Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಬಂತು ಇಸ್ರೇಲ್​ ಆಕ್ಸಿಜನ್​!

ಕೆಜಿಎಫ್​ಗೆ ಬಂತು ಇಸ್ರೇಲ್ ಆಕ್ಸಿಜನ್​ ಉತ್ಪಾದನಾ ಯಂತ್ರ.. ಕೇಂದ್ರ ಸರ್ಕಾರದಿಂದ ಈ ಮೊದಲು ದೇಶದ ಮೂರು ಸ್ಥಳಗಳಿಗೆ ಬಿಡುಗಡೆಯಾಗಿತ್ತು. ಅದರಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ರವರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೆಜಿಎಫ್​ಗೆ ಬಂದು ತಲುಪಿದೆ.

ಕೊರೊನಾ ಅಟ್ಟಹಾಸಕ್ಕೆ ನಲುಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಬಂತು ಇಸ್ರೇಲ್​ ಆಕ್ಸಿಜನ್​!
ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣ.. ಉಸಿರಿಗೆ ಉಸಿರು ನೀಡಲು ಇಸ್ರೇಲ್​ ಆಕ್ಸಿಜನ್​ ಬಂತು!
Follow us
ಸಾಧು ಶ್ರೀನಾಥ್​
|

Updated on:May 10, 2021 | 4:25 PM

ಕೆಜಿಎಫ್: ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಸಿಲುಕಿ ನಲುಗಿ ಹೋಗಿದ್ದ ಕೋಲಾರ ಜಿಲ್ಲೆಗೊಂದು ಹೊಸ ಆಶಾಕಿರಣವೊಂದು ಮೂಡಿದೆ. ಕೊರೊನಾ ಮಹಾಮಾರಿಯ ಸೋಂಕಿಗೆ ತುತ್ತಾಗಿ ನಿಂತು ಹೋಗುತ್ತಿರುವ ಉಸಿರಿಗೆ ಉಸಿರು ನೀಡಲು ಇಸ್ರೇಲ್​ ನಿಂದ ಒಂದು ಆಕ್ಸಿಜನ್​ ಪ್ಲಾಂಟ್​ ಬಂದಿದೆ..

ಕೆಜಿಎಫ್​ಗೆ ಬಂತು ಇಸ್ರೇಲ್ ಆಕ್ಸಿಜನ್​ ಉತ್ಪಾದನಾ ಯಂತ್ರ..​

ಜಕ್ಕೂರು ವಿಮಾನ ನಿಲ್ದಾಣದಲ್ಲಿ ಕಂಟೈನರ್​ಗೆ ಕೂರಿಸಲಾಗುತ್ತಿರುವ ಬೃಹತ್​ ಆಕ್ಸಿಜನ್​ ಉತ್ಪಾನಾ ಘಟಕ, ಎನ್​ಡಿಆರ್​ ಎಫ್​ ಸಿಬ್ಬಂದಿಯ ಬಂದೋಬಸ್ತ್​ನಲ್ಲಿ ಕೆಜಿಎಫ್​ ಸರ್ಕಾರಿ ಆಸ್ಪತ್ರೆ ಆವರಣಕ್ಕೆ ಬಂದಿಳಿದಿರುವ ಆಕ್ಸಿಜನ್​ ಉತ್ಪಾದನ ಘಟಕದ ಕಂಟೇನರ್​, ಇದೆಲ್ಲಾ ಕಂಡು ಬಂದಿದ್ದು ಕೋಲಾರದಲ್ಲಿ. ಹೌದು ಸದ್ಯ ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವ ಜನರು ಆಕ್ಸಿಜನ್​ ಕೊರತೆಯಿಂದ ಸಾವಿರಾರು ಸಂಖ್ಯೆಯ ಜನರು ಮೃತಪಡುತ್ತಿದ್ದಾರೆ ಈ ಹಿನ್ನೆಲೆ ಇಸ್ರೇಲ್​ ದೇಶದಿಂದ ಮೂರು 500 LPM ಆಕ್ಸಿಜನ್​ ಉತ್ಪಾದನಾ ಯಂತ್ರಗಳನ್ನು ಕಳಿಸಲಾಗಿದೆ.

ಆ ಪೈಕಿ ಉತ್ತರ ಪ್ರದೇಶದ ವಾರಣಾಸಿಗೆ ಒಂದು, ಹಾಗೂ ಮೈಸೂರಿನ ಹೆಚ್. ಡಿ. ಕೋಟೆಗೆ ಒಂದು ಹಾಗೂ ಕೋಲಾರ ಜಿಲ್ಲೆಯ ಕೆಜಿಎಫ್​ಗೆ ಒಂದರಂತೆ ಕಳುಹಿಸಲಾಗಿದೆ. ಈ ಪೈಕಿ ಕೋಲಾರ ಜಿಲ್ಲೆ ಕೆಜಿಎಫ್​ಗೆ ದೇಶದ ಮೊದಲ ಉತ್ಪಾದನಾ ಯಂತ್ರ ಬಂದು ತಲುಪಿದೆ. ಕಳೆದ ರಾತ್ರಿ ಜಕ್ಕೂರು ವಿಮಾನ ನಿಲ್ದಾಣಕ್ಕೆ ಸೇನಾ ಹೆಲಿಕಾಪ್ಟರ್​ ಮೂಲಕ ಬಂದ ಆಕ್ಸಿಜನ್​ ಉತ್ಪಾದನಾ ಯಂತ್ರ ಒಳಗೊಂಡಿದ್ದ ಕಂಟೇನರ್​ ನಂತರ ಟ್ರಕ್​ ಮೂಲಕ ಇಂದು ಬೆಳಗಿನ ಜಾವ 5 ಗಂಟೆಗೆ ಎನ್​ಡಿಆರ್​ಎಫ್​ ಸಿಬ್ಬಂದಿಯ ಬಂದೋಬಸ್ತ್​ನಲ್ಲಿ ಬಂದಿಳಿದಿದೆ.

