ಕುವೈತ್ನಿಂದ ಮಂಗಳೂರು ಬಂದರಿಗೆ ಬಂತು 40 ಮೆಟ್ರಿಕ್ ಟನ್ ಆಕ್ಸಿಜನ್
ಜೊತೆಗೆ 5 ಟನ್ ಆಕ್ಸಿಜನ್ ಸಿಲಿಂಡರ್ ಹಾಗೂ 4 ಹೈ ಫ್ಲೋ ಆಕ್ಸಿಜನ್ ಕಂಟೇನರ್ಗಳು ಸಹ ಆಗಮಿಸಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಕುವೈತ್ನಿಂದ ಬಂದ ವೈದ್ಯಕೀಯ ನೆರವನ್ನು ಸ್ವಾಗತಿಸಿದ್ದಾರೆ.
ಮಂಗಳೂರು: ಇಲ್ಲಿನ ನವ ಮಂಗಳೂರು ಬಂದರಿಗೆ ಕುವೈತ್ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದು ತಲುಪಿದೆ. ಐಎನ್ಎಸ್ ಕೋಲ್ಕತ್ತಾ ಯುದ್ಧ ನೌಕೆ ಮೂಲಕ ವೈದ್ಯಕೀಯ ಆಮ್ಲಜನಕ ಬಂದಿಳಿದಿದೆ. ಜೊತೆಗೆ 5 ಟನ್ ಆಕ್ಸಿಜನ್ ಸಿಲಿಂಡರ್ ಹಾಗೂ 4 ಹೈ ಫ್ಲೋ ಆಕ್ಸಿಜನ್ ಕಂಟೇನರ್ಗಳು ಸಹ ಆಗಮಿಸಿವೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ. ವಿ. ರಾಜೇಂದ್ರ ಕುವೈತ್ನಿಂದ ಬಂದ ವೈದ್ಯಕೀಯ ನೆರವನ್ನು ಸ್ವಾಗತಿಸಿದ್ದಾರೆ.
ಇದಕ್ಕೂ ಮುನ್ನ ಬಹ್ರೇನ್‌ನಿಂದ 40 ಮೆಟ್ರಿಕ್ ಟನ್ ಆಕ್ಸಿಜನ್ ಇಲ್ಲಿನ ನವ ಮಂಗಳೂರು ಬಂದರ್‌ಗೆ ಬಂದಿತ್ತು. ನೌಕಾಪಡೆಯ ಐಎನ್ಎಸ್ ತಲ್ವಾರ್‌ನಲ್ಲಿ ಆಕ್ಸಿಜನ್ ಬಂದಿತ್ತು. ಬಹ್ರೇನ್‌ನ ಮನಾಮಾ ಬಂದರಿನಿಂದ ಬಂದಿದ್ದ ಐಎನ್ಎಸ್ ತಲ್ವಾರ್, ಆಕ್ಸಿಜನ್ ಹೊತ್ತು ತಂದಿತ್ತು. 2 ಕ್ರಯೋಜೆನಿಕ್ ಐಸೋಕಂಟೇನರ್ಗಳಲ್ಲಿ ಆಕ್ಸಿಜನ್ ರವಾನೆ ಮಾಡಲಾಗಿತ್ತು. ಕೇವಲ ಆಕ್ಸಿಜನ್ ಮಾತ್ರವಲ್ಲದೆ, ಕೊವಿಡ್ ಚಿಕಿತ್ಸೆಗೆ ಬಳಸಲಾಗುವ ಇತರ ವೈದ್ಯಕೀಯ ಉಪಕರಣಗಳನ್ನು ಕೂಡ ಹಡಗು ತಂದಿತ್ತು.
20 ಮೆಟ್ರಿಕ್ ಟನ್ ಆಕ್ಸಿಜನ್ ಕರಾವಳಿ ಭಾಗಕ್ಕೆ ಬಳಕೆ ಕರಾವಳಿ ಭಾಗಕ್ಕೆ (ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ) 20 ಮೆಟ್ರಿಕ್ ಟನ್ ಆಕ್ಸಿಜನ್ನ್ನು ಬಳಕೆ ಮಾಡಿಕೊಳ್ಳಲಿರುವ ಜಿಲ್ಲಾಡಳಿತ, ನಂತರದ 20 ಮೆಟ್ರಿಕ್ ಟನ್ ಆಕ್ಸಿಜನ್ನ್ನು ವಿವಿಧ ಜಿಲ್ಲೆಗಳಿಗೆ ಬಳಕೆ ಮಾಡಲಿದೆ ಎಂದು ಮಾಹಿತಿ ಲಭ್ಯವಾಗಿತ್ತು.
ಅಮೆರಿಕಾದಿಂದ ನೆರವು ಅಷ್ಟೇ ಅಲ್ಲದೆ, ಅಮೆರಿಕಾದಿಂದ ಭಾರತಕ್ಕೆ 2200 ಆಕ್ಸಿಜನ್ ಕಾನ್ಸೆಂಟ್ರೇಟರ್ ನೆರವು ಒದಗಿಬಂದಿದೆ. ಜೊತೆಗೆ 10 ಸಾವಿರ ಆಕ್ಸಿಮೀಟರ್ ಸಹ ಭಾರತಕ್ಕೆ ರವಾನೆಯಾಗಿದೆ. ಕೇಂದ್ರ ಸರ್ಕಾರವು ಇವುಗಳನ್ನ ತಕ್ಷಣ ಕೆಲ ರಾಜ್ಯಗಳಿಗೆ ಹಂಚಿಕೆ ಮಾಡಿದೆ. ಕೇಂದ್ರ ನೀತಿ ಆಯೋಗ (National Institution for Transforming India-NITI Aayog) ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ಕರ್ನಾಟಕಕ್ಕೆ ಹೆಚ್ಚು ಪಾಲು ಸಂದಾಯವಾಗಿದೆ ಎಂಬುದು ಸಮಧಾನಕರ ವಿಷಯ.
ಕೊರೊನಾ ಸಂಕಷ್ಟ ಕಾಲದಲ್ಲಿ ಅಮರಿಕದಿಂದ ಬಂದಿಳಿದಿರುವ ವೈದ್ಯಕೀಯ ನೆರವಿನಲ್ಲಿ ಕರ್ನಾಟಕಕ್ಕೆ 400 ಆಕ್ಸಿಜನ್ ಕಾನ್ಸೆಂಟ್ರೇಟರ್ಗಳು (Oxygen Concentrators), ಮಹಾರಾಷ್ಟ್ರಕ್ಕೆ 300 ಆಕ್ಸಿಜನ್ ಕಾನ್ಸೆಂಟ್ರೇಟರ್ ನೀಡಿಕೆಯಾಗಿದೆ. ಇನ್ನು ಪಲ್ಸ್ ಆಕ್ಸಿಮೀಟರ್ (Oximeters) ಪೈಕಿ ಕರ್ನಾಟಕಕ್ಕೆ 1,308 ನೀಡಲಾಗಿದೆ. ಮಹಾರಾಷ್ಟ್ರಕ್ಕೆ 2,144 ಆಕ್ಸಿಮೀಟರ್ಗಳು ಹೋಗಿವೆ. ಕೇರಳಕ್ಕೆ 1048 ಆಕ್ಸಿಮೀಟರ್ ನೀಡಲಾಗಿದೆ.
ಇದನ್ನೂ ಓದಿ: ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಬಂತು ಇಸ್ರೇಲ್ ಆಕ್ಸಿಜನ್!
Published On - 6:45 pm, Mon, 10 May 21