Horoscope Today 10 June: ಈ ರಾಶಿಯವರು ಅಜ್ಞರಂತೆ ಇದ್ದು ಎಲ್ಲವನ್ನೂ ಮಾಡಿಸಿಕೊಳ್ಳುವರು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಶುಕ್ಲ ಪಕ್ಷದ ಪೂರ್ಣಿಮಾ ತಿಥಿ ಮಂಗಳವಾರ ರಹಸ್ಯ ಸಮಾಲೋಚನೆ, ಮಕ್ಕಳಿಗೆ ಭವಿಷ್ಯ ನಿರ್ಮಾಣ, ಕುಟುಂಬದಲ್ಲಿ ಒಡಕು, ಮಾನಸಿಕ ಖಿನ್ನತೆ ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪೂರ್ಣಿಮಾ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಸಿದ್ಧಿ, ಕರಣ: ಗರಜ, ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 15:46 – 17:23, ಯಮಘಂಡ ಕಾಲ 09:18 – 10:55, ಗುಳಿಕ ಕಾಲ 12:32 – 14:09
ಮೇಷ ರಾಶಿ: ನಿಮ್ಮ ತಿಳಿವಳಿಕೆಯನ್ನು ಅಪಹಾಸ್ಯ ಮಾಡುವರು. ಉದ್ಯೋಗವನ್ನು ಬದಲಿಸಲು ಯಾರದೋ ಕೈವಾಡದ ಅನುಮಾನ ಬರಲಿದೆ. ಆದಾಯಕ್ಕೆ ಯೋಗ್ಯವಾದ ಕೃಷಿ ಚಟುವಟಿಕೆಯಲ್ಲಿ ನಿಮ್ಮದೇ ಆದ ಹೆಜ್ಜೆಗಳನ್ನು ಇಡುವಿರಿ. ನೀವು ಆಸ್ತಿಗೆ ಸಂಬಂಧಿಸಿದ ವಿವಾದವು ಇನ್ನೊಂದು ತಿರುವನ್ನು ಪಡೆಯಬಹುದು. ನಿಮ್ಮ ಶಕ್ತಿ, ಸಾಮರ್ಥ್ಯಗಳು ಅನ್ಯರಿಗೂ ತಿಳಿಯಲಿದೆ ಇಂದು. ಅಧ್ಯಾತ್ಮದ ಕಡೆ ಮನಸ್ಸು ಒಲಿಯಲಿದೆ. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಲಿದೆ. ಆದರೆ ಕೆಲಸದ ಸ್ಥಳದಲ್ಲಿ ಬದಲಾವಣೆಯಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಜಂಬದಿಂದ ದಿನ ಹಾಳಾಗುವುದು. ಸಂಗಾತಿಯಿಂದ ಅನಿರೀಕ್ಷಿತ ಮಾತುಗಳನ್ನು ಕೇಳಿ ಆಶ್ಚರ್ಯಪಡುವಿರಿ. ಮಕ್ಕಳಿಗೆ ನಿಮ್ಮ ಬಗ್ಗೆ ಹೆಮ್ಮೆಯಾಗಲಿದೆ. ಪಾಲುದಾರಿಕೆಗಾಗಿ ಇಂದು ದೂರ ಪ್ರಯಾಣ ಮಾಡಬೇಕಾಗುವುದು. ಉತ್ಸಾಹದಿಂದ ಎಲ್ಲರನ್ನೂ ಜೋಡಿಸಿಕೊಂಡು ಕೆಲಸವನ್ನು ಮುಗಿಸುವಿರಿ. ಇಂದೇ ಒಂದಕ್ಕಿಂತ ಹೆಚ್ಷು ಕಾರ್ಯಗಳನ್ನು ಒಟ್ಟಿಗೆ ಮಾಡಬೇಕಾಗುವುದು.