ಆಕ್ಸಿಜನ್​ ಉತ್ಪಾದನಾ ಘಟಕ ಹಂಚಿಕೆಯಲ್ಲೂ ರಾಜಕೀಯ ಸಂಸದ ಸರ್ಕಸ್​..!

ಇನ್ನು ಸದ್ಯ ದೇಶದಲ್ಲಿ ಆಕ್ಸಿಜನ್​ಗಿರುವ ಡಿಮ್ಯಾಂಡ್​ ಎಲ್ಲರಿಗೂ ಗೊತ್ತಿದೆ. ಹೀಗಿರುವಾಗ ಕೋಲಾರಕ್ಕೆ ಬಿಡುಗಡೆಯಾಗಿದ್ದ ಆಕ್ಸಿಜನ್​ ಉತ್ಪಾದನಾ ಯಂತ್ರವನ್ನು ರಾತ್ರೋ ರಾತ್ರಿ ಕೆಲವು ರಾಜಕೀಯ ಪ್ರಭಾವ ಬಳಸಿ ಬೇರೆ ಜಿಲ್ಲೆಗೆ ಸ್ಥಳಾಂತರ ಮಾಡಲು ಸಾಕಷ್ಟು ಪ್ರಯತ್ನಗಳು ನಡೆಯಿತಾದರೂ ಕೋಲಾರ ಸಂಸದ ಮುನಿಸ್ವಾಮಿ, ಅಧಿಕಾರಿಗಳು ಹಾಗೂ ಕೆಲವು ಜನಪ್ರತಿನಿಧಿಗಳ ಮೊರೆ ಹೋಗಿ ಮನವಿ ಮಾಡಿದ್ದರ ಪರಿಣಾಮ ಕೇಂದ್ರ ಸರ್ಕಾರದಿಂದ ಈ ಮೊದಲು ದೇಶದ ಮೂರು ಸ್ಥಳಗಳಿಗೆ ಬಿಡುಗಡೆಯಾಗಿತ್ತು. ಅದರಲ್ಲಿ ಯಾವುದೇ ಬದಲಾವಣೆ ಮಾಡದಂತೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ರವರು ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕೆಜಿಎಫ್​ಗೆ ಬಂದು ತಲುಪಿದೆ.

ಒಂದು ನಿಮಿಷಕ್ಕೆ 500 ಲೀಟರ್​ ಆಕ್ಸಿಜನ್​ ಉತ್ಪಾದನಾ ಸಾಮರ್ಥ್ಯದ ಘಟಕ..!

kgf gets israel oxygen generating plant in to alleviate coronavirus onslaught in kolar district (2)

ಒಂದು ನಿಮಿಷಕ್ಕೆ 500 ಲೀಟರ್​ ಆಕ್ಸಿಜನ್​ ಉತ್ಪಾದನಾ ಸಾಮರ್ಥ್ಯದ ಘಟಕ..!

ಸದ್ಯ ಇಸ್ರೇಲ್​ನಿಂದ ದೇಶಕ್ಕೆ ನೀಡಲಾಗಿರುವ ಈ ಮೂರು ಆಕ್ಸಿಜನ್​ ಉತ್ಪಾದನಾ ಘಟಕ ಸಾಕಷ್ಟು ಉಪಯುಕ್ತವಾಗಿದ್ದು ಇದು ಪ್ರತಿ ನಿಮಿಷಕ್ಕೆ 500 ಲೀಟರ್​ ಆಕ್ಸಿಜನ್​ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಇದೊಂದು ಸಣ್ಣ ಆಕ್ಸಿಜನ್​ ಉತ್ಪಾದನಾ ಯಂತ್ರವೊಂದು ನಿರಾಯಾಸವಾಗಿ ಕನಿಷ್ಠ 100 ಬೆಡ್​ಗಳಿಗೆ ಆಕ್ಸಿಜನ್​ ನೀಡಬಲ್ಲದು. ಹಾಗಾಗಿ ಕೆಜಿಎಫ್​ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇದನ್ನು ಸ್ಥಾಪನೆ ಮಾಡಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು, ಇದು ಕೆಜಿಎಫ್​ ಆಸ್ಪತ್ರೆ ಜೊತೆಗೆ ಅಕ್ಕ ಪಕ್ಕದ ತಾಲ್ಲೂಕಿಗೂ ಆಕ್ಸಿಜನ್​ ಸರಬರಾಜು ಮಾಡುವ ಮೂಲಕ ಸದ್ಯದ ಆಕ್ಸಿಜನ್​ ಕೊರತೆಯನ್ನು ನಿವಾರಣೆ ಮಾಡಬಹುದಾಗಿದೆ ಅನ್ನೋದು ಅಧಿಕಾರಿಗಳ ಮಾತು.

