ಜಾರ್ಖಂಡ​ ಜಡ್ಜ್​ ಹತ್ಯೆ ಕೇಸ್​ನಲ್ಲೊಂದು ಟ್ವಿಸ್ಟ್​; ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಸಿಬಿಐ

ಜಾರ್ಖಂಡ ಜಡ್ಜ್​ ಹತ್ಯೆ ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.. ಹಾಗೇ ಸಿಬಿಐ ಕೂಡ ತನಿಖೆ ಶುರು ಮಾಡಿದೆ. ಇದಕ್ಕಾಗಿ 20 ಜನರ ತಂಡ ರಚಿತವಾಗಿದೆ. ಹಲವು ಆಯಾಮಗಳ ವಿಚಾರಣೆಗಳನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

ಜಾರ್ಖಂಡ​ ಜಡ್ಜ್​ ಹತ್ಯೆ ಕೇಸ್​ನಲ್ಲೊಂದು ಟ್ವಿಸ್ಟ್​; ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ ಸಿಬಿಐ
ಧನ್​ಬಾದ್​ ಜಡ್ಜ್​ ವಾಕಿಂಗ್​ ಮಾಡುತ್ತಿದ್ದಾಗ ಡಿಕ್ಕಿ ಹೊಡೆದ ವ್ಯಾನ್​
Follow us
TV9 Web
| Updated By: Lakshmi Hegde

Updated on:Aug 22, 2021 | 10:05 AM

ಪಾಟ್ನಾ: ಕಳೆದ ತಿಂಗಳು ಜಾರ್ಖಂಡ್​​​ನಲ್ಲಿ ನಡೆದ ನ್ಯಾಯಾಧೀಶರ ಹತ್ಯೆ ಪ್ರಕರಣಕ್ಕೊಂದು ಸಣ್ಣ ಟ್ವಿಸ್ಟ್​ ಸಿಕ್ಕಿದೆ. ಕಳೆದ ತಿಂಗಳು ಧನ್​ಬಾದ್​​ ಜಡ್ಜ್​ ಉತ್ತಮ್​ ಆನಂದ್​ ಮುಂಜಾನೆ ವಾಕಿಂಗ್​ ಮಾಡುತ್ತಿದ್ದಾಗ, ಆಟೋ ರಿಕ್ಷಾ​​ವೊಂದು ಅವರಿಗೆ ಡಿಕ್ಕಿ ಮಾಡಿತ್ತು. ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣವನ್ನು ಸುಪ್ರೀಂಕೋರ್ಟ್ ಸುಮೊಟೊ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.. ಹಾಗೇ ಸಿಬಿಐ ಕೂಡ ತನಿಖೆ ಶುರು ಮಾಡಿದೆ. ಹಾಗೇ, ಜಡ್ಜ್​ ಹತ್ಯೆಗೆ ಸಂಬಂಧಪಟ್ಟಂತೆ ಹೊಸ ವಿಷಯಗಳನ್ನು, ಮಾಹಿತಿಯನ್ನೂ ಹೊರತೆಗೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬಂಧಿಸಿರುವ ಆರೋಪಿಗಳ ವಿಚಾರಣೆ ನಡೆಸಿರುವ ಸಿಬಿಐ, ಈ ಆರೋಪಿಗಳು ನ್ಯಾಯಾಧೀಶರನ್ನು ಹತ್ಯೆ ಮಾಡುವುದಕ್ಕೂ ಮೊದಲು ಮೊಬೈಲ್​ ಮೂಲಕ ಹಲವು ಕರೆಗಳನ್ನು ಮಾಡಿದ್ದಾರೆ. ಆದರೆ ಒಂದು ಏನೇಂದರೆ, ಈ ಕರೆಗಳನ್ನು ಮಾಡಲೆಂದೇ ಮೊಬೈಲ್​ಗಳನ್ನು ಕದ್ದಿದ್ದರು. ಅದೂ ಜಡ್ಜ್​​ ಉತ್ತಮ್​ ಆನಂದ್​ ಅವರನ್ನು ಹತ್ಯೆ ಮಾಡುವ ಮುನ್ನಾದಿನ ರಾತ್ರಿಯಷ್ಟೇ ಮೊಬೈಲ್​​ಗಳನ್ನು ಕದ್ದಿದ್ದಾರೆ ಎಂಬ ವಿಷಯ ಸ್ಪಷ್ಟವಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾಗಿ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಜಡ್ಜ್​ ಹತ್ಯೆ ಮಾಡುವ ಮುನ್ನಾದಿನ ರಾತ್ರಿ ಇಬ್ಬರು ಆರೋಪಿಗಳು, ಮೂರು ಫೋನ್​ಗಳನ್ನು ಕದ್ದಿದ್ದಾರೆ. ಆ ಮೂರು ಫೋನ್​ಗಳೂ ಕೂಡ ಪುರೇಂದು ವಿಶ್ವಕರ್ಮ ಎಂಬ ರೈಲ್ವೆ ಕಾಂಟ್ರಾಕ್ಟರ್​​ ಬಳಿ ಇದ್ದವೇ ಆಗಿದ್ದವು. ಈ ಫೋನ್​ಗಳು ಮೂಲಕ ಹಲವು ಕರೆಗಳನ್ನು ಮಾಡಿದ್ದಾರೆ. ಆದರೆ ಹೀಗೆ ಕರೆ ಮಾಡುವಾಗ ಸಿಮ್​​ಗಳನ್ನು ತಮ್ಮದೇ ಬಳಸಿಕೊಂಡಿದ್ದಾರೆ. ಈ ವಿಚಾರವನ್ನು ನಮ್ಮ ಬಳಿ ಆರೋಪಿಗಳೇ ಹೇಳಿಕೊಂಡಿದ್ದಾರೆ ಎಂದು ಸಿಬಿಐ ತಿಳಿಸಿದೆ. ಅಂದು ತಮ್ಮ ಮೊಬೈಲ್​ ಕಳುವಾದ ಬಳಿಕ ವಿಶ್ವಕರ್ಮಾ ಸ್ಥಳೀಯ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಆಗ ಅಲ್ಲಿದ್ದ ಕಾನ್​ಸ್ಟೆಬಲ್​ ವಿಜಯ್ ಯಾದವ್​ ಅದನ್ನು ತಮ್ಮ ಹಿರಿಯ ಅಧಿಕಾರಿಗಳಿಗೆ ತಿಳಿಸಲು ನಿರ್ಲಕ್ಷ್ಯ ಮಾಡಿದರು. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಉತ್ತಮ್​ ಆನಂದ್​ (49) ಧನ್​ಬಾದ್​ ಜಿಲ್ಲೆಯ ನ್ಯಾಯಾಧೀಶರಾಗಿದ್ದರು. ಜುಲೈ 28ರಂದು ಮುಂಜಾನೆ ಅವರ ಹತ್ಯೆಯಾಗಿದೆ. ಇದೊಂದು ಹಿಟ್​ ಆ್ಯಂಡ್​ ರನ್​ ಕೇಸ್​​. ನ್ಯಾಯಾಧೀಶರು ರಸ್ತೆಯ ಒಂದು ಬದಿಗೆ ವಾಕಿಂಗ್​ ಮಾಡುತ್ತಿದ್ದರೂ, ವ್ಯಾನ್​ ಅಲ್ಲಿಗೇ ಹೋಗಿ ಅವರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿದೆ. ಇದು ಮೊದಲು ಅಪಘಾತ ಎಂದೇ ಹೇಳಲಾಗಿತ್ತು. ಆದರೆ ಸಿಸಿಟಿವಿ ದೃಶ್ಯ ಬಹಿರಂಗವಾದ ಬಳಿಕವಷ್ಟೇ ಇದೊಂದು ಹತ್ಯೆ ಎಂದು ಗೊತ್ತಾಗಿದ್ದು. ಕೂಡಲೇ ಸುಪ್ರೀಂಕೋರ್ಟ್​ ವಿಚಾರಣೆ ಕೈಗೆತ್ತಿಕೊಂಡಿತು. ಹಲವು ನ್ಯಾಯಮೂರ್ತಿಗಳು ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು. ಅದರಂತೆ ಸಿಬಿಐನ 20 ಅಧಿಕಾರಿಗಳ ತಂಡ ರಚನೆಯಾಗಿ, ಆಗಸ್ಟ್​ 4ರಿಂದ ತನಿಖೆ ಶುರು ಮಾಡಿದೆ.

