Corona Vaccine For Children: ಬೆಂಗಳೂರಿನಲ್ಲಿ ಮಕ್ಕಳಿಗೂ ಸಿಗಲಿದೆ ಲಸಿಕೆ; ಎಲ್ಲಿ, ಯಾವಾಗ?

ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆ, ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ಬೆಳಗಾವಿ ಸೇರಿದಂತೆ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ. ಡಿಎನ್ಎ ಪ್ಲಾಸ್ಮಾಯಿಡ್ ಆಧರಿತ ಲಸಿಕೆ ಇದ್ದಾಗಿದ್ದು. ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು.

Corona Vaccine For Children: ಬೆಂಗಳೂರಿನಲ್ಲಿ ಮಕ್ಕಳಿಗೂ ಸಿಗಲಿದೆ ಲಸಿಕೆ; ಎಲ್ಲಿ, ಯಾವಾಗ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 22, 2021 | 7:29 AM

ಬೆಂಗಳೂರು: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಹಿರಿಯರಿಗೆ, ವಯಸ್ಕರಿಗೆ ಲಸಿಕೆ ಹಾಕಿಸಲಾಗುತ್ತಿದೆ. ಈಗ ಇದೇ ಬೆನ್ನಲೆ ಮಕ್ಕಳಿಗೂ ಲಸಿಕೆ ಹಾಕಲು ಸರ್ಕಾರ ಮುಂದಾಗಿದೆ. 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮೊದಲ ಕೋವಿಡ್ ಲಸಿಕೆ ‘ಝೈಕೋವ್ ಡಿ’ಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಭಾರತೀಯ ಔಷಧಿ ನಿಯಂತ್ರಣ ಸಂಸ್ಥೆ, ಸ್ವದೇಶಿ ನಿರ್ಮಿತ ಝೈಕೋನ್ -ಡಿ ಲಸಿಕೆಗೆ ಅನುಮೋದನೆ ನೀಡಿದೆ. ಈ ಲಸಿಕೆಯನ್ನು ಗುಜರಾತ್ ಮೂಲದ ಆಸ್ಟ್ರಾಜೆನೆಕಾ ಕಂಪನಿ ತಯಾರಿಸಿದ್ದು ಬೆಳಗಾವಿ ಸೇರಿದಂತೆ 50 ಕಡೆ ಯಶಸ್ವಿಯಾಗಿ ಟ್ರಯಲ್ ಮುಗಿಸಿದೆ. ಡಿಎನ್ಎ ಪ್ಲಾಸ್ಮಾಯಿಡ್ ಆಧರಿತ ಲಸಿಕೆ ಇದ್ದಾಗಿದ್ದು. ಜುಲೈ1 ರಂದು ಲಸಿಕೆ ಅನುಮತಿಗೆ ಅರ್ಜಿ ಸಲ್ಲಿಸಲಾಗಿತ್ತು. ಸದ್ಯ ಮೊನ್ನೆ ಡಿಸಿಜಿಐಯಿಂದ ಅನುಮೋದನೆ ಸಿಕ್ಕಿದೆ. ಇದೀಗ ಮಕ್ಕಳಿಗೆ ಲಸಿಕೆ ನೀಡಲು ಡಿಜಿಸಿಐ ನಿಂದ ಒಪ್ಪಿಗೆ ಬೆನ್ನಲೆ ದೇಶ್ಯಾದ್ಯಂತ ಲಸಿಕೆಗೆ ಭಾರೀ ಬೇಡಿಕೆಗೆ ಶುರುವಾಗಿದೆ. ಸಪ್ಟೆಂಬರ್ ನಿಂದ ಬೆಂಗಳೂರಿನಲ್ಲಿ ಝೈಕೋವ್ ಲಸಿಕೆಗೆ ಲಭ್ಯವಾಗುವ ಸಾಧ್ಯತೆ ಇದೆ.

ಇನ್ನು ಶೀಘ್ರದಲ್ಲೇ 12 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಝೈಕೋವ್ ಲಸಿಕೆ ಸಿಗುವ ಸಾಧ್ಯತೆ ಇದೆ. ಇದುವರೆಗೂ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿತ್ತು. ಮೊದಲ ಬಾರಿಗೆ 12 ರಿಂದ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಝೈಕೋವ್ ಡಿ‌ ಲಸಿಕೆ ಸೂಜಿ ರಹಿತ ಲಸಿಕೆಯಾಗಿದ್ದು. ಮಕ್ಕಳಿಗೆ ನೋವಾಗದಂತೆ ಮೂರು ಡೋಸ್ ಲಸಿಕೆ ನೀಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.

