ಬೆಂಗಳೂರು: ಕರ್ನಾಟಕದಲ್ಲಿ ಇಂದು ಒಂದೇ ದಿನ 2,052 ಜನರಿಗೆ ಕೊವಿಡ್ ಸೋಂಕು (Karnataka Covid Update) ದೃಢಪಟ್ಟಿದ್ದು, 35 ಜನರು ನಿಧನರಾಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಇಂದು ಒಂದೇ ದಿನ 506 ಜನರಿಗೆ ಸೋಂಕು ಖಚಿತವಾಗಿದ್ದು, 9 ಜನರು ಸಾವನ್ನಪ್ಪಿದ್ದಾರೆ. ಇಂದು ರಾಜ್ಯದಲ್ಲಿ 1,22,803 ಜನರಿಗೆ ಕೊವಿಡ್ ಲಸಿಕೆ ವಿತರಿಸಲಾಗಿದೆ. ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ 29,393 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದ್ದು, ಈವರೆಗೆ 2,97,22,558 ಡೋಸ್ ಕೊವಿಡ್ ಲಸಿಕೆ ವಿತರಿಸಲಾಗಿದೆ.
ಇಂದಿನ 29/07/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.https://t.co/QgVmc7fkvg @VisitUdupi @mangalurucorp @DCDK9 @mysurucitycorp @SmartDavangere @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/6bpEry12bR
— K’taka Health Dept (@DHFWKA) July 29, 2021
ರಾಜ್ಯದಲ್ಲಿ ಇಂದು (29ಜುಲೈ 2021 ರಾತ್ರಿ 9 ಗಂಟೆಯವರೆಗೆ) ನಡೆದ ಕೋವಿಡ್ ಲಸಿಕಾಕರಣದ ವಿವರಣೆ.@VisitUdupi @mangalurucorp @DCDK9 @mysurucitycorp @SmartDavangere @WFRising @DDChandanaNews @BelagaviKA @AIRBENGALURU1 @KarnatakaVarthe @PIBBengaluru pic.twitter.com/qejmiKpzhx
— K’taka Health Dept (@DHFWKA) July 29, 2021
ಇಂದು ರಾಜ್ಯದಲ್ಲಿ 1,332 ಜನರು ಕೊವಿಡ್ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಸದ್ಯ 23,253 ಸಕ್ರಿಯ ಕೊವಿಡ್ ಪ್ರಕರಣಗಳಿದ್ದು, ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.
ಇಂದು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 506 ಸೋಂಕಿತರು ಪತ್ತೆಯಾಗಿದ್ದು, ರಾಜ್ಯದಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಬೆಂಗಳೂರು ನಗರ ಜಿಲ್ಲೆಯೇ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 396 ಕೊವಿಡ್ ಸೋಂಕಿತರು ಪತ್ತೆಯಾಗಿದ್ದಾರೆ. ಉಡುಪಿ 174, ಮೈಸೂರು 157, ಹಾಸನ 136 ಕೊವಿಡ್ ಸೋಂಕೊತರು ಪತ್ತೆಯಾಗಿದ್ದಾರೆ.
ಇದನ್ನೂ ಓದಿ:
Uttara Kannada Flood: ಚಿತ್ರನೋಟ: ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಕೊಟ್ಟ ಭೂಕುಸಿತಕ್ಕೊಳಗಾದ ಕಳಚೆ ಗ್ರಾಮ ಹೇಗಿದೆ?
(Karnataka Covid Update 2052 new cases and 35 deaths in state today)