ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..

ಸಾರ್ಸ್ ಕೊವಿಡ್ 19 ಕಣಗಳು ಬಾಯಿ-ಮೂಗು ಪ್ರವೇಶಿಸದಂತೆ ತಡೆಯುವಲ್ಲಿ ಒಂದು ಮಾಸ್ಕ್​ಗಿಂತ, ಎರಡು ಮಾಸ್ಕ್​​ಗಳು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ.

ಕೊರೊನಾದಿಂದ ಪಾರಾಗಲು 2 ಮಾಸ್ಕ್ ಧರಿಸುವುದು ಪರಿಣಾಮಕಾರಿ; ಆದರೆ ಧರಿಸುವ ಕ್ರಮ ಯಾವುದು? ಇಲ್ಲಿದೆ ಮಾಹಿತಿ..
ಪ್ರಾತಿನಿಧಿಕ ಚಿತ್ರ
Follow us
Lakshmi Hegde
|

Updated on:May 10, 2021 | 5:00 PM

ದೆಹಲಿ: ಭಾರತದಲ್ಲಿ ಕೊವಿಡ್ 19 ಅಲೆ ಜಾಸ್ತಿಯಾಗಿದೆ. ಕೊವಿಡ್ 19 ಸೋಂಕು ಕಾಲಿಟ್ಟಾಗಿನಿಂದಲೂ ಮಾಸ್ಕ್​ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈಗಂತೂ ಡಬಲ್ ಮಾಸ್ಕ್​ ಧರಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಿದ್ದಾರೆ. ಆದರೆ ಈ ವಿಚಾರದಲ್ಲಿ ಹಲವು ಗೊಂದಲಗಳಿವೆ. ಇನ್ನು ಎರಡು ಮಾಸ್ಕ್ ಹೇಗೆ ಧರಿಸಬೇಕು? ಅದು ಹೇಗಿರಬೇಕು? ಎಂಬ ಬಗ್ಗೆ ಕೇಂದ್ರ ಸರ್ಕಾರ ಭಾನುವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಎರಡು ಮಾಸ್ಕ್ ಧರಿಸುವ ಕ್ರಮ ಹೇಗಿರಬೇಕು? 1. ಎರಡು ಮಾಸ್ಕ್​ಗಳಲ್ಲಿ ಒಂದು ಸರ್ಜಿಕಲ್ ಮಾಸ್ಕ್ ಆಗಿರಬೇಕು ಹಾಗೂ ಇನ್ನೊಂದು ಎರಡು ಅಥವಾ ಮೂರು ಲೇಯರ್​ಗಳುಳ್ಳ ಬಟ್ಟೆಯ ಮಾಸ್ಕ್​ ಆಗಿರಬೇಕು. 2. ಮೂಗಿನ ಮೇಲ್ಭಾಗವನ್ನು ಗಟ್ಟಿಯಾಗಿ ಬಿಗಿದಿರುವಂತೆ ಮಾಸ್ಕ್ ಧರಿಸಬೇಕು. ಹಾಗೇ, ಉಸಿರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. 3. ಇದರಲ್ಲಿ ಸರ್ಜಿಕಲ್ ಮಾಸ್ಕ್​ನ್ನು ಬದಲಿಸಬೇಕು. ಬಟ್ಟೆ ಮಾಸ್ಕ್​ನ್ನು ಪ್ರತಿದಿನ ತೊಳೆಯಬೇಕು.

ಏನು ಮಾಡಬಾರದು? 1. ಒಂದೇ ತೆರನಾದ ಎರಡು ಮಾಸ್ಕ್​ಗಳನ್ನು ಧರಿಸಬಾರದು. ಅಂದರೆ ಎರಡೂ ಬಟ್ಟೆಯ ಮಾಸ್ಕ್ ಆಗಬಾರದು ಅಥವಾ ಎರಡೂ ಸರ್ಜಿಕಲ್ ಮಾಸ್ಕ್​ ಆಗಿರಬಾರದು. ಎರಡು ಬೇರೆಬೇರೆ ವಿಧದ ಮಾಸ್ಕ್ ಧರಿಸುವುದು ಕಡ್ಡಾಯ ಹಾಗೂ ಸುರಕ್ಷಿತ. 2. ಪ್ರತಿದಿನವೂ ಮಾಸ್ಕ್ ಚೇಂಜ್ ಮಾಡಲೇಬೇಕು. ಅದರಲ್ಲಿ ಬಟ್ಟೆಯ ಮಾಸ್ಕ್​ನ್ನು ತೊಳೆದು ಬಳಸಬಹುದು.

ಸಾರ್ಸ್ ಕೊವಿಡ್ 19 ಕಣಗಳು ಬಾಯಿ-ಮೂಗು ಪ್ರವೇಶಿಸದಂತೆ ತಡೆಯುವಲ್ಲಿ ಒಂದು ಮಾಸ್ಕ್​ಗಿಂತ, ಎರಡು ಮಾಸ್ಕ್​​ಗಳು ಪರಿಣಾಮಕಾರಿ ಎಂಬುದು ಅಧ್ಯಯನದಲ್ಲಿ ಸ್ಪಷ್ಟವಾಗಿದೆ. ಈ ವಿಚಾರವನ್ನು JAMA ಎಂಬ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಜರ್ನಲ್​ ಕೂಡ ಪ್ರಕಟಿಸಿದೆ.

ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷರ ಚುನಾವಣೆ ಮತ್ತೆ ಮುಂದೂಡಿಕೆ: ಕೊವಿಡ್​ನಿಂದಾಗಿ ಚುನಾವಣೆ ಬೇಡ ಎಂದ ಕಾಂಗ್ರೆಸ್ ನಾಯಕರು

ಕೊಪ್ಪಳ: ರೆಮ್​ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಪ್ರಕರಣ; ಬೆಳಕಿಗೆ ಬಂದ 3 ಲಕ್ಷ ವ್ಯವಹಾರ

Wearing two masks to prevent the Covid 19 infection study reveals

Published On - 4:56 pm, Mon, 10 May 21