ಬೆಂಗಳೂರಿಗೆ ಯಾವಾಗ ಬರುತ್ತೆ ಝೈಕೋವ್ ಡಿ ಲಸಿಕೆ ಡಿಸಿಜಿಐ ನಿಂದ ಅನುಮೋದನೆ ಸಿಕ್ಕಿರುವ ಹಿನ್ನಲೆಯಲ್ಲಿ ಕೇಂದ್ರದಿಂದ ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟವಾಗಲಿದೆ. ಮಾರ್ಗಸೂಚಿ ಪ್ರಕಟಗೊಂಡ ನಂತರ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಗಲಿದೆ. ಬಳಿಕ ಬೆಂಗಳೂರಿನ ನಾಲ್ಕು ಪ್ರಸಿದ್ಧ ಖಾಸಗಿ ಆಸ್ಪತ್ರೆಗಳಲ್ಲಿ ಮೊದಲ ಲಸಿಕೆ ಬರುವ ಸಾಧ್ಯತೆ ಇದೆ. ಮಣಿಪಾಲ್, ಅಪೋಲೋ, ಕೋಲಂಬಿಯಾ ಏಷಿಯಾ ಸೇರಿದಂತೆ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಶೀಘ್ರದಲ್ಲೇ ಲಸಿಕೆ ಲಭ್ಯಯಾಗುವ ಸಾಧ್ಯತೆ ಇದೆ.

ರಷ್ಯಾದ ಸುಟ್ನಿಕ್ ಲಸಿಕೆ ಕೇವಲ ಖಾಸಗಿ ಆಸ್ಪತ್ರೆಯಲ್ಲಿ ಲಭ್ಯವಿದ್ದು ಅದರಂತೆ ಝೈಕೋವ್ ಡಿ ಲಸಿಕೆಗೂ ಮೊದಲು ಖಾಸಗಿ ಆಸ್ಪತ್ರೆಗಳಿಗೆ ನೀಡುವ ಸಾಧ್ಯತೆ ಇದೆ. ಶಾಲೆಗಳು ಆರಂಭ ಆಗುತ್ತಿರುವ ಹಿನ್ನಲೆ ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ಪೋಷಕರು ಕರೆ ಮಾಡಿ ಲಸಿಕೆಗೆ ಡಿಮ್ಯಾಂಡ್ ಮಾಡಿದ್ದಾರೆ. ಲಸಿಕೆ ದರ ನಿಗದಿ ಆಗುತ್ತಿದ್ದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಂಚಿಕೆ ಮಾಡಲಾಗುತ್ತೆ.

ಮೊದಲು ಯಾರಿಗೆ ಲಸಿಕೆ? ಝೈಕೋವ್ ಡಿ ಲಸಿಕೆ ಆರಂಭದಲ್ಲಿ ಎಲ್ಲರಿಗೂ ಸಿಗೋದು ಅನುಮಾನ. ಹೀಗಾಗಿ ಕೆಲ ಮಾನದಂಡಗಳನ್ನ ಸರ್ಕಾರ ಜಾರಿಗೆ ತರಲಿದೆ. ವೈದ್ಯರ ಸಲಹೆ ಮೇರೆಗೆ ಹೈ ರಿಸ್ಕ್ ಇರುವ ಮಕ್ಕಳಿಗೆ ಲಸಿಕೆ ನೀಡಲಾಗುತ್ತೆ. ಕೋಮಾರ್ಬಿಟಿಸ್ ನಿಂದ ಬಳಲುತ್ತಿರುವ ಮಕ್ಕಳಿಗೆ ಮೊದಲ ಲಸಿಕೆ ನೀಡಿ ನಂತರ ಉಳಿದ ಮಕ್ಕಳಿಗೆ ಲಸಿಕೆ‌ ಹಂಚಿಕೆ ಸಾಧ್ಯತೆ.

ಇದನ್ನೂ ಓದಿ: ಮಕ್ಕಳಿಗೆ ಶೀಘ್ರದಲ್ಲೇ ಕೊವಿಡ್ ಲಸಿಕೆ: ಯಾವ ವಯಸ್ಸಿನ ಮಕ್ಕಳಿಗೆ? ಯಾವಾಗ?

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