ವೃಷಭ ರಾಶಿ: ಸಂಚಾರದಲ್ಲಿ ಬಹಳ ಆತುರ ಕಾಣಿಸುವುದು. ಇಂದು ಇನ್ನೊಬ್ಬರ ಬಗ್ಗೆ ನಿಮಗೆ ಸಹಜವಾದ ಕರುಣೆ ಇರುವುದು. ವಿದ್ಯಾಭ್ಯಾಸದಲ್ಲಿ ಶ್ರಮದ ಅಗತ್ಯ ಬಹಳ ಕಾಣಿಸುವುದು. ಪರಿಚಿತರಿಂದ ಶತ್ರು ಬಾಧೆಯನ್ನು ತಪ್ಪಿಸಿಕೊಳ್ಳುವಿರಿ. ಎಂತಹ ಸವಾಲನ್ನೂ ನೀವು ಎದುರಿಸುವ ಹುಂಬುತನದಲ್ಲಿ ಏನನ್ನಾದರೂ ಮಾಡಿಕೊಳ್ಳುಬಿರಿ. ಕೆಲವೊಂದು ಕೆಲಸ ಕಾರ್ಯಗಳಲ್ಲಿ ನೀವು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸಬಹುದು. ಆದರೆ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳನ್ನು ದೂರವಿಡಬೇಕು. ನೇರವಾದ ಮಾಹಿತಿಯು ಮಾತ್ರ ನಂಬಿ. ವ್ಯಾಪಾರ ಅಭಿವೃದ್ಧಿಯಾಗಲಿದೆ. ದೈವಭಕ್ತಿಯನ್ನು ಬೆಳೆಸಿಕೊಳ್ಳುವುದು ಉತ್ತಮ. ಪುರುಷ ಪ್ರಯತ್ನವೇ ಶ್ರೇಷ್ಠ ಎಂದು ನಂಬುವವರು ಇಂದು ನೀವಾಗುವಿರಿ. ಈ ದಿನವನ್ನು ಅನಾಯಾಸವಾಗಿ ಕಳೆಯುವಿರಿ. ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ತೊಡಗಿಸಲು ಪ್ರಯತ್ನಶೀಲರಾಗುವಿರಿ. ಯಾರನ್ನಾದರೂ ಮಾದರಿ ವ್ಯಕ್ತಿಯನ್ನಾಗಿ ಮಾಡಿಕೊಳ್ಳುವಿರಿ. ನೀವು ಅಂದುಕೊಂಡಂತೆ ಎಲ್ಲವೂ ನಡೆಯುತ್ತದೆ ಎಂದು ನಂಬುವಿರಿ.
ಮಿಥುನ ರಾಶಿ: ಎದುರಿಗೆ ಚೆನ್ನಾಗಿ ಇದ್ದರೂ ಹಿಂದಿನಿಂದ ಬೇಡದುದನ್ನು ಹೇಲಕುವರು. ಯಾರಾದರೂ ಆಮಿಷವನ್ನು ತೋರಿಸಿ ಕೆಲಸವನ್ನು ಮಾಡಿಸಿಕೊಳ್ಳಬಹುದು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳು ಉಪಯುಕ್ತ ಮಾಹಿತಿಯನ್ನು ಕೊಟ್ಟಾರು. ಮನಸ್ಸಿನಲ್ಲಿ ಬೇಸರ ಇರುತ್ತದೆ. ಆತ್ಮವಿಶ್ವಾಸದ ಕೊರತೆ ಇರುತ್ತದೆ. ಶೈಕ್ಷಣಿಕ ಕೆಲಸದಲ್ಲಿ ಯಶಸ್ವಿಯಾಗುವಿರಿ. ಬುದ್ಧಿವಂತಿಕೆಗೆ ಸಂಬಂಧಿಸಿದ ಕಾರ್ಯಗಳಿಂದ ಆದಾಯ ಹೆಚ್ಚಾಗುತ್ತದೆ. ಅನಾರೋಗ್ಯ ತಪಾಸಣೆಯಿಂದ ಹೊಸ ರೋಗ ಪತ್ತೆಯಾಗಬಹುದು. ಎಲ್ಲರ ಜೊತೆ ಪ್ರೀತಿಯಿಂದ ಇರುವ, ವರ್ತಿಸುವ ಗುಣ ನಿಮ್ಮದು. ನಿಮ್ಮನ್ನು ಇಷ್ಟಪಡುವವರ ಸಂಖ್ಯೆ ಹೆಚ್ಚಾಗಲಿದೆ. ಮಂದಗತಿಯಲ್ಲಿ ಸಾಗುವ ಜೀವನಕ್ಕೆ ವೇಗ ಬೇಕು ಎನ್ನಿಸಬಹುದು. ಬರಬೇಕಾದ ಹಣದ ಬಗ್ಗೆ ತಿಳಿದಿರಲಿ. ಹಣವನ್ನು ನೀವೇ ಕೇಳಿ ಒಡೆಯುವುದು ಉತ್ತಮ. ಮನೆಯ ವಿಚಾರವನ್ನು ಯಾರ ಬಳಿಯೂ ಹಂಚಿಕೊಳ್ಳುವುದು ಬೇಡ. ಇಂದು ನಿಮಗೆ ಅದೃಷ್ಟವಿರುವ ಕಾರಣ ಉತ್ತಮ ಫಲವನ್ನು ಪಡೆಯುವಿರಿ.
