕಾಯಿತು ಎಂದು ಅವರು ಹೇಳಿದರು. “ನಿಮಗೆ (ಕೇಂದ್ರ) ಇನ್ನೂ ಅವಕಾಶವಿದೆ. (ಮಾಜಿ ಪ್ರಧಾನಿ ಅಟಲ್ ಬಿಹಾರಿ) ವಾಜಪೇಯಿ-ಜಿ ಅವರು ಸಂವಾದವನ್ನು ಪ್ರಾರಂಭಿಸಿದರು.ಹೊರಗಿನ (ಪಾಕಿಸ್ತಾನ) ಮತ್ತು ಇಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನೀವೂ ಸಂವಾದ ಆರಂಭಿಸಬೇಕು.

ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವುದನ್ನು ಮತ್ತು ಹಿಂದಿನ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದನ್ನು ಉಲ್ಲೇಖಿಸಿದ ಮುಫ್ತಿ, “ನೀವು ನಮ್ಮನ್ನು ಕಾನೂನುಬಾಹಿರವಾಗಿ ಮತ್ತು ಅಸಂವಿಧಾನಿಕವಾಗಿ ದೋಚಿದ್ದೀರಿ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆಯನ್ನು ನೀವು ವಿರೂಪಗೊಳಿಸಿದ್ದೀರಿ ಮತ್ತು ನೀವು ಜಮ್ಮು ಕಾಶ್ಮೀರಕ್ಕೆ ಮಾಡಿದ ಈ ತಪ್ಪನ್ನು ಸರಿಪಡಿಸಿ, ಇಲ್ಲದಿದ್ದರೆ ತಡವಾಗುತ್ತದೆ “ಎಂದು ಅವರು ಹೇಳಿದರು.

ಬಿಜೆಪಿ ನೇತೃತ್ವದ ಕೇಂದ್ರವು ಎನ್ಐಎ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಸಂಸ್ಥೆಗಳನ್ನು ಭಿನ್ನಾಭಿಪ್ರಾಯ ಮತ್ತು ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ದುರ್ಬಳಕೆ ಮಾಡುತ್ತಿದೆ ಎಂದು ಪಿಡಿಪಿ ಮುಖ್ಯಸ್ಥರು ಆರೋಪಿಸಿದ್ದಾರೆ. ಕೋಮು ಧ್ರುವೀಕರಣದ ಎಚ್ಚರಿಕೆ ಬಿಜೆಪಿ ತನ್ನ ಮಾರ್ಗವನ್ನು ಸರಿಪಡಿಸಿಕೊಳ್ಳದಿದ್ದರೆ ಭಾರತವು ಕೋಮು ಮತ್ತು ಧಾರ್ಮಿಕ ನೆಲೆಗಟ್ಟಿನಲ್ಲಿ ಅನೇಕ ಭಾಗಗಳಾಗಿ ಒಡೆಯುತ್ತದೆ ಎಂದು ಅವರು ಹೇಳಿದರು.

ತಾಲಿಬಾನ್ ಅಮೆರಿಕವನ್ನು ಅನ್ನು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿಸಿದರು. ಆದರೆ ಈಗ ಅವರ (ತಾಲಿಬಾನ್) ನಡವಳಿಕೆಯನ್ನು ಜಗತ್ತು ನೋಡುತ್ತಿದೆ. ಜಗತ್ತನ್ನು ತಮ್ಮ ವಿರುದ್ಧ ಹೋಗುವಂತೆ ಮಾಡುವ ಯಾವುದೇ ಕೃತ್ಯವನ್ನು ಮಾಡಬಾರದೆಂದು ನಾನು ತಾಲಿಬಾನ್‌ಗಳನ್ನು ಒತ್ತಾಯಿಸುತ್ತೇನೆ. ಬಂದೂಕುಗಳ ಪಾತ್ರ ಮುಗಿದಿದೆ ಎಂದಿದ್ದಾರೆ ಮುಫ್ತಿ.

ಇದನ್ನೂ ಓದಿ: ’ತಾಲಿಬಾನಿಗಳನ್ನು ನೋಡಿ ಪ್ರಧಾನಿ ಮೋದಿ ಸರ್ಕಾರ ಪಾಠ ಕಲಿಯಲಿ’ -ಪರೋಕ್ಷವಾಗಿ ಉಗ್ರರನ್ನು ಹೊಗಳಿದ ಮೆಹಬೂಬಾ ಮುಫ್ತಿ

ಇದನ್ನೂ ಓದಿ: ವಾಯುಸೇನೆ ವಿಮಾನದಲ್ಲಿ ಆಫ್ಘನ್‌ನಿಂದ ಭಾರತಕ್ಕೆ ವಾಪಸಾದ 107 ಭಾರತೀಯರು

(If the people of Jammu and Kashmir lose patience you will disappear former JK CM Mehbooba Mufti warns Centre)

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