ಕೋಲಾರ ಜಿಲ್ಲೆಯ ಆಕ್ಸಿಜನ್​ ಸಮಸ್ಯೆ ಶೇ 50 ರಷ್ಟು ನಿರ್ವಹಣೆ ಸಾಧ್ಯತೆ..!

kgf gets israel oxygen generating plant in to alleviate coronavirus onslaught in kolar district (1)

ಕೋಲಾರ ಜಿಲ್ಲೆಯ ಆಕ್ಸಿಜನ್​ ಸಮಸ್ಯೆ ಶೇ50 ರಷ್ಟು ನಿರ್ವಹಣೆ ಸಾಧ್ಯತೆ..!

ಸದ್ಯಕ್ಕೆ ಜಿಲ್ಲೆಯಲ್ಲಿರುವ ಆಕ್ಸಿಜನ್​ ಸಮಸ್ಯೆಯನ್ನು ಗಮನಿಸಿದಾಗ ಈ ಆಕ್ಸಿಜನ್​ ಉತ್ಪಾದನಾ ಘಟಕ ಸ್ಥಾಪನೆಯಾಗಿದ್ದೇ ಆದಲ್ಲಿ ಸಾಕಷ್ಟು ಆಕ್ಸಿಜನ್​ ಇಲ್ಲದೆ ಸಾಯುವ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗಿ ಇದೊಂದು ಉಸಿರುವ ನೀಡುವ ಘಟಕವಾಗಲಿದೆ. ಅದರಲ್ಲೂ ಕೆಜಿಎಫ್​ ಭಾಗದಲ್ಲಿ ಹೆಚ್ಚಾಗಿ ಬಡ ಹಾಗೂ ಕೂಲಿ ಕಾರ್ಮಿಕರೇ ಹೆಚ್ಚಾಗಿದ್ದು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಜಿಎಫ್​ನಲ್ಲಿ ಈ ಘಟಕ ಸ್ಥಾಪನೆ ಮಾಡಲಾಗಿದ್ದು ಈ ಭಾಗದ ಜನರಿಗೆ ಇದು ಉಸಿರು ನೀಡಲಿದೆ.

ಈ ಆಕ್ಸಿಜನ್​ ಘಟಕದಿಂದ ಸದ್ಯ ಕೋಲಾರ ಜಿಲ್ಲೆಯಲ್ಲಿರುವ ಆಕ್ಸಿಜನ್​ ಸಮಸ್ಯೆಯನ್ನು ಶೇ 50 ರಷ್ಟು ನಿವಾರಣೆ ಮಾಡಬಹುದು. ಸುಮಾರು 100 ಆಕ್ಸಿಜನ್​ ಬೆಡ್​ಗಳಿಗೆ ಆಕ್ಸಿಜನ್​ ನೀಡಬಹುದಾಗಿದ್ದು ಒಂದಷ್ಟು ಜನ ಸೋಂಕಿತರಿಗೆ ಆಕ್ಸಿಜನ್​ ನೀಡಲು ಇದು ನೆರವಾಗಲಿದೆ ಅನ್ನೋದು ಕೋಲಾರ ಜಿಲ್ಲಾಧಿಕಾರಿ ಡಾ. ಆರ್​.ಸೆಲ್ವಮಣಿ ಅಭಿಪ್ರಾಯ.

ಕೆಜಿಎಫ್​ ಭಾಗದಲ್ಲಿ ಬಹಳ ಹಿಂದುಳಿದ ಹಾಗೂ ಬಡವರು ಇರುವ ಪ್ರದೇಶ ಅಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದು ಅಲ್ಲಿನ ಜನಕ್ಕೆ ಆರೋಗ್ಯದ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ, ಸದ್ಯದ ಕೊರೊನಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಯಾವುದೇ ರಾಜಕೀಯ ಮಾಡಲು ಸಿದ್ದವಿಲ್ಲ, ಕೇಂದ್ರ ಸಚಿವರು ಹಾಗೂ ನಮ್ಮ ರಾಜ್ಯ ನಾಯಕರುಗಳ ಸಹಾಯದಿಂದ ಈ ಘಟಕ ಇಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಅನ್ನೋದು ಕೋಲಾರ ಸಂಸದ ಎಸ್​. ಮುನಿಸ್ವಾಮಿ ಅವರ ಮಾತು. (ವರದಿ : ರಾಜೇಂದ್ರ ಸಿಂಹ)

(kgf gets israel oxygen production plant in to alleviate coronavirus onslaught in kolar district)

Published On - 4:22 pm, Mon, 10 May 21

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​