ಕರ್ಕಾಟಕ ರಾಶಿ: ಕೇಳುದ್ದಕ್ಕೆ ಸರಿಯಾಗಿ ಉತ್ತರಿಸಬೇಕಾದೀತು. ನಿಮ್ಮ ವರ್ತನೆಯಿಂದ ಅಧಿಕಾರವು ತಪ್ಪಬಹುದು. ಆಸ್ತಿಯ ಬಗ್ಗೆ ಸರಿಯಾದ ದಾಖಲೆಗಳು ಇರಲಿ. ಕೈ ತಪ್ಪಿ ಹೋಗುವ ಕೆಲಸವನ್ನು ಹೇಗಾದರೂ ಉಳಿಸಿಕೊಳ್ಳುವಿರಿ. ಕಲೆಯ ಕಡೆಗೆ ಒಲವು ಹೆಚ್ಚಾಗಬಹುದು. ನಿಮ್ಮನ್ನು ಎಲ್ಲ ರೀತಿಯಿಂದ ಬಂಧನ ಮಾಡುವ ಪ್ರಯತ್ನ ಇರಲಿದೆ. ವ್ಯಾಪಾರ, ವ್ಯವಹಾರದಲ್ಲಿ ಹೆಚ್ಚಿನ ಜಂಜಾಟವಿರುತ್ತದೆ. ಉದ್ಯೋಗಕ್ಕಾಗಿ ಯಾವುದಾದರೂ ಸಂದರ್ಶನ ಎದುರಿಸಿದ್ದರೆ ನಿಮಗೆ ಶುಭ ಸುದ್ದಿ ಬರಬಹುದು. ಅಧಿಕ ಪ್ರಯಾಣದ ಆಯಾಸದಿಂದ ಬಳಲಿ ಬೆಂಡಾಗುವಿರಿ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ. ನಿದ್ರೆಯು ಚೆನ್ನಾಗಿ ಬಾರದೇ ಸಂಕಟಪಡುವಿರಿ. ಸಂಗಾತಿಯ ಜೊತೆ ಇಂದು ಸಂತೋಷದಿಂದ ಕಳೆಯುವಿರಿ. ಕುಟುಂಬವು ನಿಮ್ಮ ಬೆಂಬಲಕ್ಕೆ ಇರಲಿದೆ. ಆರೋಗ್ಯದ ವಿಚಾರದಲ್ಲಿ ನಿಮಗೆ ಸಮಸ್ಯೆ ಆಗುವುದು. ವೃತ್ತಿಯ ಸ್ಥಳದಲ್ಲಿ ನಿಮ್ಮ ವಿರುದ್ಧ ಮಾತುಗಳು ಕೇಳಿಬರುವುದು. ಅಶಿಸ್ತು ನಿಮಗೆ ಸಿಟ್ಟನ್ನು ತರಬಹುದು. ಬದ್ಧತೆಯನ್ನು ರೂಢಿಸಿಕೊಳ್ಳುವುದು ನಿಮಗೆ ಸುಲಭವಾಗದು.