ಉತ್ತಮ್​ ಆನಂದ್​ ಅವರು ಹಲವು ಹೈಪ್ರೊಫೈಲ್​ ಕೇಸ್​ಗಳ ವಿಚಾರಣೆ ನಡೆಸುತ್ತಿದ್ದರು. ಮಾಫಿಯಾ ಹತ್ಯೆಗಳ ವಿಚಾರಣೆ ನಡೆಸಿದ್ದ ಅವರು, ಇಬ್ಬರು ಗ್ಯಾಂಗ್​ಸ್ಟರ್​ಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದರು. ಅಷ್ಟೇ ಅಲ್ಲ, ಸ್ಥಳೀಯ ಪ್ರಭಾವಿ ಶಾಸಕರೊಬ್ಬರ ಆಪ್ತನೊಬ್ಬನ ಕೈವಾಡವಿದೆ ಎಂದು ಹೇಳಲಾದ ಕೊಲೆ ಪ್ರಕರಣದ ವಿಚಾರಣೆಯನ್ನೂ ನಡೆಸಿದ್ದರು. ಅಲ್ಲಿಯೂ ಸಹ ಜಾಮೀನಿಗೆ ನಿರಾಕರಿಸಿದ್ದರು.

ಇದನ್ನೂ ಓದಿ: Viral Video: ವ್ಯಕ್ತಿ ತಯಾರಿಸಿದ ವಾಟರ್​ಮೆಲಾನ್​ ಪಿಜ್ಜಾ ನೋಡಿ ತಯಾರಿಗೆ ಮುಂದಾದ ಆಸ್ಟ್ರೇಲಿಯಾ ಡಾಮಿನೋಸ್​!

ಅಮೆರಿಕ ಘೋಷಿತ ಜಾಗತಿಕ ಉಗ್ರಗಾಮಿ ಖಲೀಲ್ ಹಕ್ಕಾನಿ ಕಾಬೂಲ್‌ನಲ್ಲಿ ರಾಜಾರೋಷವಾಗಿ ಓಡಾಟ

(Accused In Dhanbad Judge Murder Case Stole Mobile Phones says CBI)

Published On - 9:54 am, Sun, 22 August 21