AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rain: ಬೆಂಗಳೂರು ಸೇರಿ ವಿವಿಧೆಡೆ ಧಾರಾಕಾರ ಮಳೆ

Bangalore Rain Forecast: ಸತತ 30 ನಿಮಿಷಕ್ಕೂ ಹೆಚ್ಚು ಕಾಲ ಈ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಸೆಕೆಯಿಂದ ಸುಸ್ತು ಹೊಡೆದಿದ್ದ ನಾಗರಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.

Bengaluru Rain: ಬೆಂಗಳೂರು ಸೇರಿ ವಿವಿಧೆಡೆ ಧಾರಾಕಾರ ಮಳೆ
ಮಳೆ
Follow us
guruganesh bhat
|

Updated on:May 10, 2021 | 8:48 PM

ಬೆಂಗಳೂರು: ರಾಜ್ಯ ರಾಜಧಾನಿಯ ಹಲವೆಡೆ ಮಳೆ ಸುರಿದಿದೆ. ಮೆಜೆಸ್ಟಿಕ್, ಸಿಟಿ ಮಾರ್ಕೆಟ್, ಜಯನಗರ, ಬಸವನಗುಡಿ, ಎನ್.ಆರ್.ಕಾಲೋನಿ, ಬನಶಂಕರಿ ಸುತ್ತಮುತ್ತ ಉತ್ತಮ ಮಳೆಯಾಗುತ್ತಿದೆ. ಸತತ 30 ನಿಮಿಷಕ್ಕೂ ಹೆಚ್ಚು ಕಾಲ ಈ ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಸೆಕೆಯಿಂದ ಸುಸ್ತು ಹೊಡೆದಿದ್ದ ನಾಗರಿಕರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ

ಬೆಂಗಳೂರು ಹೊರತುಪಡಿಸಿ ರಾಜ್ಯದ ವಿವಿಧ ಪ್ರದೇಶಗಳಲ್ಲೂ ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡದ ಯಲ್ಲಾಪುರ, ಅಂಕೋಲಾ ತಾಲೂಕಿನ ಕೆಲ ಭಾಗಗಳಲ್ಲಿ ಮಳೆ ಸುರಿದಿದ್ದು, ಸೆಖೆಯಿಂದ ಬೆವರುತ್ತಿದ್ದ ಜನರಿಗೆ ಕೊಂಚ ಸಮಾಧಾನ ತರಿಸಿದೆ.

ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಕಳೆದ ಎರಡು ದಿನಗಳಿಂದ ಸಂಜೆಯ ವೇಳೆಗೆ ಮಳೆಯಾಗುತ್ತಿದೆ. ಗುಡುಗು, ಮಿಂಚು ಸಹಿತ ಗಾಳಿ ಮಳೆ ಸುರಿಯುತ್ತಿದೆ. ಕೆಲವೆಡೆ ಆಲಿಕಲ್ಲು ಮಳೆ ಕೂಡ ಸಂಭವಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮೂರು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಈ ಮುಂಚೆಯೇ ಮಾಹಿತಿ ನೀಡಿತ್ತು. ಅದರಂತೆ, ಮೇ 10ನೇ ತಾರೀಖಿನವರೆಗೆ ಯೆಲ್ಲೋ ಅಲರ್ಟ್ ಇರಲಿದೆ. ಸಣ್ಣ ಅಥವಾ ಮಧ್ಯಮ ಪ್ರಮಾಣದಲ್ಲಿ ಗುಡುಗು ಸಹಿತ ಮಳೆಯಾಗಬಹುದು ಎಂದು ಪ್ರಕಟಣೆಯಲ್ಲಿ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ: 16 ಜನರ ಮೇಲೆ ಅಪರಾಧ ಹೊರಿಸಿದ್ದು ನಾನಲ್ಲ; ಅವರನ್ನು ಬಿಬಿಎಂಪಿ ಮೊದಲೇ ಕೆಲಸದಿಂದ ತೆಗೆದಿತ್ತು- ಸಂಸದ ತೇಜಸ್ವಿ ಸೂರ್ಯ

ಸಮಾಜದಲ್ಲಿನ ದುರ್ಬಲ ವಿಭಾಗದವರ ಮನೆ ಬಾಗಿಲಿಗೆ ತೆರಳಿ ಕೊವಿಡ್ ಲಸಿಕೆ ನೀಡಲು ನಿರ್ದೇಶಿಸಿ: ಸುಪ್ರೀಂಕೋರ್ಟ್​ಗೆ ವೈಬಿಎಐ ಮನವಿ

(Heavy Rain lashes Bengaluru Current weather and temperature in Bangalore )

Published On - 8:47 pm, Mon, 10 May 21

Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily Devotional: ಮನೆಯಲ್ಲಿ ಗಾಜಿನ ವಸ್ತುಗಳು ಒಡೆದು ಹೋದ್ರೆ ಅಶುಭವಾ?
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
Daily horoscope: ಈ ರಾಶಿಯವರಿಗೆ ಇಂದು ಅತ್ಯಂತ ಶುಭಕರ ದಿನ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ಚೈತ್ರಾ ಕುಂದಾಪುರ ಮನೆಯಲ್ಲಿ ಕಿರಿಕ್ ಆಗಲು ಕಾರಣ ಏನು? ವಿವರಿಸಿದ ತಾಯಿ
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ರಕ್ತ ಪರೀಕ್ಷೆ ಮಾಡಿಸಲಿ: ಚೈತ್ರಾ ಕುಂದಾಪುರ ಆರೋಪಕ್ಕೆ ತಂದೆಯಿಂದ ನೇರ ಸವಾಲು
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಸಿದ್ದರಾಮಯ್ಯ ನಾಯಕತ್ವದ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲವಿಲ್ಲ: ಸುರೇಶ್
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಕುಷ್ಟಗಿ-ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಚಾಲನೆ ನೀಡಿದ ಸಚಿವ ವಿ ಸೋಮಣ್ಣ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?