ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; ತಿಮಿಂಗಿಲ ವಾಂತಿ ವಶ, ಅಫೀಮು ಮಾರಾಟ ಮಾಡ್ತಿದ್ದ ಆರೋಪಿಗಳು ಅರೆಸ್ಟ್

ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ 5 ಕೋಟಿ ರೂಪಾಯಿ ಬೆಲೆ ಬಾಳುವ 5 kg ತಿಮಿಂಗಿಲ ವಾಂತಿಯನ್ನು(ಅಂಬರ್ ಗ್ರೀಸ್) ವಶಕ್ಕೆ ಪಡೆದಿದ್ದು ಮಾರಾಟ ಮಾಡ್ತಿದ್ದ ತಮಿಳುನಾಡು ಮೂಲದ ಶಾಕಿರ್ನನ್ನು ಬಂಧಿಸಿದ್ದಾರೆ.

ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; ತಿಮಿಂಗಿಲ ವಾಂತಿ ವಶ, ಅಫೀಮು ಮಾರಾಟ ಮಾಡ್ತಿದ್ದ ಆರೋಪಿಗಳು ಅರೆಸ್ಟ್
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್
Follow us
TV9 Web
| Updated By: ಆಯೇಷಾ ಬಾನು

Updated on: Aug 22, 2021 | 12:32 PM

ಬೆಂಗಳೂರು: ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಅನೇಕ ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಪೊಲೀಸರು ಕಾರ್ಯಾಚರಣೆ ನಡೆಸಿ 5 ಕೋಟಿ ರೂಪಾಯಿ ಬೆಲೆ ಬಾಳುವ 5 kg ತಿಮಿಂಗಿಲ ವಾಂತಿಯನ್ನು(ಅಂಬರ್ ಗ್ರೀಸ್) ವಶಕ್ಕೆ ಪಡೆದಿದ್ದು ಮಾರಾಟ ಮಾಡ್ತಿದ್ದ ತಮಿಳುನಾಡು ಮೂಲದ ಶಾಕಿರ್ನನ್ನು ಬಂಧಿಸಿದ್ದಾರೆ.

ಅಲ್ಲದೆ ರಾಜಸ್ಥಾನದಿಂದ ಅಫೀಮು ತಂದು‌ ಮಾರಾಟ ಮಾಡ್ತಿದ್ದ ರಾಜಸ್ಥಾನದ ಅಮರ್ ರಾಮ್, ಮೋತಿಲಾಲ್ನನ್ನು ಬಂಧಿಸಿದ್ದಾರೆ. ಇವರಿಂದ ಸುಮಾರು 1 ಕೆ.ಜಿ ಅಫೀಮು ಜಪ್ತಿ ಮಾಡಲಾಗಿದೆ. ಆರೋಪಿಗಳು ಐಟಿ ಬಿಟಿ ಕಂಪನಿ ಉದ್ಯೋಗಿಗಳಿಗೆ ಅಫೀಮು ಮಾರಾಟ ಮಾಡುತ್ತಿದ್ದರು. ಹಾಗೂ ಕುಖ್ಯಾತ ಬೈಕ್ ಕಳ್ಳನನ್ನೂ ಸಹ ಬಂಧಿಸಿ ಬಂಧಿತನಿಂದ 3 ಲಕ್ಷ ರೂ ಮೌಲ್ಯದ ಐದು ಬೈಕ್ ವಶಕ್ಕೆ ಪಡೆದಿದ್ದಾರೆ. ವೀರಭದ್ರ ಅಲಿಯಾಸ್ ಸುಬ್ರಮಣಿ ಬಂಧಿತ ಆರೋಪಿ.

ಸುದ್ದಗುಂಟೆಪಾಳ್ಯ ಪೊಲೀಸರಿಂದ ಕುಖ್ಯಾತ ಮನೆಗಳ್ಳ ಮಂಜನಾಥ್ ಬಂಧನವಾಗಿದೆ. ಆರೋಪಿಯಿಂದ 35 ಲಕ್ಷ ರೂಪಾಯಿ ಮೌಲ್ಯದ 700 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಎಲೆಕ್ಟ್ರಾನಿಕ್‌ಸಿಟಿ, ಹುಳಿಮಾವು ಪೊಲೀಸರ ಕಾರ್ಯಚರಣೆ ನಡೆಸಿ ನಾಗೇಂದ್ರನನ್ನು ಬಂಧಿಸಿದ್ದು 1.5 ಕೋಟಿ ಮೌಲ್ಯದ ಸುಮಾರು 206 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬೇಗೂರು ಪೊಲೀಸರು ದೀಪಕ್, ಮಾರಿಮುತ್ತು ಎಂಬ ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ. ಇವರು ಹ್ಯಾಂಡ್ ಲಾಕ್ ಮುರಿದು ಬೈಕ್ ಕಳ್ಳತನ ಮಾಡ್ತಿದ್ದರು. ಹುಳಿಮಾವು, ಜೆಪಿನಗರ, ಮೈಕೋಲೇಔಟ್ ಸೇರಿ ಐದು ಠಾಣೆಗೆ ಬೇಕಾಗಿದ್ದ ಆರೋಪಿಗಳು.

ಇದನ್ನೂ ಓದಿ: ಬೆಂಗಳೂರು-ಮೈಸೂರು 6 ಪಥದ ರಸ್ತೆ ನಿರ್ಮಾಣ ವಿಚಾರ; ಸಂಸದ ಪ್ರತಾಪ್ ಸಿಂಹಗೆ ಹೆಚ್.ವಿಶ್ವನಾಥ್ ಟಾಂಗ್