ಸಿಂಹ ರಾಶಿ: ಅವಮಾನಕ್ಕೆ ಪ್ರತಿಯಾಗಿ ಅವಮಾನ ಮಾಡುವಿರಿ. ಸಂಬಂಧದಿಂದ ಭೂಮಿಯ ಲಾಭವು ಆಗುವುದಾದರೂ ಅದನ್ನು ಪರಿಶೀಲಿಸಿ ಒಪ್ಪಿಕೊಳ್ಳಿ. ಹಿತಶತ್ರುಗಳಿಂದ ನೀವು ಹತಾಶರಾದಂತೆ ತೋರುವುದು. ನಿಮ್ಮ ಎಚ್ಚರಿಕೆಯಲ್ಲಿ ನೀವಿರಬೇಕು. ನಿಮ್ಮನ್ನು ಗೆಲ್ಲಲು ಸಹೋದ್ಯೋಗಿಗಳು ಪ್ರಯತ್ನಿಸುವರು. ನೀವು ಇಷ್ಟ ಪಟ್ಟಿದ್ದು ಆಗಿಲ್ಲವೆಂಬ ಆಲೋಚನೆ ಬಲವಾಗಿರುವುದು. ನಿಮ್ಮ ತಾಯಿಯಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರಿಗಳಿಗೆ ಇಂದು ಲಾಭವಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ನಿಮ್ಮ ಮಕ್ಕಳ ಮೇಲೆ ಗಮನವಿರಲಿ. ಅನಿರೀಕ್ಷಿತ ಹಣದ ವ್ಯಯದಿಂದ ಸ್ವಲ್ಪ ಚಂಚಲರಾಗುವಿರಿ. ಮೊದಲ ವೇತನವನ್ನು ಪಡೆದು ಖುಷಿ ಪಡುವಿರಿ. ಖರ್ಚನ್ನು ನೀವು ಸ್ನೇಹಿತರ ಜೊತೆ ಸಮವಾಗಿ ಹಂಚಿಕೊಳ್ಳುವಿರಿ. ಯಾರನ್ನೂ ಮಾನಸಿಕವಾಗಿ ಹಿಂಸಿಸುವುದು ಬೇಡ. ವ್ಯವಹಾರಗಳ ವಿಷಯದಲ್ಲಿ ಅದೃಷ್ಟವಂತರಾಗಿರುವಿರಿ. ನೀವು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವಿರಿ.
ಕನ್ಯಾ ರಾಶಿ: ನಿಮ್ಮ ದಾಖಲೆಗಳನ್ನು ಭದ್ರಪಡಿಸಲಾಗದು. ಇಂದು ನಿಮಗೆ ಯಾರಿಂದಲಾದರೂ ಯೋಗ್ಯ ಸಂಗಾತಿಯ ಮಾಹಿತಿಗಳು ಸಿಗುವುದು. ಕುರುಡು ತನದಿಂದ ಎಲ್ಲಿಯೋ ಹೂಡಿಕೆ ಮಾಡುವುದನ್ನು ತಪ್ಪಿಸಿ. ಮತ್ತೊಬ್ಬರೊಂದಿಗೆ ಮಾತನಾಡುವಾಗ ಮಾತುಗಳ ಮೇಲೆ ಎಚ್ಚರ ಇರಲಿ. ಪ್ರಯಾಣದಲ್ಲಿ ವಿಘ್ನ ಬಂದರೂ ಕೊನೆಗೆ ಅಂತ್ಯ ಕಾಣುವಿರಿ. ವೆಚ್ಚಗಳು ಹೆಚ್ಚಾಗಬಹುದು, ಆದ್ದರಿಂದ ಆದಾಯ ಮತ್ತು ವೆಚ್ಚಗಳ ನಡುವೆ ಸಮತೋಲನ ಮಾಡಿಕೊಳ್ಳಬೇಕು. ಮನೆಯಲ್ಲಿ ಗೊತ್ತಿಲ್ಲ ಕೆಲಸವನ್ನು ಮಾಡಲು ಹೋಗಿ ಅಪಮಾನವಾಗಲಿದೆ. ಸಂಗಾತಿಯ ಮುನಿಸನ್ನು ತಣ್ಣಗಾಗಿಸಿ. ಕಾರಣವನ್ನು ತಿಳಿದು ಸಮಾಧಾನ ಮಾಡಿ. ಈ ಸಂದರ್ಭದಲ್ಲಿ ಮರುಮಾತನಾಡದೇ ಇರುವುದು ಒಳ್ಳೆಯದು. ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಮನೆಯ ನೆನಪಾಗಬಹುದು. ಪಿತ್ತ ಮತ್ತು ಕಫಗಳ ಸಂಬಂಧದಿಂದ ರೋಗಗಳು ಬರಬಹುದು. ಆಹಾರವನ್ನು ಸರಿಯಾಗಿ ಸ್ವೀಕರಿಸಿ ಅದನ್ನು ಸರಿಮಾಡಿಕೊಳ್ಳಿ. ಹೊಸತನ್ನು ಏನನ್ನಾದರೂ ಮಾಡಬೇಕೆಂಬ ಬಯಕೆ ಬರುವುದು.
