ಬೆಂಗಳೂರಿನಲ್ಲಿ ಲಸಿಕೆ ಪಡೆದ 78 ಜನರಿಗೆ ಕೊರೊನಾ ದೃಢ, ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ
ಬಿಬಿಎಂಪಿ ಸಿಬ್ಬಂದಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೊವಿಡ್ ಱಂಡಮ್ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಟೆಸ್ಟ್‌ನಲ್ಲಿ ಸೋಂಕು ಪತ್ತೆಯಾದರೆ ಹಬ್ಬಗಳ ದಿನ ಮಾರುಕಟ್ಟೆಗಳನ್ನು ಕ್ಲೋಸ್ ಮಾಡಲು ಚಿಂತನೆ ನಡೆಸಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಸಿಕೆ ಪಡೆದ 78 ಜನರಿಗೆ ಕೊರೊನಾ ದೃಢಪಟ್ಟಿದೆ. 78 ಸೋಂಕಿತರ ಪೈಕಿ ನಾಲ್ವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 2 ಡೋಸ್ ಪಡೆದ 13 ಜನರಿಗೆ ಕೊರೊನಾ ದೃಢಪಟ್ಟಿದೆ. 13 ಸೋಂಕಿತರ ಪೈಕಿ 9 ಜನ ಆಸ್ಪತ್ರೆಗೆ ದಾಖಲಾಗಿದ್ದು ನಾಲ್ವರಿಗೆ ಆಕ್ಸಿಜನ್ ಬೆಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಿಬಿಎಂಪಿ ಸಿಬ್ಬಂದಿ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಕೊವಿಡ್ ಱಂಡಮ್ ಟೆಸ್ಟ್ ಮಾಡಲು ಮುಂದಾಗಿದ್ದಾರೆ. ಟೆಸ್ಟ್‌ನಲ್ಲಿ ಸೋಂಕು ಪತ್ತೆಯಾದರೆ ಹಬ್ಬಗಳ ದಿನ ಮಾರುಕಟ್ಟೆಗಳನ್ನು ಕ್ಲೋಸ್ ಮಾಡಲು ಚಿಂತನೆ ನಡೆಸಲಾಗಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಅಪಾರ್ಟ್‌ಮೆಂಟ್‌ಗಳಲ್ಲೂ ಕೊವಿಡ್ ಱಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ 75 ಅಪಾರ್ಟ್ಮೆಂಟ್ಗಳು ಸೀಲ್ಡೌನ್ ಮಾಡಲಾಗಿದೆ. ಬೆಂಗಳೂರು ನಗರದ 127 ಕಡೆ ಮೈಕ್ರೋ ಕಂಟೇನ್ಮೆಂಟ್, ಮಹದೇವಪುರ ವಲಯದಲ್ಲಿ 27 ಕಂಟೇನ್ಮೆಂಟ್ ಜೋನ್, ಬೊಮ್ಮನಹಳ್ಳಿ ವಲಯ 24, ಬೆಂಗಳೂರು ದಕ್ಷಿಣ ವಲಯ 22, ಪೂರ್ವ ವಲಯ 20, ಯಲಹಂಕ 20 ಕಂಟೇನ್ಮೆಂಟ್ ಜೋನ್, ಪಶ್ಚಿಮ 8, ಆರ್.ಆರ್.ನಗರ 6 ಕಂಟೇನ್ಮೆಂಟ್ ಜೋನ್ ಮಾಡಲಾಗಿದೆ.
ಸೋಮವಾರದಿಂದ (ಆಗಸ್ಟ್ 23) ಕರ್ನಾಟಕ ರಾಜ್ಯದಲ್ಲಿ ಶಾಲೆ ಶುರು ಆಗಲಿದೆ. ಕಳೆದ ಒಂದುವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಪುನಾರಂಭ ಪಡೆಯಲಿವೆ. ಕೊರೊನಾ ಪ್ರಕರಣಗಳು ಇನ್ನೂ ಸಂಪೂರ್ಣ ಇಳಿಕೆಯಾಗಿಲ್ಲ. ಕೊವಿಡ್19 ಮೂರನೇ ಅಲೆ ಎಂಬ ಆತಂಕವೂ ಮುಂದಿದೆ. ಈ ಮಧ್ಯೆ, ಶಾಲೆ ಓಪನ್ ಆಗಲಿದೆ. ಹಂತ ಹಂತವಾಗಿ ಶಾಲೆ ಆರಂಭ ಆಗಲಿರುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ನಾಳೆಯಿಂದ 9 ರಿಂದ 12 ನೇ ತರಗತಿಗಳಿಗೆ ಶಾಲೆ ಶುರು ಆಗಲಿದೆ. ಶೇಕಡಾ 2 ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇರುವ ಜಿಲ್ಲೆಗಳಲ್ಲಿ ನಾಳೆ (ಆಗಸ್ಟ್ 23) ಶಾಲೆ ಆರಂಭ ಆಗುವುದಿಲ್ಲ ಎಂದೂ ಮಾಹಿತಿ ನೀಡಲಾಗಿದೆ.
ಈಗಾಗಲೇ 16,850 ಪ್ರೌಢ ಶಾಲೆಗಳು ಹಾಗೂ 5,492 ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲೆ ಪುನಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳ್ಳಗ್ಗೆ 10 ರಿಂದ 1:30 ರವರೆಗೆ ಮಾತ್ರ ತರಗತಿಗಳು ನಡೆಯಲಿವೆ. ಶಾಲಾರಂಭಕ್ಕೆ ಈಗಾಗಲೇ ಶಿಕ್ಷಣ ಇಲಾಖೆ ಗೈಡ್ಲೈನ್ಸ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಕೊರೊನಾ ನಿರ್ವಹಣೆ, ನೆರೆಹಾನಿ ಕುರಿತು ಬಸವರಾಜ ಬೊಮ್ಮಾಯಿ ಸಭೆ; ನೆರೆಹಾನಿ ಸಮೀಕ್ಷೆ ಶೀಘ್ರ ಪೂರ್ಣಗೊಳಿಸಲು ಸೂಚನೆ
Published On - 9:26 am, Sun, 22 August 21




