ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 39,305 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊವಿಡ್ 19ರಿಂದ 596 ಜನರ ನಿಧನರಾಗಿದ್ದಾರೆ. ಇದೇ ಅವಧಿಯಲ್ಲಿ ಬೆಂಗಳೂರಿನಲ್ಲಿ 16,747 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು, 374 ಜನರು ರಾಜಧಾನಿಯೊಂದರಲ್ಲೇ ಕೊವಿಡ್ನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗಿನ ಕೊರೊನಾ ಸೋಂಕಿತರ ಸಂಖ್ಯೆ 19,73,683ಕ್ಕೆ ಏರಿಕೆಯಾಗಿದ್ದು, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 9,67,640ಕ್ಕೆ ಏರಿಕೆಯಾಗಿದೆ. 571006 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಮೃತಪಟ್ಟವರನ್ನೂ ಸೇರಿ ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 19,372 ಜನರ ಸಾವನ್ನಪ್ಪಿದ್ದು, 5,71,006 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಲ್ಲಿ ಕೊರೊನಾದಿಂದ ಈವರೆಗೆ 8,431 ಜನರ ಸಾವನ್ನಪ್ಪಿದ್ದು,
3,52,454 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರು ಸೋಂಕಿತರ ವಿವರ
ಬೆಂಗಳೂರು ನಗರ ಜಿಲ್ಲೆ 16747, ತುಮಕೂರು 2,168, ಹಾಸನ 1,800, ಮೈಸೂರು 1,537, ದಕ್ಷಿಣ ಕನ್ನಡ 1,175, ಮಂಡ್ಯ 1,133, ಧಾರವಾಡ 1,006, ಕಲಬುರಗಿ 988, ಬಾಗಲಕೋಟೆ 968, ಬಳ್ಳಾರಿ 973, ಉತ್ತರ ಕನ್ನಡ 885, ಉಡುಪಿ 855, ಶಿವಮೊಗ್ಗ 820, ಕೋಲಾರ 755, ಬೆಳಗಾವಿ 736, ಯಾದಗಿರಿ 727, ವಿಜಯಪುರ 659, ಬೆಂಗಳೂರು ಗ್ರಾಮಾಂತರ 704, ಚಾಮರಾಜನಗರ 623, ಚಿಕ್ಕಬಳ್ಳಾಪುರ 599, ರಾಯಚೂರು 582, ಕೊಡಗು 534, ಕೊಪ್ಪಳ 412, ರಾಮನಗರ 337, ಚಿಕ್ಕಮಗಳೂರು 362, ಗದಗ 332, ಬೀದರ್ 305, ಹಾವೇರಿ 214,
ದಾವಣಗೆರೆ 197, ಚಿತ್ರದುರ್ಗ ಜಿಲ್ಲೆಯಲ್ಲಿ 172 ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಮೃತಪಟ್ಟವರ ಜಿಲ್ಲಾವಾರು ವಿವರ ಇಂತಿದೆ
ಬೆಂಗಳೂರು ನಗರ ಜಿಲ್ಲೆಯಲ್ಲಿ 374 ಜನರು, ಬಳ್ಳಾರಿ 26, ಹಾಸನ 22, ಬಾಗಲಕೋಟೆ, ತುಮಕೂರು 15, ಹಾವೇರಿ, ಮಂಡ್ಯ 12, ಶಿವಮೊಗ್ಗ, ಉತ್ತರ ಕನ್ನಡ 11, ಕೊಡಗು 9, ಧಾರವಾಡ, ಕೋಲಾರ 8, ಬೆಂಗಳೂರು ಗ್ರಾಮಾಂತರ ಜಿಲ್ಲೆ,ಚಾಮರಾಜನಗರ, ಮೈಸೂರು, ರಾಮನಗರ 7, ವಿಜಯಪುರ 6, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಕ್ಷಿಣ ಕನ್ನಡ 5, ಬೀದರ್ 4, ದಾವಣಗೆರೆ, ಕಲಬುರಗಿ, ರಾಯಚೂರು, ಯಾದಗಿರಿ 3, ಬೆಳಗಾವಿ, ಚಿತ್ರದುರ್ಗ, ಗದಗ, ಉಡುಪಿ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ.
ಇಂದಿನ 10/05/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/JO4WyDeWv0 @CMofKarnataka @BSYBJP @mla_sudhakar @drashwathcn @RAshokaBJP @BSBommai @CPBlr @PIBBengaluru @KarnatakaVarthe @PIBBengaluru @BBMPCOMM @BlrCityPolice @blrcitytraffic pic.twitter.com/ye8IDQeXVF
— K’taka Health Dept (@DHFWKA) May 10, 2021
ಇದನ್ನೂ ಓದಿ: ಕೇವಲ 100 ಘಂಟೆಗಳಲ್ಲಿ ಬಿಬಿಎಂಪಿ ಬೆಡ್ ಬುಕಿಂಗ್ ವಿಧಾನದಲ್ಲಿ ಮಹತ್ವದ 4 ಸುಧಾರಣೆ: ಸಂಸದ ತೇಜಸ್ವಿ ಸೂರ್ಯ
(Karnataka Covid Update 39,305 new cases and 596 fatalities in last 24 hours)
Published On - 7:53 pm, Mon, 10 May 21