ತುಲಾ ರಾಶಿ: ದಾಂಪತ್ಯದ ಸುಖದಿಂದ ತೃಪ್ತಿ ಸಿಗಲಿದೆ. ಇಂದು ಮಾಡುವ ಕಾರ್ಯವನ್ನು ನೀವು ಬಹಳ ಅಲಕ್ಷ್ಯದಿಂದ ಮಾಡುವಿರಿ. ಎಲ್ಲದೂ ಗೊತ್ತು ಎಂಬ ಗತ್ತು ಎದ್ದು ಕಾಣಿಸುವುದು. ಯಾವುದಾನ್ನಾದರೂ ಬರವಣಿಗೆಯ ಮೂಲಕವೇ ವ್ಯವಹರಿಸಿ. ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ವ್ಯಾಪಾರಕ್ಕಾಗಿ ನೀವು ನಿಮ್ಮ ತಂದೆಯಿಂದ ಹಣವನ್ನು ಪಡೆಯಬಹುದು. ಆದಾಯದ ಮೂಲ ಹೆಚ್ಚಾಗಲಿದೆ. ತಂದೆ ಮತ್ತು ಮಕ್ಕಳ ನಡುವೆ ಪ್ರೀತಿ ಇರುತ್ತದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ಕಾಳಜಿ ಮಾಡಿದಷ್ಟೂ ಕಳೆದುಕೊಳ್ಳುವ ಸಾಧ್ಯತೆ ಇದೆ. ಸಂಗಾತಿಯನ್ನು ಸ್ವತಂತ್ರವಾಗಿ ಬಿಡಿ. ಅವರ ಭಾವನೆಗಳಿಗೆ ನೋವನ್ನು ತರಲಬೇಡಿ. ಹಣ ಸಂಪಾದನೆಗೆ ಉತ್ತಮವಾದ ಮಾರ್ಗವು ನಿಮಗೆ ಗೊತ್ತಾಗಲಿದೆ. ದೇವಾಲಯದಿಂದ ನಿಮಗೆ ಸಕಾರಾತ್ಮಕ ಅಂಶಗಳನ್ನು ಪಡೆದುಕೊಳ್ಳಿ. ಸಹೋದರನಿಂದ ಭಾವನೆಗೆ ಪೆಟ್ಟುಬೀಳುವ ಸಾಧ್ಯತೆ ಇದೆ. ಎಲ್ಲರದ್ದೂ ಒಂದಾದರೆ ನಿಮ್ಮದೇ ಒಂದು ದಾರಿಯಾಗಲಿದೆ.
