ಸಮಾಜದಲ್ಲಿನ ದುರ್ಬಲ ವಿಭಾಗದವರ ಮನೆ ಬಾಗಿಲಿಗೆ ತೆರಳಿ ಕೊವಿಡ್ ಲಸಿಕೆ ನೀಡಲು ನಿರ್ದೇಶಿಸಿ: ಸುಪ್ರೀಂಕೋರ್ಟ್ಗೆ ವೈಬಿಎಐ ಮನವಿ
ವಿಶೇಷವಾಗಿ ದುರ್ಬಲ ವಿಭಾಗಳಿಗೆ ಮನೆ ಮನೆಗೆ ಲಸಿಕೆ ನೀಡುವುದು ಈ ಹೊತ್ತಿನ ತುರ್ತು. ಹೆಚ್ಚುವರಿಯಾಗಿ ಇದು ವ್ಯಾಕ್ಸಿನೇಷನ್ ಕೇಂದ್ರವನ್ನು ತಲುಪುವಾಗ ಸೋಂಕಿಗೆ ಒಳಗಾಗುವ ಅಪಾಯವನ್ನುಇದು ಕಡಿಮೆ ಮಾಡುತ್ತದೆ ಎಂದು ಯೂತ್ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಮನವಿಯಲ್ಲಿ ಹೇಳಿದೆ.
ದೆಹಲಿ: ಭಾರತದಲ್ಲಿ ವಾಸಿಸುವ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ವೃದ್ಧರು, ಅಂಗವೈಕಲ್ಯವಿರುವರು, ಕಡಿಮೆ ಸವಲತ್ತು ಹೊಂದಿರುವವರಿಗೆ, ದುರ್ಬಲ ವಿಭಾಗಗಳು ಮತ್ತು ತಮ್ಮ ವ್ಯಾಕ್ಸಿನೇಷನ್ಗಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಸಾಧ್ಯವಾಗದವರ ಮನೆ-ಮನೆಗೆ ತೆರಳಿ ಕೊವಿಡ್ ಲಸಿಕೆ ನೀಡಲು ಸೂಕ್ತ ಕ್ರಮಗಳ ನಿರ್ದೇಶನಗಳನ್ನು ಕೋರಿ ಯೂತ್ ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ (YBAI) ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ವೈಬಿಎಐ ಪರವಾಗಿ ಅರ್ಜಿಯನ್ನು ವಕೀಲ ಮಂಜು ಜೇಟ್ಲಿ ಸಲ್ಲಿಸಿದ್ದಾರೆ. ವಿಶೇಷವಾಗಿ ದುರ್ಬಲ ವಿಭಾಗಗಳಿಗೆ ಮನೆ ಮನೆಗೆ ಲಸಿಕೆ ನೀಡುವುದು ಈ ಹೊತ್ತಿನ ತುರ್ತು. ಹೆಚ್ಚುವರಿಯಾಗಿ ಇದು ವ್ಯಾಕ್ಸಿನೇಷನ್ ಕೇಂದ್ರವನ್ನು ತಲುಪುವಾಗ ಸೋಂಕಿಗೆ ಒಳಗಾಗುವ ಅಪಾಯವನ್ನುಇದು ಕಡಿಮೆ ಮಾಡುತ್ತದೆ.
ನಾವು ದುರ್ಬಲರಿಗೂ ಕೊವಿಡ್ ಲಸಿಕೆ ನೀಡುವ ಮೂಲಕ ಅವರನ್ನು ಬಲಶಾಲಿಗಳನ್ನಾಗಿ ಮಾಡಬೇಕು. ಯಾವುದೇ ವ್ಯಕ್ತಿಯು ವ್ಯಾಕ್ಸಿನೇಷನ್ ನಿಂದ ಹೊರಗುಳಿಯುವುದು ಸಾರ್ವಜನಿಕ ಹಿತಾಸಕ್ತಿಗೆ ಹಾನಿಕಾರಕವಾಗಿದೆ. ಭಾರತವು “ಕಲ್ಯಾಣ ರಾಜ್ಯ” ಎಂದು ಮನವಿಯಲ್ಲಿ ಹೇಳಿದ್ದು ಸಾರ್ವಜನಿಕ ಕಲ್ಯಾಣವನ್ನು ಭದ್ರಪಡಿಸುವ ಬಗೆಗಿನ ತನ್ನ ಹೊಣೆಗಾರಿಕೆಯನ್ನು ಭಾರತ ಒಪ್ಪಿಕೊಳ್ಳಬೇಕು ಮತ್ತು ತನ್ನ ಎಲ್ಲ ನಾಗರಿಕರ ಹಿತಾಸಕ್ತಿಗೆ ಸೇವೆ ಸಲ್ಲಿಸಬೇಕು. ಕೇಂದ್ರ ಸರ್ಕಾರವು ಹೊರಡಿಸಿದ ಯುನಿವರ್ಸಲ್ ಇಮ್ಯುನೈಸೇಶನ್ ಯೋಜನೆ ಮತ್ತು ರಾಷ್ಟ್ರೀಯ ವ್ಯಾಕ್ಸಿನೇಷನ್ ಅಭಿಯಾನ ಮೂಲಕ ಲಸಿಕೆಯನ್ನು ಕೇಂದ್ರದಿಂದ ಸಂಗ್ರಹಿಸಲಾಗುವುದು. ಇದನ್ನು ಸಾರ್ವಜನಿಕರಿಗೆ ಉಚಿತವಾಗಿ ಮತ್ತು ಸಾರ್ವತ್ರಿಕವಾಗಿ ಕ್ರಮೇಣ ವಿತರಿಸಲಾಗುವುದು ಎಂಬ ನ್ಯಾಯಸಮ್ಮತ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಕೊವಿಡ್ ಲಸಿಕೆ ಜೀವ ಉಳಿಸುವ ಔಷಧವಾಗಿದೆ ಮತ್ತು ಇದನ್ನು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯಲ್ಲಿ ಸೇರಿಸಲಾಗುವುದು. ಆರ್ಥಿಕವಾಗಿ ಹಿಂದುಳಿದ ವರ್ಗ, ಸಮಾಜದಿಂದ ದಮನಕ್ಕೊಳಗಾದ ವ್ಯಕ್ತಿಗಳು ಅಂದರೆ ಟ್ರಾನ್ಸ್ ಜೆಂಡರ್ ಮತ್ತು ಲೈಂಗಿಕ ಕಾರ್ಯಕರ್ತರು, ಸಮಾಜದ ಹಿಂದುಳಿದ ವರ್ಗಗಳು, ವಿಕಲಚೇತನರಿಗಾಗಿ 24/7 ಟೋಲ್ ಫ್ರೀ ಪೋರ್ಟಲ್ ಬೂತ್ ರಚಿಸಲು ಪ್ಯಾನ್ ಇಂಡಿಯಾಕ್ಕೆ ನಿರ್ದೇಶನ ನೀಡಲಾಗುವುದು. ಲಸಿಕೆ ಕೇಂದ್ರವನ್ನು ಅವರ ವಯಸ್ಸು ಅಥವಾ ವೈದ್ಯಕೀಯ ಅಂಗವೈಕಲ್ಯದಿಂದಾಗಿ ಲಸಿಕೆಗಾಗಿ ನೋಂದಾಯಿಸಿಕೊಳ್ಳಬಹುದು. ಜಾಹೀರಾತುಗಳು, ಹೋರ್ಡಿಂಗ್ ಮತ್ತು ಟೋಲ್ ಫ್ರೀ ಸಂಖ್ಯೆ ಇತ್ಯಾದಿಗಳ ಮೂಲಕ ಪ್ರಶ್ನೆಗಳನ್ನು ಪರಿಹರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.
ದೂರದ ಪ್ರದೇಶಗಳಲ್ಲಿ ವಾಸಿಸುವವರು ಸೇರಿದಂತೆ ಸಮಾಜದ ದುರ್ಬಲ ವರ್ಗದವರಿಗೆ ಲಸಿಕೆ ನೀಡಲು ಲಸಿಕೆ ಬೂತ್‌ಗಳು, ಮೊಬೈಲ್ ವ್ಯಾನ್‌ಗಳು ಮತ್ತು ವಾಹನಗಳನ್ನು ಸಹ ನೀಡಬಹುದು. ಲಸಿಕೆ ವಿತರಣೆ ವೇಳೆ ಅಸ್ಮಿತೆ ಬಾಧಿಸದಿರಲಿ. ಹಾಗಾಗಿ ಮನೆ-ಮನೆಗೆ ಲಸಿಕೆ ನೀಡುವಂತೆ ನಿರ್ದೇಶಿಸಲು ಸುಪ್ರೀಂ ಕೋರ್ಟ್‌ನ್ನು ಕೋರಿದ್ದೇವೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಮನೆ-ಮನೆ-ವ್ಯಾಕ್ಸಿನೇಷನ್‌ನ ಕಾರ್ಯಚಟುವಟಿಕೆಗೆ ಮಾರ್ಗಸೂಚಿಗಳನ್ನು ಅಥವಾ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (ಎಸ್‌ಒಪಿ) ಯನ್ನು ರೂಪಿಸಬೇಕು. ಜೊತೆಗೆ ಟೋಲ್ ಫ್ರೀ 24/7 ಪೋರ್ಟಲ್ ಅನ್ನು ಸ್ಥಾಪಿಸುವ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಕೊವಿಡ್ ನಿರ್ವಹಣೆ: ತಾಂತ್ರಿಕ ಸಮಸ್ಯೆಯಿಂದಾಗಿ ವಿಚಾರಣೆ ಮೇ 13ಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
(YBAI Moves Supreme Court Seeking provision of Door-To-Door Vaccination Of Vulnerable Sections Of Society)
Published On - 6:04 pm, Mon, 10 May 21