ರೆಮ್​ಡಿಸಿವಿರ್ ಕೊರತೆ ನೀಗಿಸಿಲ್ಲ ನಿಜ, ಇನ್ನು ಮುಂದೆ ನಿತ್ಯ 35 ಸಾವಿರ ರೆಮ್​ಡಿಸಿವಿರ್ ಒದಗಿಸುತ್ತೇವೆ: ಅಶ್ವತ್ಥ್ ನಾರಾಯಣ ಹೇಳಿಕೆ

ನಾಳೆಯಿಂದ ನಿತ್ಯ 35,000 ರೆಮ್​ಡಿಸಿವಿರ್ ಹಂಚಿಕೆ ಆಗುತ್ತದೆ. ಪ್ರತಿ ದಿನ ಒಂದು ಸಾವಿರ ಜನರಿಗೆ ಬೆಡ್ ನೀಡಲು ವ್ಯವಸ್ಥೆ ಮಾಡುತ್ತೇವೆ ಎಂದು ಡಾ. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

ರೆಮ್​ಡಿಸಿವಿರ್ ಕೊರತೆ ನೀಗಿಸಿಲ್ಲ ನಿಜ, ಇನ್ನು ಮುಂದೆ ನಿತ್ಯ 35 ಸಾವಿರ ರೆಮ್​ಡಿಸಿವಿರ್ ಒದಗಿಸುತ್ತೇವೆ: ಅಶ್ವತ್ಥ್ ನಾರಾಯಣ ಹೇಳಿಕೆ
ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ
Follow us
TV9 Web
| Updated By: ganapathi bhat

Updated on:Aug 23, 2021 | 12:40 PM

ಬೆಂಗಳೂರು: ರೆಮ್​ಡಿಸಿವಿರ್ ಕೊರತೆ ನೀಗಿಸಿಲ್ಲ ನಿಜ ಎಂದು ಡಾ. ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. ರೆಮ್​ಡಿಸಿವಿರ್ ಬೇಡಿಕೆ ಪೂರೈಸಲು ಸಂಬಂಧಪಟ್ಟ ಕಂಪೆನಿಗಳಿಗೆ ನೋಟಿಸ್ ನೀಡಿದ್ದೇವೆ. ಹೀಗಾಗಿ ಇನ್ನು ಮುಂದೆ ನಿತ್ಯ 35 ಸಾವಿರ ರೆಮ್​ಡಿಸಿವಿರ್ ಒದಗಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

ನಾಳೆಯಿಂದ ನಿತ್ಯ 35,000 ರೆಮ್​ಡಿಸಿವಿರ್ ಹಂಚಿಕೆ ಆಗುತ್ತದೆ. ಪ್ರತಿ ದಿನ ಒಂದು ಸಾವಿರ ಜನರಿಗೆ ಬೆಡ್ ನೀಡಲು ವ್ಯವಸ್ಥೆ ಮಾಡುತ್ತೇವೆ. ಸಾರ್ಸ್ ಪೋರ್ಟಲ್ ಮೂಲಕ ಜನರಿಗೆ ಬೆಡ್​ ನೀಡುತ್ತೇವೆ. ಸಾರ್ಸ್ ಪೋರ್ಟಲ್​ನಲ್ಲೇ ರೆಮ್​ಡಿಸಿವಿರ್ ಕೂಡ​ ಹಂಚಿಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಪಲ್ಸ್ ಆಕ್ಸಿ ಮೀಟರ್​ಗೆ ಹೆಚ್ಚಿನ ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಅಶ್ವತ್ಥ್ ನಾರಾಯಣ ಹೇಳಿದ್ದಾರೆ. 112ಕ್ಕೆ ಕರೆ ಮಾಡಿ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ರೆಮ್​ಡಿಸಿವಿರ್ ಔಷಧವನ್ನು​ ಯಾರಿಗೂ ನೇರವಾಗಿ ಕೊಡಲಾಗುವುದಿಲ್ಲ. ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ನೇರವಾಗಿ ಪೂರೈಸುತ್ತಿದ್ದೇವೆ. ದೇಶದಲ್ಲಿ ಹೆಚ್ಚು ರೆಮ್​ಡಿಸಿವಿರ್​ ಔಷಧ ಸಿಗುತ್ತಿರುವ 2ನೇ ರಾಜ್ಯ ನಮ್ಮದು. ಮೇ 10ರಿಂದ 35 ಸಾವಿರ ರೆಮ್​​ಡಿಸಿವಿರ್ ರಾಜ್ಯಕ್ಕೆ ಬರಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಬೆಂಗಳೂರಿನಲ್ಲಿ ಈ ಮೊದಲು ತಿಳಿಸಿದ್ದರು.

ರೆಮ್​ಡಿಸಿವಿರ್ ಔಷಧ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಸಿಪ್ಲಾ, ಜ್ಯುಬಿಲೆಂಟ್​, ಸಿಂಜಿನ್​​ ಕಂಪನಿಗಳಿಗೆ ಇಂದು ನೋಟಿಸ್ ನೀಡಲಾಗಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಸ್​ ದಾಖಲಿಸುತ್ತೇವೆ. ಪ್ರಸ್ತುತ ಆಕ್ಸಿಜನ್ ಕೊರತೆ ಮತ್ತು ಬೇಡಿಕೆ ಇದೆ. 85ಕ್ಕಿಂತ ಕಡಿಮೆ ಸ್ಯಾಚುರೇಷನ್ ಇರುವ ಸೋಂಕಿತರು ಅಥವಾ ರೋಗಿಗಳಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಪೂರೈಸುತ್ತೇವೆ. ತೀರಾ ಸ್ಯಾಚುರೇಷನ್ ಇರುವವರಿಗೆ ಆಕ್ಸಿಜನ್ ಕೊಟ್ಟು, ಆಸ್ಪತ್ರೆಗೆ ಪೂರೈಸುತ್ತೇವೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.

ಇದನ್ನೂ ಓದಿ: ಅತಿ ಹೆಚ್ಚು ರೆಮ್​ಡೆಸಿವಿರ್ ಔಷಧ ಸಿಗುವ ರಾಜ್ಯಗಳಲ್ಲಿ ಕರ್ನಾಟಕಕ್ಕೆ ದೇಶದಲ್ಲೇ 2ನೇ ಸ್ಥಾನ; ಡಿಸಿಎಂ ಅಶ್ವತ್ಥ ನಾರಾಯಣ

ರೆಮ್​ಡೆಸಿವರ್ ಇಂಜೆಕ್ಷನ್ ಅಂತಾ ಪೋಲಿಯೋ ಇಂಜೆಕ್ಷನ್ ಕದ್ದ ಖದೀಮರು.. ಆಮೇಲೆ ಏನು ಮಾಡಿದರು!?

Published On - 3:51 pm, Mon, 10 May 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