ವೃಶ್ಚಿಕ ರಾಶಿ: ಬಿಟ್ಟ ಉದ್ಯೋಗದ ಸ್ಥಳದಿಂದ ಪುನಃ ಕರೆ ಬರಬಹುದು. ನಿಮ್ಮ ಆದಾಯವನ್ನು ಹೆಚ್ಚು ಮಾಡಿಕೊಳ್ಳುವ ಬಗ್ಗೆ ಆಪ್ತರ ಸಲಹೆ ಅವಶ್ಯಕ. ಹೂಡಿಕೆಯ ಮೇಲೆ ನಿಮಗೆ ಪೂರ್ಣ ವಿಶ್ವಾಸ ಬರಬಹುದು. ಹೊಸ ವಿಚಾರಗಳನ್ನು ತಿಳಿದುಕೊಳ್ಳುವ ಹಂಬಲವಿರಲಿದೆ. ವೃತ್ತಿಪರವಾಗಿ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಸಂಗಾತಿಯೊಂದಿಗಿನ ಸಂಬಂಧವು ಸುಧಾರಿಸುತ್ತದೆ. ಹಿರಿಯರಿಂದ ಆಶೀರ್ವಾದ ಪಡೆಯುವಿರಿ. ನೀವು ಪೂರ್ವಜರ ಆಸ್ತಿಯಿಂದಲೂ ಲಾಭ ಪಡೆಯಬಹುದು. ಅತಿಯಾದ ಹಠದ ಸ್ವಭಾವದಿಂದ ಒಂಟಿಯಾಗುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಉನ್ನತ ಪದವಿಗೆ ಅವಕಾಶಗಳು ಸಿಗಲಿದೆ. ನಿಮ್ಮ ಯಶಸ್ಸಿನ ಗುಟ್ಟನ್ನು ಬಿಟ್ಟುಕೊಡಬೇಡಿ. ನಿಮ್ಮನ್ನು ನೋಡುವ ದೃಷ್ಟಿಯೇ ಬದಲಾದೀತು. ನೀವೇ ನಿಮ್ಮ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮವರನ್ನು ಸಂತೋಷಗೊಳಿಸುವಿರಿ. ಇಂದು ನಿಮಗೆ ಕಷ್ಟವಾದರೂ ತಾಳ್ಮೆಯಿಂದ ವ್ಯವಹರಿಸಿ. ಸ್ನೇಹಿತರ ಜೊತೆ ಹೆಚ್ಚು ಮೋಜಿನಲ್ಲಿ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿಯ ಬೆಂಬಲವು ಖುಷಿ ಕೊಡುವುದು.
ಧನು ರಾಶಿ: ಸಾಲದ ಶೇಷವನ್ನು ಉಳಿಸಿಕೊಳ್ಳುವುದು ಬೇಡ. ನೀವು ಪರರ ತಪ್ಪಿನಿಂದ ಕಲಿಯುವುದು ಉತ್ತಮ. ಮನೆಯ ಕಾರಣಕ್ಕೆ ಉದ್ಯೋಗದ ಕಿರಿಕಿರಿಯು ನಿಮ್ಮನ್ನು ಬಾಧಿಸದೇ ಇರದು. ನಿಮಗಿಂದು ಅದೃಷ್ಟದ ದಿನವೆಂದೇ ಹೇಳಬಹುದು. ಕೆಲಸದ ರೀತಿ ನೀತಿ ಬದಲಾವಣೆಯಾಗಬಹುದು. ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಮಂಗಲಕರವಾದ ವಸದತುವಬ್ನು ಸೇವಿಸಿ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಪರಿಚಿತರನ್ನು ಎದುರುಹಾಕಿಕೊಳ್ಳಬೇಡಿ. ಹಳೆಯ ಪ್ರೇಮಪ್ರಕರಣವು ಮುನ್ನೆಲೆಗೆ ಬರಬಹುದು. ಕಳೆದುಕೊಂಡಿದ್ದರೆ ಬಗ್ಗೆ ಆಲೋಚಿಸುತ್ತ ಸಮಯವನ್ನು ವ್ಯರ್ಥಮಾಡಬೇಡಿ. ಮುಂದೆ ಆಗುವುದರ ಬಗ್ಗೆಯೂ ಯೋಚನೆ ಇರಲಿ. ಇಂದು ಸ್ತ್ರೀಯರ ತಾಳ್ಮೆಗೆ ಪರೀಕ್ಷೆಯಾಗಬಹುದು. ಸಾಮಾಜಿಕ ವಲಯದಲ್ಲಿ ಯಶಸ್ವಿಯಾಗಿ ಮುನ್ನಡೆಯುವಿರಿ. ನ್ಯಾಯಾಲಯದಲ್ಲಿ ನಿಮ್ಮ ವಾದಕ್ಕೆ ಸೋಲಾಗಬಹುದು. ಹೂಡಿಕೆಯು ನಿಮಗೆ ನಿರೀಕ್ಷಿತ ಆದಾಯವನ್ನು ನೀಡುವುದಿಲ್ಲ. ಪೂರ್ವ ತಯಾರಿ ಇಲ್ಲದೇ ಯಾವ ಕಾರ್ಯವನ್ನೂ ಮಾಡಬೇಡಿ.
ಮಕರ ರಾಶಿ: ಕೃಷಿಯಲ್ಲಿ ಆದಾಯದ ಕಡೆ ಗಮನವಿರುವುದು. ಇಂದು ನಿಮ್ಮ ಹಳೆಯ ದಾಯಾದಿ ಕಲಹವು ಪುನಃ ಆರಂಭವಾಗಬಹುದು. ಆಕಸ್ಮಿಕ ಧನಲಾಭ ಹಾಗೂ ಖರ್ಚುಗಳು ಒಟ್ಟಿಗೇ ಆಗಲಿವೆ. ವಿವಾಹ ಯೋಗವು ಕೂಡಿಬರಲಿದ್ದು, ಅಲ್ಲಗಳೆಯುವುದು ಬೇಡ. ದುಃಸ್ವಪ್ನದಿಂದ ಮಾನಸಿಕವಾಗಿ ಕುಗ್ಗುವಿರಿ. ನಿಮ್ಮ ಹಾಗೂ ಪ್ರೇಮಿಯ ಮನಃಸ್ಥಿತಿಯಲ್ಲಿ ಏರಿಳಿತಗಳು ಇರಬಹುದು. ಪೂರ್ಣ ವಿಶ್ವಾಸ ಇರುತ್ತದೆ. ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ನೀವು ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಪ್ರೀತಿಸಿ ಮೋಸಹೋಗುವ ಸಾಧ್ಯತೆ ಇದೆ. ಪ್ರೀತಿಸುವಾಗ ಪೂರ್ವಾಪರ ಯೋಚನೆ ಇರಲಿ. ಸಾಲವನ್ನು ಮಾಡಿ ವಾಹನವನ್ನು, ಖರೀದಿಸುದು ಬೇಡ. ಸಮಯಸ್ಫೂರ್ತಿಯಿಂದ ನೀವು ನಿಮ್ಮವರನ್ನು ಸಂತೋಷವಾಗಿರಿಸುವಿರಿ. ಇಂದು ನಿಮ್ಮ ಸಹೋದರರು ಆರ್ಥಿಕ ಸಹಾಯವನ್ನು ಕೇಳಬಹುದು. ಉಚಿತವಾಗಿ ಯಾವುದನ್ನೂ ಬಯಸುವುದು ಬೇಡ. ಸ್ವಾಭಿಮಾನವನ್ನು ಬಿಟ್ಟು ವಿಚಲಿತರಾಗುವುದು ನಿಮ್ಮ ಸ್ವಭಾವ ಆಗಲಾರದು.
ಕುಂಭ ರಾಶಿ: ಆಪ್ತರ ಬಳಿ ಮಾತನಾಡದೇ ನಿಮ್ಮನ್ನು ನಿಷ್ಠುರ ಮಾಡುವರು. ನೀವು ಇಂದು ಅಧಿಕಾರಗಳ ಜೊತೆ ವಾಗ್ವಾದ ಮಾಡುವಿರಿ. ಇಂದಿನ ಹಣಕಾಸಿನ ಬಿಕ್ಕಟ್ಟು ಮನಸ್ಸಿನ ವೇಗವನ್ನು ಹೆಚ್ಚಿಸುವುದು. ಸಣ್ಣ ವಿಚಾರಗಳೂ ನಿಮಗೆ ಸಮಸ್ಯೆಯಂತೆ ತೋರುವುದು. ಉದ್ಯೋಗದಲ್ಲಿ ಪ್ರಗತಿಯ ಹಾದಿ ಸುಗಮವಾಗಿರುತ್ತದೆ, ಆದಾಯ ಹೆಚ್ಚಲಿದೆ. ಶುಭ ಕಾರ್ಯಕ್ಕೆ ಎಲ್ಲರನ್ನು ಒಟ್ಟುಗೂಡಿಸುವಿರಿ. ಕೆಲಸಕ್ಕೆ ಸಂಬಂಧಿಸಿದಂತೆ ನೀವು ಕುಟುಂಬದಿಂದ ದೂರ ಉಳಿಯಬೇಕಾದ ಸಂದರ್ಭ ಬರಬಹುದು. ಕಲಹದ ವಿಚಾರದಲ್ಲಿ ರಾಜಿಯಾಗುವ ಸನ್ನಿವೇಶಗಳು ಬರಬಹುದು. ಹಿರಿಯರ ಸಮ್ಮುಖದಲ್ಲಿ ಮನೆಯ ಕಾರ್ಯವು ಮುನ್ನಡೆದರೆ ಸೊಗಸು. ನೂತನ ವಾಹನ ಖರೀದಿಯನ್ನು ಮಾಡುವಿರಿ. ಇಂದಿನ ನಿಮ್ಮ ಪ್ರಯಾಣವು ಬಹಳ ಖರ್ಚಿನದ್ದಾಗಲಿದೆ. ಹೂಡಿಕೆಯನ್ನು ಮಾಡುವಾಗ ಮಾನಸಿಕ ನಿಯಂತ್ರಣವನ್ನು ಇಟ್ಟುಕೊಳ್ಳಿ. ತಂದೆಯ ಜೊತೆ ಸಂಬಂಧವು ಚೆನ್ನಾಗಿ ಇರುವವಂತೆ ನೋಡಿಕೊಳ್ಳಿ.
ಮೀನ ರಾಶಿ: ಮಕ್ಕಳು ನಿಮಗೆ ಗೌರವ ಬರುವಂತೆ ನೋಡಿಕೊಳ್ಳುವರು. ಇಂದು ನೀವೊಬ್ಬರೇ ಯತ್ನಿಸಿದರೂ ಕಾರ್ಯದಲ್ಲಿ ಜಯವು ಸಿಗುವುದು. ಹಿತೈಷಿಗಳ ಬೆಂಬಲವೂ ನಿಮಗೆ ಅತ್ಯವಶ್ಯವಾಗಿ ಬೇಕು. ರಾಜಕೀಯದಲ್ಲಿ ಅನಿರೀಕ್ಷಿತ ಬದಲಾವಣೆಯನ್ನು ನೀವು ಒಪ್ಪಿಕೊಳ್ಳಬೇಕಾಗುವುದು. ಅಜ್ಞಾತವಾಗಿರುವುದರಲ್ಲಿ ಖುಷಿ ಇದೆ. ನೀವು ಕೆಲಸದಲ್ಲಿ ನಿರತರಾಗಿರಬಹುದು. ಅದು ನಿಮ್ಮ ಜೀವನಶೈಲಿ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಪ್ರೀತಿಪಾತ್ರರಿಂದ ನೀವು ಬೆಂಬಲ ಪಡೆಯುತ್ತೀರಿ. ಖರ್ಚು ವೆಚ್ಚದ ಮೇಲೆ ಗಮನ ಇರಲಿ. ಗೊತ್ತಿಲ್ಲ ವಿಚಾರಗಳನ್ನು ಅನುಭವಿಗಳಿಂದ, ಹಿರಿಯರಿಂದ ತಿಳಿದುಕೊಳ್ಳುವಿರಿ. ಸ್ನೇಹಿತರೊಂದಿಗೆ ಸುತ್ತಾಡಲು ಎಲ್ಲೋ ಹೋಗಬಹುದು. ಬೆನ್ನು ನೋವಿನ ಸಮಸ್ಯೆಯು ಕಾಣಿಸಿಕೊಳ್ಬಹುದು. ನೀವಿಂದು ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದೀರಿ. ನಿಮ್ಮ ಮಾತಿಗೆ ಮನ್ನಣೆ ಸಿಗಲಿಲಿದೆ. ದ್ವೇಷವನ್ನು ಮುಂದುವರಿಸುವುದು ನಿಮಗೆ ಇಷ್ಟವಾಗದು. ದೈಹಿಕವಾಗಿ ದುರ್ಬಲರಾದಂತೆ ನಿಮಗೆ ಅನ್ನಿಸೀತು. ಬಂಧುಗಳ ಒಡನಾಟದಿಂದ ನೋವನ್ನು ಕಳೆಯುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)